
ಮಡಿಕೇರಿ ಜು.7 NEWS DESK : ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ನೂತನ ಅಧ್ಯಕ್ಷರಾಗಿ ನಿವೃತ್ತ ಮುಖ್ಯೋಪಾಧ್ಯಾಯ ಟಿ.ಜಿ. ಪ್ರೇಮ್ ಕುಮಾರ್ ಆಯ್ಕೆಯಾಗಿದ್ದಾರೆ. ನಗರದ ಕೊಡಗು ಪತ್ರಿಕೆ ಭವನದ ಸಭಾಂಗಣದಲ್ಲಿ ಬಳಗದ ಅಧ್ಯಕ್ಷ ಲೋಕನಾಥ ಅಮೆಚೂರ್ ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಎಂ. ಮೊಯ್ದಿನ್, ರೇವತಿ ರಮೇಶ್, ಗೌರವ ಕಾರ್ಯದರ್ಶಿಯಾಗಿ ಭಾರತಿ ರಮೇಶ್, ಕೋಶಾಧಿಕಾರಿಯಾಗಿ ಕಡ್ಲೇರ ತುಳಸಿ ಮೋಹನ್, ಸಹಕಾರ್ಯದರ್ಶಿಯಾಗಿ ಕೆ.ವಿ ಉಮೇಶ್ ಅವರನ್ನು ನೇಮಕ ಮಾಡಲಾಯಿತು. ನಿರ್ದೇಶಕರುಗಳಾಗಿ ಎಂ.ಪಿ.ಕೇಶವ ಕಾಮತ್, ಟಿ.ಪಿ.ರಮೇಶ್, ಅಂಬೇಕಲ್ ನವೀನ್, ಕೆ.ಟಿ.ಬೇಬಿ ಮ್ಯಾಥ್ಯು, ನೆರವಂಡ ಉಮೇಶ್, ಲೋಕನಾಥ್ ಅಮೆಚೂರ್, ಶ್ವೇತಾ ರವೀಂದ್ರ, ಬಿ.ಆರ್.ಜೋಯಪ್ಪ, ಸುನಿತಾ ಪಿ.ಪಿ ರವರನ್ನು ಆರಿಸಲಾಯಿತು. ಗೌರವ ಸಲಹೆಗಾರರಾಗಿ ಬಿ.ಎ ಶಂಷುದ್ದೀನ್, ಎಸ್.ಐ. ಮುನೀರ್ ಅಹ್ಮದ್, ಜಯಪ್ಪ ಹಾನಗಲ್ ಅವರನ್ನು ಆಯ್ಕೆ ಮಾಡಲಾಯಿತು. ಮಹಾಸಭೆಯಲ್ಲಿ ಕಳೆದ ವಾರ್ಷಿಕ ವರದಿಯನ್ನು ಗೌರವ ಕಾರ್ಯದರ್ಶಿ ಭಾರತಿ ರಮೇಶ್ ಮಂಡಿಸಿದರು. ವಾರ್ಷಿಕ ಲೆಕ್ಕಪತ್ರವನ್ನು ಕೋಶಾಧಿಕಾರಿ ಕಡ್ಲೇರ ತುಳಸಿ ಮೋಹನ್ ಮಂಡಿಸಿ ಸಭೆಯ ಒಪ್ಪಿಗೆ ಪಡೆದರು. ನಿಧನ ಹೊಂದಿದ ಸಂಘದ ಸದಸ್ಯರುಗಳಾದ ಲಿಯಕತ್ ಆಲಿ, ಮನು ಶೆಣೈ, ಟಿ.ಸಿ.ತಮ್ಮಯ್ಯ, ಕೇಶವ ಪರಾಜೆರಿಗೆ ಸಂತಾಪ ಸೂಚಿಸಲಾಯಿತು. ಮಹಾಸಭೆಯಲ್ಲಿ ಸದಸ್ಯರುಗಳಾದ ಚಂದನ್ ಕಾಮತ್, ಪ್ರೇಮ ರಾಘವಯ್ಯ ಇನ್ನಿತರರು ಉಪಸ್ಥಿತರಿದ್ದರು. ರೇವತಿ ರಮೇಶ್ ಸ್ವಾಗತಿಸಿದರು. ಭಾರತಿ ರಮೇಶ್ ನಿರೂಪಿಸಿದರು.









