
ಮಡಿಕೇರಿ ಆ.17 NEWS DESK : ಶ್ರೀ ಕೋಟಿ ಮಹಾಗಣಪತಿ ದಸರಾ ದಶಮಂಟಪ ಸಮಿತಿ ವತಿಯಿಂದ 2026-27ನೇ ಸಾಲಿನ ದಸರಾ ದಶಮಂಟಪ ಸಮಿತಿಯ ಅಧಿಕಾರ ಹಸ್ತಾಂತರ ಕಾರ್ಯಕ್ರಮವು ಶ್ರೀ ಕೋಟೆ ಮಹಾಗಣಪತಿ ದೇವಾಲಯದ ಆವರಣದಲ್ಲಿ ನಡೆಯಿತು. ಕೋಟೆ ಮಹಾಗಣಪತಿ ದೇವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಶ್ರೀ ಕರವಲೆ ಭಗವತಿ ದೇವಾಲಯದಿಂದ ಆಯ್ಕೆಯಾದ ನೂತನ ದಶಮಂಟಪ ಸಮಿತಿಯ ಪದಾಧಿಕಾರಿಗಳಿಗೆ ಅಧಿಕಾರವನ್ನು ಅಧಿಕೃತವಾಗಿ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಬಿ.ಎಂ. ಹರೀಶ್, ಕಳೆದ ಬಾರಿಯಂತೆ ಈ ಬಾರಿಯೂ ತಮ್ಮ ದೇವಾಲಯಕ್ಕೆ ಸಂಪೂರ್ಣ ಸಹಕಾರ ಮತ್ತು ಬೆಂಬಲ ನೀಡುವುದಾಗಿ ಭರವಸೆ ನೀಡಿದರು. ಇದೇ ವೇಳೆ 2026-27ನೇ ಸಾಲಿನ ದಶಮಂಟಪ ಸಮಿತಿ ಅಧ್ಯಕ್ಷ ಸಜನ್ ಪೂಣಚ್ಚ ಅವರಿಗೆ ಹಿಂದಿನ ಸಮಿತಿಯ ಎಲ್ಲಾ ದಾಖಲೆಗಳನ್ನು ಒಳಗೊಂಡ ಕಡತವನ್ನು ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷ ಮಹೇಶ್ ಶೈನಿ, ಸದಸ್ಯೆ ಸವಿತಾ ರಾಕೇಶ್, ನಗರ ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ, ಉಮೇಶ್ ಸುಬ್ರಮಣಿ, ಕೋಟೆ ಗಣಪತಿ ಸಮಿತಿ ಅಧ್ಯಕ್ಷ ಶರಣು ಪೂಣಚ್ಚ, ಸತೀಶ್ ಶೇಟ್, ಚಂದ್ರಶೇಖರ್, ಪುನೀತ್, ರಾಜೇಶ್ ಬಿ.ಎಂ., ಸವಿತಾ ಅರುಣ್, ಸಂತೋಷ್ ಅನ್ವೇಕರ್, ಗುರುಕಿರಣ್ ಬಿ.ಪಿ., ಮನೋಹರ್, ಸುಮೇಶ್, ಎಸ್.ಎ. ವಿನಾಯಕ್, ಸಾತ್ವಿಕ್, ಲೋಚನ್ ಅನ್ವೇಕರ್ ಹಾಗೂ ಉಮೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಶ್ರೀ ಕರವಲೆ ಭಗವತಿ ದೇವಾಲಯದ ದಶಮಂಟಪ ಸಮಿತಿ ಪದಾಧಿಕಾರಿಗಳಾದ ಡೀನ್ ಬೋಪಣ್ಣ, ಸಚಿನ್ ಕರಿಯಪ್ಪ, ಜಗದೀಶ್ ರೈ, ಆಕಾಶ್ ಭಂಡಾರಿ, ರವಿನ್ ಮಚಯ್ಯ, ಅಚ್ಚಯ್ಯ, ದರ್ಶನ್, ಕುಶಾ, ಕಂಚಿ ಕಾಮಾಕ್ಷಿ ದೇವಸ್ಥಾನದ ಗಿರೀಶ್ ಮತ್ತು ಪ್ರಶಾಂತ್, ದಂಡಿನ ಮಾರಿಯಮ್ಮ ದೇವಾಲಯದ ನಾಗರಾಜ್, ಚೌಡೇಶ್ವರಿ ದೇವಾಲಯದ ಡಿ.ಪಿ. ನಾಗೇಶ್ ಸೇರಿದಂತೆ ವಿವಿಧ ದಶಮಂಟಪ ಸಮಿತಿಗಳ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.









