Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಕಾಂಗ್ರೆಸ್ ವಿರುದ್ಧ ಸುನ್ನಿ ಸಮನ್ವಯ ಸಮಿತಿ ಅಸಮಾಧಾನ : ಮುಸ್ಲಿಮರನ್ನು ಕಡೆಗಣಿಸದಂತೆ ಆಗ್ರಹ*
  • *ಅಕ್ಕಪಡೆಯಿಂದ ಮಡಿಕೇರಿಯ ವಿವಿಧೆಡೆ ತುರ್ತು ಸಹಾಯವಾಣಿಗಳ ಕುರಿತು ಜಾಗೃತಿ*
  • *ಚಿಕ್ಕತ್ತೂರುವಿನಲ್ಲಿ ಹುಲಿ ಮಿತ್ರ ಕ್ರಿಕೆಟ್ ಪಂದ್ಯಾವಳಿ : ದುಬಾರೆ ಟೈಗರ್‌ ತಂಡ ಪ್ರಥಮ*
  • *ಕೊಡಗು ಸೈನಿಕ ಶಾಲೆಯಲ್ಲಿ ದಕ್ಷಿಣ ವಲಯದ ಅಂತರ ಗುಂಪು ಫುಟ್ಬಾಲ್ ಪಂದ್ಯಾವಳಿ ಉದ್ಘಾಟನೆ*
  • *ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.21 ರಂದು ನಡೆಯುವ ಪಂದ್ಯಗಳು*
  • *ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.20 ರಂದು ಗೆಲುವು ಸಾಧಿಸಿದ ತಂಡಗಳು*
  • *ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.21 ರಂದು ನಡೆಯುವ ಪಂದ್ಯಗಳು*
  • *ಲೇಖಕ ಅನಂತರಾಜ ಗೌಡ ನಿಧನ*
  • *ವಿದ್ಯುತ್ ದರ ಏರಿಕೆ : ರಾಜ್ಯ ಸರಕಾರದ ವಿರುದ್ಧ ವಿರಾಜಪೇಟೆ ಬಿಜೆಪಿ ಅಸಮಾಧಾನ*
  • *ವಿಕಾಸ್ ಜನತಾ ಸೇವಾ ಟ್ರಸ್ಟ್ ನ ನೂತನ ವ್ಯವಸ್ಥಾಪನಾ ಸಮಿತಿ ರಚನೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕ್ಷೇತ್ರ ಪುನರ್ ವಿಂಗಡಣೆಗೆ ಮುಂದಾಗಿ ಎಡವಿ ಬಿದ್ದ ಕೇಂದ್ರ ಸರಕಾರ : ಕೊಡಗು ಮಹಿಳಾ ಕಾಂಗ್ರೆಸ್ ಟೀಕೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಕ್ಷೇತ್ರ ಪುನರ್ ವಿಂಗಡಣೆಗೆ ಮುಂದಾಗಿ ಎಡವಿ ಬಿದ್ದ ಕೇಂದ್ರ ಸರಕಾರ : ಕೊಡಗು ಮಹಿಳಾ ಕಾಂಗ್ರೆಸ್ ಟೀಕೆ*

