
ಮಡಿಕೇರಿ ಏ.22 NEWS DESK : ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 5 ರಡಿ ಹಾಗೂ 308(ಇ)(ಎಫ್) ರ ಪ್ರಕರಣದಡಿ ದತ್ತವಾದ ಅಧಿಕಾರದಂತೆ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು ಕೊಡಗು ಜಿಲ್ಲೆಯ ಐದು ತಾಲ್ಲೂಕುಗಳಿಂದ ಆಯ್ಕೆಯಾಗುವ ಗ್ರಾಮ ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು ಕೋಷ್ಟಕದಲ್ಲಿರುವಂತೆ ನಿಗದಿಪಡಿಸಿ. ಕೋಷ್ಟಕದ 2ನೇ ಅಂಕಣದಲ್ಲಿರುವ ಗ್ರಾಮ ಪಂಚಾಯಿತಿಯಿಂದ ಆಯ್ಕೆಯಾಗುವ ಚುನಾಯಿತ ಸದಸ್ಯರ ಸಂಖ್ಯೆಯನ್ನು 3ನೇ ಅಂಕಣದಲ್ಲಿ ನಿಗದಿಪಡಿಸಿದೆ. ಕೊಡಗು ಜಿಲ್ಲೆಯ ಗ್ರಾಮ ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದಲ್ಲಿ ಪ್ರಕಟಣೆಯ ದಿನಾಂಕದಿಂದ 7 ದಿವಸಗಳ ಒಳಗೆ ಅಂದರೆ ಏಪ್ರಿಲ್, 24 ರ ಸಂಜೆ 5 ಗಂಟೆಯ ಒಳಗೆ ಸಲ್ಲಿಸಲು ತಿಳಿಸಿದೆ. ಆಕ್ಷೇಪಣೆಗಳನ್ನು ಆನ್‍ಲೈನ್ ಮೂಲಕ ಹಾಗೂ ಖುದ್ದಾಗಿ/ ಅಂಚೆಯ ಮೂಲಕ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ, 3ನೇ ಗೇಟ್, 2ನೇ ಮಹಡಿ, ಕೊಠಡಿ ಸಂಖ್ಯೆ :222/ಎ, ಬಹುಮಹಡಿ ಕಟ್ಟಡ, ಅಂಬೇಡ್ಕರ್ ವೀಧಿ, ಬೆಂಗಳೂರು-560001 ಈ ವಿಳಾಸಕ್ಕೆ ಸಲ್ಲಿಸತಕ್ಕದ್ದು. ಅಂಚೆಯ ಮೂಲಕ ಸಲ್ಲಿಸಿದಾಗಲೂ, ಆಯೋಗವು ನಮೂದಿಸಿದ ದಿನಾಂಕದೊಳಗೆ ಸಲ್ಲಿಸತಕ್ಕದ್ದು, ನಂತರ ಸ್ವೀಕೃತವಾದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಹಾಗೂ ಅಂಚೆ ಇಲಾಖೆಯ ವಿಳಂಬಕ್ಕೆ ಆಯೋಗವು ಜವಾಬ್ದಾರರಾಗಿರುವುದಿಲ್ಲ ಎಂದು ಈ ಮೂಲಕ ತಿಳಿಸಿದೆ. ವೆಬ್‍ಸೈಟ್ ವಿಳಾಸ https://rdpr.karnataka.gov.in/rdc/public/ ಈ ವೆಬ್‍ಸೈಟ್‍ನ ಮುಖಪುಟದ ಎಡಭಾಗದಲ್ಲಿರುವ ಸಾರ್ವಜನಿಕ ಸಲಹೆಗಳು ಎಂಬ ಶೀರ್ಷಿಕೆಯನ್ನು ಕ್ಲಿಕ್ ಮಾಡಿ ತಮ್ಮ ಆಕ್ಷೇಪಣೆಗಳನ್ನು ಆನ್‍ಲೈನ್‍ನಲ್ಲಿ ಸಲ್ಲಿಸಬಹುದು. ಮಡಿಕೇರಿ ತಾಲ್ಲೂಕಿನ ಗಾಳಿಬೀಡು ಗ್ರಾ.ಪಂ.