Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಮುಳ್ಳುಸೋಗೆ ಶಾಲೆಯಲ್ಲಿ ಸ್ಕೌಟ್ಸ್, ಗೈಡ್ಸ್ ವತಿಯಿಂದ ಮಕ್ಕಳಿಗೆ ಗೀತ ಗಾಯನ ಸ್ಪರ್ಧೆ:: ವಿದ್ಯಾರ್ಥಿಗಳಲ್ಲಿ ರಾಷ್ಟ್ರಪ್ರೇಮ ಬೆಳೆಸಲು ಸಹಕಾರಿ : ಜಿಲ್ಲಾ ಸ್ಕೌಟ್ ಆಯುಕ್ತ ಜಿಮ್ಮಿ ಸಿಕ್ವೇರಾ*
  • *ಕೊಡಗಿಗೆ ಏನೂ ನೀಡದೆ ಮೋಡ ಬಿತ್ತನೆ ಏಕೆ?*
  • *ವಾಯು ವಿಹಾರ ಮಾಡುತ್ತಿದ್ದ ಇಬ್ಬರಿಗೆ ಕಾರು ಡಿಕ್ಕಿ : ಓರ್ವ ಸಾವು*
  • *ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಗಜಪಡೆಯ ಪಟ್ಟಿ ಸಿದ್ಧ*
  • *ಸುಂಟಿಕೊಪ್ಪ : “ಹಿರಿಯ ಜೀವಿಗಳಿಗೆ ನಮನ” *
  • *ಶಾಸಕ ಪೊನ್ನಣ್ಣ ಜೊತೆ ಸಂವಾದ : ಸಚಿವ ಸ್ಥಾನ ಕೈತಪ್ಪಿದ ವಿಚಾರ, ಕಸ್ತೂರಿ ರಂಗನ್ ವರದಿ, ವನ್ಯಜೀವಿ-ಮಾನವ ಸಂಘರ್ಷ ಚರ್ಚೆ*
  • *ಮಡಿಕೇರಿ – ಸಕಾ೯ರಿ ಪ.ಪೂ. ಕಾಲೇಜಿನಲ್ಲಿ ಹಿರಿಯ ನಾಗರಿಕರಿಗೆ  ಮಿಸ್ಟಿ ಹಿಲ್ಸ್ ನಿಂದ  ಗೌರವಾಪ೯ಣೆ*
  • *ಹಿರಿಯರ ಮಹತ್ವ ತಿಳಿಸುವ ಕಾಯ೯ಕ್ರಮಗಳು ಅಗತ್ಯ – ಕೆ.ಎಸ್. ಪುಟ್ಟಯ್ಯ*
  • *ಅರೆಕಾಡು ಶಾಲೆಯಲ್ಲಿ ಹಿರಿಯ ನಾಗರಿಕರ ದಿನಾಚರಣೆ –  ಹಿರಿಯರಿಗೆ ಸನ್ಮಾನ*
  • *ಹಾಕತ್ತೂರು ಸಕಾ೯ರಿ ಪ್ರೌಡಶಾಲೆಯಲ್ಲಿ ಹಿರಿಯ ನಾಗರಿಕರ  ದಿನಾಚರಣೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ವಿ.ಬಾಡಗ ಗ್ರಾಮದಲ್ಲಿ ಕ್ರೀಡಾ ತರಬೇತಿ ಕೇಂದ್ರ ಮತ್ತು ವಸತಿ ನಿಲಯ ನಿರ್ಮಾಣ : ರೂ.45 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿ : ಶಾಸಕ ಎ.ಎಸ್.ಪೊನ್ನಣ್ಣ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ವಿ.ಬಾಡಗ ಗ್ರಾಮದಲ್ಲಿ ಕ್ರೀಡಾ ತರಬೇತಿ ಕೇಂದ್ರ ಮತ್ತು ವಸತಿ ನಿಲಯ ನಿರ್ಮಾಣ : ರೂ.45 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿ : ಶಾಸಕ ಎ.ಎಸ್.ಪೊನ್ನಣ್ಣ*

