
ಗೋಣಿಕೊಪ್ಪ ಏ.16 NEWS DESK : ಕೆದಮುಳ್ಳೂರು ಗ್ರಾಮದ ಕುಲ್ಲಚೆಟ್ಟಿ ಕುಟುಂಬಸ್ಥರು ಮೂರು ವರ್ಷಗಳಿಗೊಮ್ಮೆ ನಡೆಸುವ ಹರಿಸೇವೆ ಹಾಗೂ 101 ಕೋಲ ಎರಡು ದಿನಗಳ ಧಾರ್ಮಿಕ ಪೂಜಾ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ಜರುಗಿತು. ಕುಲ್ಲಚೆಟ್ಟಿಐನ್ ಮನೆಯಲ್ಲಿ ಬೆಳಗ್ಗೆ ವೆಂಕಟರಮಣ ದೇವರ ಹರಿಸೇವೆ, ಪೂಜಾ ಕಾರ್ಯಗಳು ನಡೆಯಿತು. ವೆಂಕಟರಮಣ ಮತ್ತು ಕೆಂಚರಾಯ ದೇವ ದರ್ಶನ ನಡೆಯಿತು. ವೆಂಕಟರಮಣ ಹರಿ ಸೇವೆಯ ಪೂಜೆಯನ್ನು ದಾಸ ಹರೀಶ್ ನಡೆಸಿದರು. ಸಂಜೆ ಅರೆಭಾಷೆ ಗೌಡ ಜನರ ಪ್ರಮುಖ ದೈವವಾದ ಬಚ್ಚನಾಯಕ ಆರಾಧನೆ ಮತ್ತು ಕೋಲ, ಜತೆಗೆ ಹುಲಿ ಚಾಮುಂಡಿ, ಇತರೆ ಶ್ರೀ ಧರ್ಮ ದೇವತೆಗಳು, ಕೋಲಗಳು ಜರುಗಿದವು. ಎರಡನೇ ದಿನ ಧರ್ಮ ದೇವತೆ, ಸೀರಾಡಿ ದೈವದ ಕೋಲ ನೆರವೇರಿತು. ಮೂರನೇ ದಿನ 17 ರಂದು, ಪಾಷಣಮೂರ್ತಿ, ಪಂಜುರ್ಲಿ ಸೇರಿದಂತೆ ಹಲವು ಕೋಲಗಳು ನಡೆಯಲಿದೆ. ಕುಲ್ಲಚೆಟ್ಟಿ ಕುಟುಂಬಸ್ಥರ ಪಟ್ಟೆದಾರ ಮಾಚಯ್ಯ, ಪೂವಯ್ಯ ಮತ್ತು ಹಿರಿಯರುಗಳಾದ, ಕಾರ್ಯಪ್ಪ, ಚಂದ್ರಶೇಖರ್, ತಿಮ್ಮಯ್ಯ, ಈಶ್ವರ್, ಕಿರಣ್‍ಉತ್ತಪ್ಪ, ದಿನೇಶ್‍ಉತ್ತಪ್ಪ, ಅಪ್ಪಾಜಿ ದೇವಯ್ಯ, ಜಯಪೂಣಚ್ಚ, ಬೊಪ್ಪಿಗಣೇಶ್ ಸೇರಿದಂತೆ ಗ್ರಾಮಸ್ಥರು, ಕುಟುಂಬದ ಸದಸ್ಯರು ಇದ್ದರು.








