
ಸುಂಟಿಕೊಪ್ಪ NEWS DESK ಜು.20 : ಸುಂಟಿಕೊಪ್ಪದ ಜನತಾ ಕಾಲೋನಿಯಲ್ಲಿ ಗಾಳಿ ಮಳೆಯಿಂದ ಮನೆಗೆ ಹಾನಿ ಉಂಟಾಗಿ ನಷ್ಟ ಅನುಭವಿಸಿದ್ದ, ಸ್ಥಳೀಯ ನಿವಾಸಿ ಎಲಿಜಬೆತ್ (ಎಲ್ಸಿ) ಅವರಿಗೆ ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ನೆರವಿನ ಹಸ್ತ ಚಾಚಿತು.ಅಸೋಸಿಯೇಷನ್ ಅಧ್ಯಕ್ಷ ಜಾನ್ಸನ್ ಪಿಂಟೋ ಅವರ ನೇತೃತ್ವದಲ್ಲಿ ಸಂತ್ರಸ್ತೆಯ ಮನೆಗೆ ಭೇಟಿ ನೀಡಿದ ಪದಾಧಿಕಾರಿಗಳು ಸಾಂತ್ವನ ಹೇಳಿ ರೂ.30 ಸಾವಿರ ಧನ ಸಹಾಯ ನೀಡಿದರು.
ಮನೆಯ ಮೇಲ್ಚಾವಣಿ ಮತ್ತು ಗೋಡೆ ಕುಸಿದು ನಷ್ಟ ಉಂಟಾಗಿರುವ ಬಗ್ಗೆ ಎಲಿಜಬೆತ್ (ಎಲ್ಸಿ) ಅಸಹಾಯಕತೆ ವ್ಯಕ್ತಪಡಿಸಿದರು. ಈ ಸಂದರ್ಭ ಮಾತನಾಡಿದ ಜಾನ್ಸನ್ ಪಿಂಟೋ ಮುಂದಿನ ದಿನಗಳಲ್ಲಿ ಮತ್ತಷ್ಟು ಸಹಾಯ ಮಾಡುವುದಾಗಿ ಭರವಸೆ ನೀಡಿದರು. ಅಸೋಸಿಯೇಷನ್ ನ ಗೌರವಾಧ್ಯಕ್ಷ ಜೋಕಿಂವಾಸ್, ಸ್ಥಾಪಕ ಅಧ್ಯಕ್ಷ ವಿ.ಎ.ಲಾರೆನ್ಸ್, ಜಿಲ್ಲಾ ಉಪಾಧ್ಯಕ್ಷ ಮೈಕಲ್, ಜಿಲ್ಲಾ ಖಜಾಂಚಿ ಜೇಮ್ಸ್ ಡಿಸೋಜ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಸಾಲಂ, ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷ ಡೆನ್ಜಿಲ್ ವರ್ಗೀಸ್ , ಸದಸ್ಯರುಗಳಾದ ಪಿ.ಎಫ್.ಸಬಾಸ್ಟೀನ್, ಪಿ.ಎಂ.ಬಿಜು, ಮಹಿಳಾ ವಿಭಾಗದ ಉಪಾಧ್ಯಕ್ಷೆ ರೋಸ್ ಮೇರಿ ರಾಡ್ರಿಗಸ್, ಪ್ರಶಾಂತ್ ಮತ್ತಿತರರು ಹಾಜರಿದ್ದರು.









