
ವಿರಾಜಪೇಟೆ ಜು.8 NEWS DESK : 2025-26ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿ ತೇರ್ಗಡೆ ಹೊಂದಿದ ವಿರಾಜಪೇಟೆಯ ವಿದ್ಯಾರ್ಥಿ ಬಿ.ಆರ್.ಭವಿಷ್ ಅನ್ನು ಸನ್ಮಾನಿಸಲಾಯಿತು. ಕರ್ನಾಟಕ ರಾಜ್ಯ ಈಡಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ, ಕೊಡಗು ಜಿಲ್ಲಾ ಈಡಿಗ ಮತ್ತು ಬಿಲ್ಲವ ಘಟಕ ಇವುಗಳ ಜಂಟಿ ಆಶ್ರಯದಲ್ಲಿ ಮಡಿಕೇರಿಯ ಹೋಟೆಲ್ ರಾಜ್ ದರ್ಶನ್ ಸಭಾಂಗಣದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಈಡಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷರಾದ ಎಂ. ಶ್ರೀನಿವಾಸ್ ಹಾಗೂ ಕೊಡಗು ಈಡಿಗ ಬಿಲ್ಲವ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಸಿ. ಕುಮಾರ್ ಸೇರಿದಂತೆ ಹಲವು ಪ್ರಮುಖ ಗಣ್ಯರು ಹಾಜರಿದ್ದರು ಬಿ.ಆರ್ ಭವಿಷ್ ವಿರಾಜಪೇಟೆಯ ಪಂಜರಪೇಟೆ ನಿವಾಸಿಗಳಾದ ಬಿ.ಎನ್.ರಮೇಶ್ (ರಘು) ಹಾಗೂ ಆಶಾ ದಂಪತಿಗಳ ಪುತ್ರ. ಇವನು ಪ್ರಸ್ತುತ ಗೋಣಿಕೊಪ್ಪದ ಲಯನ್ಸ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾನೆ.









