Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಕೋಟೆ ಬೆಟ್ಟ ಕೊಡವ ಭಾಷಾ ಸಿನಿಮಾಕ್ಕೆ ಆಂಜನೇಯನ ಸನ್ನಿಧಿಯಲ್ಲಿ ಮುಹೂತ೯
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಕೋಟೆ ಬೆಟ್ಟ ಕೊಡವ ಭಾಷಾ ಸಿನಿಮಾಕ್ಕೆ ಆಂಜನೇಯನ ಸನ್ನಿಧಿಯಲ್ಲಿ ಮುಹೂತ೯

ಏಪ್ರಿಲ್ 11, 20263 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
SM Fitness Advertisement

ಮಡಿಕೇರಿ ಏ.11 NEWS DESK : ಕಂದೀಲು ಕನ್ನಡ  ಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದ ಕೊಡಗಿನ  ಸಿನಿಮಾ ನಿಮಾ೯ಪಕಿ, ನಿದೇ೯ಶಕಿ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಅವರ ನೂತನ ಮಕ್ಕಳ ಚಿತ್ರ ಕೋಟೆಬೆಟ್ಟದ ಚಿತ್ರೀಕರಣಕ್ಕೆ ನಗರದ ಶ್ರೀ ಆಂಜನೇಯ ದೇವಾಲಯದಲ್ಲಿ ಮುಹೂತ೯ ಪೂಜೆ ನೆರವೇರಿತು. ಕೊಡವ  ಭಾಷೆಯ ಚಿತ್ರ  ಕೋಟೆ ಬೆಟ್ಟಕ್ಕೆ ಕ್ಲಾಪ್ ನೆರವೇರಿಸಿ ಮಾತನಾಡಿದ ವಿಧಾನಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಕೊಡಗಿನಲ್ಲಿ ಈಶ್ವರನ ಸನ್ನಿಧಿಯಾಗಿ ಪೌರಾಣಿಕ ಮಹತ್ವ ಹೊಂದಿರುವ ಕೋಟೆ ಬೆಟ್ಟದ ಹಿನ್ನಲೆ ಹೊಂದಿ ಮಕ್ಕಳ ಚಿತ್ರ ನಿಮಾ೯ಣ ಮಾಡುತ್ತಿರುವುದು ಉತ್ತಮ ಪ್ರಯತ್ನ ಎಂದರು. ಮಕ್ಕಳಿಗೆ ತಿಳವಳಿಕೆ ನೀಡುವ ನಿಟ್ಟಿನಲ್ಲಿ ಇಂಥ ಸಿನಿಮಾ ನಿಮಾ೯ಣ ಶ್ಲಾಘನೀಯ. ಕೋಟೆ ಬೆಟ್ಟ ಈಶ್ವರನ ಮಹತ್ವದ ಬಗ್ಗೆಯೂ ಚಿತ್ರ ಬಿಂಬಿಸಲಿ ಎಂದರು. ಹಿರಿಯ  ಪತ್ರಕತ೯ ಅನಿಲ್ ಹೆಚ್.ಟಿ. ಮಾತನಾಡಿ, ಕಂದೀಲು  ಕನ್ನಡ ಚಿತ್ರದ ಮೂಲಕ ಸಿನಿಮಾಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದ ಕೊಡಗಿನ ಪ್ರಥಮ ಮತ್ತು ಕನಾ೯ಟಕದ ನಾಲ್ಕನೇ ಮಹಿಳೆ ಎಂಬ ಹಿರಿಮೆಯಿರುವ ಯಶೋಧ ಪ್ರಕಾಶ್ ಈಗ ಕೋಟೆ ಬೆಟ್ಟ ಚಿತ್ರದ ಮೂಲಕ ಟ್ಯಾಬ್ ಟು ಲಗೋರಿ ಎಂಬ ಉಪಶೀಷಿ೯ಕೆಯ ಸಂದೇಶವುಳ್ಳ ಚಿತ್ರ ನಿಮಾ೯ಣ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.   ಬೇಸಿಗೆ ರಜೆಯಲ್ಲಿಯೂ  ಲ್ಯಾಪ್ ಟಾಪ್, ಮೊಬೈಲ್ ನಲ್ಲಿಯೇ ಕಾಲಕಳೆಯುತ್ತಿರುವ ಮಕ್ಕಳಿಗೆ ಗ್ರಾಮೀಣ ಸಂಸ್ಕೃತಿ, ಗ್ರಾಮೀಣ ಕ್ರೀಡೆಯ ಪರಿಚಯ ಅತ್ಯಗತ್ಯ ಈ ನಿಟ್ಟಿನಲ್ಲಿ ಕೋಟೆ ಬೆಟ್ಟ ಸಿನಿಮಾವು ಕೊಡಗಿನ ಮೂಲ ಸಂಸ್ಕೖತಿಯನ್ನು ಜಾಗತಿಕ ಮಟ್ಟಕ್ಕೆ ತಿಳಿಸುವಂತಾಗಲಿ ಎಂದರು. ಯಶೋಧ ಪ್ರಕಾಶ್ ಕನ್ನಡ ಮತ್ತು ಕೊಡವ ಸಿನಿಮಾಗಳ ನಿಮಾ೯ಣ, ನಿದೇ೯ಶನದ ಮೂಲಕ ಕನಾ೯ಟಕದಲ್ಲಿಯೇ ಅತ್ಯಂತ ಸಕ್ರಿಯರಾಗಿರುವ ಮಹಿಳಾ ನಿಮಾ೯ಪಕಿ, ನಿದೇ೯ಶಕಿ ಎನಿಸಿಕೊಂಡಿದ್ದಾರೆ ಎಂದು ಶ್ಲಾಘಿಸಿದ ಅನಿಲ್ ಹೆಚ್.ಟಿ, ಸಾಂಸ್ಕೃತಿಕ ಜಗತ್ತಿಗೆ ಕೊಡಗಿನ ಸಿನಿಮಾ ರಾಯಭಾರಿ ಎಂದೂ ಯಶೋಧ ಅವರನ್ನು ವಣಿ೯ಸಿದರು.  ಹಿರಿಯ ಕಲಾವಿದರಾದ ವಾಂಚೀರ ನಾಣಯ್ಯ ಮಾತನಾಡಿ, ಕೋಟೆ ಬೆಟ್ಟ ಚಿತ್ರದ ಮೂಲಕ ಆ ಬೆಟ್ಟದ ಮಹತ್ವದ ಇತಿಹಾಸ ತಿಳಿಯುತ್ತದೆ. ಜತೆಗೇ ಮಕ್ಕಳು ಬಾಲ್ಯದಲ್ಲಿಯೇ ಸಂಸ್ಕಾರವಂತರಾಗಿ ಬೆಳೆದಾಗ ಉತ್ತಮ ಪ್ರಜೆಗಳಾಗಲು ಅತ್ಯುತ್ತಮ ಸಂದೇಶವನ್ನು ಈ ಚಿತ್ರ ಸಾರಲಿದೆ ಎಂದು ಹೇಳಿದರು. ಕೋಟೆ ಬೆಟ್ಟ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ನಟಿಸಿರುವ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಿ.ಜಿ. ಅನಂತಶಯನ ಮಾತನಾಡಿ ಇಂಥ ಮಕ್ಕಳ ಚಿತ್ರಗಳ ಅಗತ್ಯತೆ ಇಂದಿನ ಕಾಳಘಟ್ಟದಲ್ಲಿ ಹೆಚ್ಚಾಗಿದೆ. ಬಾಲ್ಯದಲ್ಲಿ ಮಕ್ಕಳಿಗೆ ನಾಯಕತ್ವ ಗುಣ, ಸಂಸ್ಕಾರ ತಿಳಿಸಿಕೊಟ್ಟಾಗ ಭವಿಷ್ಯದಲ್ಲಿ ದೇಶಕ್ಕೆ ಉತ್ತಮ ಬದ್ದತೆಯನ್ನು ಹೊಂದಿರುವ ನಾಗರಿಕರು ದೊರಕಲು ಸಾಧ್ಯ ಎಂದರು. ಭಾರತದ ಹಿತದೖಷ್ಟಿಯಿಂದ ಮಕ್ಕಳ ಚಿತ್ರಗಳಲ್ಲಿ ಸಂಸ್ಕಾರ, ದೇಶಪ್ರೇಮ, ನಮ್ಮ ಐತಿಹ್ಯವನ್ನು ತಿಳಿಸಿಕೊಡುವುದು ಅತೀ ಮುಖ್ಯ ಎಂದೂ ಅನಂತಶಯನ ಅಭಿಪ್ರಾಯಪಟ್ಟರು. ಚಿತ್ರದ ನಿಮಾ೯ಪಕಿ, ನಿದೇ೯ಶಕಿ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಮಾತನಾಡಿ, ಮಕ್ಕಳಿಗೆ ತಮ್ಮ ಬಾಲ್ಯದಲ್ಲಿ ದೊರಕುವ ಸಂಭ್ರಮವನ್ನು