Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ನಿಟ್ಟೂರು ಕಾರ್ಮಾಡಿನಲ್ಲಿ ವನ್ಯಜೀವಿ ಸಪ್ತಾಹ: ಪ್ಲಾಸ್ಟಿಕ್ ತ್ಯಾಜ್ಯ ತೆರವು, ಪರಿಸರ ಜಾಗೃತಿ*
  • *ಅ.14 ರಂದು ಲೋಕಾಯುಕ್ತದಿಂದ ದೂರು ಅರ್ಜಿ ಸ್ವೀಕಾರ*
  • *ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಅವರ ಅ.9ರ ಕಾರ್ಯಕ್ರಮ*
  • *ಶಾಸಕ ಡಾ. ಮಂತರ್ ಗೌಡ ಅವರ ಅ.9ರ ಕಾರ್ಯಕ್ರಮ*
  • *ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ : ಕೇಂದ್ರ ಪುರಸ್ಕೃತ ಯೋಜನೆ ಸಕಾಲದಲ್ಲಿ ಪ್ರಗತಿ ಸಾಧಿಸಿ : ಸಂಸದ ಯದುವೀರ್ ಒಡೆಯರ್
  • *ಕಾವೇರಿ ತೀರ್ಥೋದ್ಭವ : ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಮನವಿ*
  • *ಗಾಂಧಿ ಮೈದಾನಕ್ಕೆ ಶಾಸಕ ಡಾ.ಮಂತರ್ ಗೌಡ ಭೇಟಿ : ದಸರಾ ಸಿದ್ಧತೆ ಕುರಿತು ಪರಿಶೀಲನೆ*
  • *ಬೆಂಗಳೂರು ಸಣ್ಣ ಭಾಷಾ ಚಲನಚಿತ್ರೋತ್ಸವಕ್ಕೆ ಕೊಡಗಿನ ‘ಬೇರ್’ ಆಯ್ಕೆ*
  • *ಕರ್ನಾಟಕದಲ್ಲಿ ಭೀಕರ ಬರ: ಶೇ.90ರಷ್ಟು ಬೆಳೆ ಹಾನಿ, ರೈತರ ನೆರವಿಗೆ ಸರ್ಕಾರದ ಮಹತ್ವದ ಕ್ರಮ*
  • *ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಿಯ ಕರಗೋತ್ಸವ: ಅ.11ರಿಂದ ನಗರ ಪ್ರದಕ್ಷಿಣೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕೊಡಗು ಬಂಟರ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ : ಸಮುದಾಯ ಬಾಂಧವರ ಒಗ್ಗಟ್ಟಿಗೆ ಗಣ್ಯರ ಕರೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಕೊಡಗು ಬಂಟರ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ : ಸಮುದಾಯ ಬಾಂಧವರ ಒಗ್ಗಟ್ಟಿಗೆ ಗಣ್ಯರ ಕರೆ*

ಮೇ 3, 20263 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
SM Fitness Advertisement

