Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಶಾಂತಿಯುತ ಹೋರಾಟ ಮಾಡಲು ನಮಗೆ ಸಂವಿಧಾನಿಕ ಹಕ್ಕು ಇದೆ. ಇದನ್ನು ತಡೆಯಲು ಪೊಲೀಸರಿಗೆ ಅಧಿಕಾರ ಕೊಟ್ಟವರೂ ಯಾರು?*
  • *ಕೊಡಗು ಜಿಲ್ಲೆಯಲ್ಲಿ ಚಳಿ, ಗಾಳಿ ಸಹಿತ ಮಳೆ : ಹಾನಿ, ಗಾಯ, ಸಂಚಾರ ಸಂಕಷ್ಟ*
  • *ಮರ ಬಿದ್ದು ಅಸ್ಸಾಂ ಮೂಲದ ಇಬ್ಬರು ಮಹಿಳಾ ಕಾರ್ಮಿಕರ ಸಾವು : ಬಿಳಿಗೇರಿ ಗ್ರಾಮದಲ್ಲಿ ಘಟನೆ*
  • *ನಾಪಂಡ ಮುತ್ತಪ್ಪಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನ ನೀಡಲು ಒತ್ತಾಯ*
  • *ಕೊನೆಗೂ ಮಡಿಕೇರಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ರಸ್ತೆ ವಾಹನ ಸಂಚಾರಕ್ಕೆ ಮುಕ್ತ*
  • *ಪ್ರತೀ ಸೆಮಿಸ್ಟರ್ ಪರೀಕ್ಷೆಗಳಲ್ಲಿಯೂ ಶೇ.100 ಫಲಿತಾಂಶ ದಾಖಲಿಸುತ್ತಿರುವ ವಿರಾಜಪೇಟೆ ಪಟ್ಟಣದ ಪ್ರತಿಷ್ಠಿತ ವಿದ್ಯಾಸಂಸ್ಥೆ ಸೆಂಟ್ ಆನ್ಸ್ ಕಾಲೇಜ್ : 2026-27 ನೇ ಶೈಕ್ಷಣಿಕ ಸಾಲಿನ ಎಂ.ಕಾಂ. ಸ್ನಾತಕೋತ್ತರ ಪದವಿ ತರಗತಿಗೆ ಪ್ರವೇಶಾತಿ ಆರಂಭಗೊಂಡಿದೆ : ವಿದ್ಯಾರ್ಥಿಗಳು ತಕ್ಷಣ ಭೇಟಿ ನೀಡಿ*
  • *ಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್ ನ ನೂತನ ಸಂಘಟನಾ ಕಾರ್ಯದರ್ಶಿಯಾಗಿ ಹೊಟ್ಟೆಯಂಡ ಫ್ಯಾನ್ಸಿ ಪಾರ್ವತಿ ಬೆಳ್ಯಪ್ಪ ಆಯ್ಕೆ*
  • *ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ : ವಿವಿಧ ಪ್ರಶಸ್ತಿ ಮತ್ತು ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ : ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನ*
  • *ವಿರಾಜಪೇಟೆ : ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ಕೊಡುಗೆ*
  • *ವಿರಾಜಪೇಟೆಯಲ್ಲಿ ಕಾರ್ಗಿಲ್ ವಿಜಯ್ ದಿವಸ್ : ವೀರಯೋಧರಿಗೆ ನಮನ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ವಿದ್ಯಾರ್ಥಿಗಳಿಗೆ ಪರಿಕರಗಳ ವಿತರಣೆ : ವಿದ್ಯಾರ್ಥಿಗಳು ಶಿಕ್ಷಣಕ್ಕೆ ಒತ್ತು ನೀಡಿ : ಪಿ.ಯು.ರಾಬಿನ್ ದೇವಯ್ಯ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ವಿದ್ಯಾರ್ಥಿಗಳಿಗೆ ಪರಿಕರಗಳ ವಿತರಣೆ : ವಿದ್ಯಾರ್ಥಿಗಳು ಶಿಕ್ಷಣಕ್ಕೆ ಒತ್ತು ನೀಡಿ : ಪಿ.ಯು.ರಾಬಿನ್ ದೇವಯ್ಯ*

