ಮಡಿಕೇರಿ, NEWS DESK ಮಾ.31:-ಭಾರತದ ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರ ಕಾರ್ಯಾಲಯ ಇವರ ಪರವಾಗಿ, ಜನಗಣತಿ ಕಾಯ್ದೆ-1948 ರ ಪ್ರಕಾರ ಕೊಡಗು ಜಿಲ್ಲೆಯಲ್ಲಿ ಭಾರತದ ಮೊದಲ ಡಿಜಿಟಲ್ ಜನಗಣತಿ ಕಾರ್ಯವನ್ನು ಎರಡು ಹಂತಗಳಲ್ಲಿ ನಡೆಸಿ ಗಣತಿ ಮಾಹಿತಿಯನ್ನು ಸಂಗ್ರಹಿಸುವ ಪ್ರಕ್ರಿಯೆಯು ಚಾಲ್ತಿಯಲ್ಲಿ ಇದೆ. ಈ ಪೈಕಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಸ್ವಯಂ ಮನೆಗಣತಿ ಕಾರ್ಯವನ್ನು ಮಾಡಲು ಅವಕಾಶಗಳನ್ನು ನೀಡಲಾಗಿದೆ. ಅದರಂತೆ, ಕಾಯ್ದೆಯ ಪ್ರಕಾರ ತಮ್ಮ ಮಾಹಿತಿ, ಹೆಸರು ಮತ್ತು ಗುರುತುಗಳ ಗೌಪ್ಯವಾಗಿ ಇರಿಸಲಾಗುತ್ತದೆ ಹಾಗೂ ಯಾವುದೇ ತೆರಿಗೆ ಅಥವಾ ಪರಿಶೋಧನಾ ಉದ್ದೇಶಕ್ಕೆ ಸದರಿ ದತ್ತಾಂಶವನ್ನು ಬಳಿಸಿಕೊಳ್ಳುವುದಿಲ್ಲ. ಇದು ಸುರಕ್ಷಿತವಾಗಿ ಇರಿಸಲಾಗುತ್ತದೆ ಎಂದು ಜಿಲ್ಲಾಡಳಿತ ಪ್ರಕಣೆ ತಿಳಿಸಿದೆ.
ಈ ನಿಟ್ಟಿನಲ್ಲಿ ಏಪ್ರಿಲ್, 01 ರಿಂದ 15 ರವರೆಗೆ ನಿರ್ದೇಶನಾಲಯದಿಂದ ನೀಡಿರುವ ಸರಳವಾದ ಹಂತಗಳನ್ನು ಅನುಸರಿಸುವುದರ ಮೂಲಕ 15-20 ನಿಮಿಷಗಳಲ್ಲಿ ತಮ್ಮ ಮನೆಯ ಸ್ವಯಂ ಗಣತಿಯನ್ನು ಮಾಡಿಕೊಂಡು ಏಕೀಕೃತ ಸ್ವಯಂ ಗಣತಿ ಗುರುತಿನ ಸಂಖ್ಯೆಯನ್ನು (SELF ENUMERATION ID) ಪಡೆಯಬಹುದಾಗಿರುತ್ತದೆ.
ಹಾಗೆಯೇ ಪರಿಶೀಲನೆಗೆ ಬರುವ ಗಣತಿದಾರರಿಗೆ ಈ ಐಡಿ ಯನ್ನು ಒದಗಿಸಿ ಮನೆಗಣತಿ ಕಾರ್ಯವನ್ನು ಪೂರ್ಣಗೊಳಿಸಿಕೊಳ್ಳ ಬಹುದಾಗಿದೆ. ತಮ್ಮ ಸ್ವಯಂ ಮನೆ ಗಣತಿಯ ಕಾರ್ಯದ ನಿಖರತೆ ಮತ್ತು ಸಂಪೂರ್ಣತೆಯನ್ನು ಖಚಿತಪಡಿಸಿಕೊಳ್ಳಲು ಗಣತಿದಾರರು ಮತ್ತು ಮೇಲ್ವಿಚಾರಕರ ಪರಿಶೀಲನೆಗೆ ಒಳಪಟ್ಟಿರುತ್ತದೆ.