ಜೂನ್ 15, 20263 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಜೂ.15 NEWS DESK : ವಿರಾಜಪೇಟೆ ತಾಲ್ಲೂಕಿನ ವಿ.ಬಾಡಗ ಬಳಿ ನಿರ್ಮಾಣವಾಗುತ್ತಿರುವ ‘ಕ್ರೀಡಾ ತರಬೇತಿ ಕೇಂದ್ರ’ದ ಆಡಳಿತ ಕಟ್ಟಡ ಕಾಮಗಾರಿಯನ್ನು ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಭೇಟಿ ನೀಡಿ ಪರಿಶೀಲಿಸಿದರು.  ಸುಮಾರು 11 ಎಕರೆ ಜಾಗದಲ್ಲಿ ಅಥ್ಲೆಟಿಕ್ ಮಾದರಿಯಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಕ್ರೀಡಾ ತರಬೇತಿ ಕೇಂದ್ರದ ಆಡಳಿತ ಭವನ ಜತೆಗೆ ಇತರೆ ಕಾಮಗಾರಿಯ ಜಾಗವನ್ನು ಶಾಸಕರು ವೀಕ್ಷಿಸಿದರು. ಸುಮಾರು 45 ಕೋಟಿ ರೂ. ಯೋಜನಾ ವೆಚ್ಚದಲ್ಲಿ ಕ್ರೀಡಾ ತರಬೇತಿ ಕೇಂದ್ರ ಹಾಗೂ ವಸತಿ ನಿಲಯ ಸೇರಿದಂತೆ ವಿವಿಧ ಕಾಮಗಾರಿ ಕೈಗೊಳ್ಳಲು ಉದ್ದೇಶಿಸಲಾಗಿದೆ. ಕ್ರೀಡಾ ತರಬೇತಿ ಕೇಂದ್ರ ವ್ಯಾಪ್ತಿಯಲ್ಲಿ ಪ್ರಥಮ ಹಂತದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಆಡಳಿತ ಭವನ ನಿರ್ಮಾಣವಾಗುತ್ತಿದ್ದು, ಈ ಕಾಮಗಾರಿಯನ್ನು ಶಾಸಕರು ಪರಿಶೀಲಿಸಿದರು. ಆಡಳಿತ ಭವನದಲ್ಲಿ ನೆಲಮಹಡಿ ಹಾಗೂ ಮೊದಲ ಮಹಡಿ ಇರಲಿದ್ದು, ಒಳಾಂಗಣ ಮತ್ತು ಹೊರಾಂಗಣ ಕ್ರೀಡಾ ತರಬೇತಿ ಕೇಂದ್ರಗಳು ನಿರ್ಮಾಣವಾಗಲಿದೆ. ಒಳಾಂಗಣದಲ್ಲಿ ಶೆಟಲ್ ಬ್ಯಾಡಿಮಿಂಟನ್, ಟೇಬಲ್ ಟೆನ್ನಿಸ್, ಸ್ಕ್ವಾಷ್, ಜಿಮ್ಮು, ಹೊರಾಂಗಣದಲ್ಲಿ ಹಾಕಿ ಟರ್ಪ್, ಈಜುಕೊಳ, ಕ್ರಿಕೆಟ್, ವಾಲಿಬಾಲ್, ಫೂಟ್ ಬಾಲ್ ಹೀಗೆ ವಿವಿಧ ರೀತಿಯ ಕ್ರೀಡೆಗೆ ಸಂಬಂಧಿಸಿದಂತೆ ಕ್ರೀಡಾ ತರಬೇತಿ ಕೇಂದ್ರ ಒಳಗೊಂಡಿದೆ. ಆಡಳಿತ ಭವನ ನಿರ್ಮಾಣದಲ್ಲಿ ನೆಲ ಮಹಡಿ ಮತ್ತು ಮೊದಲ ಮಹಡಿಯಲ್ಲಿ ಕಚೇರಿ ಜೊತೆಗೆ ಒಳಾಂಗಣ ಕ್ರೀಡಾ ಚಟುವಟಿಕೆಯ ತರಬೇತಿ ಕೇಂದ್ರಗಳು ನಿರ್ಮಾಣವಾಗಲಿದೆ. ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಕ್ರೀಡಾ ತರಬೇತಿ ಕೇಂದ್ರ ಸ್ಥಾಪನೆಗೆ ಯೋಜನೆ ರೂಪಿಸಲಾಗಿದ್ದು, ಕಾಮಗಾರಿ ಪ್ರಗತಿ ಹಂತದಲ್ಲಿದೆ. ಟೆನ್ನಿಸ್, ಜಿಮ್ಮು, ಹಾಕಿ ಟರ್ಪ್, ಅಥ್ಲೆಟಿಕ್ ಟ್ರ್ಯಾಕ್, ಈಜುಕೊಳ, ಟೇಬಲ್ ಟೆನ್ನಿಸ್, ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ವಿದ್ಯಾರ್ಥಿ ನಿಲಯ, ವೈದ್ಯಕೀಯ ವಿಭಾಗ ಸೇರಿದಂತೆ ಒಂದು ಸುಸಜ್ಜಿತ ಅಂತರರಾಷ್ಟ್ರೀಯ ಮಾದರಿಯಲ್ಲಿ ಕ್ರೀಡಾ ತರಬೇತಿ ಕೇಂದ್ರ ಹಾಗೂ ವಸತಿ ನಿಲಯ ಕಾಮಗಾರಿಗಳು ಹಂತ ಹಂತವಾಗಿ ನಿರ್ಮಾಣಗೊಳ್ಳಲಿದೆ ಎಂದು ಮಾಹಿತಿ ನೀಡಿದರು. ಕ್ರೀಡಾ ತರಬೇತಿ ಕೇಂದ್ರದಲ್ಲಿ 50 ಬಾಲಕರಿಗೆ ಮತ್ತು 50 ಬಾಲಕಿಯರಿಗೆ ಪ್ರತ್ಯೇಕ ವಸತಿ ನಿಲಯ ನಿರ್ಮಾಣವಾಗಲಿದೆ. ಹೆಚ್ಚು ಬೇಡಿಕೆ ಇದ್ದಲ್ಲಿ ಸಂಖ್ಯೆ ಹೆಚ್ಚಿಸಲಾಗುವುದು. ಸ್ಥಳೀಯರಿಗೆ ಆದ್ಯತೆ ನೀಡಲಾಗುವುದು. ಸರ್ಕಾರದ ನಿಯಮದಂತೆ ಎಲ್ಲಾ ವರ್ಗದವರಿಗೆ ಆದ್ಯತೆ ನೀಡಲಾಗುವುದು ಎಂದು ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಹೇಳಿದರು. ಈಗಾಗಲೇ ಮುಖ್ಯಮಂತ್ರಿ ಅವರು ಕ್ರೀಡಾ ತರಬೇತಿ ಕೇಂದ್ರ ನಿರ್ಮಾಣಕ್ಕೆ ಬಜೆಟ್‍ನಲ್ಲಿ ಪ್ರಸ್ತಾಪ ಮಾಡಿದ್ದಾರೆ. ಆ ನಿಟ್ಟಿನಲ್ಲಿ ಹಣ ಬಿಡುಗಡೆಯಾಗಲಿದೆ. ಸದ್ಯ ರಾಜ್ಯಸಭಾ ಸದಸ್ಯರಾದ ಅಜಯ್ ಮಾಕನ್ ಅವರಿಂದ ಅನುದಾನ ಬಿಡುಗಡೆಯಾಗಿದ್ದು, ಆಡಳಿತ ಭವನ ನಿರ್ಮಾಣ ಆಗುತ್ತಿದೆ ಎಂದು ಶಾಸಕರು ವಿವರಿಸಿದರು. ಮುಂದಿನ ಎರಡು ವರ್ಷದಲ್ಲಿ ಸುಸಜ್ಜಿತ ಕ್ರೀಡಾ ತರಬೇತಿ ಕೇಂದ್ರ ಆರಂಭವಾಗಲಿದೆ. ಹಂತ ಹಂತವಾಗಿ ಕಾಮಗಾರಿಗಳು ನಡೆಯಲಿವೆ ಎಂದು ಎ.ಎಸ್.ಪೊನ್ನಣ್ಣ ಅವರು ನುಡಿದರು. ಒಟ್ಟಾರೆ ಸುಮಾರು 45 ಕೋಟಿ ರೂ. ವೆಚ್ಚದ ಯೋಜನಾ ಕಾಮಗಾರಿಯಾಗಿದ್ದು, ಸುಸಜ್ಜಿತ ಕ್ರೀಡಾ ತರಬೇತಿ ಕೇಂದ್ರ ಹಾಗೂ ವಸತಿ ನಿಲಯ ನಿರ್ಮಾಣವಾಗಲಿದೆ ಎಂದು ಶಾಸಕರು ಹೇಳಿದರು. ವಿ.ಬಾಡಗ ಗ್ರಾಮದ ಬಳಿ ಗುರುತಿಸಲಾಗಿರುವ ಜಾಗದ ಸುತ್ತ ಬೆಟ್ಟ ಗುಡ್ಡಗಳು ಹಚ್ಚಹಸುರಿನಿಂದ ಕೂಡಿದ್ದು, ಸುಸಜ್ಜಿತ ಕ್ರೀಡಾ ತರಬೇತಿ ಕೇಂದ್ರ ನಿರ್ಮಾಣವಾಗುತ್ತಿರುವುದು ವಿಶೇಷವಾಗಿದೆ. ಕಾಡು ಪ್ರಾಣಿಗಳ ಹಾವಳಿ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿ: ಕಾಡಾನೆ ಹಾವಳಿ ನಿಯಂತ್ರಣ ಸಂಬಂಧ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕರಾದ ಎ.