
ನಾಪೋಕ್ಲು ಏ.16 NEWS DESK : ಸ್ಥಳೀಯ ಹಿಂದೂ ಮಲಯಾಳಿ ಸಂಘದ ವತಿಯಿಂದ ವಿಷು ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಸಂಘದ ಕಚೇರಿಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ದೇವರ ಮೂರ್ತಿಯನ್ನು ಶೃಂಗರಿಸಿ ದೀಪ ಬೆಳಗಿ ಫಲ ಪುಷ್ಪಗಳನ್ನು ಅರ್ಪಿಸಲಾಯಿತು. ನಂತರ ಜನಾಂಗ ಬಾಂಧವರಿಗೆ ವಿಷು ಕಣಿ ಕೊನ್ನಪೂ ವಿತರಣಾ ಮಾಡಲಾಯಿತು. ಬಳಿಕ ಹಬ್ಬವನ್ನು ಸಾಂಪ್ರದಾಯಕವಾಗಿ ಆಚರಿಸಿ ಪರಸ್ಪರ ಶುಭಾಶಯ ಕೋರಿಕೊಂಡು. ಸಂಘದ ಅಧ್ಯಕ್ಷ ಕೆ.ಕೆ.ಅನಿಲ್ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಅಧ್ಯಕ್ಷ ಕೆ.ಕೆ.ಅನಿಲ್ ಮತ್ತು ಪೊನ್ನು ಮುತ್ತಪ್ಪ ದೇವಾಲಯ ಅಧ್ಯಕ್ಷರು ಚಂದ್ರ ದಿನದ ಮಹತ್ವದ ಬಗ್ಗೆ ಮಾತನಾಡಿ ಶುಭ ಹಾರೈಸಿದರು, ಈ ಸಂದರ್ಭ ಸಂಘದ ಉಪಾಧ್ಯಕ್ಷರು ಅಭಿಲಾಷ್ ,ಮಹಿಳಾ ಘಟಕ ಅಧ್ಯಕ್ಷರು ಸುಮಿತ್ರಾ ವಿನೋದ್, ಪೊನ್ನು ಮುತ್ತಪ್ಪ ದೇವಾಲಯ ಅಧ್ಯಕ್ಷರು ಚಂದ್ರ, ಕಾರ್ಯದರ್ಶಿ ರಮೇಂದ್ರ ,ಸಹಕಾರ್ಯದರ್ಶಿ ಮಹೇಶ್ ಮೆನನ್ ಖಜಾಂಚಿ ವಿಶ್ವನಾಥ್ , ಆಡಳಿತ ಮಂಡಳಿಯ ಸದಸ್ಯರು ಮೋಹನ್,ಉತ್ತಮ, ಶಿವ ಕೆ.ಡಿ ,ಮಹೇಶ್ ಕೆ,ಸತೀಶ್, ವಿನಿಲ್,ರಘು ಟಿ.ಕೆ, ಪ್ರಸಾದ್, ಸುಧಾಬಾಲಕೃಷ್ಣ, ವಿಮಲ,ಶೀಲಾ , ಪ್ರಮೀಳಾ, ಸುನೀತಾ, ಅಂಬಿಕಾ, ಪ್ರಿಯಾ, ಓಮನ, ಹಾಗೂ ಹಿರಿಯರು ಮತ್ತು ಸಂಘದ ಸದಸ್ಯರು ಭಾಗವಹಿಸಿದರು.
ವರದಿ : ದುಗ್ಗಳ ಸದಾನಂದ.