ಜುಲೈ 8, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಜು.8 NEWS DESK : ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿ., ಮಡಿಕೇರಿ, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ.,ಮಡಿಕೇರಿ ಹಾಗೂ ಸಹಕಾರ ಇಲಾಖೆ, ಸಂಯುಕ್ತಾಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯ ಪರಿಕರಗಳನ್ನು ವಿತರಣೆ ಮಾಡಲಾಯಿತು. ನಗರದ ಬಾಲಭವನದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾದ ಪಿ.ಯು.ರಾಬಿನ್ ದೇವಯ್ಯ, ಕೃಷಿ ಪ್ರಧಾನ ದೇಶದಲ್ಲಿ ಗ್ರಾಮೀಣ ಆರ್ಥಿಕತೆಯನ್ನು ಸದೃಡಗೊಳಿಸಲು ಹಾಗೂ ಸಹಕಾರ ಕ್ಷೇತ್ರವನ್ನು ಬಲವರ್ಧನೆಗೊಳಿಸಬೇಕೆಂಬ ಉದ್ದೇಶದಿಂದ ಸಹಕಾರ ಸಚಿವಾಲಯವನ್ನು ಪ್ರಾರಂಭಿಸಿ ಇಂದಿಗೆ 5 ವರ್ಷ ಪೂರೈಸಿದೆ. ಒಂದು ವಾರಗಳ ಕಾಲ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳುವಂತೆ ಮಾರ್ಗಸೂಚಿ ನೀಡಿದ ಹಿನ್ನಲೆಯಲ್ಲಿ ಕೊಡಗು ಜಿಲ್ಲೆಯಲ್ಲೂ ಸಹ ‘ಸಹಕಾರದಿಂದ ಸಮೃದ್ಧಿ’ ಎಂಬ ಧ್ಯೇಯದೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದರು. ರೈತರ ಸಮಾವೇಶ, ಪರಿಸರ ಸಂರಕ್ಷಣೆಗಾಗಿ ಸಸಿ ನೆಡುವ ಕಾರ್ಯಕ್ರಮ, ವಿದ್ಯಾರ್ಥಿಗಳಿಗೆ ಸಹಕಾರ ಅರಿವು, ಉಚಿತ ಆರೋಗ್ಯ ಮತ್ತು ಕಣ್ಣಿನ ತಪಾಸಣೆ ಶಿಬಿರ, ಸ್ವಚ್ಚತಾ ಕಾರ್ಯಕ್ರಮ, ಹಸುಗಳ ಆರೋಗ್ಯ ತಪಾಸಣೆ ಮತ್ತು ಬಂಜೆತನ ನಿವಾರಣಾ ಶಿಬಿರವನ್ನು ಈಗಾಗಲೇ ಯಶಸ್ವಿಯಾಗಿ ಏರ್ಪಡಿಸಿದ್ದು, ಇಂದು ಕೊನೆಯ ದಿನವಾದ ಮಕ್ಕಳಿಗೆ ನಮ್ಮ ಅಳಿಲು ಸೇವೆಯೆಂಬಂತೆ ಅಗತ್ಯ ಪರಿಕರಗಳ ವಿತರಣೆಯನ್ನು ಮಾಡಲಾಗುತ್ತಿದೆ. ಈ ಕಾರ್ಯಕ್ಕೆ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ಕೊಡುಗೆ ಅಪಾರವಿದೆ. ಈ ಯೋಜನೆಯ ಕುರಿತು ಬ್ಯಾಂಕ್ ಅಧ್ಯಕ್ಷರಾದ ಶ್ರೀ ಬಾಂಡ್ ಗಣಪತಿರವರಲ್ಲಿ ಚರ್ಚಿಸಿದಾಗ ಅವರು ಪೂರಕವಾಗಿ ಸ್ಪಂದಿಸಿ ಕೊಡುಗೆಗಳನ್ನು ನೀಡಲು ತಕ್ಷಣಕ್ಕೆ ಸೂಚಿಸಿ ವ್ಯವಸ್ಥೆಯನ್ನು ಮಾಡಲಾಯಿತು. ಅಂತೆಯೆ ಜಿಲ್ಲಾ ಸಹಕಾರ ಯೂನಿಯನ್ ವತಿಯಿಂದ ಸಹ ವಿದ್ಯಾಥಿಗಳಿಗೆ ಅಗತ್ಯ ಪರಿಕರಗಳನ್ನು ವಿತರಿಸಲಾಯಿತು. ಇಂದು ವಿದ್ಯಾಥಿಗಳು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಕೂಲಿ ಕೆಲಸ ಮಾಡುವ ಮಕ್ಕಳು ಸಹ ಇಂದು ಉನ್ನತ ಸ್ಥಾನಕ್ಕೇರುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಅದೇ ರೀತಿಯಲ್ಲಿ ನೀವು ಸಹ ಯಾವುದೇ ಕುಂದು ಕೊರತೆಗಳ ಕುರಿತು ಯೋಚಿಸದೆ ಶೈಕ್ಷಣಿಕವಾಗಿ ಸಾಧಿಸುವ ಛಲದೊಂದಿಗೆ ಮುಂದುವರೆಯಬೇಕು ಎಂದು ಹೇಳುತ್ತಾ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದರು. ಮಡಿಕೇರಿ ಭಾಲಭವನದ ಅಧ್ಯಕ್ಷರಾದ ರವೀಂದ್ರ ರೈರವರು, ವಿದ್ಯಾರ್ಥಿಗಳ ಅಗತ್ಯತೆಗಳ ಕುರಿತು ನಾವು ಆಗಾಗ್ಗೆ ಸಮಾಲೋಚನೆ ನಡೆಸುತ್ತಿರುತ್ತೇವೆ. ದಾನಿಗಳಿದ್ದಲ್ಲಿ ಅವರುಗಳಿಂದ ವಿದ್ಯಾರ್ಥಿಗಳಿಗೆ ನೆರವು ಕೊಡಿಸುವಲ್ಲಿ ಶ್ರಮಿಸಲಾಗುತ್ತದೆ. ಅಂತೆಯೇ ನಮ್ಮ ಆಡಳಿತ ಮಂಡಳಿಯವರು ವಿದ್ಯಾಥಿಗಳಿಗೆ ನೆರವಾಗಲೆಂದು ಸದಾ ಸಿದ್ದರಾಗಿರುತ್ತೇವೆ. ಅಂತೆಯೇ ಪ್ರಸ್ತುತ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಹಾಗೂ ಜಿಲ್ಲಾ ಸಹಕಾರ ಯೂನಿಯನ್ ವಿದ್ಯಾರ್ಥಿಗಳಿಗೆ ನೆರವು ನೀಡಿರುವುದಕ್ಕೆ ಧನ್ಯವಾದಗಳನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ವ್ಯವಸ್ಥಾಪಕ ನಿರ್ದೇಶಕರಾದ ಎಂ.ಕೆ. ಬೆಳ್ಳಿಯಪ್ಪ ಮಾತನಾಡಿ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸ್ಥಾಪನೆಯಾಗಿ 105 ವರ್ಷಗಳನ್ನು ಪೂರೈಸಿದ್ದು ಪ್ರಸ್ತುತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಠೇವಣಿ ಸಂಗ್ರಹಣೆ, ಕಡಿಮೆ ಎನ್.ಪಿ.