ಎಸ್.ಪೊನ್ನಣ ಅವರು ಕಾಡಾನೆ ಹಾವಳಿ ಹಲವು ವರ್ಷಗಳಿಂದ ಸಮಸ್ಯೆಯಾಗಿ ಉಳಿದಿದ್ದು, ಕಾಡಾನೆಗಳ ಸಂಖ್ಯೆ ಹೆಚ್ಚಾಗಿದ್ದು, ಆ ನಿಟ್ಟಿನಲ್ಲಿ ಕಾಡಾನೆ ಹಾವಳಿ ನಿಯಂತ್ರಣಕ್ಕೆ ಪ್ರತಿಯೊಬ್ಬರ ಜವಾಬ್ದಾರಿ ಇದೆ ಎಂದರು. ವರ್ಷದಿಂದ ವರ್ಷಕ್ಕೆ ಕಾಡಾನೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಕಾಡಾನೆಗಳ ನಿಯಂತ್ರಣ ಸಂಬಂಧ ಹಲವು ಯೋಜನೆ ರೂಪಿಸಲಾಗಿದೆ. ಆನೆಕಂದಕ, ತಂತಿಬೇಲಿ, ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಹೀಗೆ ಹಲವು ಕ್ರಮ ಕೈಗೊಳ್ಳಲಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಒದಗಿಸಬೇಕಿದ್ದು, ಪಕ್ಷಾತೀತವಾಗಿ ಎಲ್ಲರೂ ಜೊತೆಗೂಡಿ ಕಾರ್ಯಕ್ರಮ ರೂಪಿಸಬೇಕಿದೆ ಎಂದು ಹೇಳಿದರು. ರಸ್ತೆ ಕಾಮಗಾರಿ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಾಸಕರು ಹಣ ನೀಡಿದರೂ ಸಹ ಟಾರು ಸಿಗುತ್ತಿಲ್ಲ. ಯುದ್ದದಿಂದಾಗಿ ಜನರು ತತ್ತರಿಸುವಂತಾಗಿದೆ. ಇಂಧನ ಸರಿಯಾಗಿ ಪೂರೈಕೆಯಾಗುತ್ತಿಲ್ಲ. ವ್ಯವಸಾಯ ಆಧಾರಿತ ಜಿಲ್ಲೆಯಾದ ಕೊಡಗು ಟ್ರ್ಯಾಕ್ಟರ್ ಮತ್ತು ಟಿಲ್ಲರ್‍ಗಳಿಗೆ ಇಂಧನ ಸಿಗದೆ ತೊಂದರೆ ಅನುಭವಿಸುವಂತಾಗಿದೆ ಎಂದರು. ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಅನೇಕ ರಸ್ತೆಗಳ ಅಭಿವೃದ್ಧಿಗೆ ಟೆಂಡರ್ ಆಗಿದೆ. ಆದರೆ ಟಾರಿನ ತೊಂದರೆಯಿಂದ ರಸ್ತೆ ಕಾಮಗಾರಿಗಳು ನಿಂತಿವೆ. ದೇಶದ ನಾಗರಿಕರ ರಕ್ಷಣೆ ಪ್ರತಿಯೊಬ್ಬರ ಆದ್ಯತೆ ಆಗಬೇಕು ಎಂದರು. ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷರಾದ ಕಾಳೇಮಾಡ ಪ್ರಶಾಂತ್, ಸ್ಥಳೀಯರಾದ ಕಂಜಿತಂಡ ಗಣಿ ಮೊಣ್ಣಪ್ಪ, ಕಂಜಿತಂಡ ಪೂವಣ್ಣ, ಕೊಂಗಂಡ ಕಾಶಿ ಕಾವೇರಪ್ಪ, ಕೊಲ್ಲೀರ ಬೋಪಣ್ಣ, ಉಮೇಶ್ ಕೇಚಮಯ್ಯ, ಗಿರೀಶ್ ಸುಂದರ, ಕೋಲತಂಡ ರಘು ಮಾಚಯ್ಯ, ಸೂರಜ್ ಹೊಸೂರು, ಕೇಚಮಾಡ ಸಿದ್ದು ನಾಚಪ್ಪ, ಭಟ್ಟಕಾಳಂಡ ರಾಜ ಇತರರು ಇದ್ದರು.