ಮಡಿಕೇರಿ ಮೇ 3 NEWS DESK : ಸುಸಂಸ್ಕೃತ ಸಮಾಜ ನಿರ್ಮಾಣದಕ್ಕೆ ಬಂಟ ಸಮಾಜದ ಕೊಡುಗೆ ದೊಡ್ಡದಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್‌ನ ಗುರುದೇವಾನಂದ ಸ್ವಾಮೀಜಿ ಬಣ್ಣಿಸಿದರು. ಕೊಡಗು ಜಿಲ್ಲಾ ಬಂಟರ ಭವನ ಟ್ರಸ್ಟ್‌ ಹಾಗೂ ಜಿಲ್ಲಾ ಬಂಟರ ಸಂಘದ ವತಿಯಿಂದ ಮಡಿಕೇರಿಯಲ್ಲಿ ಜರುಗಿದ ಬಂಟರ ಭವನ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಇಂದಿನ ಸಮಾಜಕ್ಕೆ ಸುಸಂಸ್ಕೃತ ಪ್ರಜೆಗಳ ಅಗತ್ಯವಿದೆ. ಮಕ್ಕಳಿಗೆ ಸಂಸ್ಕಾರ ಕಲಿಸುವ ಕಾರ್ಯವನ್ನು ಮನೆಯಿಂದಲೇ ಆರಂಭಿಸಬೇಕು. ಈ ವಿಚಾರದಲ್ಲಿ ಮಾತೆಯರಿಗೆ ಮಹತ್ತರ ಜವಾಬ್ದಾರಿ ಇದೆ ಎಂದರು. ನಾಡಿನ ವಿವಿಧೆಡೆ ಬಂಟರ ಭವನ ಇದೆ. ಆದರೆ ಕೊಡಗು ಜಿಲ್ಲೆಯಲ್ಲಿ ಸುಸಜ್ಜಿತವಾದ ಭವನ ಈವರೆಗೆ ಇರಲಿಲ್ಲ. ಉದ್ದೇಶಿತ ಯೋಜನೆ ಶೀಘ್ರವಾಗಿ ಈಡೇರಲು ಸಮುದಾಯ ಬಾಂಧವರೆಲ್ಲರು ಸಹೃದಯದಿಂದ ಸಂಘಟನೆ ಜೊತೆ ನಿಲ್ಲಬೇಕೆಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ಶಾಸಕ ಎ.ಎಸ್.‌ ಪೊನ್ನಣ್ಣ ಮಾತನಾಡಿ, ನಾಡಿನಲ್ಲಿರುವ ಪ್ರಬಲ ಮತ್ತು ಪ್ರಭಾವಿ ಸಮುದಾಯಗಳಲ್ಲಿ ಬಂಟ ಸಮುದಾಯ ಕೂಡಾ ಒಂದು. ಉದ್ಯಮ, ಸಿನೆಮಾ ಕ್ಷೇತ್ರದಲ್ಲಿ ತನ್ನದೇ ಆದ ಅಸ್ತಿತ್ವವನ್ನು ಬಂಟ ಬಾಂಧವರು ಹೊಂದಿದ್ದಾರೆ. ಉದ್ದೇಶಿತ ಭವನ ವ್ಯವಸ್ಥಿತವಾಗಿ ನಿರ್ಮಾಣವಾಗಬೇಕು. ಸಂಸ್ಕೃತಿ ಬಿಂಬಿಸುವ ಭವನವಾಗಿ ಕೊಡಗು ಬಂಟರ ಭವನ ರೂಪುಗೊಳ್ಳಬೇಕೆಂದು ಸಲಹೆ ನೀಡಿದರು. ಕೊಡಗು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಬಿ.ಡಿ. ಜಗದೀಶ್‌ ರೈ ಪ್ರಾಸ್ತಾವಿಕ ಮಾತನಾಡಿ, ಅಂದುಕೊಂಡಂತೆ ಆಗಿದ್ದರೆ ಕೊಡಗು ಜಿಲ್ಲೆಯಲ್ಲಿ ಬಹಳ ವರ್ಷದ ಹಿಂದೆಯೇ ಭವನ ನಿರ್ಮಾಣವಾಗಬೇಕಿತ್ತು. ಆದರೆ ವಿವಿಧ ಕಾರಣಗಳಿಂದಾಗಿ ಅದು ಆಗಿರಲಿಲ್ಲ. ಒಳ್ಳೆಯ ಕೆಲಸಕ್ಕೆ ಕೈ ಹಾಕಿದಾಗ ಕಾಲೆಳೆಯುವವರು ಕೂಡಾ ಇದ್ದಾರೆ. ಜಿಲ್ಲೆಯಲ್ಲಿರುವ ಬಂಟ ಬಾಂಧವರು ಈಗ ಒಗ್ಗಟ್ಟಾಗಿದ್ದು, ಕಾಲೆಳೆಯುವವರಿಗೆ ಈಗಿನ ಆಡಳಿತ ಮಂಡಳಿ ಹೆದರುವುದಿಲ್ಲ. ಬಂಟರ ಏಳಿಗೆಯ ಉದ್ದೇಶದಿಂದ ಡಾ. ಪ್ರೇಮನಾಥ್‌ ಪೂಂಜರವರು ದಾನವಾಗಿ ಜಾಗವನ್ನು ನೀಡಿದ್ದಾರೆ. ಅವರ ಆಶಯದಂತೆ ಈ ಜಾಗದಲ್ಲಿ ಭವನ ನಿರ್ಮಾಣವಾಗುತ್ತಿದೆ ಎಂದರು. ಉದ್ದೇಶಿತ ಭವನವನ್ನು 12ರಿಂದ 15 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸುವ ಗುರಿ ಹೊಂದಲಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಭವನ ನಿರ್ಮಾಣವಾಗಬೇಕೆಂಬ ಕನಸಿದೆ. ಎಲ್ಲರ ಸಹಕಾರವಿದ್ದರೆ ಉದ್ದೇಶಿತ ಅವಧಿಯಲ್ಲಿ ಮಡಿಕೇರಿಯಲ್ಲಿ ಸುಸಜ್ಜಿತ ಭವನ ತಲೆ ಎತ್ತಲಿದೆ ಎಂದು ಹೇಳಿದರು. ವಿಧಾನ ಪರಿಷತ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಮಾತನಾಡಿ, ಭವನ ನಿರ್ಮಾಣಕ್ಕೆ‌ 05 ಲಕ್ಷ ರೂ. ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು. ಉದ್ಯಮಿ ಕುಸುಮೋದರ ಡಿ. ಶೆಟ್ಟಿ ಮಾತನಾಡಿ, ಬಂಟರೆಂದರೆ ಉದ್ಯಮಿಗಳು ಅಂತ ಗುರುತಿಸುತ್ತಾರೆ. ಆದರೆ ಜಗತ್ತಿನಾದ್ಯಂತ ವಿವಿಧ ಕ್ಷೇತ್ರದಲ್ಲಿ ಬಂಟ ಸಮುದಾಯದ ಸಾಧಕರಿದ್ದಾರೆ. ಇಷ್ಟಿದ್ದರೂ ನಮ್ಮ ಸಮುದಾಯದಲ್ಲಿ ಒಗ್ಗಟ್ಟಿನ ಕೊರತೆ ಇದೆ. ಅದನ್ನು ನಾವೆಲ್ಲರು ದೂರ ಮಾಡಿ, ಎಲ್ಲರೂ ಒಗ್ಗಟ್ಟಿನಿಂದ ಬದುಕುವುವುದನ್ನು ಮೈಗೂಡಿಕೊಳ್ಳಬೇಕಿದೆ ಎಂದರು.
ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಕೊಡಗು ಜಿಲ್ಲೆಯ ಬಂಟ ಬಾಂಧವರ ಪಾಲಿಗೆ ಈ ದಿನ ಚಿರಸ್ಮರಣೀಯವಾಗಿರಲಿದೆ. ಹಿಂದು ಧರ್ಮದ ಭಾಗವಾಗಿರುವ ಬಂಟರು ಎಲ್ಲಾ ಕ್ಷೇತ್ರದಲ್ಲೂ ಪಾರಮ್ಯತೆ ಹೊಂದಿದ್ದಾರೆ. ಹಿಂದು ಸಮಾಜಕ್ಕೆ ಡಾ. ಪ್ರೇಮನಾಥ್‌ ಪೂಂಜ ಅವರ ಕೊಡುಗೆ ದೊಡ್ಡದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್‌ ಮಾತನಾಡಿ, ಜನ ಕೇವಲ ಹಣದಲ್ಲಿ ಶ್ರೀಮಂತರಾದರೆ ಸಾಲದು. ಹೃದಯ ಶ್ರೀಮಂತಿಕೆ ಬಹಳ ಮುಖ್ಯವಾಗುತ್ತದೆ. ಭವನ ನಿರ್ಮಾಣದ ಜೊತೆಗೆ ಪಕ್ಕದಲ್ಲೆ ಹೆಚ್ಚುವರಿ ಜಾಗ ಖರೀದಿ ಮಾಡಿ ವಾಹನ ನಿಲುಗಡೆಗೂ ಅಗತ್ಯ ಗಮನಹರಿಸಬೇಕಿದೆ ಎಂದು ಸಲಹೆ ನೀಡಿದರು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಯುವ ಘಟಕ ಅಧ್ಯಕ್ಷ ಗಿರೀಶ್‌ ತೆಳ್ಳಾರ್‌ ಮಾತನಾಡಿ, ನಮ್ಮ ಜನಾಂಗದವರು ಅಸೂಯೆ ಬಿಟ್ಟು ಒಂದಾಗಬೇಕಿದೆ. ಕೊಡಗು ಜಿಲ್ಲೆಯ ಬಂಟರ ಬೆಳವಣಿಗೆ ವಿಚಾರದಲ್ಲಿ ಜಾಗತಿಕ ಬಂಟರ ಸಂಘ ಸದಾ ಜೊತೆಗೆ ನಿಲ್ಲುತ್ತದೆ. ಉದ್ದೇಶಿತ ಅವಧಿಯಲ್ಲಿ ಭವನ ನಿರ್ಮಾಣಕ್ಕೆ ಸಹಕಾರ ನೀಡಲಾಗುದೆಂದರು. :: ಬಿರುದು ಪ್ರದಾನ : ಇತ್ತೀಚೆಗೆ ನಿಧನರಾದ ಕೊಡಗಿನ ಹಿರಿಯ ಬೆಳೆಗಾರ, ಜನಪ್ರತಿಯ ವೈದ್ಯ ಡಾ. ಪ್ರೇಮನಾಥ್‌ ಪೂಂಜ ಅವರಿಗೆ ಮರಣೋತ್ತರವಾಗಿ ʼಬಂಟ ಬಹದ್ದೂರ್‌ʼ ಬಿರುದು ನೀಡಿ ಗೌರವಿಸಲಾಯಿತು. ಪೂಂಜ ಅವರ ಸಾಧನೆಯ ಕುರಿತಾದ ವಿವರವನ್ನು ಸಂಘದ ಕಾರ್ಯದರ್ಶಿ ರವೀಂದ್ರ ವಿ. ರೈ ಓದಿದರು. ಭವನದ ಶಂಕುಸ್ಥಾಪನೆಯ ಪೂಜಾ ಕಾರ್ಯವನ್ನು ಶ್ರೀಕೃಷ್ಣ ಭಟ್‌ ನೆರವೇರಿಸಿದರು. ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ಜಗನ್ನಾಥ ಚೌಟ, ಪುತ್ತೂರು ಬಂಟರ ಸಂಘದ ಅಧ್ಯಕ್ಷ ಹೇಮನಾಥ್‌ ಶೆಟ್ಟಿ, ಖ್ಯಾತ ಕಬಡ್ಡಿ ಆಟಗಾರ ಪ್ರಶಾಂತ್‌ ಕುಮಾರ್‌ ರೈ, ಪುತ್ತೂರು ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಕೊಡಗು ಜಿಲ್ಲಾ ಬಂಟರ ಸಂಘದ ಗೌರವಾಧ್ಯಕ್ಷ ಬಿ.ಬಿ. ಐತಪ್ಪ ರೈ, ಯುವ ಘಟಕ ಜಿಲ್ಲಾಧ್ಯಕ್ಷ ಸದಾನಂದ ರೈ, ಉದ್ಯಮಿ ಪುರುಷೋತ್ತಮ ರೈ, ಮಡಿಕೇರಿ ನಗರಸಭೆ ಅಧ್ಯಕ್ಷೆ ಕಲಾವತಿ, ಉಪಾಧ್ಯಕ್ಷ ಮಹೇಶ್‌ ಜೈನಿ, ಬಂಟರ ಸಂಘದ ತಾಲೂಕು, ಹೋಬಳಿ, ನಗರ ಘಟಕ, ಮಹಿಳಾ ಘಟಕ ಅಧ್ಯಕ್ಷರು ವೇದಿಕೆಯಲ್ಲಿದ್ದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಮಡಿಕೇರಿಗೆ ಆಗಮಿಸಿದ ಗುರುದೇವಾನಂದ ಸ್ವಾಮೀಜಿಯವರನ್ನು ಜನರಲ್‌ ತಿಮ್ಮಯ್ಯ ವೃತ್ತದಲ್ಲಿ ಬರಮಾಡಿಕೊಂಡು, ಬೈಕ್‌ ಜಾಥ ಮೂಲಕ ಕಾರ್ಯಕ್ರಮದ ಸ್ಥಳಕ್ಕೆ ಕರೆತರಲಾಯಿತು. ಹಿತ ಯೋಗೇಶ್ ಶೆಟ್ಟಿ ಮತ್ತು ಅಪೇಕ್ಷಾ ರಾಧಾಕೃಷ್ಣ ಪ್ರಾರ್ಥಿಸಿದರು. ಉಪಾಧ್ಯಕ್ಷ ರತ್ನಾಕರ ರೈ ಸ್ವಾಗತಿಸಿದರು. ಬಾಲಕೃಷ್ಣ ಆಳ್ವ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ರೈ ವಂದಿಸಿದರು.

