
ಮಡಿಕೇರಿ ಏ.24 NEWS DESK : ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟವಾಗಿದ್ದು, ವಿರಾಜಪೇಟೆಯ ಕಾವೇರಿ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶಾಲೆಗೆ ಶೇ.100 ರಷ್ಟು ಪಲಿತಾಂಶ ಬಂದಿದೆ. ಶಾಲೆಯ ವಿದ್ಯಾರ್ಥಿಗಳಾದ ಶ್ರೀವತ್ಸ ಯು.ಎಸ್ 619/625, ಮೊಹಮ್ಮದ್ ಶಿಫಾನ್ ಕೆ.ಸಿ 617/625, ಸೃಷ್ಟಿ ಬಿ.ಎಸ್ 614/625, ವೃ ಶಾಂಕ್ ದೇವಯ್ಯ ಬಿ 607/625, ಯಶ್ಮಿತ ಕೆ.ಎಂ 601/625, ಜೋಯಾ ಎಸ್ 601/625ರಷ್ಟು ಅತ್ಯುತ್ತಮ ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ಫಲಿತಾಂಶದಲ್ಲಿ ಶೇಕಡವಾರು 85ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದು ಸುಮಾರು 25 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ನಲ್ಲಿ ಪಡೆದು ಶಾಲೆಗೌರವವನ್ನು ಹೆಚ್ಚಿಸಿ ಅತ್ಯುತ್ತಮ ಸಾಧನೆ ಮಾಡಿ ತೋರಿಸಿದ್ದಾರೆ. ಶೇ.60 ರಿಂದ 85 ಅಂಕಗಳನ್ನು ಗಳಿಸಿ 10 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿ ಅತ್ಯುತ್ತಮ ಸಾಧನೆಯನ್ನು ಮಾಡಿದ್ದಾರೆ. ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆಗೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುದೇಶ್ ಬಿ.ಎಸ್, ಕಾರ್ಯದರ್ಶಿಯವರಾದ ವಿನೋದ್ ಪಿ.ಎನ್, ಮುಖ್ಯ ಶಿಕ್ಷಕಿಯಾದ ಪಾರ್ವತಿ ಪಿ.ಯು, ಸಂಯೋಜಕಿಯಾದ ಅಮೃತ ಅರ್ಜುನ್ ಬೋಧಕ ಬೋಧಕೇತರ ವೃಂದದವರು ಪೆÇೀಷಕರು ವಿದ್ಯಾರ್ಥಿಗಳ ಪರಿಶ್ರಮ ಹಾಗೂ ಶಿಸ್ತಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ. ಸಾಧನೆ ಮುಂದಿನ ವರ್ಷಗಳಲ್ಲಿ ಇನ್ನಷ್ಟು ಉತ್ತಮ ಫಲಿತಾಂಶಗಳನ್ನು ತರುವ ಪ್ರೇರಣೆಯಾಗಲಿದೆ ಎಂದು ತಿಳಿಸಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ.