ಈ ಚಿತ್ರದ ಮೂಲಕ ಅಥ೯ ಮಾಡಿಕೊಡುವ ಪ್ರಯತ್ನ ಮಾಡಲಾಗಿದೆ. ನವ ತಾಂತ್ರೀಕತೆಯ ಸಾಮಾಜಿಕ ಜಾಲತಾಣಗಳೇ ಜೀವನದ ಸಂತೋಷವಲ್ಲ,, ನಮ್ಮ ಸುತ್ತಮುತ್ತಲಿನ ಪ್ರಕೖತ್ತಿ, ಬೆಟ್ಟಗುಡ್ಡಗಳು, ಜಲತೊರೆಗಳ ನಡುವೆ ಕಾಲ ಕಳೆಯುವುದರಿಂದ ಬಾಲ್ಯದಲ್ಲಿಯೇ ನಿಜವಾದ ಸಂತೋಷ ಮಕ್ಕಳಿಗೆ ದೊರಕಲು ಸಾಧ್ಯ ಎಂಬ ಸಂದೇಶ ಕೋಟೆ ಬೆಟ್ಟ ಚಿತ್ರದಲ್ಲಿದೆ ಎಂದರು.  ಚಿತ್ರದ ಸಹ ನಿಮಾ೯ಪಕ ಕೊಟ್ಟುಕತ್ತೀರ ಪ್ರಕಾಶ್ ಕಾಯ೯ಪ್ಪ, ಮಾತನಾಡಿ, ನಿರಂತರವಾಗಿ 20 ದಿನಗಳ ಕಾಲಮಾದಾಪುರ, ಕೋಟೆಬೆಟ್ಟ ವ್ಯಾಪ್ತಿಯಲ್ಲಿ ಸಿನಿಮಾ ಚಿತ್ರೀಕರಣ ಕೈಗೊಳ್ಳಲಾಗುತ್ತದೆ. ಕೊಡಗಿನ ಪ್ರತಿಭಾವಂತ ಬಾಲ ನಟರು, ಕಲಾವಿದರನ್ನೇ ಬಳಸಿಕೊಂಡು ಚಿತ್ರ ನಿಮಾ೯ಣ ಮಾಡಲಾಗುತ್ತಿದೆ ಎಂದರು. ಶ್ರೀ ಆಂಜನೇಯ ದೇವಾಲಯದ ಅಚ೯ಕರಾದ ಎಂ.ಬಿ. ಸಂತೋಷ್ ಭಟ್, ಬಿ.ಆರ್. ಸುರೇಶ್ ಭಟ್ ಪೂಜಾಕೈಂಕಯ೯ ನೆರವೇರಿಸಿದರು. ಕೊಟ್ಟುಕತ್ತೀರ ಪ್ರಕಾಶ್ ಕಾಯ೯ಪ್ಪ ಕೊಟ್ಟುಕತ್ತೀರ ತನಂ ಕಾಯ೯ಪ್ಪ, ಕೊಟ್ಟುಕತ್ತೀರ ತೇಜಲ್ ಕಾಯ೯ಪ್ಪ, ಅಪ್ಪ ನೆರವಂಡ ತೇಜು ಪೊನ್ನಪ್ಪ, ತಾಂತಂಡ ಪ್ರಭಾ ನಾಣಯ್ಯ, ಕೋಲುಮಾಡಂಡ ಸತಿ, ಮಂದೆಯಂಡ ರೆಜಿ ಬೆಳ್ಯಪ್ಪ, ಕಾಡ್ಯಮಾಡ ಸುಮನ್, ಕಾಳಮಂಡ ಜಗತ್, ಬುಟ್ಟಂಡ ಕಶ್ಮಾ ಅಯ್ಯಣ್ಣ, , ಮಾದೀರ ಪದ್ಮ ಬೋಪಯ್ಯ, ಈರಮಂಡ ವಿಜಯ್, ಹರಿಣಿ ವಿಜಯ್ , ಹಂಚೆಟ್ಟೀರ ನಕ್ಷ್ ತಿಮ್ಮಯ್ಯ, ಕೋಟೆಯಂಡ ಅಪ್ಪಚ್ಚು,, ರಾಜಿ ಪೊನ್ನಮ್ಮ, ಮೂಕಂಚಂಡ ನಕ್ಷಾ ನೀಲಮ್ಮ, ಮಾದೆಯಂಡ ಕುಟುಂಬದ ಮನಿಷ್, ಮಾನ್ಯ, ಧನುಷ್, ರಾಜಿ, ಶ್ರೀನಿಧಿ, ತೇಜು ಪೊನ್ನಪ್ಪ, ತಂಬುಕುತ್ತೀರ ಗಪ್ಪು, ತಾರಾಗಣದಲ್ಲಿದ್ದಾರೆ. ಕೋಟೆ ಬೆಟ್ಟ ಚಿತ್ರಕ್ಕೆ ಪ್ರದೀಪ್ ಆಯ೯ನ್ ಸಂತೋಷ್ ಬಪ್ಪು , ವಿಜಯ್ ಬಮಾ೯ಲಿ ಛಾಯಾಗ್ರಾಹಕರಾಗಿದ್ದು, ವಿಠಲ್ ರಂಗದೋಳ್ ಸಂಗೀತ ನಿದೇ೯ಶನವಿದೆ. ಸ್ಯಾಮ್ಸನ್ ಸಂಕಲನ ಮಾಡಲಿರುವ ಚಿತ್ರಕ್ಕೆ ಗಾಗಿ೯ ಕಾರೆಹಕ್ಲು ಕಥೆ ಬರೆದಿದ್ದಾರೆ. ಕೋಲುಮಾಡಂಡ ನಾಣಯ್ಯ ನಿಮಾ೯ಣ ನಿವ೯ಹಣೆ ಹೊಣೆ ಹೊಂದಿದ್ದಾರೆ.

