
ಸೋಮವಾರಪೇಟೆ ಏ.10 NEWS DESK : ಸೋಮವಾರಪೇಟೆ ಪಟ್ಟಣದ ಸಂತಜೋಸೆಫರ ಪಿಯು ಕಾಲೇಜು ಶೇ.100 ರ ಫಲಿತಾಂಶ ಗಳಿಸಿದೆ. ವಿಜ್ಞಾನದ ವಿಭಾಗದಲ್ಲಿ 28 ಮತ್ತು ವಾಣಿಜ್ಯ ವಿಭಾಗದಲ್ಲಿ 70 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 26 ವಿದ್ಯಾರ್ಥಿಗಳು ಉತ್ತಮ ದರ್ಜೆ, 67 ವಿದ್ಯಾರ್ಥಿಗಳು ಪ್ರಥಮ, 4 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಜಿ.ಆರ್. ಸಾನಿಕ 600ಕ್ಕೆ 571 ಅಂಕಗಳು(ಶೇ.95.16), ಸಿ.ಪಿ.ವರ್ಷಾ 555(92.5),ಡಿ.ಡಿ. ಐಶ್ಚರ್ಯ 541(90.16), ವಾಣಿಜ್ಯ ವಿಭಾಗದಲ್ಲಿ ಇಂಪಾ 573(95.5), ಜಿ.ಆರ್.ಮಿಲನ 565(94.17), ಎ.ಪಿ.ಲೀಲಾ 553(92.16) ಅಂಕ ಗಳಿಸಿದ್ದಾರೆ. ವಿಶ್ವಮಾನವ ವಿದ್ಯಾಸಂಸ್ಥೆಯ ಬಿಟಿಸಿಜಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಶೇ.100ರಷ್ಟು ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ ಶೇ.98 ರಷ್ಟು ಫಲಿತಾಂಶ ದೊರೆತ್ತಿದೆ. ವಿಜ್ಞಾನ ವಿಭಾಗದಲ್ಲಿ ಎಚ್.ಎನ್.ಪವನ್ 586(ಶೇ.98), ಎಚ್.ಆರ್.ಜೀವಿತ 565(94.16), ಧನ್ಯಶ್ರೀ 564(94), ಇಬ್ಬನಿ ವಿ ಗೌಡ 557(92.8), ವಾಣಿಜ್ಯ ವಿಭಾಗದಲ್ಲಿ ಜಿ.ಜಿ.ಮನಿಷಾ 581(96.18), ಕೆ.ಎಸ್.ಮನಿಷಾ 575(95.8), ಸಿ.ಎಂ. ನಿಕಿಲ್ 568(94.18) ಅಂಕಗಳಿಸಿದ್ದಾರೆ. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಕಲಾ ವಿಭಾಗದಲ್ಲಿ ಶೇ.82 ಫಲಿತಾಂಶ ದೊರೆತ್ತಿದೆ. 55 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 45 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಐ.ಎಸ್.ಅಂಕಿತಾ 556(92.6) ಅರುಣ್ 548(91), ತಸ್ಮಿಯ 548(91) ಅಂಕಗಳಿಸಿದ್ದಾರೆ.