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Follow us Follow us
Share. WhatsApp Facebook Twitter Email Telegram Copy Link

Related Posts

*ನಿಟ್ಟೂರು ಕಾರ್ಮಾಡಿನಲ್ಲಿ ವನ್ಯಜೀವಿ ಸಪ್ತಾಹ: ಪ್ಲಾಸ್ಟಿಕ್ ತ್ಯಾಜ್ಯ ತೆರವು, ಪರಿಸರ ಜಾಗೃತಿ*

ಅಕ್ಟೋಬರ್ 9, 2026

*ಅ.14 ರಂದು ಲೋಕಾಯುಕ್ತದಿಂದ ದೂರು ಅರ್ಜಿ ಸ್ವೀಕಾರ*

ಅಕ್ಟೋಬರ್ 8, 2026

*ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಅವರ ಅ.9ರ ಕಾರ್ಯಕ್ರಮ*

ಅಕ್ಟೋಬರ್ 8, 2026

*ಅ.14 ರಂದು ಲೋಕಾಯುಕ್ತದಿಂದ ದೂರು ಅರ್ಜಿ ಸ್ವೀಕಾರ*

ಅಕ್ಟೋಬರ್ 8, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಅ.8 NEWS DESK : ಕರ್ನಾಟಕ ಲೋಕಾಯುಕ್ತ ಮಡಿಕೇರಿಯ ಲೋಕಾಯುಕ್ತ ಅಧಿಕಾರಿಗಳು ಅಕ್ಟೋಬರ್, 14 ರಂದು ಬೆಳಗ್ಗೆ 11…

*ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಅವರ ಅ.9ರ ಕಾರ್ಯಕ್ರಮ*

ಅಕ್ಟೋಬರ್ 8, 2026

*ಶಾಸಕ ಡಾ. ಮಂತರ್ ಗೌಡ ಅವರ ಅ.9ರ ಕಾರ್ಯಕ್ರಮ*

ಅಕ್ಟೋಬರ್ 8, 2026

*ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ : ಕೇಂದ್ರ ಪುರಸ್ಕೃತ ಯೋಜನೆ ಸಕಾಲದಲ್ಲಿ ಪ್ರಗತಿ ಸಾಧಿಸಿ : ಸಂಸದ ಯದುವೀರ್ ಒಡೆಯರ್

ಅಕ್ಟೋಬರ್ 8, 2026

*ಕಾವೇರಿ ತೀರ್ಥೋದ್ಭವ : ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಮನವಿ*

ಅಕ್ಟೋಬರ್ 8, 2026

*ಗಾಂಧಿ ಮೈದಾನಕ್ಕೆ ಶಾಸಕ ಡಾ.ಮಂತರ್ ಗೌಡ ಭೇಟಿ : ದಸರಾ ಸಿದ್ಧತೆ ಕುರಿತು ಪರಿಶೀಲನೆ*

ಅಕ್ಟೋಬರ್ 8, 2026

*ಬೆಂಗಳೂರು ಸಣ್ಣ ಭಾಷಾ ಚಲನಚಿತ್ರೋತ್ಸವಕ್ಕೆ ಕೊಡಗಿನ ‘ಬೇರ್’ ಆಯ್ಕೆ*

ಅಕ್ಟೋಬರ್ 8, 2026

*ಕರ್ನಾಟಕದಲ್ಲಿ ಭೀಕರ ಬರ: ಶೇ.90ರಷ್ಟು ಬೆಳೆ ಹಾನಿ, ರೈತರ ನೆರವಿಗೆ ಸರ್ಕಾರದ ಮಹತ್ವದ ಕ್ರಮ*

ಅಕ್ಟೋಬರ್ 8, 2026

*ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಿಯ ಕರಗೋತ್ಸವ: ಅ.11ರಿಂದ ನಗರ ಪ್ರದಕ್ಷಿಣೆ*

ಅಕ್ಟೋಬರ್ 8, 2026

*ಮಡಿಕೇರಿ ದಸರಾ ಪ್ರಯುಕ್ತ ಕೆಎಸ್‌ಆರ್‌ಟಿಸಿಯಿಂದ ವಿಶೇಷ ಪ್ಯಾಕೇಜ್ ಟೂರ್*

ಅಕ್ಟೋಬರ್ 8, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.