
ಮಡಿಕೇರಿ ಜು.31 NEWS DESK : ಪೊನ್ನಂಪೇಟೆ ತಾಲ್ಲೂಕಿನ ಪೊನ್ನಂಪೇಟೆ–ಪೊನ್ನಪ್ಪಸಂತೆ ರಸ್ತೆಯ 6.25 ಕಿ.ಮೀ. ರಿಂದ 6.65 ರವರೆಗೆ ಸಿ.ಸಿ. ರಸ್ತೆ ಕಾಮಗಾರಿ ಕೈಗೊಳ್ಳುವ ನಿಟ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿಯಿಂದ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಕಲಂ 163 ಮತ್ತು ಕರ್ನಾಟಕ ಮೋಟಾರು ವಾಹನಗಳ ಕಾಯ್ದೆ 1988 ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮಗಳು 1989 ರ (ತಿದ್ದುಪಡಿ ನಿಯಮಗಳು 1990) ನಿಯಮ 221ಎ(5) ರಲ್ಲಿ ದತ್ತವಾದ ಅಧಿಕಾರದಂತೆ ಜುಲೈ, 29 ರಿಂದ ಆಗಸ್ಟ್, 28 ರವರೆಗೆ ಪೊನ್ನಂಪೇಟೆ ತಾಲ್ಲೂಕಿನ ಪೊನ್ನಂಪೇಟೆ-ಪೊನ್ನಪ್ಪಸಂತೆ ರಸ್ತೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿರ್ಭಂಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕರು ಪೊನ್ನಂಪೇಟೆಯಿಂದ-ನಲ್ಲೂರಿಗೆ(ಪೊನ್ನಂಪೇಟೆ–ಬೆಕ್ಕೆಸೊಡ್ಲೂರು ಮಾರ್ಗ), ಪೊನ್ನಂಪೇಟೆಯಿಂದ-ಪೊನ್ನಪ್ಪಸಂತೆಗೆ(ಕೋಣನಕಟ್ಟೆ ಮಾಯಾಮುಡಿ ಬಾಳಾಜಿ–ಜೋಡುಬೆಟ್ಟಿ ಮಾರ್ಗ) ಈ ಮಾರ್ಗಗಳನ್ನು ಬಳಸುವುದು.
ಈ ಬಗ್ಗೆ ಕರ್ನಾಟಕ ಮೋಟಾರು ವಾಹನಗಳ ಕಾಯ್ದೆ 1988 ರ ಕಲಂ 116 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮಗಳು 1989 ರ (ತಿದ್ದುಪಡಿ ನಿಯಮಗಳು 1990) ನಿಯಮ 221ಎ(2) ರಂತೆ ಅವಶ್ಯವಿರುವ ಸಂಜ್ಞೆ/ಸೂಚನಾ ಫಲಕವನ್ನು ಅಳವಡಿಸಲು ಕಾರ್ಯಪಾಲಕ ಎಂಜಿನಿಯರ್, ಲೋಕೋಪಯೋಗಿ ಇಲಾಖೆ, ಕೊಡಗು ವಿಭಾಗ, ಮಡಿಕೇರಿ ಇವರಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ತಿಳಿಸಿದ್ದಾರೆ.