ಎ., ಸಾಲ ವಿತರಣೆಯಲ್ಲಿ ವರ್ಷದಿಂದ ವರ್ಷಕ್ಕೆ ಉತ್ತಮವಾಗುತ್ತಿದೆ. ಕೇಂದ್ರ ಸರ್ಕಾರವು ಸಹಕಾರ ಕ್ಷೇತ್ರದ ಕಡೆಗೆ ಹೆಚ್ಚಿನ ಒತ್ತನ್ನು ನೀಡುತ್ತಿದ್ದು ಮುಂದಕ್ಕೆ ಉಜ್ವಲ ಭವಿಷ್ಯವಿದೆ ಎಂದರು. ವಾಹನಗಳಿಗೆ ಬಳಸುವ ಎಥೆನಾಲ್ ಉತ್ಪಾದನೆಗೆ ಸಕ್ಕರೆ ಕಾರ್ಖಾನೆಗಳು ನೆರವಾಗುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದು ಅಭಿಪ್ರಾಯಪಟ್ಟರು. ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಇಂದು ವಿದ್ಯಾರ್ಥಿಗಳಿಗೆ ಅಗತ್ಯ ಪರಿಕರಗಳನ್ನು ಒದಗಿಸುವಲ್ಲಿ ಅಧ್ಯಕ್ಷರ ಪಾತ್ರ ಮಹತ್ತರವಾಗಿದೆ. ಅಧ್ಯಕ್ಷರು ಕೇಂದ್ರ ಸರ್ಕಾರದ ಸಹಕಾರ ಸಚಿವಾಲಯ ಸ್ಥಾಪನೆಯ 5 ವರ್ಷಗಳನ್ನು ಪೂರೈಸಿದ ಹಿನ್ನಲೆಯಲ್ಲಿ ಆಚರಿಸುತ್ತಿರುವ ಸಹಕಾರ ಸಪ್ತಾಹ ಮಾದರಿ ಕಾರ್ಯಕ್ರಮಕ್ಕೆ ಒಂದು ದಿನವನ್ನು ತಮ್ಮ ಸಹಯೋಗದೊಂದಿಗೆ ಆಚರಿಸಲು ಯೋಜನೆ ರೂಪಿಸುವಂತೆ ಯೂನಿಯನ್ ಅಧ್ಯಕ್ಷರಲ್ಲಿ ಚರ್ಚಿಸಿ ಇಂತಹ ಒಂದು ಉತ್ತಮ ಹಾಗೂ ವಿದ್ಯಾಥಿಗಳಿಗೆ ನೆರವು ನೀಡುವ ಕಾರ್ಯಕ್ರಮವನ್ನು ಆಯೋಜಿಸಿ ವಿದ್ಯಾರ್ಥಿಗಳ ಮುಖದಲ್ಲಿ ಸಂತಸ ತರುವ ಮಹತ್ತರ ಕಾರ್ಯವನ್ನು ಕೈಗೊಂಡಿರುತ್ತಾರೆಂದು ಹರ್ಷ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಸಹಕಾರ ಸಂಘಗಳ ಉಪನಿಬಂಧಕರಾದ ಶೈಲಜ, ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್, ಡಿ.ಸಿ.ಸಿ. ಬ್ಯಾಂಕ್‍ನ ಪ್ರಧಾನ ವ್ಯವಸ್ಥಾಪಕರಾದ ಬೋಜಮ್ಮ, ಬಾಲಭವನದ ಗೌರವ ಕಾರ್ಯದರ್ಶಿ ನಮಿತಾ ರೈ, ರೋಟರಿ ಮಾಜಿ ಅಧ್ಯಕ್ಷರಾದ ಲಲಿತಾ ರಾಘವನ್, ಉಪಸ್ಥಿತರಿದ್ದರು. ಯೂನಿಯನ್ ಸಿಬ್ಬಂದಿ ಬಿ.ಸಿ. ಅರುಣ್ ಕುಮಾರ್, ಬಾಲಭವನದ ಸೌಮ್ಯ ಹಾಗೂ ಬಾಲಕರ ಬಾಲಮಂದಿರದ ಸೂರಜ್ ಕಾರ್ಯಕ್ರಮಕ್ಕೆ ಸಹಕರಿಸಿದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಶಾಂತಿಯುತ ಹೋರಾಟ ಮಾಡಲು ನಮಗೆ ಸಂವಿಧಾನಿಕ ಹಕ್ಕು ಇದೆ. ಇದನ್ನು ತಡೆಯಲು ಪೊಲೀಸರಿಗೆ ಅಧಿಕಾರ ಕೊಟ್ಟವರೂ ಯಾರು?*