ಸದಸ್ಯರ ಸಂಖ್ಯೆ 10, ಮಕ್ಕಂದೂರು 7, ಕಳಕೇರಿ ನಿಡುಗಣೆ 10, ಕಡಗದಾಳು 11, ಮರಗೋಡು 10, ಹೊಸ್ಕೇರಿ 9, ಕಾಂತೂರು ಮೂರ್ನಾಡು 21, ಹೊದ್ದೂರು 15, ಹಾಕತ್ತೂರು 8, ಮೇಕೇರಿ 10, ಬೆಟ್ಟಗೇರಿ 16, ಮದೆ 13, ಸಂಪಾಜೆ 8, ಚೆಂಬು 10, ಪೆರಾಜೆ 10, ಕರಿಕೆ 11, ಭಾಗಮಂಡಲ 11, ಅಯ್ಯಂಗೇರಿ 7, ಕುಂದಚೇರಿ 8, ಬೇಂಗೂರು ಚೇರಂಬಾಣೆ 12, ಬಲ್ಲಾಮಾವಟಿ 8, ಎಮ್ಮೆಮಾಡು 9, ನಾಪೋಕ್ಲು 23, ಕುಂಜಿಲ(ಕಕ್ಕಬ್ಬೆ) 14, ಕೊಣಂಜಗೇರಿ(ಪಾರಾಣೆ) 9, ನರಿಯಂದಡ 15 ಸದಸ್ಯರು. ಸೋಮವಾರಪೇಟೆ ತಾಲ್ಲೂಕಿನ ಕೊಡ್ಲಿಪೇಟೆ ಗ್ರಾ.ಪಂ. 15 ಸದಸ್ಯರು, ಬ್ಯಾಡಗೊಟ್ಟ 9, ಬೆಸ್ಸೂರು 13, ಹಂಡ್ಲಿ 11, ಶನಿವಾರಸಂತೆ 10, ದುಂಡಳ್ಳಿ 13, ನಿಡ್ತ 13, ಆಲೂರು 15, ಗೌಡಳ್ಳಿ 10, ದೊಡ್ಡಮಳ್ತೆ 9, ಶಾಂತಳ್ಳಿ 7, ತೋಳೂರು ಶೆಟ್ಟಳ್ಳಿ 8, ಬೆಟ್ಟದಳ್ಳಿ 7, ಹಾನಗಲ್ಲು 12, ಚೌಡ್ಲು 14, ಬೇಳೂರು 15, ಕಿರಗಂದೂರು 10, ಐಗೂರು 11, ನೇರುಗಳಲೆ 12, ಗಣಗೂರು 8, ಹರದೂರು 11, ಮಾದಾಪುರ 16, ಗರ್ವಾಲೆ 5 ಸದಸ್ಯರು. ವಿರಾಜಪೇಟೆ ತಾಲ್ಲೂಕು ಚೆಂಬೆಬೆಳ್ಳೂರು ಗ್ರಾ.ಪಂ. 10 ಸದಸ್ಯರು, ಬಿಟ್ಟಂಗಾಲ 16, ಬೇಟೋಳಿ 9, ಆರ್ಜಿ 7, ಕೆದಮುಳ್ಳೂರು 12, ಕಾಕೋಟುಪರಂಬು 11, ಕದನೂರು 10, ಅಮ್ಮತ್ತಿ 9, ಕಾರ್ಮಾಡು 12, ಬಿಳುಗುಂದ 8, ಹೊಸೂರು 12, ಪಾಲಿಬೆಟ್ಟ 9, ಕಣ್ಣಂಗಾಲ 10, ಹಾಲುಗುಂದ 10, ಸಿದ್ದಾಪುರ 25, ಮಾಲ್ದಾರೆ 18 ಹಾಗೂ ಚೆನ್ನಯ್ಯನಕೋಟೆ 17 ಸದಸ್ಯರು. ಕುಶಾಲನಗರ ತಾಲ್ಲೂಕು ನೆಲ್ಲಿಹುದಿಕೇರಿ ಗ್ರಾ.ಪಂ. 20 ಸದಸ್ಯರು, ವಾಲ್ನೂರು ತ್ಯಾಗತ್ತೂರು 11, ನಂಜರಾಯಪಟ್ಟಣ 8, ಗುಡ್ಡೆಹೊಸೂರು 15, ಕೂಡಿಗೆ 15, ಕೂಡುಮಂಗಳೂರು 24, ಹೆಬ್ಬಾಲೆ 14, ತೊರೆನೂರು 10, ಶಿರಂಗಾಲ 9, ಚೆಟ್ಟಳ್ಳಿ 15, ಕೆದಕಲ್ 8, ಕೊಡಗರಹಳ್ಳಿ 10, ಕಂಬಿಬಾಣೆ 6, 7ನೇ ಹೊಸಕೋಟೆ 10, ನಾಕೂರು ಶಿರಂಗಾಲ 8 ಮತ್ತು ಸುಂಟಿಕೊಪ್ಪ ಗ್ರಾ.ಪಂ. 20 ಸದಸ್ಯರು. ಪೊನ್ನಂಪೇಟೆ ತಾಲ್ಲೂಕು ಕಿರುಗೂರು ಗ್ರಾ.ಪಂ. 10 ಸದಸ್ಯರು, ಅರುವತ್ತೋಕ್ಲು 12, ಬಿ.ಶೆಟ್ಟಿಗೇರಿ 6, ಹಾತೂರು 18, ದೇವರಪುರ 12, ತಿತಿಮತಿ 15, ಕಾನೂರು 12, ಬಾಳೆಲೆ 13, ನಿಟ್ಟೂರು 9, ಪೊನ್ನಪ್ಪಸಂತೆ 8, ಮಾಯಾಮುಡಿ 15, ಶ್ರೀಮಂಗಲ 11, ನಾಲ್ಕೇರಿ 7, ಕೆ.ಬಾಡಗ 9, ಕುಟ್ಟ 16, ಟಿ.ಶೆಟ್ಟಿಗೇರಿ 16, ಬಲ್ಯಮಂಡೂರು 6, ಹುದಿಕೇರಿ 16, ಬಿರುನಾಣಿ 11 ಹಾಗೂ ಗೋಣಿಕೊಪ್ಪಲು 21 ಸದಸ್ಯರು.
