
ಮಡಿಕೇರಿ ಜು.7 NEWS DESK : ಭಾರತ ಸರಕಾರದ ಪದ್ಮಶ್ರೀ ಪುರಸ್ಕೃತ ತೂಗು ಸೇತುವೆಗಳ ಸರದಾರ ಎನಿಸಿಕೊಂಡಿರುವ ಡಾ.ಗಿರೀಶ್ ಭಾರದ್ವಾಜ್ ಅವರ ನಿಧನಕ್ಕೆ ರಾಜ್ಯ ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷ ( ಸಚಿವ ದರ್ಜೆ ) ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ.ಶಹೀದ್ ತೆಕ್ಕಿಲ್ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ತಮ್ಮ ಸಂಸ್ಥೆಯಾದ ತೆಕ್ಕಿಲ್ ಸಮುದಾಯ ಭವನ ಮತ್ತು ತೆಕ್ಕಿಲ್ ಶಿಕ್ಷಣ ಸಂಸ್ಥೆಯ ಕಟ್ಟಡ ಕೆಲಸ ಕಾರ್ಯಗಳಿಗೆ ಮಾರ್ಗದರ್ಶಕರಾಗಿ, ಪೇರಡ್ಕದಲ್ಲಿರುವ ನಮ್ಮ ಕುಟುಂಬದವರು, ಊರಿನವರು, ಮಳೆಗಾಲದಲ್ಲಿ ದೋಣಿಯಲ್ಲಿ ಸಂಚರಿಸುವ ಸಂಧರ್ಭದಲ್ಲಿ ಸಂಪಾಜೆ ಗ್ರಾಮದ ಗೂನಡ್ಕ ಪೆರಡ್ಕಕ್ಕೆ ಜನಾರ್ಧನ ಪೂಜಾರಿಯವರ ಅನುದಾನದಲ್ಲಿ ತೂಗು ಸೇತುವೆಯನ್ನು ನಿರ್ಮಿಸಿ ಪ್ರದೇಶದ ಜನರಿಗೆ ಅನುಕೂಲ ಮಾಡಿಕೊಟ್ಟ ಒಬ್ಬ ಮುಸ್ಸದ್ಧಿಯಾಗಿದ್ದರು. ಅಲ್ಲದೆ ದೇಶದ ನಾನಾ ಭಾಗದಲ್ಲಿ ತೂಗುಸೇತುವೆ ನಿರ್ಮಿಸಿ ತೂಗುಸೇತುವೆಯ ಸರದಾರರಾಗಿದ್ದಾರೆ ಅವರ ನಿಧನವು ಸಮಾಜಕ್ಕೆ, ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕಂಬನಿ ಮಿಡಿದರು. ಶಿಕ್ಷಣ ಮತ್ತು ಸಮಾಜ ಸೇವೆಗೆ ಅವರು ನೀಡಿದ ಕೊಡುಗೆ ಅಪಾರವಾದದ್ದು, ಭಗವಂತನು ಅವರ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಕುಟುಂಬದವರಿಗೆ, ಹಿತೈಷಿಗಳಿಗೆ ಕರುಣಿಸಲಿ ಎಂದರು.