ಈ ಮೇರೆಗೆ, ವಿಕಸಿತ ಭಾರತ @2047 ಅಡಿಪಾಯಕ್ಕೆ ಸಹಕರಿಸಲು ಕೊಡಗು ಜಿಲ್ಲೆಯ ಎಲ್ಲಾ ಸಾರ್ವಜನಿಕ/ ನಾಗರಿಕರು ತಾವೇ ಅಂತರ್ಜಾಲದ ಕೊಂಡಿ (Link): https://se.census.gov.in/ ಅಂತರ್ಜಾಲದ ಲಿಂಕ್ ಮೂಲಕ ತಮ್ಮ ಮನೆಯ ಗಣತಿಯನ್ನು ಮಾಡಿಕೊಳ್ಳಲು ಕೋರಿದೆ. ಸಮಸ್ಯೆಗಳು ಇದ್ದಲ್ಲಿ ಅಂತರ್ಜಾಲದಲ್ಲಿ ಲಭ್ಯವಿರುವ se User Guide, se Flow Chart & se ಅಂಕಿಗಳನ್ನು ಅನುಸರಿಸಬಹುದಾಗಿರುತ್ತದೆ ಎಂದು ಜಿಲ್ಲಾ ಜನಗಣತಿ ಅಧಿಕಾರಿ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರು ತಿಳಿಸಿದ್ದಾರೆ.
ಸರಳ ವಿಧಾನಗಳು: ಅಂತರ್ಜಾಲದ ಲಿಂಕ್ ನಲ್ಲಿ ಲಾಗಿನ್ ಆಗುವುದು (Access And Intial Login, ಮನೆಯ ನೊಂದಣಿ ಮಾಡುವುದು (Household Registration), ಭಾμÉಯ ಆಯ್ಕೆ ಮತ್ತು ಓ.ಟಿ.ಪಿ ಪ್ರಮಾಣೀಕರಣ (Language selection and OTP Vrification), ನಿಮ್ಮ ನಿವಾಸ ಸ್ಥಳದ ವಿವರಗಳನ್ನು ಒದಗಿಸುವುದು (Providing Location Details of your Residence), ನಕ್ಷೆಯಲ್ಲಿ ನಿಮ್ಮ ನಿವಾಸವನ್ನು ಗುರುತಿಸುವುದು (Locating your Residence on Map), ಪ್ರಶ್ನಾವಳಿಗಳ ಪೂರ್ಣಗೊಳಿಸುವುದು (Completing the Questionnaire), ನಮೂದಿಸಿದ ದತ್ತಾಂಶದ ಪರಿಶೀಲನೆ (Review of entered data), (Final Subimission) ಹಾಗೂ ಕ್ಷೇತ್ರ ಮೇಲ್ವಿಚಾರಣೆ (Field Validation) ಮಾಡಬೇಕು ಎಂದು ಜಿಲ್ಲಾ ಜನಗಣತಿ ಅಧಿಕಾರಿ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ.
ಇನ್ನಷ್ಟು ಮಾಹಿತಿ: ಭಾರತ ಸರ್ಕಾರದಿಂದ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮನೆಪಟ್ಟಿ ಮತ್ತು ಮನೆ ಗಣತಿಯ ಪ್ರಕ್ರಿಯೆ ನಮ್ಮ ಜನಗಣತಿ ನಮ್ಮ ಅಭಿವೃದ್ಧಿ (2027ರ ಜನಗಣತಿಯ ಮೊದಲ ಹಂತ) ಪ್ರಾರಂಭವಾಗಲಿದೆ. ಮನೆಪಟ್ಟಿ ಮತ್ತು ಮನೆ ಗಣತಿಯ ಮೊದಲು, 15 ದಿನಗಳ ಕಾಲ ಸ್ವಯಂ-ಗಣತಿಗಾಗಿ ವಿಶೇಷ ಸೌಕರ್ಯ ಒದಗಿಸಲಾಗುತ್ತಿದೆ. ಈ ಸಮಯದಲ್ಲಿ ತಮ್ಮ ವಿವರಗಳನ್ನು ಸ್ವತಃ ಆನ್‍ಲೈನ್‍ನಲ್ಲಿ ಭರ್ತಿ ಮಾಡಬಹುದು.
ಸ್ವಯಂ-ಗಣತಿ: ರಾಜ್ಯದಲ್ಲಿ 1ನೇ ಏಪ್ರಿಲ್ 2026 ರಿಂದ-15ನೇ ಏಪ್ರಿಲ್ 2026ರ ವರೆಗೆ ಸರಳ, ಸುರಕ್ಷಿತ ಮತ್ತು ಡಿಜಿಟಲ್ ಸೌಲಭ್ಯ.
