
ಕುಶಾಲನಗರ ಏ.8 NEWS DESK : ಕುಶಾಲನಗರ ಟೈಕೂನ್ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಏ.12 ರಿಂದ ನಾಲ್ಕನೇ ವರ್ಷದ ಹಾಕಿ ಮತ್ತು ಅಥ್ಲೆಟಿಕ್ಸ್ ಶಿಬಿರ ಏರ್ಪಡಿಸಲಾಗಿದೆ ಎಂದು ಕ್ಲಬ್ ಅಧ್ಯಕ್ಷರಾದ ಹೆಚ್ ಇ ರಮೇಶ್ ತಿಳಿಸಿದ್ದಾರೆ. ಕುಶಾಲನಗರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಏಪ್ರಿಲ್ 12 ರಂದು ಬೆಳಗ್ಗೆ 8 ಗಂಟೆಗೆ ಕುಶಾಲನಗರ ಬೈಚನಹಳ್ಳಿ ಬಳಿಯ ಗುಂಡೂರಾವ್ ಬಡಾವಣೆಯ ಕ್ರೀಡಾಂಗಣದಲ್ಲಿ ಶಿಬಿರಕ್ಕೆ ಚಾಲನೆ ದೊರೆಯಲಿದೆ. ಮೇ 1 ರಂದು ಶಿಬಿರಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನ ವಿತರಣೆ ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಬೆಳಗ್ಗೆ 6 ಗಂಟೆಯಿಂದ 8 ಗಂಟೆ ತನಕ ಎಲ್ಲಾ ವಯಸ್ಸಿನ ಜನರಿಗೆ ಹಾಕಿ ಮತ್ತು ಅಥ್ಲೆಟಿಕ್ಸ್ ತರಬೇತು ನೀಡಲಾಗುತ್ತದೆ.
ರಾಷ್ಟ್ರೀಯ ಅಂತರಾಷ್ಟ್ರೀಯ ಕ್ರೀಡಾಪಟುಗಳ ಮೂಲಕ ಶಿಬಿರಾರ್ಥಿಗಳಿಗೆ ತರಬೇತು ನೀಡಲಾಗುತ್ತದೆ. ಶಿಬಿರದಲ್ಲಿ 6 ವರ್ಷ ಮೇಲ್ಪಟ್ಟ ಮಕ್ಕಳು ಮಹಿಳೆಯರು, ಪುರುಷರು, 12 ವರ್ಷ ಮೇಲ್ಪಟ್ಟ ಮತ್ತು 18 ವರ್ಷ ಮೇಲ್ಪಟ್ಟ ಮೂರು ವಿಭಾಗಗಳನ್ನು ಮಾಡಲಾಗುತ್ತದೆ. ರಾಷ್ಟ್ರೀಯ ಕ್ರೀಡಾಪಟುಗಳಾದ ಬಿ ವಿ ಕಿಶನ್ ಕುಮಾರ್, ಜೆ ಪಿ ಪುನೀತ್, ಹಾಕಿ ತರಬೇತುದಾರಾದ ಬಿ ಎಸ್ ವೆಂಕಟೇಶ ಜಿ ಎಸ್ ಚಂದ್ರಶೇಖರ್, ಎಸ್ ಸುನಿಲ್ ಅವರುಗಳು ತರಬೇತು ನೀಡಲಿದ್ದಾರೆ. ಆರು ವರ್ಷ ಮೇಲ್ಪಟ್ಟ ಮಕ್ಕಳು ಮತ್ತು ಮಹಿಳೆಯರಿಗೆ ರಾಷ್ಟ್ರೀಯ ಕ್ರೀಡಾಪಟು ಕೆ.ಟಿ.ಸೌಮ್ಯ ಎಚ್ ಸ್ವರ್ಣ ಲತಾ ಅವರುಗಳು ತರಬೇತಿ ನೀಡುವರು ಎಂದು ಮಾಹಿತಿ ಒದಗಿಸಿದರು. ಬೆಳಗ್ಗೆ ಶಿಬಿರಾರ್ಥಿಗಳಿಗೆ ಪ್ರೊಟೀನ್ ಯುಕ್ತ ಆಹಾರ ಒದಗಿಸಲಾಗುವುದು ಎಂದು ಅವರು ತಿಳಿಸಿದರು.
ಕಳೆದ ಶಿಬಿರಗಳಲ್ಲಿ ಪಾಲ್ಗೊಂಡ ಮಕ್ಕಳು ಕ್ರೀಡಾ ಶಾಲೆಗಳಿಗೆ ಆಯ್ಕೆಯಾಗಿದ್ದಾರೆ ಎಂದು ಹೇಳಿದರು. ದಾನಿಗಳ ಸಹಕಾರದೊಂದಿಗೆ ಸುಮಾರು ಮೂರು ಲಕ್ಷ ರೂಪಾಯಿ ವೆಚ್ಚ ಮಾಡಿ ಹಾಕಿ ಮೈದಾನ ಸುಸಜ್ಜಿತಗೊಳಿಸಲಾಗಿದೆ ಎಂದು ಅವರು ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 7899360392, 9448647608 ಅಥವಾ 9741527549 ಸಂಪರ್ಕಿಸುವಂತೆ ಕೋರಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಕ್ಲಬ್ ಪ್ರಮುಖರಾದ ಜಿಎಸ್ ಚಂದ್ರಶೇಖರ್ ಕೆ.ಟಿ.ಸೌಮ್ಯ, ಬಿ.ಎಸ್.ವೆಂಕಟೇಶ್, ಅರುಣ್ ಕುಮಾರ್ ಮಹೇಶ್ ತರಬೇತುದಾರಾದ ಪುನೀತ್ ಸ್ವರ್ಣಲತಾ ಇದ್ದರು.









