
ಮಡಿಕೇರಿ ಮಾ.20 NEWS DESK : ಕುಂಜಿಲ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಮೇ6 ರಿಂದ 10ರವರೆಗೆ ಕಕ್ಕಬ್ಬೆಯ ಪ್ರೌಢ ಶಾಲಾ ಮೈದಾನದಲ್ಲಿ ಜಮಾಅತ್ ಮಟ್ಟದ “ಕೊಡಗು ಕಪ್” ಕ್ರಿಕೆಟ್ ಸೀಸನ್-2 ಪಂದ್ಯಾವಳಿಯನ್ನು ಆಯೋಜಿಸಲಾಗಿದೆಯೆಂದು ಕ್ಲಬ್ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಶರೀಫ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿರುವ ಜಮಾಅತ್‍ಗಳಿಗೆ ಸಂಬಂಧಿಸಿದ ತಂಡಗಳು ಈ ಪಂದ್ಯಾವಳಿಯಲ್ಲಿ ಸ್ಪರ್ಧಿಸಲಿವೆ. ಪಂದ್ಯಾವಳಿಯಲ್ಲಿ 60 ರಿಂದ 70 ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಆಸಕ್ತ ತಂಡಗಳು ಮೇ1ರ ಒಳಗಾಗಿ 3ಸಾವಿರ ರೂ. ಪ್ರವೇಶ ಶುಲ್ಕದೊಂದಿಗೆ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಮೊ.9845225284ನ್ನು ಸಂಪರ್ಕಿಸಬಹುದೆಂದರು. ಪಂದ್ಯಾವಳಿ ವಿಜೇತ ತಂಡಕ್ಕೆ 66,666 ರೂ. ಮತ್ತು ಆಕರ್ಷಕ ಟ್ರೋಫಿ, ದ್ವಿತೀಯ 33,333 ರೂ. ಮತ್ತು ಆಕರ್ಷಕ ಟ್ರೋಫಿ, ತೃತೀಯ ಮತ್ತು ನಾಲ್ಕನೇ ಸ್ಥಾನ ಪಡೆಯುವ ತಂಡಗಳಿಗೂ ಆಕರ್ಷಕ ಬಹುಮಾನಗಳನ್ನು ವಿತರಿಸಲಾಗುತ್ತದೆಂದು ತಿಳಿಸಿದರು. ಪಂದ್ಯಾವಳಿಯಲ್ಲಿ ಪಂದ್ಯಗಳು 6 ಓವರ್‍ಗಳಿಗೆ ಸೀಮಿತವಾಗಿ ನಡೆಯಲಿದೆ. ತಂಡಗಳಿಗೆ ಸಮವಸ್ತ್ರ ಕಡ್ಡಾಯವಾಗಿರುತ್ತದೆಂದು ತಿಳಿಸಿದರು. ನಗರದಲ್ಲಿ ಗೋಷ್ಠಿಯಲ್ಲಿ ಕ್ಲಬ್ ಅಧ್ಯಕ್ಷರಾದ ಮೊಯ್ದು ಕುಂಜಿಲ, ಉಪಾಧ್ಯಕ್ಷ ಮುಸ್ತಫ ಕುಂಜಿಲ, ಸಹಕಾರ್ಯದರ್ಶಿ ರಿಜ್ವಾನ್ ಕುಂಜಿಲ, ಖಜಾಂಚಿ ಶಮೀರ್, ತೀರ್ಪುಗಾರರಾದ ಹನೀಫ್ ಮಡಿಕೇರಿ ಉಪಸ್ಥಿತರಿದ್ದರು.








