Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಮಾದರಿಯಾದ ಕೊಡಗು ವಿದ್ಯಾಲಯದ ಎನ್.ಸಿ.ಸಿ. ಕೆಡೆಟ್‌ ಗಳು*
  • *ಮಡಿಕೇರಿ : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕಾಗಿ೯ಲ್ ವಿಜಯ್ ದಿವಸ್*
  • *ಮಡಿಕೇರಿ ಲಯನ್ಸ್ ಕ್ಲಬ್ ಕಾರ್ಗಿಲ್ ವಿಜಯ್ ದಿವಸ್ : ಹುತಾತ್ಮರಿಗೆ ನಮನ*
  • *ಹೆಣ್ಣಾನೆಯ ಮೃತದೇಹ ಪತ್ತೆ : ಮರಿಯಾನೆಯ ರೋಧನ*
  • *ಅಪಘಾತ : ಇಬ್ಬರು ಯುವಕರ ಸಾವು*
  • *ಕೊಡವ ವಂಶಾವಳಿ ಪೀಠ (“ಬಲ್ಯಮನೆ”) ಮತ್ತು ಕೊಡವ ಆಧ್ಯಾತ್ಮಿಕ ಪೀಠಗಳಿಗೆ (“ಮಂದ್”) ಪ್ರತ್ಯೇಕ ವಿಶೇಷ ಕೊಡವ ಮತಗಟ್ಟೆಗಳನ್ನು ಸ್ಥಾಪಿಸಲು ಸಿಎನ್‌ಸಿ ಒತ್ತಾಯ*
  • *ಕುಶಾಲನಗರದಲ್ಲಿಸ್ಕೌಟ್ಸ್, ಗೈಡ್ಸ್, ರೋವರ್ಸ್, ರೇಂಜರ್ಸ್ ತರಬೇತಿ ಶಿಬಿರಕ್ಕೆ ಚಾಲನೆ : ಸುಸ್ಥಿರ ಅಭಿವೃದ್ಧಿಗೆ ಸ್ಕೌಟ್ಸ್‌ ಗೈಡ್ಸ್‌ ಸಹಕಾರಿ : ಪಿ.ಜಿ.ಆರ್ ಸಿಂಧ್ಯ*
  • *ಹಾರಂಗಿ ಜಲಾಶಯದಿಂದ ನದಿಗೆ ನೀರು ಬಿಡುಗಡೆ*
  • *ಕೊಡವ ಅಕಾಡೆಮಿ ಪುಸ್ತಕ ಬಿಡುಗಡೆ : ಸಂಸ್ಕೃತಿ ಉಳಿಸಿ ಬೆಳೆಸುವುದು ಎಲ್ಲರ ಜವಾಬ್ದಾರಿ : ಶಾಸಕ ಎ.ಎಸ್.ಪೊನ್ನಣ್ಣ*
  • *ನೀಟ್ ಪತ್ರಿಕೆ ಸೋರಿಕೆ ಖಂಡಿಸಿ ಗೋಣಿಕೊಪ್ಪದಲ್ಲಿ ಕಾಂಗ್ರೆಸ್ ಪ್ರತಿಭಟನೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕೊಡವ ವಂಶಾವಳಿ ಪೀಠ (“ಬಲ್ಯಮನೆ”) ಮತ್ತು ಕೊಡವ ಆಧ್ಯಾತ್ಮಿಕ ಪೀಠಗಳಿಗೆ (“ಮಂದ್”) ಪ್ರತ್ಯೇಕ ವಿಶೇಷ ಕೊಡವ ಮತಗಟ್ಟೆಗಳನ್ನು ಸ್ಥಾಪಿಸಲು ಸಿಎನ್‌ಸಿ ಒತ್ತಾಯ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಕೊಡವ ವಂಶಾವಳಿ ಪೀಠ (“ಬಲ್ಯಮನೆ”) ಮತ್ತು ಕೊಡವ ಆಧ್ಯಾತ್ಮಿಕ ಪೀಠಗಳಿಗೆ (“ಮಂದ್”) ಪ್ರತ್ಯೇಕ ವಿಶೇಷ ಕೊಡವ ಮತಗಟ್ಟೆಗಳನ್ನು ಸ್ಥಾಪಿಸಲು ಸಿಎನ್‌ಸಿ ಒತ್ತಾಯ*