ಮಡಿಕೇರಿ ತಾಲ್ಲೂಕಿನ 26 ಗ್ರಾಮ ಪಂಚಾಯಿತಿಗಳಿಗೆ 295 ಸದಸ್ಯ ಸ್ಥಾನಗಳು, ಸೋಮವಾರಪೇಟೆ ತಾಲ್ಲೂಕಿನ 23 ಗ್ರಾ.ಪಂ.ಗಳಿಗೆ 254 ಸದಸ್ಯ ಸ್ಥಾನಗಳು, ವಿರಾಜಪೇಟೆ ತಾಲ್ಲೂಕಿಗೆ 17 ಗ್ರಾ.ಪಂ.ಗಳಿಗೆ 205 ಸದಸ್ಯ ಸ್ಥಾನ, ಕುಶಾಲನಗರ ತಾಲ್ಲೂಕಿನ 16 ಗ್ರಾ.ಪಂ.ಗಳಿಗೆ 203 ಸದಸ್ಯ ಸ್ಥಾನ ಹಾಗೂ ಪೊನ್ನಂಪೇಟೆ ತಾಲ್ಲೂಕಿನ 20 ಗ್ರಾ.ಪಂ.ಗಳಿಗೆ 243 ಸದಸ್ಯ ಸ್ಥಾನಗಳು ಒಟ್ಟು 102 ಗ್ರಾ.ಪಂ.ಗಳಿಗೆ 1200 ಸದಸ್ಯ ಸ್ಥಾನಗಳು.
ಕೊಡಗು ಜಿಲ್ಲೆಯ ಐದು ತಾಲ್ಲೂಕುಗಳಿಂದ ಆಯ್ಕೆಯಾಗುವ ಗ್ರಾಮ ಪಂಚಾಯಿತಿಗಳ ಚುನಾಯಿತ ಸದಸ್ಯರ ಸಂಖ್ಯೆಯ ಕುರಿತಂತೆ, ಏಪ್ರಿಲ್, 24 ರೊಳಗೆ ಸಲ್ಲಿಸಲ್ಪಟ್ಟ ಆಕ್ಷೇಪಣೆ/ ಅಹವಾಲುಗಳ ಪರಿಶೀಲನಾ ಅದಾಲತ್‍ನ್ನು ಏಪ್ರಿಲ್, 27 ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 1.30 ಗಂಟೆ ವರೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗೇಟ್ ನಂ.2, 2ನೇ ಮಹಡಿ, ಕೊಠಡಿ ಸಂಖ್ಯೆ 229, 230 ಬಹುಮಹಡಿಗಳ ಕಟ್ಟಡ, ಬೆಂಗಳೂರು-560001 ಇಲ್ಲಿ ನಡೆಸಲಾಗುವುದು. ಆಕ್ಷೇಪಣೆ ಮತ್ತು ಅಹವಾಲುಗಳನ್ನು ಸಲ್ಲಿಸಿರುವವರು ಅದಾಲತ್‍ನಲ್ಲಿ ಭಾಗವಹಿಸಲು ಇಚ್ಛಿಸಿದಲ್ಲಿ ಸರ್ಕಾರದಿಂದ ನೀಡಿರುವ ಭಾವಚಿತ್ರವುಳ್ಳ ಗುರುತಿನ ಚೀಟಿಯ ಮೂಲ ಪ್ರತಿಯನ್ನು ಕಡ್ಡಾಯವಾಗಿ ತರತಕ್ಕದ್ದು ಎಂದು ಪ್ರಕಟಣೆ ತಿಳಿಸಿದೆ.








