
ಮಡಿಕೇರಿ NEWS DESK ಜು.27 : ಮಳೆಯ ಪರಿಣಾಮ ನಗರದ ಸಂಪಿಗೆಕಟ್ಟೆ ನಿವಾಸಿ ಪೂವಪ್ಪ ಎಂಬುವವರ ವಾಸದ ಮನೆಯ ಎದುರಿನ ತಡೆಗೋಡೆ ಕುಸಿತಗೊಂಡಿದೆ. ಸೋಮವಾರ ಬೆಳಗ್ಗೆ ಅಂದಾಜು 20 ಅಡಿ ಆಳದ ಮಣ್ಣು ಕುಸಿತವಾಗಿದ್ದು, ಮನೆ ಮಂದಿ ಆತಂಕಕ್ಕೆ ಒಳಗಾಗಿದ್ದಾರೆ. ಮಣ್ಣು ಮತ್ತೆ ಕುಸಿಯದಂತೆ ತಡೆಯಲು ಹೊದಿಕೆ ಹಾಸಿ ಮುಂಜಾಗೃತಾ ಕ್ರಮ ಕೈಗೊಂಡಿದ್ದಾರೆ. ಮಡಿಕೇರಿ ತಹಶೀಲ್ದಾರ್ ಶ್ರೀಧರ್ ಹಾಗೂ ನಗರಸಭೆ ಕಂದಾಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದರು. ನಗರಸಭೆ ವತಿಯಿಂದಲೂ ಟಾರ್ಪಲ್ ವಿತರಣೆ ಮಾಡಲಾಗಿದ್ದು, ತಡೆಗೋಡೆ ಕುಸಿತದಿಂದ ಲಕ್ಷ ರೂ. ನಷ್ಟ ಉಂಟಾಗಿದೆ. ನಗರಸಭೆ ವತಿಯಿಂದ ತಡೆಗೋಡೆ ಮರು ನಿರ್ಮಾಣ ಮಾಡಿಕೊಡುವಂತೆ ಮನೆ ಮಂದಿ ಮನವಿ ಮಾಡಿದರು.