ಜುಲೈ 26, 20266 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
ಮಡಿಕೇರಿ NEWS DESK ಜು.26 : ಹಿಮಾಚಲ ಪ್ರದೇಶದ ಎತ್ತರದ ಕಿನ್ನೌರ್ ನ ತಾಶಿಗಂಗ್ ಮತಗಟ್ಟೆ, ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆಯ ದೂರದ ಮಾಲೋಗಾಂವ್ ಮತಗಟ್ಟೆ ಮತ್ತು ಗುಜರಾತ್‌ನ ಗಿರ್ ರಾಷ್ಟ್ರೀಯ ಉದ್ಯಾನವನದ ಏಕೈಕ ಮತದಾರನಿಗಾಗಿ ನಿರ್ಮಿಸಲಾದ ಮತಗಟ್ಟೆಗಳ ಮಾದರಿಯಲ್ಲಿ, ಪ್ರತಿ ಕೊಡವ ವಂಶಾವಳಿ ಪೀಠ (“ಬಲ್ಯಮನೆ”) ಮತ್ತು ಪ್ರತಿ ಕೊಡವ ಆಧ್ಯಾತ್ಮಿಕ ಪೀಠಗಳಿಗೆ (“ಮಂದ್”) ಪ್ರತ್ಯೇಕ ವಿಶೇಷ ಕೊಡವ ಮತಗಟ್ಟೆಗಳನ್ನು ಸ್ಥಾಪಿಸಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಭಾರತದ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ. ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಗೆ ಈ ಪ್ರಮುಖ ಬೇಡಿಕೆಯ ಕುರಿತು ಮನವಿ ಪತ್ರ ಸಲ್ಲಿಸಿದ್ದಾರೆ. ಕೊಡವ ಜನಾಂಗೀಯ ಲೋಕದ  ಅಧಮನೀಯ ಧ್ವನಿ ಮತ್ತು ಸಾಕ್ಷಿಪ್ರಜ್ಞೆಯಾಗಿರುವ ಸಿ.ಎನ್.ಸಿ, ತೀವ್ರ ಕಾಳಜಿಯೊಂದಿಗೆ, ಹಿಮಾಚಲ ಪ್ರದೇಶದ ಎತ್ತರದ ಕಿನ್ನೌರ್ ನ ತಾಶಿಗಂಗ್ ಮತಗಟ್ಟೆ, ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆಯ ದೂರದ ಮಾಲೋಗಾಂವ್ ಮತಗಟ್ಟೆ ಮತ್ತು ಗುಜರಾತ್‌ನ ಗಿರ್ ರಾಷ್ಟ್ರೀಯ ಉದ್ಯಾನವನದ ಏಕೈಕ ಮತದಾರನಿಗಾಗಿ ಸ್ಥಾಪಿಸಲಾದ ಮತಗಟ್ಟೆಗಳ ಮಾದರಿಯಲ್ಲಿಯೇ, ನಮ್ಮ ಪಾರಂಪರಿಕ ವಂಶಾವಳಿ ಪೀಠಗಳಲ್ಲಿ (“ಬಲ್ಯಮನೆ”) ಮತ್ತು ಆಧ್ಯಾತ್ಮಿಕ ಪೀಠಗಳಲ್ಲಿ (“ಮಂದ್”) ವಿಶೇಷ ಚುನಾವಣಾ ಮತಗಟ್ಟೆಗಳನ್ನು ಸ್ಥಾಪಿಸಬೇಕು. ಕೊಡವ ಭೂಪ್ರದೇಶವು ಪಶ್ಚಿಮ ಘಟ್ಟಗಳ, ಎತ್ತರದ ಗಿರಿಕಂದರಗಳ ಮತ್ತು ಪರ್ವತಮಯ ಭೂಪ್ರದೇಶದಿಂದ ಕೂಡಿದೆ. ಷಫಾಲಜಿ (ಮತದಾನ ವಿಶ್ಲೇಷಣೆ) ಜ್ಞಾನದ ಕೊರತೆಯಿರುವ ಕೊಡವರಿಗೆ, ಪ್ರತ್ಯೇಕ ಮತಗಟ್ಟೆಗಳನ್ನು ಒದಗಿಸುವ ಮೂಲಕ ಶೇಕಡಾ 100ರಷ್ಟು ಮತದಾನದ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಈ ಕಾರ್ಯಸಾಧ್ಯವಾದ ವಿಧಾನದ ಅಗತ್ಯವಿದೆ. ಇದರಿಂದ ನಮ್ಮ ಬೃಹತ್ ಪ್ರಜಾಪ್ರಭುತ್ವದ ಸಾರ್ವತ್ರಿಕ ಮತದಾನದ ಹಕ್ಕನ್ನು ಬಲಪಡಿಸಲು ಮತ್ತು ವಿಶ್ವದ ಅತಿ ದೊಡ್ಡ ಜನಾಂಗೀಯ ವೈವಿಧ್ಯಮಯ ರಾಷ್ಟ್ರವನ್ನು ಸಮೃದ್ಧಗೊಳಿಸಲು ಸಾಧ್ಯವಾಗುತ್ತದೆ. ಭಾರತ ಸರ್ಕಾರದ ಕಲ್ಪನೆಯ “ಒಂದು ಚುನಾವಣೆ, ಒಂದು ಮತ” ದೃಷ್ಟಿಕೋನದತ್ತ ಒಂದು ಹೆಜ್ಜೆ ಮುಂದಿಟ್ಟು, ಯಶಸ್ವಿಯಾಗಿ ಪೂರ್ಣಗೊಳಿಸುತ್ತಿರುವ ಮತದಾನ ಹಕ್ಕಿನ ವಿಶೇಷ ಪರಿಷ್ಕರಣೆ ಎಸ್‌ಐಆರ್ ಯೋಜನಾಯಾತ್ರೆ ಹಿನ್ನೆಲೆಯಲ್ಲಿ ಕೊಡವರು ಈ ನ್ಯಾಯಸಮ್ಮತ ಸಾಂವಿಧಾನಿಕ ಬೇಡಿಕೆಯನ್ನು ಚುನಾವಣಾ ಆಯೋಗದ ಮುಂದೆ   ಇಡುತ್ತಿದ್ದೇವೆ ಎಂದು ಎನ್.