
ಮಡಿಕೇರಿ NEWS DESK ಏ.15 : ಮಡಿಕೇರಿ ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀ ಕೋಟೆ ಮಾರಿಯಮ್ಮ ದೇವಾಲಯದಲ್ಲಿ ಏ.19 ರಿಂದ 21ರ ವರೆಗೆ ಶ್ರೀ ಕೋಟೆ ಮಾರಿಯಮ್ಮ ದೇವಿಯ ಪ್ರತಿಷ್ಠಾಪನಾ ವಾರ್ಷಿಕೋತ್ಸವ, ನಾಗ ಪ್ರತಿಷ್ಠಾಪನಾ ಮಹೋತ್ಸವ, ನಾಗದರ್ಶನ, ಪಾಷಾಣಮೂರ್ತಿ ದೈವದ ಪ್ರತಿಷ್ಠಾಪನಾ ವಾರ್ಷಿಕೋತ್ಸವ, ಕೋಲ ಹಾಗೂ ಅಗೆಲು ಸೇವೆ ನಡೆಯಲಿದೆ. ಏ.19 ರಂದು ಸಂಜೆ 6 ಗಂಟೆಗೆ ಪಯ್ಯನೂರು ಹೆಸರಾಂತ ತಂತ್ರಿಗಳಾದ ಆಚಾರ್ಯ ಈಶ್ವರನ್ ನಂಬೂದರಿರವರ ನೇತೃತ್ವದಲ್ಲಿ ದೇವಿಯ ಸನ್ನಧಿಯಲ್ಲಿ ಧಾರ್ಮಿಕ ವಿಧಿವಿಧಾನಗಳಾದ ಆಚಾರ್ಯ ವರಣಂ, ಪುಣ್ಯಾಹ ಶುದ್ದಿ, ಸುದರ್ಶನ ಹೋಮ, ದೇವಿ ಪೂಜೆ, ಲಲಿತಾ ಸಹಸ್ರನಾಮಾರ್ಚನೆ, ಪ್ರಸಾದ ವಿತರಣೆ ನೆರವೇರಲಿದೆ. ಏ.20 ರಂದು ಬೆಳಿಗ್ಗೆ 6 ಗಂಟೆಗೆ ಮಹಾಗಣಪತಿ ಹೋಮ, ನವಕ ಪಂಚಗವ್ಯ ಕಳಶ ಪೂಜೆ, ನವಕ ಪಂಚಗವ್ಯ ಕಳಶಾಭಿಷೇಕ, ಸರ್ವಾಲಂಕಾರ ಮಹಾಪೂಜೆ, ಪಾಷಾಣಮೂರ್ತಿ ದೈವದ ಕಳಶ ಪೂಜೆ, ಅಲಂಕಾರ ಪೂಜೆ ಹಾಗೂ ಮಂಗಳಾರತಿ ನಡೆಯಲಿದೆ. ನಾಗ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಪ್ರಯುಕ್ತ ಬೆಳಿಗ್ಗೆ 8 ಗಂಟೆಗೆ ಆಶ್ಲೇಷ ಬಲಿ, ನಾಗಪೂಜೆ, ಕ್ಷೀರಾಭಿಷೇಕ, 10 ಗಂಟೆಯಿoದ ದೇವಿಯ ಸನ್ನಧಿಯಲ್ಲಿ ತುಲಾಭಾರ ಸೇವೆ, 11.30 ಗಂಟೆಗೆ ಉಡುಪಿಯ ಪೆರ್ಲಂಬಾಡಿಯ ಖ್ಯಾತ ನಾಗಪಾತ್ರಿಗಳಾದ ಶ್ರೀ ರಮಾನಂದ ಭಟ್ ಅವರಿಂದ ನಾಗದರ್ಶನ, ಮಹಾಪೂಜೆ, ಪ್ರಸಾದ ವಿತರಣೆ, ರಾತ್ರಿ 7.30ರಿಂದ ಪಾಷಾಣಮೂರ್ತಿ ದೈವ ಕೋಲ ಜರುಗಲಿದೆ. ಏ.21 ರಂದು ಸಂಜೆ 5 ಗಂಟೆಗೆ ಪಾಷಾಣಮೂರ್ತಿಯ ಅಗೆಲು ಸೇವೆ ನಡೆಯಲಿದೆ. ವರ್ಷಕ್ಕೊಮ್ಮೆ ನಡೆಯುವ ಅಗೆಲು ಸೇವೆಗೆ ಸೇವಾರ್ಥಿಗಳು ಮುಂಚಿತವಾಗಿ ದೇವಾಲಯದಲ್ಲಿ ರಶೀದಿಯನ್ನು ಪಡೆದುಕೊಳ್ಳಬೇಕು. ಮೂರು ದಿನಗಳ ಕಾಲ ನಡೆಯುವ ಧಾರ್ಮಿಕ ವಿಧಿ ವಿಧಾನಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಶ್ರೀ ಕೋಟೆ ಮಾರಿಯಮ್ಮ ದೇವಾಲಯ ಟ್ರಸ್ಟ್ ಮನವಿ ಮಾಡಿದೆ. ಹೆಚ್ಚಿನ ಮಾಹಿತಿಗೆ 9845836204, 9902612829, 8431747514, 9902234431 ನ್ನು ಸಂಪರ್ಕಿಸಬಹುದಾಗಿದೆ.