ಏಪ್ರಿಲ್ 19, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ NEWS DESK ಏ.19 : ಕೇಂದ್ರ ಸರಕಾರ ಮಹಿಳಾ ಮೀಸಲಾತಿ ಜಾರಿಗೆ ತರುವ ನೆಪದಲ್ಲಿ ಕ್ಷೇತ್ರ ಪುನರ್ ವಿಂಗಡಣೆಗೆ ಮುಂದಾಗಿ ಎಡವಿ ಬಿದ್ದಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೋಷಪೂರಿತ ವಿಚಾರ ಮಂಡನೆ ಅಸಾಧ್ಯ ಎನ್ನುವುದು ಇದರಿಂದ ಸಾಬೀತಾಗಿದೆ ಎಂದು ಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೆ ಪುಷ್ಪಲತಾ ಜಿ.ಆರ್ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಎಂದಿಗೂ ಇಂಡಿಯಾ ಒಕ್ಕೂಟ ಮಹಿಳಾ ಮೀಸಲಾತಿಗೆ ವಿರೋಧ ವ್ಯಕ್ತಪಡಿಸಿಲ್ಲ, ಆದರೆ ಕೇಂದ್ರ ಸರಕಾರ ಜಾರಿಗೆ ತರಲು ಪ್ರಯತ್ನಿಸುತ್ತಿರುವ ದೋಷಪೂರಿತ ಕ್ಷೇತ್ರ ಪುನರ್ ವಿಂಗಡಣೆೆಯನ್ನು ವಿರೋಧಿಸುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ. 2010 ರಲ್ಲಿ ಅಂದಿನ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಮಹಿಳಾ ಮೀಸಲಾತಿ ವಿಧೇಯಕವನ್ನು ಜಾರಿಗೆ ತರಲು ಪ್ರಯತ್ನಿಸಿದ್ದರಾದರೂ ಸಫಲರಾಗಿರಲಿಲ್ಲ. 2023 ರಲ್ಲಿ ಅಂಗೀಕಾರವಾಗಿದ್ದ 543 ಲೋಕಸಭೆ ಸ್ಥಾನಗಳಿಗೆ ಶೇ.33ರಷ್ಟು ಮಹಿಳಾ ಮೀಸಲಾತಿಯನ್ನು ಜಾರಿಗೆ ತಂದಿದ್ದರೆ ಇಂದಿನ ಇಂಡಿಯಾ ಒಕ್ಕೂಟ ಬೆಂಬಲ ನೀಡುತ್ತಿತ್ತು ಎಂಬುವುದರಲ್ಲಿ ಯಾವುದೇ ಸಂಶಯವಿಲ್ಲ. ಕೇಂದ್ರ ಸರಕಾರ 2011 ರಲ್ಲಿ ನಡೆಸಿದ ಜಾತಿ ಜನಗಣತಿ ಆಧಾರದ ಮೇಲೆ ಕ್ಷೇತ್ರ ವಿಂಗಡಣೆ ಮಾಡಲು ಹೊರಟಿದ್ದು, ಪ್ರಸ್ತುತ ಜಾತಿ ಜನಗಣತಿ ಕಾರ್ಯ ಪ್ರಗತಿಯಲ್ಲಿದೆ. ಈಗಿನ ಗಣತಿ ಪೂರ್ಣಗೊಂಡ ನಂತರ ಕ್ಷೇತ್ರ ಪುನರ್ ವಿಂಗಡಣೆ ಮಾಡುವುದು ಸೂಕ್ತವಾಗಿತ್ತು ಎಂಬುವುದು ಎಲ್ಲರ ಅಭಿಪ್ರಾಯವಾಗಿದೆ. ಮಹಿಳಾ ಮೀಸಲಾತಿಯ ಜೊತೆಗೆ ಕ್ಷೇತ್ರ ಪುನರ್ ವಿಂಗಡಣೆಯನ್ನು ತಳುಕು ಹಾಕುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕ್ಷೇತ್ರ ಪುನರ್ ವಿಂಗಡಣೆಯಿಂದ ರಾಜ್ಯಗಳ ಮಧ್ಯೆ ಅಸಮಾನತೆ ಉಂಟಾಗುತ್ತಿದ್ದು, ಕರ್ನಾಟಕ ಸೇರಿದಂತೆ ಹಲವು ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗಲಿದೆ. ಮಹಿಳಾ ಮೀಸಲಾತಿ ವಿಧೇಯಕ ಜಾರಿ ಮಾಡದೆ ಮಹಿಳೆಯರಿಗೆ ಅನ್ಯಾಯ ಮಾಡುತ್ತಿರುವ ಕೇಂದ್ರದ ಬಿಜೆಪಿ ನೇತೃತ್ವದ ಸರಕಾರ, ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳು ಮಹಿಳಾ ಮೀಸಲಾತಿಯ ವಿರೋಧಿಗಳು ಎಂದು ದೇಶದ ಜನರಲ್ಲಿ ಪ್ರತಿಬಿಂಬಿಸಲು ಮುಂದಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಈ ವ್ಯರ್ಥ ಪ್ರಯತ್ನವನ್ನು ಜನತೆ ಅರ್ಥ ಮಾಡಿಕೊಂಡು ಜಾಗೃತರಾಗದಿದ್ದರೆ ಮುಂದೆ ಇಡೀ ದಕ್ಷಿಣ ಭಾರತಕ್ಕೆ ತೊಂದರೆಯಾಗಲಿದೆ ಎಂದು ಪುಷ್ಪಲತಾ ಜಿ.ಆರ್ ಟೀಕಿಸಿದ್ದಾರೆ. 2026ರ ಜಾತಿ ಜನಗಣತಿ ಮುಗಿಯುವವರೆಗೂ ಕ್ಷೇತ್ರ ಪುನರ್ ವಿಂಗಡಣೆ ಕಾರ್ಯವನ್ನು ಮುಂದೂಡಬೇಕು. ಸರ್ವ ಪಕ್ಷಗಳೊಂದಿಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ಅದರ ಬಗ್ಗೆ ನಿರ್ಧಾರ ಕೈಗೊಳ್ಳಬೇಕು. ಈಗ ಇರುವ 543 ಲೋಕಸಭಾ ಸ್ಥಾನಗಳಿಗೆ ಪೂರಕವಾಗಿ ಶೇ.33 ರಷ್ಟು ಮಹಿಳಾ ಮೀಸಲಾತಿಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದ್ದಾರೆ. ಈ ವಿಚಾರದಲ್ಲಿ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯ ರೆಡ್ಡಿಯವರ ನೇತೃತ್ವದಲ್ಲಿ ನಡೆಯುವ ಎಲ್ಲಾ ಹೋರಾಟಕ್ಕೆ ಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ ಎಂದು ತಿಳಿಸಿದ್ದಾರೆ.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಕಾಂಗ್ರೆಸ್ ವಿರುದ್ಧ ಸುನ್ನಿ ಸಮನ್ವಯ ಸಮಿತಿ ಅಸಮಾಧಾನ : ಮುಸ್ಲಿಮರನ್ನು ಕಡೆಗಣಿಸದಂತೆ ಆಗ್ರಹ*