ಯು.ನಾಚಪ್ಪ ಸ್ಪಷ್ಟಪಡಿಸಿದ್ದಾರೆ. ಪ್ರತಿಯೊಂದು ಕೊಡವ ವಂಶಾವಳಿ ಪೀಠ (“ಬಲ್ಯಮನೆ” – ಪಾರಂಪರಿಕ ಮನೆಗಳು) ಮತ್ತು ಆಧ್ಯಾತ್ಮಿಕ ಪೀಠಗಳಲ್ಲಿ (“ಮಂದ್” –  ಸಮುದಾಯದ ಆದ್ಯಾತ್ಮಿಕ ಪವಿತ್ರ ಸ್ಥಳಗಳು) ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸುವುದರಿಂದ ಪಶ್ಚಿಮ ಘಟ್ಟಗಳಲ್ಲಿನ ಕೊಡವ ಸಮುದಾಯಕ್ಕೆ ಮತದಾನದ ಲಭ್ಯತೆ ಹೆಚ್ಚಾಗುತ್ತದೆ. ಭಾರತ ಚುನಾವಣಾ ಆಯೋಗವು ಗಿರ್ ರಾಷ್ಟ್ರೀಯ ಉದ್ಯಾನವನ, ಅರುಣಾಚಲ ಪ್ರದೇಶದಂತ ದೂರದ ಸ್ಥಳ  ಮತ್ತು ಹಿಮಾಚಲ ಪ್ರದೇಶದಂತ ಎತ್ತರದ ಸ್ಥಳಗಳಿಗೆ ಮತದಾರರಿಗೆ ಈಗಾಗಲೇ ಅನುಕೂಲ ಮಾಡಿಕೊಟ್ಟಿದೆ. ಇದೇ ಸೌಲಭ್ಯವನ್ನು ಕೊಡವರಿಗೂ ವಿಸ್ತರಿಸುವುದು ಕಾಲದ ಅಗತ್ಯವಾಗಿದೆ. ಪ್ರತಿಯೊಬ್ಬ ಅರ್ಹ ಪ್ರಜೆಯೂ ಮತ ಚಲಾಯಿಸುವುದನ್ನು ಖಚಿತಪಡಿಸಿಕೊಳ್ಳಲು ಭಾರತ ಚುನಾವಣೆ ಆಯೋಗವು ನಿರ್ದಿಷ್ಟ, ನಿರ್ವಹಿಸಬಹುದಾದ ಮಾನದಂಡಗಳ ಆಧಾರದ ಮೇಲೆ ಮತಗಟ್ಟೆಗಳನ್ನು ಸ್ಥಾಪಿಸುತ್ತದೆ. *ಏಕ-ಮತದಾರರ ನಿದರ್ಶನಗಳು*  ಮತದಾನದ ಹಕ್ಕುಗಳನ್ನು ರಕ್ಷಿಸಲು ಇ.ಸಿ.ಐ ಪ್ರತ್ಯೇಕ ಮತಗಟ್ಟೆಗಳನ್ನು ರಚಿಸುತ್ತದೆ. ಉದಾಹರಣೆಗೆ, ಗುಜರಾತ್‌ನ ಗಿರ್ ರಾಷ್ಟ್ರೀಯ ಉದ್ಯಾನವನದ ಆಳದಲ್ಲಿ ಒಬ್ಬನೇ ನೋಂದಾಯಿತ ಮತದಾರನಿಗಾಗಿ ಮೀಸಲಾದ ಮತಗಟ್ಟೆಯನ್ನು ಸ್ಥಾಪಿಸಲಾಗಿದೆ. ಹಿಮಾಚಲ ಪ್ರದೇಶದ ಕಿನ್ನೌರ್ ನ ತಾಶಿಗಂಗ್  ಮತ್ತು ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆಯ ಮಾಲೋಗಾಂವ್ ಮತಗಟ್ಟೆಯಂತಹ ದೂರದ, ಎತ್ತರದ ಪ್ರದೇಶಗಳಲ್ಲೂ ವಿಶೇಷ ಮತಗಟ್ಟೆಗಳನ್ನು ನಿರ್ಮಿಸಲಾಗಿದೆ. *ಲಭ್ಯತೆ ಮತ್ತು ದೂರದ ಮಾನದಂಡಗಳು*  ಇ.ಸಿ.ಐ ನ ಸಾಮಾನ್ಯ ಮಾರ್ಗಸೂಚಿಗಳು ಮತದಾರನ ನಿವಾಸದಿಂದ ಸಾಮಾನ್ಯವಾಗಿ 2 ಕಿ.ಮೀ ವ್ಯಾಪ್ತಿಯೊಳಗೆ ಮತಗಟ್ಟೆಯನ್ನು ಸ್ಥಾಪಿಸಬೇಕು ಎಂದು ನಮೂದಿಸುತ್ತವೆ, ಇದರಿಂದ ಯಾವ ಮತದಾರನೂ ಸುದೀರ್ಘ  ಪ್ರಯಾಣ ಮಾಡಬೇಕಾಗಿಲ್ಲ ಅಥವಾ ತಡೆಗೋಡೆಯಾಗುವ ನೈಸರ್ಗಿಕ ಅಡೆತಡೆಗಳನ್ನು ದಾಟಬೇಕಾಗಿಲ್ಲ. *ಕನಿಷ್ಠ ಸಿಬ್ಬಂದಿ ಅಗತ್ಯತೆಗಳು*  ಪ್ರತಿಯೊಂದು ಕಾರ್ಯನಿರ್ವಹಿಸುವ ಮತಗಟ್ಟೆಯಲ್ಲಿ ಇ.ಸಿ.ಐ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿಯ ತಂಡವಿರಬೇಕು ಎಂದು ಭಾರತೀಯ ಚುನಾವಣಾ ಕಾನೂನುಗಳು ಅಗತ್ಯಪಡಿಸುತ್ತವೆ. ಇವರು ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಕಾಲ್ನಡಿಗೆಯಲ್ಲಿ ಅಥವಾ ವಿಶೇಷ ಸಾರಿಗೆಯ ಮೂಲಕ ನಿಗದಿತ ಸ್ಥಳಕ್ಕೆ ಸಾಗಿಸುತ್ತಾರೆ.