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Follow us Follow us
Share. WhatsApp Facebook Twitter Email Telegram Copy Link

Related Posts

ಚೇಲಾವರದಲ್ಲಿ ಕಾಳಿಂಗ ಸರ್ಪದ ರಕ್ಷಣೆ

ಅಕ್ಟೋಬರ್ 9, 2026

ಕಡಗದಾಳಿನಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ

ಅಕ್ಟೋಬರ್ 9, 2026

ಮಡಿಕೇರಿ ದಸರಾ ಮಹೋತ್ಸವ ಪ್ರಯುಕ್ತ ಒಂದು ದಿನದ ವಿಶೇಷ ಪ್ಯಾಕೇಜ್

ಅಕ್ಟೋಬರ್ 9, 2026

ಕಡಗದಾಳಿನಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ

ಅಕ್ಟೋಬರ್ 9, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಅ.9 NEWS DESK : ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಘಟಕಗಳ…

ಮಡಿಕೇರಿ ದಸರಾ ಮಹೋತ್ಸವ ಪ್ರಯುಕ್ತ ಒಂದು ದಿನದ ವಿಶೇಷ ಪ್ಯಾಕೇಜ್

ಅಕ್ಟೋಬರ್ 9, 2026

ಮಡಿಕೇರಿಯಲ್ಲಿ ನ.1ರಂದು ಕನ್ನಡ ರಾಜ್ಯೋತ್ಸವ : ಅರ್ಥಪೂರ್ಣ ಆಚರಣೆಗೆ ಜಿಲ್ಲಾಡಳಿತ ನಿರ್ಧಾರ

ಅಕ್ಟೋಬರ್ 9, 2026

ನಾಪೋಕ್ಲು ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ರೂ.1.75 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ : ಶಾಸಕ ಎ.ಎಸ್.ಪೊನ್ನಣ್ಣರಿಂದ ಭೂಮಿಪೂಜೆ

ಅಕ್ಟೋಬರ್ 9, 2026

ಅ.10ರಂದು ವಿರಾಜಪೇಟೆ, ಪೊನ್ನಂಪೇಟೆ ವ್ಯಾಪ್ತಿಯಲ್ಲಿ ಶಾಸಕ ಎ.ಎಸ್. ಪೊನ್ನಣ್ಣ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ

ಅಕ್ಟೋಬರ್ 9, 2026

ಕೊಡಗು : ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್

ಅಕ್ಟೋಬರ್ 9, 2026

ಸಿಜೆಪಿ ಪ್ರತಿಭಟನೆ ಹಿನ್ನೆಲೆ: ದೆಹಲಿಯಲ್ಲಿ ಹೈ ಅಲರ್ಟ್, 24 ಗಂಟೆ ಮೊಬೈಲ್ ಇಂಟರ್ನೆಟ್ ಸ್ಥಗಿತ; 57 ಮೆಟ್ರೋ ನಿಲ್ದಾಣಗಳ ಪ್ರವೇಶ–ನಿರ್ಗಮನ ದ್ವಾರ ಬಂದ್; 20 ವಲಯಗಳಾಗಿ ವಿಂಗಡಣೆ, 20 ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ನಿಯೋಜನೆ

ಅಕ್ಟೋಬರ್ 9, 2026

ಅ.11ರಿಂದ ಮಡಿಕೇರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಭ್ರಮ

ಅಕ್ಟೋಬರ್ 9, 2026

ಕೊಡವ ತೋಕ್‌ಗೆ ಸಾಂವಿಧಾನಿಕ ರಕ್ಷಣೆ ನೀಡಲು ಆಗ್ರಹ: ಸಿಎನ್‌ಸಿ ಸತ್ಯಾಗ್ರಹ

ಅಕ್ಟೋಬರ್ 9, 2026

2027ರ SSLC, ದ್ವಿತೀಯ PUC ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ: ಫೆಬ್ರವರಿ 27ರಿಂದ ಪಿಯುಸಿ, ಮಾರ್ಚ್ 22ರಿಂದ SSLC ಪರೀಕ್ಷೆ ಆರಂಭ

ಅಕ್ಟೋಬರ್ 9, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.