

ಸೋಮವಾರಪೇಟೆ ಏ.24 : ಇಲ್ಲಿಗೆ ಸಮೀಪದ ತಣ್ಣೀರುಹಳ್ಳ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ವೀರಭದ್ರ ಹಾಗೂ ಸಪರಿವಾರ ದೇವರುಗಳ ದೇವಾಲಯ ಪ್ರತಿಷ್ಠಾ ಬಂಧ ಬ್ರಹ್ಮಕಲಶೋತ್ಸವ ಧಾರ್ಮಿಕ ವಿಧಿ, ವಿಧಾನಗಳೊಂದಿಗೆ ಶ್ರದ್ಧಾ,ಭಕ್ತಿಯಿಂದ ನೆರವೇರಿತು. 13 ವರ್ಷಗಳ ಹಿಂದೆ ದೇವಾಲಯ ನಿರ್ಮಾಣಕ್ಕೆ ಸಂಕಲ್ಪ ತೊಟ್ಟರೂ ಕಳೆದ 2,3 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಬಸವೇಶ್ವರ ದೇವಾಲಯ ಸಮಿತಿಯು ಗ್ರಾಮಸ್ಥರು ಹಾಗೂ ದಾನಿಗಳ ನೆರವಿನಿಂದ ಸು 80 ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನ ದೇವಾಲಯ ನಿರ್ಮಿಸಿ,ಲೋಕಾರ್ಪಣೆ ಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ನಾಲ್ಕು ದಿನಗಳಿಂದ ನಡೆದ ಧಾರ್ಮಿಕ ವಿಧಿ,ವಿಧಾನ ಗಳ ಮೂಲಕ ಲಿಂಗರೂಪಿ ಶ್ರೀ.ವೀರಭದ್ರ ಸ್ವಾಮಿ,ಗಣಪತಿ ಹಾಗೂ ಬಸವೇಶ್ವರ ದೇವರುಗಳ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶೋತ್ಸವ ಇಂದು ವಿದ್ಯುಕ್ತವಾಗಿ ಅಂತ್ಯಗೊಂಡಿತು. ಮೂಡಿಗೆರೆಯ ವೇದವಿದ್ವಾನ್ ವೇದಮೂರ್ತಿ ಶಿವಪ್ರಸಾದ್ ಭಟ್ ಪುರೋಹಿತ್ವದ ಅರ್ಚಕರ ತಂಡ ದಿನಾಂಕ 21ರ ಮಂಗಳವಾರದಂದು ಸಾಮೂಹಿಕ ಪ್ರಾರ್ಥನೆ, ಭೂ ಶುಧಿ ಹೋಮದೊಂದಿಗೆ ಆರಂಭಗೊಂಡು 22 ರ ಬುಧವಾರದಂದು ನವಗ್ರಹ ಹೋಮ,ಶಾಂತಿ ಪ್ರಾಯಶ್ಚಿತ ಹೋಮ ಸೇರಿದಂತೆ ವಿವಿಧ, ಪೂಜೆಗಳು ನಡೆದವು.23 ರ ಗುರುವಾರ ಗಣಪತಿ,ಬಸವೇಶ್ವರ ಹಾಗೂ ವೀರಭದ್ರ ದೇವರ ಬಿಂಬ ಪ್ರತಿಷ್ಠೆ .ಪ್ರತಿಷ್ಠಾ ಹೋಮ,ಅಷ್ಟಬಂಧ,ಜೀವಸತ್ವ ಕಲಶಾಭಿಷೇಕ ಹಾಗೂ ರುದ್ರಹೋಮ ಗಳು ನೆರವೇರಿದವು. 24 ರ ಶುಕ್ರವಾರದಂದು ಮುಂಜಾನೆ ಗಣಾಯಾಗ,ಕಾಲಸಾಭಿಷೇಕ,ಪ್ರಸನ್ನ ಪೂಜೆ,ದೇವರ ಉತ್ಸವ,ದರ್ಶನ ಬಲಿ, ಮಹಾಪೂಜೆ,ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗದ ನಂತರ ದಾಸೋಹ ನೆರವರಿತು. ಕಳೆದ 13 ವರ್ಷಗಳ ಪರಿಶ್ರಮ ಗ್ರಾಮದ ದೇವಾಲಯ ನಿರ್ಮಾಣದ ಕನಸು ಸಾಕಾರಗೊಂಡಿದೆ ಇದಕ್ಕೆ ಬಹಳಷ್ಟು ಮಂದಿ ಕೈಜೋಡಿಸಿದ್ದಾರೆ ಎಂದು ದೇವಾಲಯ ಸಮಿತಿಯ ಉಪಾಧ್ಯಕ್ಷ ಭುವನೇಂದ್ರ (ಸತ್ಯ) ಕೃತಜ್ಞತೆಯಿಂದ ಸ್ಮರಿಸಿಕೊಂಡರು. 1963ರಲ್ಲಿ ಒಮ್ಮೆ ಈ ದೇವಾಲಯ ಜೀರ್ಣೋದ್ಧಾರಗೊಂಡಿತ್ತು.ಇದೀಗ ಗ್ರಾಮಸ್ಥರ ಸದಾಶಯದಂತೆ ಬರ್ಗಳ್ಳಿ ಎಸ್ಟೇಟ್ ಮಾಲೀಕರ ಕುಟುಂಬದವರು ನೀಡಿದ ಜಾಗದಲ್ಲಿ ನೂತನ ದೇವಾಲಯ ದೇವಾಲಯ ನಿರ್ಮಾಣಗೊಂಡಿದೆ.ದೇವಾಲಯ ಸಮಿತಿಯವರ ಶ್ರಮದಿಂದ ನೂತನ ದೇವಾಲಯ ಸುಂದರವಾಗಿ ನಿರ್ಮಾಣಗೊಂಡಿದ್ದು ಇಂದು ಲೋಕಾರ್ಪಣೆ ಗೊಂಡಿದೆ ಎಂದು ಗ್ರಾಮಸ್ಥ ಹಾಗೂ ಕರಕುಶಲ ರಾಜ್ಯ ಪ್ರಶಸ್ತಿ ಪುರಸ್ಕೃತ ಧರ್ಮಪ್ಪ ತಿಳಿಸಿದರು. ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಕೆ.ರವಿ,ಕಾರ್ಯದರ್ಶಿ ಅನಿಲ್ ಶೆಟ್ಟಿ,ಖಜಾಂಚಿ ಏಳುಮಲೈ ದೇವಾಲಯ ನಿರ್ಮಾಣದ ಸ್ಥಳ ದಾನಿಗಳಾದ ನರೇಂದ್ರ ,ಶ್ರೀಮತಿ ರಾಣಿ ನರೇಂದ್ರ ಕುಟುಂಬಸ್ಥರು ಸೇರಿದಂತೆ ಹಾಗೂ ನೂರಾರು ಗ್ರಾಮಸ್ಥರು ಪಾಲ್ಗೊಂಡಿದ್ದರು.