1951ರ ಚುನಾವಣೆಯಲ್ಲಿ ಸಾರ್ವತ್ರಿಕ ಮತದಾನದ ಹಕ್ಕು ಪ್ರಥಮ ಬಾರಿಗೆ ಪ್ರಾರಂಭವಾದಾಗ, ಇ.ಸಿ.ಐ ಕನಿಷ್ಠ 2 ಕಿ.ಮೀ ಮಾನದಂಡವನ್ನು ನಿಗದಿಪಡಿಸಿತು. ಈ ಮಾನದಂಡ ಹಾಗಿರಲಿ, ಕೊಡವ ಭೂಪ್ರದೇಶದ ಅನೇಕ ಹಳ್ಳಿಗಳು ಮತ್ತು ಕುಗ್ರಾಮಗಳು ಇಂದಿಗೂ 2 ಕಿ.ಮೀ ಮತಗಟ್ಟೆ ಸೌಲಭ್ಯವನ್ನು ಅನುಭವಿಸಿಲ್ಲ. ಈಗ ಭಾರತದ ಆಡಳಿತ ಯಂತ್ರವು ವಿಕಸನಗೊಂಡಿದೆ. ವಿಕೇಂದ್ರೀಕರಣ ಪ್ರಕ್ರಿಯೆಗಳ ಮೂಲಕ ಆಡಳಿತವು ಜನರನ್ನು ತಲುಪುತ್ತಿದೆ. ಸಂವಿಧಾನವು ತನ್ನ ಬಾಲ್ಯದ ಹಂತದಿಂದ ಅಗತ್ಯ ಶಾಸನಗಳು ಮತ್ತು ತಿದ್ದುಪಡಿಗಳ ಮೂಲಕ ಮಹೋನ್ನತ ಎತ್ತರಕ್ಕೆ ಬೆಳೆದಿದೆ. ಪ್ರಜಾಪ್ರಭುತ್ವವು ಶೈಶವಾವಸ್ಥೆಯಿಂದ ಪ್ರೌಢಾವಸ್ಥೆಗೆ ವಿಕಸನಗೊಂಡಿದೆ. ಜನರ ಆಕಾಂಕ್ಷೆಗಳು ಶೂನ್ಯದಿಂದ ಆಕಾಶದೆತ್ತರಕ್ಕೆ ಏರಿವೆ. ಪರಿಸ್ಥಿತಿ ಹೀಗಿರುವಾಗ, ಈಗಲೂ ಮತಗಟ್ಟೆಗಳನ್ನು ಸ್ಥಾಪಿಸಲು ಜನಸಂಖ್ಯೆಯ ಎಣಿಕೆಗೆ ಅಂಟಿಕೊಂಡಿರುವುದು ವಿಷಾದನೀಯ ಮತ್ತು ಅತಾರ್ಕಿಕವಾಗಿದೆ. ಕೊಡವಲ್ಯಾಂಡ್ ಪರಿಸ್ಥಿತಿಯನ್ನು ಕರ್ನಾಟಕದ ಮೈದಾನ ಪ್ರದೇಶಗಳಿಗೆ ಹೋಲಿಸಲು ಸಾಧ್ಯವಿಲ್ಲ. ಕೊಡಗು ರಾಜ್ಯದ ವಿಲೀನದ ನಂತರ, ಅನೇಕ ಜನರು ಪ್ರವಾಹದಂತೆ ಕೊಡಗಿಗೆ ವಲಸೆ ಬಂದರು. ಈಗ ಪ್ರವಾಹದ ಬಾಗಿಲುಗಳು ತೆರೆದುಕೊಂಡಿವೆ. ಪರಿಸ್ಥಿತಿ ಹೀಗಿರುವಾಗ, ಕೊಡವರನ್ನು ಅದೇ ದೃಷ್ಟಿಕೋನದಿಂದ ನೋಡಲು ಇ.ಸಿ.ಐ ಅದೇ ಮಾನದಂಡವನ್ನು ಬಳಸುವುದು ವಾಸ್ತವಕ್ಕೆ ದೂರವಾಗಿದೆ. ಅರ್ಜಿದಾರನಾದ ನಾನು, ಎನ್. ಯು. ನಾಚಪ್ಪ ಕೊಡವ, ಕೂಡ ನೂರೊಕ್ಕನಾಡ್ ಬೆಟ್ಟಗಳಲ್ಲಿರುವ ನನ್ನ ನಿವಾಸದಿಂದ ಸುಮಾರು 8 ಕಿ.ಮೀ ಪ್ರಯಾಣಿಸಿ ಈರಳೆವಳಮುಡಿ ಮತಗಟ್ಟೆಯಲ್ಲಿ ಮತ ಚಲಾಯಿಸುತ್ತೇನೆ. ಇ.ಸಿ.ಐ ಕೊಡವರನ್ನು ರಾಜ್ಯದ ಜನಸಂಖ್ಯಾತ್ಮಕವಾಗಿ ಭಾರಿ ಸಂಖ್ಯೆಯಲ್ಲಿರುವ ಸಮುದಾಯಗಳೊಂದಿಗೆ ಬೆರೆಸಿ, ಬಹುಸಂಖ್ಯಾತ ಸಮುದಾಯದ ಅಥವಾ ಇತರರ ಬುಟ್ಟಿಗೆ ಕೊಡವರನ್ನು  ತುರುಕಬಾರದು. ನಾವು ಕೊಡವರು ಈ ಪ್ರಾಚೀನ ಮತ್ತು ಪವಿತ್ರ ಭೂಮಿಯ ಏಕೈಕ ಆದಿಮಸಂಜಾತ  ಪ್ರಕೃತಿ ಆರಾಧಕ (ಆನಿಮಿಸ್ಟಿಕ್) ಏಕ-ಜನಾಂಗೀಯ ಸಮುದಾಯವಾಗಿದ್ದೇವೆ. ನಾವು ಕೊಡವರು ಯಾವುದೇ ಜಾತಿ ಅಥವಾ ಧಾರ್ಮಿಕ ವರ್ಗದ ಅಡಿಯಲ್ಲಿ ಬರುವುದಿಲ್ಲ. ನಾವು ನಮ್ಮ ಪೂಜ್ಯ ಪೂರ್ವಜರನ್ನು ಆರಾಧಿಸುತ್ತೇವೆ ಮತ್ತು ನಮ್ಮ ಆಯುಧಗಳು/ಬಂದೂಕುಗಳು, ಭೂಮಿ ತಾಯಿ, ಪ್ರಕೃತಿ, ಕಾಡುಗಳು (ದೇವರಕಾಡು), ಜೀವಜಲ ಕಾವೇರಿ ಮತ್ತು ಆಧ್ಯಾತ್ಮಿಕ ಮಂದ್‌ಗಳನ್ನು ಪೂಜಿಸುತ್ತೇವೆ. ಭಾರತವು ವಿಶ್ವದ ಅತಿ ದೊಡ್ಡ ಜನಾಂಗೀಯ ವೈವಿಧ್ಯಮಯ ರಾಷ್ಟ್ರ ಮತ್ತು ಅತಿ ದೊಡ್ಡ ಪ್ರಜಾಪ್ರಭುತ್ವವಾಗಿದ್ದು, ಕೊಡವರ ಭಾವನೆಗಳನ್ನು ಮತ್ತು ಆಕಾಂಕ್ಷೆಗಳನ್ನು ಗೌರವಿಸಬೇಕು ಹಾಗೂ ಮಾನವಕುಲದ ಈ ಅಪರೂಪದಲ್ಲೇ ಅಪರೂಪದ ಜನಾಂಗವನ್ನು ರಕ್ಷಿಸಬೇಕು. ನಾವು ಕೊಡವರು ಪ್ರತ್ಯೇಕ ಜನಾಂಗೀಯ ಮೂಲದವರು. ಕೊಡವರಲ್ಲಿ ಯಾವುದೇ ಪಂಥ, ಉಪ-ಪಂಥ ಅಥವಾ ಉಪ-ಗುಂಪುಗಳಿಲ್ಲ. ನಾವೆಲ್ಲರೂ ಒಂದೇ ಜನಾಂಗ. 1871-72 ರಿಂದ 1931 ರವರೆಗೆ, ಜನಗಣತಿಯಲ್ಲಿ ಕೊಡವರನ್ನು ಪ್ರತ್ಯೇಕ ಜನಾಂಗವೆAದು ಎಣಿಕೆ ಮಾಡಲಾಗಿತ್ತು. 