ಕುಶಾಲನಗರ, NEWS DESK ಏ೧೨: ಕೂಡುಮಂಗಳೂರು ಗ್ರಾ.ಪಂ ನ ಸುಂದರನಗರ ಗ್ರಾಮದ ವೃಂದಾ ಬಡಾವಣೆಯಲ್ಲಿ ಅಪಾಯದಂಚಿನಲ್ಲಿದ್ದ ಟ್ರಾನ್ಸ್ ಫಾರ್ಮರನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಸ್ಥಳಾಂತರಿಸಲಾಯಿತು.
ಕೆಲವು ತಿಂಗಳ ಹಿಂದೆ ವೃಂದಾ ಬಡಾವಣೆಯಲ್ಲಿ ಹಸಿವೊಂದು ಟಿಸಿಗೆ ಸಿಲುಕಿ ಪ್ರಾಣ ಕಳೆದುಕೊಂಡಿತ್ತು. ಅನಾಹುತಗಳನ್ನು ತಪ್ಪಿಸುವ ದೃಷ್ಟಿಯಿಂದ ರಸ್ತೆ ಬದಿಯಿದ್ದ ಟಿ.ಸಿ ಸ್ಥಳಾಂತರಿಸುವ ಬಗ್ಗೆ ಗ್ರಾಮಸ್ಥರು ಶಾಸಕರ ಬಳಿ ಮನವಿ ಮಾಡಿದ್ದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಶಾಸಕರು, ಚೆಸ್ಲಾಂ ಅಧಿಕಾರಿಗಳಿಗೆ ಟಿಸಿ ಸ್ಥಳಾಂತರಿಸಲು ಸೂಚನೆ ನೀಡಿದ್ದರು. ಅದರಂತೆ ಚೆಸ್ಕಾಂ ಸಿಬ್ಬಂದಿಗಳು ಟಿಸಿ ಸ್ಥಳಾಂತರಿಸಿದ್ದಾರೆ.
ಈ ಸಂದರ್ಭ ಮಾತನಾಡಿದ ಕೂಡುಮಂಗಳೂರು ಗ್ರಾ.ಪಂ ಮಾಜಿ ಸದಸ್ಯರಾದ ಕೆ.ಬಿ.ಶಂಶುದ್ಧೀನ್, ವೃಂದಾ ಬಡಾವಣೆಯಲ್ಲಿ ಹಸುವೊಂದು ವಿದ್ಯುತ್ ಅವಘಡದಿಂದ ಸಾವಿಗೀಡಾಗಿತ್ತು. ಪಕ್ಕದಲ್ಲಿಯೇ ಗಣೇಶೋತ್ಸವ ಹಾಗೂ ಊಟ ಹಬ್ಬ, ಇನ್ನಿತರ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಈ ಹಿನ್ನಲೆ ಸಾರ್ವಜನಿಕರ ಹಿತದೃಷ್ಟಿಯಿಂದ ಅನಾಹುತಗಳನ್ನು ಕೈತಪ್ಪಿಸಲು ಶಾಸಕರ ಬಳಿ ಟಿಸಿ ಸ್ಥಳಾಂತರಕ್ಕೆ ಮನವಿ ಮಾಡಿದ್ದೆವು. ಅದರಂತೆ ಇಂದು ಸಹಕರಿಸಿದ ಶಾಸಕರಿಗೆ, ಕುಶಾಲನಗರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ವಿ.ಪಿ.ಶಶಿಧರ್ ಅವರಿಗೆ, ಚೆಸ್ಕಾಂ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಧನ್ಯವಾದಗಳು ಎಂದರು.
ಗ್ರಾಮದ ಮುಖಂಡರಾದ ಸುಕುಮಾರ್ ಮಾತನಾಡಿ, ಹಲವಾರು ವರ್ಷಗಳಿಂದ ಟಿಸಿ ಸ್ಥಳಾಂತರಿಸಲು ಮನವಿ ಮಾಡಲಾಗಿತ್ತು. ಇಂದು ಶಾಸಕರು ಸೂಚನೆಯ ಮೇರೆಗೆ ಟಿಸಿ ಸ್ಥಳಾಂತರವಾಗಿದೆ. ಇದಕ್ಕೆ ಸಹಕರಿಸಿದ ಶಾಸಕರಿಗೆ ಗ್ರಾಮಸ್ಥರ ಪರವಾಗಿ ಧನ್ಯವಾದಗಳು ಎಂದರು.
ಈ ಸಂದರ್ಭ ಎಇಇ ಮಂಜುನಾಥ್, ಜೆಇ ರಾಣಿ, ಗ್ರಾಮದ ಪ್ರಮುಖರಾದ ಅಣ್ಣಯ್ಯ, ಗಿರೀಶ್, ದರ್ಮ, ಕಾರ್ತಿಕ್, ತಂಬಿ, ರಫಿಕ್ ಹಾಗೂ ಇನ್ನಿತರರು ಇದ್ದರು.