ಏಪ್ರಿಲ್ 21, 2026

*ಅಕ್ಕಪಡೆಯಿಂದ ಮಡಿಕೇರಿಯ ವಿವಿಧೆಡೆ ತುರ್ತು ಸಹಾಯವಾಣಿಗಳ ಕುರಿತು ಜಾಗೃತಿ*

ಏಪ್ರಿಲ್ 20, 2026

*ಚಿಕ್ಕತ್ತೂರುವಿನಲ್ಲಿ ಹುಲಿ ಮಿತ್ರ ಕ್ರಿಕೆಟ್ ಪಂದ್ಯಾವಳಿ : ದುಬಾರೆ ಟೈಗರ್‌ ತಂಡ ಪ್ರಥಮ*

ಏಪ್ರಿಲ್ 20, 2026

*ಅಕ್ಕಪಡೆಯಿಂದ ಮಡಿಕೇರಿಯ ವಿವಿಧೆಡೆ ತುರ್ತು ಸಹಾಯವಾಣಿಗಳ ಕುರಿತು ಜಾಗೃತಿ*

ಏಪ್ರಿಲ್ 20, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಏ.20 NEWS DESK : ಅಕ್ಕಪಡೆ ವತಿಯಿಂದ ಮಡಿಕೇರಿಯ ವಿವಿಧೆಡೆ ತುರ್ತು ಸಹಾಯವಾಣಿಯ ಕುರಿತು ಅರಿವು ಮೂಡಿಸಲಾಯಿತು. ಅಕ್ಕಪಡೆ…

*ಚಿಕ್ಕತ್ತೂರುವಿನಲ್ಲಿ ಹುಲಿ ಮಿತ್ರ ಕ್ರಿಕೆಟ್ ಪಂದ್ಯಾವಳಿ : ದುಬಾರೆ ಟೈಗರ್‌ ತಂಡ ಪ್ರಥಮ*

ಏಪ್ರಿಲ್ 20, 2026

*ಕೊಡಗು ಸೈನಿಕ ಶಾಲೆಯಲ್ಲಿ ದಕ್ಷಿಣ ವಲಯದ ಅಂತರ ಗುಂಪು ಫುಟ್ಬಾಲ್ ಪಂದ್ಯಾವಳಿ ಉದ್ಘಾಟನೆ*

ಏಪ್ರಿಲ್ 20, 2026

*ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.21 ರಂದು ನಡೆಯುವ ಪಂದ್ಯಗಳು*

ಏಪ್ರಿಲ್ 20, 2026

*ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.20 ರಂದು ಗೆಲುವು ಸಾಧಿಸಿದ ತಂಡಗಳು*

ಏಪ್ರಿಲ್ 20, 2026

*ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.21 ರಂದು ನಡೆಯುವ ಪಂದ್ಯಗಳು*

ಏಪ್ರಿಲ್ 20, 2026

*ಲೇಖಕ ಅನಂತರಾಜ ಗೌಡ ನಿಧನ*

ಏಪ್ರಿಲ್ 20, 2026

*ವಿದ್ಯುತ್ ದರ ಏರಿಕೆ : ರಾಜ್ಯ ಸರಕಾರದ ವಿರುದ್ಧ ವಿರಾಜಪೇಟೆ ಬಿಜೆಪಿ ಅಸಮಾಧಾನ*

ಏಪ್ರಿಲ್ 20, 2026

*ವಿಕಾಸ್ ಜನತಾ ಸೇವಾ ಟ್ರಸ್ಟ್ ನ ನೂತನ ವ್ಯವಸ್ಥಾಪನಾ ಸಮಿತಿ ರಚನೆ*

ಏಪ್ರಿಲ್ 20, 2026

*ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.20 ರಂದು ನಡೆಯುವ ಪಂದ್ಯಗಳು*

ಏಪ್ರಿಲ್ 19, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.