1941 ರಲ್ಲಿ, ನಾವು ನಮ್ಮ ಜನಾಂಗೀಯ ಗುರುತನ್ನು ಕಳೆದುಕೊಂಡೆವು. 1956 ರವರೆಗೆ, ನಮ್ಮ ತಾಯ್ನಾಡು ಕೊಡಗು ಪ್ರತ್ಯೇಕ ರಾಜ್ಯವಾಗಿತ್ತು. 1956 ರ ರಾಜ್ಯ ಪುನರ್ವಿಂಗಡಣಾ ಕಾಯ್ದೆಯಡಿ ನಾವು ಅದನ್ನು ಕೂಡ ಕಳೆದುಕೊಂಡೆವು. ಆ ಅರ್ಥದಲ್ಲಿ, ನಾವು ಕೊಡವರು ಹೆಗ್ಗುರುತು ಮತ್ತು ಅಸ್ತಿತ್ವದ ಎರಡರ ನಷ್ಟವನ್ನು ಅನುಭವಿಸಿದೆವು. ವಿಲೀನದ ನಂತರ, ನಮ್ಮ ಅನೇಕ ಜನರು ಉತ್ತಮ ಭವಿಷ್ಯವನ್ನು ಅರಸಿ ಬೇರೆಡೆಗೆ ವಲಸೆ ಹೋಗಿ ಚದುರಿಹೋದರು. ಆದಾಗ್ಯೂ, ಸಾಂಸ್ಕೃತಿಕ ಮತ್ತು ಜನಾಂಗೀಯ ಆಚರಣೆಗಳಿಗಾಗಿ, ಅವರು ವರ್ಷಕ್ಕೆ ಮೂರು ಬಾರಿಯಂತೆ ತಮ್ಮ ವಂಶಾವಳಿ ಪೀಠಗಳಲ್ಲಿ (ಬಲ್ಯಮನೆ) ಮತ್ತು ಆಧ್ಯಾತ್ಮಿಕ ಪೀಠಗಳಲ್ಲಿ (ಮಂದ್) ಒಂದೆಡೆ ಸೇರುತ್ತಾರೆ.
ಇ.ಸಿ.ಐ ಎಲ್ಲಾ 842 ಬಲ್ಯಮನೆಗಳು ಮತ್ತು 300 ಮಂದ್‌ಗಳಲ್ಲಿ ಪ್ರತ್ಯೇಕ ವಿಶೇಷ ಚುನಾವಣಾ ಮತಗಟ್ಟೆಗಳನ್ನು ಒದಗಿಸಿದರೆ, ಹಬ್ಬದ ವಾತಾವರಣದಲ್ಲಿ ಎಲ್ಲಾ ಕೊಡವರು ಚುನಾವಣಾ ಪ್ರಕ್ರಿಯೆಯಲ್ಲಿ ಶೇಕಡಾ 100 ರಷ್ಟು ಭಾಗವಹಿಸುತ್ತಾರೆ. ಆ ಮೂಲಕ, ಅವರು ಚುನಾವಣಾ ವ್ಯವಸ್ಥೆಯನ್ನು ಮತ್ತು ಭಾರತೀಯ ಪ್ರಜಾಪ್ರಭುತ್ವವನ್ನು ಸಮೃದ್ಧಗೊಳಿಸಲು ಕೊಡುಗೆ ನೀಡುತ್ತಾರೆ. ಈಗ ಸರ್ಕಾರವು ಬೊಕ್ಕಸಕ್ಕೆ ಹೊರೆ ಅಥವಾ ಸಿಬ್ಬಂದಿ, ಚುನಾವಣಾ ಏಜೆಂಟರು ಮತ್ತು ಭದ್ರತಾ ಸಿಬ್ಬಂದಿಯ ಕೊರತೆಯಿದೆ ಎಂಬ ಕಾರಣವನ್ನು ನೀಡಿ ನಮ್ಮ ನ್ಯಾಯಸಮ್ಮತ ಹಕ್ಕಿನಿಂದ ತಪ್ಪಿಸಿಕೊಳ್ಳಲು ಅಥವಾ ನಿರ್ಲಕ್ಷಿಸಲು ಸಾಧ್ಯವಿಲ್ಲ. ದೇಶ ನಿರ್ಮಾಣ ಮತ್ತು ರಾಷ್ಟ್ರೀಯ ಭದ್ರತೆಗಾಗಿ ಪ್ರತಿಯೊಂದು ಮನೆಯಿಂದಲೂ ಸೈನ್ಯಕ್ಕೆ ಸದಸ್ಯರನ್ನು ಕಳುಹಿಸುವ ಮೂಲಕ ನಾವು ಅಪಾರ ಮಾನವ ಸಂಪನ್ಮೂಲವನ್ನು ನೀಡಿದ್ದೇವೆ. ಕೊಡವಲ್ಯಾಂಡ್ ವಿಶ್ವದಲ್ಲೇ ಅತ್ಯುತ್ತಮವಾದ ಕಾಫಿಯನ್ನು ಉತ್ಪಾದಿಸುತ್ತದೆ, ಈ ಮೂಲಕ ನಾವು ಭಾರತದ ವಿದೇಶಿ ವಿನಿಮಯ ಗಳಿಕೆಗೆ ಗಮನಾರ್ಹ ಕೊಡುಗೆ ನೀಡುತ್ತೇವೆ. ನಮ್ಮ ಭೂಮಿಯ ನಿರಂತರ, ಸುಸಂರಕ್ಷಿತ ಜೈವಿಕ ವೈವಿಧ್ಯತೆಯ ಮೂಲಕ ನಾವು ಕಾವೇರಿ ನೀರನ್ನು ಒದಗಿಸುತ್ತೇವೆ, ಜೊತೆಗೆ ಮರಮುಟ್ಟು ಮತ್ತು ಇತರ ನೈಸರ್ಗಿಕ ಸಂಪನ್ಮೂಲಗಳನ್ನು ನೀಡುತ್ತೇವೆ. ನಮಗೆ ಹೆಚ್ಚಿನ ಭದ್ರತಾ ಸಿಬ್ಬಂದಿಯ ಅಗತ್ಯವಿಲ್ಲದಿದ್ದರೂ, ನಾವು ಕೊಡವರು ಶಾಂತಿಪ್ರಿಯ ಮತ್ತು ಕಾನೂನು ಪಾಲಿಸುವ ಜನರಾಗಿದ್ದೇವೆ, ಈ ಸತ್ಯವನ್ನು ಭಾರತದ ಮೊದಲ ಗೃಹ ಮಂತ್ರಿಗಳು  ಮತ್ತು ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ವ್ಯಾಪಕವಾಗಿ ಮೆಚ್ಚಿದ್ದಾರೆ ಮತ್ತು ಒಪ್ಪಿಕೊಂಡಿದ್ದಾರೆ ಎಂದು ಎನ್.