ಸ್ವಯಂ-ಗಣತಿಯನ್ನು ಹೇಗೆ ಮಾಡುವುದು?: ಅಧಿಕೃತ ಪೋರ್ಟಲ್ se.census.gov.in ಗೆ ಭೇಟಿ ನೀಡಿ, ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ OTP ಮೂಲಕ ಲಾಗಿನ್ ಆಗಿ, ನಿಮ್ಮ ರಾಜ್ಯ, ಜಿಲ್ಲೆ ಮತ್ತು ಸ್ಥಳೀಯ ವಿವರಗಳನ್ನು ಆಯ್ಕೆ ಮಾಡಿ, ಡಿಜಿಟಲ್ ಮ್ಯಾಪ್‍ನಲ್ಲಿ ನಿಮ್ಮ ಮನೆಯ ಸ್ಥಳವನ್ನು ಗುರುತಿಸಿ, ನಿಮ್ಮ ಮನೆ ಮತ್ತು ಕುಟುಂಬಕ್ಕೆ ಸಂಬಂಧಿಸಿದ ವಿವರಗಳನ್ನು ಭರ್ತಿ ಮಾಡಿ, ಸಲ್ಲಿಸಿದ ನಂತರ ನೀವು SE ID ಅನ್ನು ಸ್ವೀಕರಿಸುತ್ತೀರಿ, ನಿಮ್ಮ SE ID ಅನ್ನು ಸುರಕ್ಷಿತವಾಗಿರಿಸಿಕೊಳ್ಳಿ, ಗಣತಿದಾರರು ಭೇಟಿ ನೀಡಿದಾಗ ನಿಮ್ಮ SE ID ಅನ್ನು ಒದಗಿಸಿ, ಗಣತಿದಾರರು SE ID ಮೂಲಕ ವಿವರಗಳನ್ನು ದೃಢೀಕರಿಸುತ್ತಾರೆ.
ಇದರ ಪ್ರಯೋಜನಗಳು: ಸಮಯವನ್ನು ಉಳಿಸುತ್ತದೆ, ನಿಖರವಾದ ಮಾಹಿತಿ, ವೇಗವಾದ ಮಾಹಿತಿಗಳ ಸಂರಕ್ಷಣೆ ನೆನಪಿಡಿ: ಸ್ವಯಂ ಗಣತಿಯು ಒಂದು ವಿಶೇಷ ಸೌಲಭ್ಯವಾಗಿದೆ. ನೀವು ಸ್ವಯಂ ಗಣತಿಯನ್ನು ನಿರ್ವಹಿಸಲು ಸಾಧ್ಯವಾಗದಿದ್ದರೆ ಚಿಂತಿಸಬೇಡಿ, ನಿಗದಿತ ಅವಧಿಯಲ್ಲಿ ಗಣತಿದಾರರು ಅವಶ್ಯವಾಗಿ ನಿಮ್ಮ ಮನೆಗೆ ಭೇಟಿ ನೀಡಿ ನಿಮ್ಮ ಮಾಹಿತಿಯನ್ನು ಸಂಗ್ರಹಿಸುತ್ತಾರೆ. ನಿಮ್ಮ ಎಲ್ಲಾ ಮಾಹಿತಿಗಳು ಸಂಪೂರ್ಣವಾಗಿ ಗೌಪ್ಯವಾಗಿ ಮತ್ತು ಸುರಕ್ಷಿತವಾಗಿರುತ್ತವೆ. ಜನಗಣತಿಯಲ್ಲಿ ಭಾಗವಹಿಸಿ, ಹೆಮ್ಮೆಯಿಂದ ಹೇಳಿ-ನನ್ನ ಗಣತಿ ದೇಶದ ಶಕ್ತಿ. ಬನ್ನಿ, ನಮ್ಮ ಜವಾಬ್ದಾರಿಯನ್ನು ನಿಭಾಯಿಸೋಣ ಮತ್ತು ಜನಗಣತಿಯಲ್ಲಿ ಭಾಗವಹಿಸೋಣ.
*ನಮ್ಮ ಗಣತಿ ನಮ್ಮ ಅಭಿವೃದ್ಧಿ ಏ.1 ರಿಂದ 2027ರ ಜನಗಣತಿಯ ಮೊದಲ ಹಂತ ಆರಂಭ*
3 Mins ReadBy admin







