ಮಡಿಕೇರಿ, NEWS DESK ಆ. 22 – ನಗರದ ಸಕಾ೯ರಿ ಪದವಿ ಪೂವ೯ ಕಾಲೇಜಿನಲ್ಲಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಹಿರಿಯ ಜೀವಿಗಳಿಗೆ ಗೌರವ ನಮನ ಆಯೋಜಿಸಲಾಗಿತ್ತು.
ಹಿರಿಯರಾದ ಕೆ.ಎಂ. ನಾಣಯ್ಯ, ಡಾ.ಎಂ.ಜಿ. ಪಾಟ್ಟರ್, ಜಿ.ಟಿ. ರಾಘವೇಂದ್ರ ಅವರನ್ನು ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಸನ್ಮಾನಿಸಲಾಯಿತು
ಸನ್ಮಾನಿತರಾದ ನಿವೖತ್ತ ಶಿಕ್ಷಕ ಕೆ. ಎಂ. ನಾಣಯ್ಯ ಮಾತನಾಡಿ, ಹೊಸ ಬೇರು, ಹಳೆ ಬೇರು ಸೇರಿದರೆ ಮರ ಸೊಗಸು ಎಂಬಂತೆ. ಹಿರಿಯರನ್ನು ಪ್ರೀತಿಸಿ ಗೌರವಿಸಿದರೆ ಅದು ನಿಮಗೆ ದುಪಟ್ಟಾಗಿ ವಾಪಾಸು ಬರುತ್ತದೆ, ಮೊದಲು ಮಾನವರಾಗಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಹಿರಿಯ ಲೇಖಕ ಜಿ. ಟಿ. ರಾಘವೇಂದ್ರ ಮಾತನಾಡಿ, ಬಾಹ್ಯ ಶುದ್ಧಿಯೊಂದಿಗೆ ಆಂತರಿಕ ಶುದ್ಧಿ ಮುಖ್ಯ ಎಂದು ಹೇಳಿದರು. ಸನ್ಮಾನಿತರಾದ ಡಾ.ಎಂ. ಜಿ. ಪಾಟ್ಕರ್ ಮಾತನಾಡಿ, ಹಿರಿಯರಿಗೆ ಇಂದು ಸಂದ ಗೌರವು ಆದಶ೯ಪ್ರಾಯವಾಗಿದೆ ಎಂದು ಶ್ಲಾಘಿಸಿದರು.

ರೋಟರಿ ಮಿಸ್ಟಿ ಹಿಲ್ಸ್ ನಿದೇ೯ಶಕಿ ರಶ್ಮಿದೀಪ ಕಾಯ೯ಕ್ರಮದ ಮಹತ್ವ ತಿಳಿಸಿ, ಹಿರಿಯರಿಂದ ಜೀವನ ಪಾಠವನ್ನು ಕಲಿಯುವುದರ ಮೂಲಕ ಅವರಿಗೆ ಗೌರವವನ್ನು ಸಲ್ಲಿಸಬೇಕು. ಎಳೆಯ ಕರು ಎತ್ತಾಗುತ್ತದೆ ಎಂಬ ನಾಣ್ಣುಡಿಯಂತೆ ವಿದ್ಯಾರ್ಥಿಗಳು ಹಿರಿಯರನ್ನು ಗೌರವಿಸಿದರೆ ಮುಂದಿನ ಅವರ ಜೀವನದಲ್ಲಿ ಅವರು ಬೇರೆಯವರಿಂದ ಗೌರವವನ್ನು ಪಡೆಯುತ್ತಾರೆ. ಎಂದರು.
ಕಾಲೇಜಿನ ಹಿರಿಯ ಉಪನ್ಯಾಸಕ ಚಿದಾನಂದ ಅಧ್ಯಕ್ಷತೆ ವಹಿಸಿದ್ದ ಕಾಯ೯ಕ್ರಮದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ನ ಮಾಜಿ ಅಧ್ಯಕ್ಷೆ ಅನಿತಾಪೂವಯ್ಯ, ನಿದೇ೯ಶಕ ಶಂಕರ್ ಪೂಜಾರಿ, ಸುಪ್ರಿಯ ರವಿಶಂಕರ್, ಸುಮನಾ ಶ್ರೀಹರಿ, ಡಾ.ಜಯಲಕ್ಷ್ಮಿ ಪಾಟ್ಕರ್, ಸಲೀಲ ಪಾಟ್ಕರ್ ಪಾಲ್ಗೊಂಡಿದ್ದರು. ಶಿವಪ್ರಸಾದ್ ಸ್ವಾಗತಿಸಿದ ಕಾಯ೯ಕ್ರಮದಲ್ಲಿ ಪೂಣಿ೯ಮಾ ವಂದಿಸಿದರು.