ಯು.ನಾಚಪ್ಪ ವಿವರಿಸಿದ್ದಾರೆ. ಭಾರತ ಸರ್ಕಾರವು ಇ.ಸಿ.ಐ ಮಾರ್ಗದರ್ಶನದಲ್ಲಿ ಹಮ್ಮಿಕೊಂಡಿರುವ ಅರ್ಥಪೂರ್ಣ ಎಸ್‌ಐಆರ್ ಯೋಜನೆ ಮತ್ತು “ಒಂದು ಚುನಾವಣೆ, ಒಂದು ಮತ” ಕಲ್ಪನೆಗಾಗಿ, ವಿಶಿಷ್ಟ ಆದಿಮಸಂಜಾತ ಕೊಡವರಿಂದ ಶೇಕಡಾ 100ರಷ್ಟು ಮತದಾನದ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಪ್ರತಿಯೊಂದು ಕೊಡವ ಬಲ್ಯಮನೆ ಮತ್ತು ಪ್ರತಿಯೊಂದು ಕೊಡವ ಮಂದ್‌ಗೆ ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸುವ ಮೂಲಕ ಆಯೋಗವು ಸ್ಪಂದಿಸಬೇಕು. ಕೊಡವರ ನ್ಯಾಯಸಮ್ಮತ ಆಕಾಂಕ್ಷೆಗಳನ್ನು ಈಡೇರಿಸುವ ಮೂಲಕ, ಇ.ಸಿ.ಐ ನಮ್ಮ ಚುನಾವಣಾ ಪ್ರಕ್ರಿಯೆಯನ್ನು ಇನ್ನಷ್ಟು ಕ್ರಿಯಾಶೀಲಗೊಳಿಸುತ್ತದೆ ಮತ್ತು ವಿಶ್ವದ ಅತಿ ದೊಡ್ಡ ಜನಾಂಗೀಯ ವೈವಿಧ್ಯಮಯ ರಾಷ್ಟ್ರದಲ್ಲಿ ನಮ್ಮ ಪ್ರಜಾಪ್ರಭುತ್ವವನ್ನು ಸಮೃದ್ಧಗೊಳಿಸುತ್ತದೆ.
ಇ.ಸಿ.ಐ ನಿಗದಿಪಡಿಸಿದಂತೆ, ಮತಗಟ್ಟೆಗಳು 2 ಕಿ.ಮೀ ವ್ಯಾಪ್ತಿಯಲ್ಲಿರಬೇಕು. ಆದರೆ ಆ ಮಾರ್ಗಸೂಚಿಯನ್ನು ಭಾರತದ ಸ್ವಾತಂತ್ರ‍್ಯ ಮತ್ತು 1951 ರ ಮೊದಲ ಚುನಾವಣೆಯ ಸಮಯದಲ್ಲಿ ನಿಗದಿಪಡಿಸಲಾಗಿತ್ತು. ಇಂದಿಗೂ ಕೊಡಗಿನಲ್ಲಿ, ಕೊಡವರು ಮತ ಚಲಾಯಿಸಲು ಘಾಟ್ ರಸ್ತೆಗಳು, ಮಳೆ ಮತ್ತು ಇಳಿಜಾರುಗಳ ಮೂಲಕ 10 ರಿಂದ 15 ಕಿ.ಮೀ ಪ್ರಯಾಣಿಸಬೇಕಾಗಿದೆ. ಇದು ಸಂವಿಧಾನದ ವಿಧಿ 326 – ಮತದಾನದ ಹಕ್ಕನ್ನು ನೇರವಾಗಿ ಉಲ್ಲಂಘಿಸುತ್ತದೆ ಮತ್ತು ವೃದ್ಧರು, ಮಹಿಳೆಯರ ಭಾಗವಹಿಸುವಿಕೆಯನ್ನು ಕುಂಠಿತಗೊಳಿಸುತ್ತದೆ. ಕೊಡಗಿನಲ್ಲಿರುವ ಎಲ್ಲಾ ಬಲ್ಯಮನೆ ಮತ್ತು ಮಂದ್‌ಗಳ ಬೂತ್ ಮ್ಯಾಪಿಂಗ್ ಸಮೀಕ್ಷೆಯನ್ನು ನಡೆಸುವುದು. ಗಿರ್, ಕಿನ್ನೌರ್ ಮತ್ತು ಅರುಣಾಚಲ ಮಾದರಿಯ ಮಾದರಿಯಲ್ಲಿ ಕೊಡವ ಬಲ್ಯಮನೆ ಮತ್ತು ಮಂದ್‌ಗಳಲ್ಲಿ ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸುವುದು. ಆರ್‌ಪಿ ಕಾಯ್ದೆ 1951 ಸೆಕ್ಷನ್ 25 ರ ಅಡಿಯಲ್ಲಿ ಬಲ್ಯಮನೆಯನ್ನು ಕೊಡವ ಕುಗ್ರಾಮಗಳ ಮಾನ್ಯವಾದ “ಮತದಾನ ಸ್ಥಳ” ಎಂದು ಗುರುತಿಸುವುದು. “ನಮ್ಮ ಭೂಗೋಳವೇ ನಮ್ಮ ಸವಾಲು. ನಮ್ಮ ಬಲ್ಯಮನೆಯೇ ನಮ್ಮ ಗುರುತು. ನಮ್ಮ ಮಂದ್ ನಮ್ಮ ಆತ್ಮ. ಮತಗಟ್ಟೆಯು ನಮ್ಮ ಬಳಿಗೆ ಬರಬೇಕೇ ಹೊರತು, ನಾವು ಮತಗಟ್ಟೆಯ ಬಳಿಗಲ್ಲ.” ಕೊಡವರು ಈ ಕೆಳಗಿನ ರೂಪಗಳಲ್ಲಿ ರಾಷ್ಟ್ರೀಯ ಬೊಕ್ಕಸಕ್ಕೆ ವಿದೇಶಿ ವಿನಿಮಯದ ರೂಪದಲ್ಲಿ ಹೆಚ್ಚಿನ ತೆರಿಗೆಯನ್ನು ನೀಡಿದ್ದೇವೆ.
ಎ) ಕಾಫಿ – ಕೊಡವಲ್ಯಾಂಡ್ ಭಾರತದ ಕಾಫಿಯ ಶೇಕಡಾ 33 ರಷ್ಟನ್ನು ಉತ್ಪಾದಿಸುತ್ತದೆ ಮತ್ತು ಕೋಟ್ಯಂತರ ವಿದೇಶಿ ವಿನಿಮಯವನ್ನು ಗಳಿಸಿಕೊಡುತ್ತದೆ.
ಬಿ) ಮರಮುಟ್ಟು ಮತ್ತು ಅರಣ್ಯ ಉತ್ಪನ್ನಗಳು – ಕೊಡವಲ್ಯಾಂಡ್‌ನ ದಟ್ಟವಾದ ಪಶ್ಚಿಮ ಘಟ್ಟಗಳಿಂದ.
