
ಮಡಿಕೇರಿ ಏ.20 NEWS DESK : ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿರುವ ಕ್ರಿಕೆಟ್ ಆಟದ ಮೈದಾನದಲ್ಲಿ ಕುಶಾಲನಗರ ತಾಲ್ಲೂಕು ಮಟ್ಟದ ಕುಶಾಲನಗರ ವಲಯ ಅರಣ್ಯ ಇಲಾಖೆಯ ವತಿಯಿಂದ ಸಾರ್ವಜನಿಕ ಯುವಕರು ಮತ್ತು ಅರಣ್ಯ ಇಇಲಾಖೆಯ ಸಿಬ್ಬಂದಿ ಒಳಗೊಂಡಂತೆ ತಂಡಗಳ ರಚನೆ ಮೂಲಕ ಎರಡು ದಿನಗಳ” ಹುಲಿ ಮಿತ್ರ” ಕ್ರಿಕೆಟ್ ಪಂದ್ಯಾವಳಿಯು ಚಿಕ್ಕತ್ತೂರು ಸಾರ್ವಜನಿಕ ಆಟದ ಮೈದಾನದಲ್ಲಿ ನಡೆಯಿತು. ಪಂದ್ಯಾಟದ ಉದ್ಘಾಟನೆಯನ್ನು ಕುಶಾಲನಗರ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ನೆರವೇರಿ ನಂತರ ಮಾತಾನಾಡುತ್ತಾ ಗ್ರಾಮಾಂತರ ಪ್ರದೇಶದ ಯುವಕರು ಅರಣ್ಯ ಇಲಾಖೆಯೊಂದಿಗೆ ಸೌಹಾರ್ದ ಮನೋಭಾವ ಬೆಳೆಸಿಕೊಂಡು ,ಗ್ರಾಮದ ಅಭಿವೃದ್ಧಿ, ಮತ್ತು ಇಲಾಖೆಗೆ ಸಹಕಾರಿಯಾಗುವ ಸ್ನೇಹ ಸಂಬಂಧ ಒಗ್ಗೂಡುವ ಹಿತದೃಷ್ಟಿಯಿಂದ ಇಂತಹ ಕ್ರೀಡಾಕೂಟಗಳು ಅರಣ್ಯ ಇಲಾಖೆಯ ವತಿಯಿಂದ ಆಯೋಜನೆಗೊಂಡಿರುವುದರಿಂದ ಯುವಕರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಪೂರಕವಾಗುತ್ತೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ ಮಾತಾನಾಡುತ್ತಾ ಕ್ರೀಡಾಕೂಟ ಮೂಲಕ ಒಗ್ಗೂಡಿ ಸಮಾಜಕ್ಕೆ ಪೂರಕವಾಗುವ ವಿಷಯಗಳು ನಮ್ಮ ಬದುಕಿಗೆ ಆದರ್ಶ ಮತ್ತು ಯುವಕರಿಗೆ ಜೀವನ ಮೌಲ್ಯಗಳನ್ನು ಕಲಿಸಿಕೂಡುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಾಜಿ ಸೈನಿಕ ವಾಂಚಿರ ಮನು ನಂಜುಂಡ, ಡಿ.ಸಿ. ಎಫ್. ವಿ. ಅಭಿಷೇಕ್, ಎ.ಸಿ.ಎಫ್. ಎ.ಎ. ಗೋಪಾಲ, ಮಂಜುನಾಥ, ಕುಶಾಲನಗರ ವಲಯ ಅರಣ್ಯಾಧಿಕಾರಿ ಆರ್. ರಕ್ಷಿತ್, ಸೇರಿದಂತೆ ಗಸ್ತು ಅರಣ್ಯ ಪಾಲಕರಾದ ಕೆ.ಆರ್. ಚೇತನ್, ಚಿಕ್ಕತ್ತೂರು ಯುವಕ ಸಂಘದ ಅಧ್ಯಕ್ಷ ಸಿ.ಸಿ. ಸ್ವಾಮಿ, ದೈಹಿಕ ಶಿಕ್ಷಕ ಚೇತನ್, ದೊಡ್ಡತ್ತೂರು ಯೋಗೇಶ್, ಉಪ ವಲಯ ಅರಣ್ಯಾಧಿಕಾರಿಗಳಾದ ಉಮೇಶ್, ವೆಂಕಟೇಶ್, ಗಸ್ತು ಅರಣ್ಯ ಪಾಲಕರಾದ ಮಲ್ಲನಗೌಡ ಪಾಟೀಲ್, ಸಂಪತ್ ಕುಮಾರ್, ಅರುಣ್, ಸುನಿಲ್, ಕುಡಲಪ್ಪ ಸೇರಿದಂತೆ ಇಲಾಖೆಯ ಸಿಬ್ಬಂದಿಗಳು ಸ್ಥಳೀಯ ಯುವಕರು, ಮತ್ತು ಗ್ರಾಮಸ್ಥರು ಹಾಜರಿದ್ದರು. ಕ್ರೀಡಾಕೂಟದಲ್ಲಿ ಒಟ್ಟು 12. ತಂಡಗಳು ಭಾಗವಹಿಸಿ ಅದರಲ್ಲಿ ಪ್ರಥಮ ಸ್ಥಾನವನ್ನು ದುಬಾರೆ ಟೈಗರ್ ತಂಡ ಪಡೆಯಿತು, ದ್ವೀತಿಯ ಸ್ಥಾನ ಹಾತಿ ಮೇರೆ ಸಾಥಿ, ತೃತೀಯ ಸ್ಧಾನ ಕಂಬಿಬಾಣಿ ರಾಯಲ್ ತಂಡ ಪಡೆದುಕೊಂಡಿತು. ಬಹುಮಾನ ವಿತರಣೆಯನ್ನು ಎ.ಸಿ.ಫ್. ಎ.ಎ. ಗೋಪಾಲ, ಮತ್ತು ಕುಶಾಲನಗರ ವಲಯ ಅರಣ್ಯಾಧಿಕಾರಿ ಆರ್. ರಕ್ಷಿತ್ ವಿತರಣೆ ನೆರವೇರಿಸಿದರು.