 

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಮುಳ್ಳುಸೋಗೆ ಶಾಲೆಯಲ್ಲಿ ಸ್ಕೌಟ್ಸ್, ಗೈಡ್ಸ್ ವತಿಯಿಂದ ಮಕ್ಕಳಿಗೆ ಗೀತ ಗಾಯನ ಸ್ಪರ್ಧೆ:: ವಿದ್ಯಾರ್ಥಿಗಳಲ್ಲಿ ರಾಷ್ಟ್ರಪ್ರೇಮ ಬೆಳೆಸಲು ಸಹಕಾರಿ : ಜಿಲ್ಲಾ ಸ್ಕೌಟ್ ಆಯುಕ್ತ ಜಿಮ್ಮಿ ಸಿಕ್ವೇರಾ*

ಆಗಷ್ಟ್ 22, 2026

*ಕೊಡಗಿಗೆ ಏನೂ ನೀಡದೆ ಮೋಡ ಬಿತ್ತನೆ ಏಕೆ?*

ಆಗಷ್ಟ್ 22, 2026

*ವಾಯು ವಿಹಾರ ಮಾಡುತ್ತಿದ್ದ ಇಬ್ಬರಿಗೆ ಕಾರು ಡಿಕ್ಕಿ : ಓರ್ವ ಸಾವು*

ಆಗಷ್ಟ್ 22, 2026

*ಕೊಡಗಿಗೆ ಏನೂ ನೀಡದೆ ಮೋಡ ಬಿತ್ತನೆ ಏಕೆ?*

ಆಗಷ್ಟ್ 22, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ವಿರಾಜಪೇಟೆ, NEWS DESK ಆ.22 : ಕಾವೇರಿ ನದಿಯ ಉಗಮಸ್ಥಾನವಾಗಿರುವ ಕೊಡಗು ಜಿಲ್ಲೆ ತನ್ನ ಸ್ಥಳೀಯ ಅಗತ್ಯಗಳಿಗೆ ಅತ್ಯಲ್ಪ ಪ್ರಮಾಣದ…

*ವಾಯು ವಿಹಾರ ಮಾಡುತ್ತಿದ್ದ ಇಬ್ಬರಿಗೆ ಕಾರು ಡಿಕ್ಕಿ : ಓರ್ವ ಸಾವು*

ಆಗಷ್ಟ್ 22, 2026

*ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಗಜಪಡೆಯ ಪಟ್ಟಿ ಸಿದ್ಧ*

ಆಗಷ್ಟ್ 22, 2026

*ಸುಂಟಿಕೊಪ್ಪ : “ಹಿರಿಯ ಜೀವಿಗಳಿಗೆ ನಮನ” *

ಆಗಷ್ಟ್ 22, 2026

*ಶಾಸಕ ಪೊನ್ನಣ್ಣ ಜೊತೆ ಸಂವಾದ : ಸಚಿವ ಸ್ಥಾನ ಕೈತಪ್ಪಿದ ವಿಚಾರ, ಕಸ್ತೂರಿ ರಂಗನ್ ವರದಿ, ವನ್ಯಜೀವಿ-ಮಾನವ ಸಂಘರ್ಷ ಚರ್ಚೆ*

ಆಗಷ್ಟ್ 22, 2026

*ಮಡಿಕೇರಿ – ಸಕಾ೯ರಿ ಪ.ಪೂ. ಕಾಲೇಜಿನಲ್ಲಿ ಹಿರಿಯ ನಾಗರಿಕರಿಗೆ  ಮಿಸ್ಟಿ ಹಿಲ್ಸ್ ನಿಂದ  ಗೌರವಾಪ೯ಣೆ*

ಆಗಷ್ಟ್ 22, 2026

*ಹಿರಿಯರ ಮಹತ್ವ ತಿಳಿಸುವ ಕಾಯ೯ಕ್ರಮಗಳು ಅಗತ್ಯ – ಕೆ.ಎಸ್. ಪುಟ್ಟಯ್ಯ*

ಆಗಷ್ಟ್ 22, 2026

*ಅರೆಕಾಡು ಶಾಲೆಯಲ್ಲಿ ಹಿರಿಯ ನಾಗರಿಕರ ದಿನಾಚರಣೆ –  ಹಿರಿಯರಿಗೆ ಸನ್ಮಾನ*

ಆಗಷ್ಟ್ 22, 2026

*ಹಾಕತ್ತೂರು ಸಕಾ೯ರಿ ಪ್ರೌಡಶಾಲೆಯಲ್ಲಿ ಹಿರಿಯ ನಾಗರಿಕರ  ದಿನಾಚರಣೆ*

ಆಗಷ್ಟ್ 22, 2026

 *ಚೆನ್ನಮ್ಮ ಕಾಲೇಜಿನಲ್ಲಿ ಹಿರಿಯರಿಗೆ ಗೌರವ ನಮನ*

ಆಗಷ್ಟ್ 22, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.