ಸಿ) ಕಾವೇರಿ ನೀರು – ದಕ್ಷಿಣ ಭಾರತದ ಜೀವನಾಡಿಯು ಕೊಡವಲ್ಯಾಂಡ್‌ನ ತಲಕಾವೇರಿಯಲ್ಲಿ ಹುಟ್ಟುತ್ತದೆ.
ಡಿ) ಮಾನವ ಸಂಪನ್ಮೂಲ – ಸಶಸ್ತç ಪಡೆಗಳ ಮೂಲಕ ವಿಶಿಷ್ಟ ಕೊಡುಗೆ. ಭಾರತೀಯ ಸೇನೆಯಲ್ಲಿ ಕೊಡವರು ಅತ್ಯಧಿಕ ತಲಾ ಪ್ರಾತಿನಿಧ್ಯವನ್ನು ಹೊಂದಿದ್ದಾರೆ. ನಾವು ತ್ರಿವರ್ಣ ಧ್ವಜಕ್ಕಾಗಿ ರಕ್ತ ಹರಿಸಿದ್ದೇವೆ ಮತ್ತು ಪ್ರಾಣ ನೀಡಿದ್ದೇವೆ.
ದೇಶಕ್ಕೆ ನೀಡಿದ 75 ವರ್ಷಗಳ ತೆರಿಗೆ, ರಕ್ತ ಮತ್ತು ನೀರಿಗೆ ಪರಿಹಾರವಾಗಿ, ಇ.ಸಿ.ಐ ಹೀಗೆ ಮಾಡಬೇಕು. ಕೊಡವಲ್ಯಾಂಡ್ ಉದ್ದಕ್ಕೂ ಇರುವ ಎಲ್ಲಾ 842 ಬಲ್ಯಮನೆಗಳು ಮತ್ತು 300 ಮಂದ್‌ಗಳಿಗೆ ವಿಶೇಷ ಮತಗಟ್ಟೆಗಳನ್ನು ಒದಗಿಸಬೇಕು. ರಾಷ್ಟ್ರವು ಗಿರ್‌ನಲ್ಲಿ 1 ಮತದಾರನಿಗಾಗಿ ಮತಗಟ್ಟೆಯನ್ನು ಸ್ಥಾಪಿಸಿದಂತೆಯೇ, 1.5 ಲಕ್ಷ ಸ್ಥಳೀಯ ಕೊಡವರಿಗಾಗಿ 1142 ಮತಗಟ್ಟೆಗಳನ್ನು ಸ್ಥಾಪಿಸಬೇಕು. “ನಾವು ಜಗತ್ತಿಗೆ ಕಾಫಿ ನೀಡಿದೆವು. ನಾವು ದಕ್ಷಿಣಕ್ಕೆ ನೀರು ನೀಡಿದೆವು. ನಾವು ಗಡಿಗೆ ಸೈನಿಕರನ್ನು ನೀಡಿದೆವು. ಈಗ ನಮಗೆ ನಮ್ಮ ಬಲ್ಯಮನೆಯಲ್ಲಿ ಒಂದು ಮತಗಟ್ಟೆಯನ್ನು ಕೊಡಿ ಎಂದು ಮನವಿ ಮಾಡಿದ್ದಾರೆ.
ಕೊಡವಲ್ಯಾಂಡ್ ಪಶ್ಚಿಮ ಘಟ್ಟಗಳ ಪರ್ವತಮಯ ಭೂಪ್ರದೇಶ, ಗ್ರಾಮೀಣ ಗುಡ್ಡಗಾಡು ಮತ್ತು ಹರಿತವಾದ ದಟ್ಟ ಅರಣ್ಯಗಳಲ್ಲಿ ನೆಲೆಗೊಂಡಿದೆ. ಇದು ರಸ್ತೆಗಳು ಮತ್ತು ಬಸ್ ಮಾರ್ಗಗಳನ್ನು ಹೊಂದಿರುವ ಮೈದಾನ ಪ್ರದೇಶವಲ್ಲ. ಇದು ಮಳೆ, ಇಳಿಜಾರು, ತೋಟ ಮತ್ತು ಕಾಡಿನಿಂದ ಕೂಡಿದೆ.
ಕೊಡವ ವಂಶಾವಳಿಯ ಪ್ರತಿಯೊಂದು ಬಲ್ಯಮನೆ – ಒಂದು ಒಕ್ಕದ ಪಾರಂಪರಿಕ ಮನೆ – ಮತ್ತು ಆಧ್ಯಾತ್ಮಿಕ ಸ್ಥಳವಾದ “ಮಂದ್” ಗಳು ಸಹ ಇದೇ ಭೂಪ್ರಕೃತಿ ಮತ್ತು ಭೌಗೋಳಿಕತೆಯಲ್ಲಿ ನೆಲೆಸಿವೆ. ಅವು ಕಣಿವೆಗಳು, ಬೆಟ್ಟದ ತುದಿಗಳು ಮತ್ತು ಅಂಚಿನ ಕಾಡುಗಳಲ್ಲಿ ಚದುರಿಕೊಂಡಿವೆ. 5 ರಿಂದ 10 ಬಲ್ಯಮನೆಗಳು ಸೇರಿ ಒಂದು ‘ನಾಡ್’ ಆಗುತ್ತದೆ. ಈ ಭೂಪ್ರಕೃತಿಗೆ ಮೈದಾನ ಪ್ರದೇಶದ “2 ಕಿ.ಮೀ ವ್ಯಾಪ್ತಿಯ” ನಿಯಮವನ್ನು ಅನ್ವಯಿಸುವುದು ಮತದಾನದ ಹಕ್ಕನ್ನು ನಿರಾಕರಿಸಿದಂತಾಗುತ್ತದೆ.
ಕೊಡಗಿನ ನಕ್ಷೆಯಲ್ಲಿನ “2 ಕಿ.ಮೀ” = ಘಾಟ್ ರಸ್ತೆಗಳು, ಕೆಸರು, ಭೂಕುಸಿತಗಳು ಮತ್ತು ವನ್ಯಮೃಗಗಳ ವಲಯಗಳ ಮೂಲಕ 10 ಕಿ.ಮೀ ನಿಂದ 15 ಕಿ.ಮೀ ಪ್ರಯಾಣವಾಗಿದೆ. ಇದು ಮುಂಗಾರಿನ ಸಮಯದಲ್ಲಿ ಅಸಾಧ್ಯವಾಗಿದೆ. ಆದ್ದರಿಂದ ಚುನಾವಣಾ ಆಯೋಗ ಸಿಎನ್‌ಸಿಯ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ ಸ್ಪಂದಿಸಬೇಕೆಂದು ಎನ್.ಯು.ನಾಚಪ್ಪ ಮನವಿ ಮಾಡಿದ್ದಾರೆ.
Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಮಾದರಿಯಾದ ಕೊಡಗು ವಿದ್ಯಾಲಯದ ಎನ್.ಸಿ.ಸಿ. ಕೆಡೆಟ್‌ ಗಳು*

