


ಮಡಿಕೇರಿ ಏ.29 NEWS DESK : ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಗಳನ್ನು ಮಾಲು ಸಹಿತ ಬಂಧಿಸುವಲ್ಲಿ ಮಡಿಕೇರಿ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಜಾಬೀರ್ (21), ಒರಿಸ್ಸಾ ರಾಜ್ಯದ ಕಂದನಮಾಲ್ ಜಿಲ್ಲೆಯ ಕಳಿಂಗ ಗ್ರಾಮದ ಸುಲ್ತಾನ್ ಪ್ರಧಾನ್ (55) ಹಾಗೂ ಇದೇ ರಾಜ್ಯದ ಮದಿನಂಜು ಗ್ರಾಮದ ಸ್ವರ್ಣಲತಾ ನಾಯಕ್ (35) ಬಂಧಿತ ಆರೋಪಿಗಳಾಗಿದ್ದಾರೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಇನ್ನವಳವಾಡಿ ಗ್ರಾಮದ ಸಿಂಕೋನದಿಂದ ಮಕ್ಕಂದೂರು ಕಡಗೆ ಹೋಗುವ ರಸ್ತೆಯಲ್ಲಿ ದಾಳಿ ನಡೆಸಿದ ಪೊಲೀಸರು ಆರೋಪಿಗಳ ಬಳಿಯಿಂದ 15.903 ಕೆ.ಜಿ ಗಾಂಜಾ ಮತ್ತು 3 ಮೊಬೈಲ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಕಾರ್ಯಾಚರಣೆಯಲ್ಲಿ ಜಿಲ್ಲಾ ಡಿಎಸ್ಬಿ ಪಿಐ ಮೇದಪ್ಪ ಐ.ಪಿ,, ಗ್ರಾಮಾಂತರ ಠಾಣಾ ಪಿಐ ಚಂದ್ರಶೇಖರ್ ಹೆಚ್.ವಿ, ಎಎಸ್ಐ ಚರ್ಮಣ ಸಿ.ಯು, ಸಿಬ್ಬಂದಿಗಳಾದ ಮಹೇಶ್ ಎಂ.ಕೆ, ಉದಯ್ ಕುಮಾರ್ ಜಿ.ಆರ್, ನಿರಂಜನ ಎಂ.ಎನ್, ಪ್ರವೀಣ್ ಬಿ.ಕೆ, ರಾಜೇಶ್ ಸಿ.ಕೆ, ಶರತ್ ರೈ ಬಿ.ಜೆ, ರುದ್ರಪ್ಪ ಜಿ ಹಾಗೂ ಗಾಯತ್ರಿ ಎಂ. ಪಾಲ್ಗೊಂಡಿದ್ದರು.









