
ಮಡಿಕೇರಿ ಜು.15 NEWS DESK : ಪೊನ್ನಂಪೇಟೆ ತಾಲೂಕು ಕೆ.ಬಾಡಗ ಗ್ರಾಮ ಪಂಚಾಯತ್ ವ್ಯಾಪ್ತಿಯ, ಚಂದನಕೇರೆ ಹಾಡಿಗೆ ಹೋಗುವ ನೂತನ ರಸ್ತೆ ನಿರ್ಮಾಣಕ್ಕೆ ಚಾಲನೆ ದೊರೆಯಿತು. ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಿದೇರಿರ ನವೀನ್ ಭೂಮಿ ಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಜಿಲ್ಲಾಧ್ಯಕ್ಷರಾದ ಧರ್ಮಜ ಉತ್ತಪ್ಪ, ರೂ 75 ಲಕ್ಷಗಳಲ್ಲಿ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದ್ದು, ಸ್ಥಳೀಯರ ಬೇಡಿಕೆಗೆ ಸ್ಪಂದಿಸಿರುವ ಶಾಸಕರು, ವಿಶೇಷ ಅನುದಾನ ಬಳಸಿ ಈ ಅನುದಾನವನ್ನು ಒದಗಿಸಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭ ವಲಯ ಅಧ್ಯಕ್ಷರಾದ ಚಿಮ್ಮಣ್ಣಮಾಡ ರವಿ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಕಾಳಿಮಾಡ ಪ್ರಶಾಂತ್, ನಾಲ್ಕೇರಿ ವಲಯ ಅಧ್ಯಕ್ಷರಾದ ತಿತೀರ ಕಟ್ಟಿ ಕಾರ್ಯಪ್ಪ, ಕೆ ಬಾಡಗ ಪಂಚಾಯಿತಿ ಸದಸ್ಯರಾದ ಬೋಪಣ್ಣ, ಡಿಸಿಸಿ ಸದಸ್ಯರು ಹಾಗೂ ಹಿರಿಯರಾದ ನಟರಾಜ್, ಜಿಲ್ಲಾ ವಕ್ತರರು ತೆನ್ನಿರ ಮೈನಾ, ಪಕ್ಷದ ಮುಖಂಡರಾದ ವಿಶು, ಮಲ್ಲಪನೇರ ನಿಲ್ಲು ಗಣಪತಿ, ಚಂಗಪ್ಪ, ಮುಕ್ಕಟೀರ ಮಧು, ಸ್ಥಳೀಯರಾದ ಸುರೇಶ್, ತಮ್ಮು, ರಘು, ಮಧು ಹಾಗೂ ಪ್ರಮುಖರು ಉಪಸ್ಥಿತರಿದ್ದರು.