ಜುಲೈ 26, 2026

*ಮಡಿಕೇರಿ : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕಾಗಿ೯ಲ್ ವಿಜಯ್ ದಿವಸ್*

ಜುಲೈ 26, 2026

*ಮಡಿಕೇರಿ ಲಯನ್ಸ್ ಕ್ಲಬ್ ಕಾರ್ಗಿಲ್ ವಿಜಯ್ ದಿವಸ್ : ಹುತಾತ್ಮರಿಗೆ ನಮನ*

ಜುಲೈ 26, 2026

*ಮಡಿಕೇರಿ : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕಾಗಿ೯ಲ್ ವಿಜಯ್ ದಿವಸ್*

ಜುಲೈ 26, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ NEWS DESK ಜು.26 : ಕಾರ್ಗಿಲ್ ವಿಜಯ್ ದಿವಸದ ಅಂಗವಾಗಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಹಾಗೂ…

*ಮಡಿಕೇರಿ ಲಯನ್ಸ್ ಕ್ಲಬ್ ಕಾರ್ಗಿಲ್ ವಿಜಯ್ ದಿವಸ್ : ಹುತಾತ್ಮರಿಗೆ ನಮನ*

ಜುಲೈ 26, 2026

*ಹೆಣ್ಣಾನೆಯ ಮೃತದೇಹ ಪತ್ತೆ : ಮರಿಯಾನೆಯ ರೋಧನ*

ಜುಲೈ 26, 2026

*ಅಪಘಾತ : ಇಬ್ಬರು ಯುವಕರ ಸಾವು*

ಜುಲೈ 26, 2026

*ಕೊಡವ ವಂಶಾವಳಿ ಪೀಠ (“ಬಲ್ಯಮನೆ”) ಮತ್ತು ಕೊಡವ ಆಧ್ಯಾತ್ಮಿಕ ಪೀಠಗಳಿಗೆ (“ಮಂದ್”) ಪ್ರತ್ಯೇಕ ವಿಶೇಷ ಕೊಡವ ಮತಗಟ್ಟೆಗಳನ್ನು ಸ್ಥಾಪಿಸಲು ಸಿಎನ್‌ಸಿ ಒತ್ತಾಯ*

ಜುಲೈ 26, 2026

*ಕುಶಾಲನಗರದಲ್ಲಿಸ್ಕೌಟ್ಸ್, ಗೈಡ್ಸ್, ರೋವರ್ಸ್, ರೇಂಜರ್ಸ್ ತರಬೇತಿ ಶಿಬಿರಕ್ಕೆ ಚಾಲನೆ : ಸುಸ್ಥಿರ ಅಭಿವೃದ್ಧಿಗೆ ಸ್ಕೌಟ್ಸ್‌ ಗೈಡ್ಸ್‌ ಸಹಕಾರಿ : ಪಿ.ಜಿ.ಆರ್ ಸಿಂಧ್ಯ*

ಜುಲೈ 25, 2026

*ಹಾರಂಗಿ ಜಲಾಶಯದಿಂದ ನದಿಗೆ ನೀರು ಬಿಡುಗಡೆ*

ಜುಲೈ 25, 2026

*ಕೊಡವ ಅಕಾಡೆಮಿ ಪುಸ್ತಕ ಬಿಡುಗಡೆ : ಸಂಸ್ಕೃತಿ ಉಳಿಸಿ ಬೆಳೆಸುವುದು ಎಲ್ಲರ ಜವಾಬ್ದಾರಿ : ಶಾಸಕ ಎ.ಎಸ್.ಪೊನ್ನಣ್ಣ*

ಜುಲೈ 25, 2026

*ನೀಟ್ ಪತ್ರಿಕೆ ಸೋರಿಕೆ ಖಂಡಿಸಿ ಗೋಣಿಕೊಪ್ಪದಲ್ಲಿ ಕಾಂಗ್ರೆಸ್ ಪ್ರತಿಭಟನೆ*

ಜುಲೈ 25, 2026

*ಬಿ.ಕಾಂ ಅಂತಿಮ ವರ್ಷದ ಪರೀಕ್ಷೆಯಲ್ಲಿ ಎಸ್‌ಇಎ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ*

ಜುಲೈ 25, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.