ಜುಲೈ 29, 2026

*ಕೊಡಗು ಜಿಲ್ಲೆಯಲ್ಲಿ ಚಳಿ, ಗಾಳಿ ಸಹಿತ ಮಳೆ : ಹಾನಿ, ಗಾಯ, ಸಂಚಾರ ಸಂಕಷ್ಟ*

ಜುಲೈ 29, 2026

*ಮರ ಬಿದ್ದು ಅಸ್ಸಾಂ ಮೂಲದ ಇಬ್ಬರು ಮಹಿಳಾ ಕಾರ್ಮಿಕರ ಸಾವು : ಬಿಳಿಗೇರಿ ಗ್ರಾಮದಲ್ಲಿ ಘಟನೆ*

ಜುಲೈ 29, 2026

*ಕೊಡಗು ಜಿಲ್ಲೆಯಲ್ಲಿ ಚಳಿ, ಗಾಳಿ ಸಹಿತ ಮಳೆ : ಹಾನಿ, ಗಾಯ, ಸಂಚಾರ ಸಂಕಷ್ಟ*

ಜುಲೈ 29, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ NEWS DESK ಜು.29 : ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಕಳೆದ ಎರಡು ತಿಂಗಳಿನಿ0ದ ಕ್ಷೀಣಿಸಿದ್ದ ಮಳೆ ಚೇತರಿಕೆ ಕಂಡಿದೆ.…

*ಮರ ಬಿದ್ದು ಅಸ್ಸಾಂ ಮೂಲದ ಇಬ್ಬರು ಮಹಿಳಾ ಕಾರ್ಮಿಕರ ಸಾವು : ಬಿಳಿಗೇರಿ ಗ್ರಾಮದಲ್ಲಿ ಘಟನೆ*

ಜುಲೈ 29, 2026

*ನಾಪಂಡ ಮುತ್ತಪ್ಪಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನ ನೀಡಲು ಒತ್ತಾಯ*

ಜುಲೈ 29, 2026

*ಕೊನೆಗೂ ಮಡಿಕೇರಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ರಸ್ತೆ ವಾಹನ ಸಂಚಾರಕ್ಕೆ ಮುಕ್ತ*

ಜುಲೈ 29, 2026

*ಪ್ರತೀ ಸೆಮಿಸ್ಟರ್ ಪರೀಕ್ಷೆಗಳಲ್ಲಿಯೂ ಶೇ.100 ಫಲಿತಾಂಶ ದಾಖಲಿಸುತ್ತಿರುವ ವಿರಾಜಪೇಟೆ ಪಟ್ಟಣದ ಪ್ರತಿಷ್ಠಿತ ವಿದ್ಯಾಸಂಸ್ಥೆ ಸೆಂಟ್ ಆನ್ಸ್ ಕಾಲೇಜ್ : 2026-27 ನೇ ಶೈಕ್ಷಣಿಕ ಸಾಲಿನ ಎಂ.ಕಾಂ. ಸ್ನಾತಕೋತ್ತರ ಪದವಿ ತರಗತಿಗೆ ಪ್ರವೇಶಾತಿ ಆರಂಭಗೊಂಡಿದೆ : ವಿದ್ಯಾರ್ಥಿಗಳು ತಕ್ಷಣ ಭೇಟಿ ನೀಡಿ*

ಜುಲೈ 29, 2026

*ಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್ ನ ನೂತನ ಸಂಘಟನಾ ಕಾರ್ಯದರ್ಶಿಯಾಗಿ ಹೊಟ್ಟೆಯಂಡ ಫ್ಯಾನ್ಸಿ ಪಾರ್ವತಿ ಬೆಳ್ಯಪ್ಪ ಆಯ್ಕೆ*

ಜುಲೈ 28, 2026

*ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ : ವಿವಿಧ ಪ್ರಶಸ್ತಿ ಮತ್ತು ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ : ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನ*

ಜುಲೈ 28, 2026

*ವಿರಾಜಪೇಟೆ : ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ಕೊಡುಗೆ*

ಜುಲೈ 27, 2026

*ವಿರಾಜಪೇಟೆಯಲ್ಲಿ ಕಾರ್ಗಿಲ್ ವಿಜಯ್ ದಿವಸ್ : ವೀರಯೋಧರಿಗೆ ನಮನ*

ಜುಲೈ 27, 2026

*ಕರಾಟೆ ಪಂದ್ಯಾವಳಿ : 22 ವಿದ್ಯಾರ್ಥಿಗಳಿಗೆ ಪದಕಗಳ ಗರಿ : ಚೈತನ್ಯ ಅತ್ಯುತ್ತಮ ಸಾಧನೆ*

ಜುಲೈ 27, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.