Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಅರೆಭಾಷೆಗೆ ಸಾಂಸ್ಕೃತಿಕ ನೆಲೆಗಟ್ಟು, ವ್ಯಾಕರಣದ ಶಿಸ್ತು ರೂಢಿಸಿದವರು ಕೋಡಿ ಕುಶಾಲಪ್ಪ ಗೌಡರು : ಸದಾನಂದ ಮಾವಜಿ*
  • *ಅಂತರ ಶಾಲಾ ಶಟಲ್ ಬ್ಯಾಡ್ಮಿಂಟನ್: ಶ್ರೀ ರಾಜರಾಜೇಶ್ವರಿ ಶಾಲೆ ವಿದ್ಯಾರ್ಥಿಗಳ ಸಾಧನೆ*
  • ಕೊಡಗಿನಲ್ಲಿ ಕರವೇ ಸ್ವಾಭಿಮಾನಿ ಸೇನೆಗೆ ನೂತನ ಸದಸ್ಯರ ಸೇರ್ಪಡೆ
  • *ತೀವ್ರಗೊಳಿಸಿದ ಐಇಸಿ ಅಭಿಯಾನ : ಮ್ಯಾರಥಾನ್ ಮೂಲಕ ಎಚ್‌ಐವಿ/ಏಡ್ಸ್ ಜಾಗೃತಿ*
  • *ಮಡಿಕೇರಿಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆ : ಸ್ವಾವಲಂಬಿ ಮಹಿಳಾ ಫಲಾನುಭವಿಗಳ ಗುರುತಿಸಿ ಸನ್ಮಾನಕ್ಕೆ ಕ್ರಮ*
  • *ಶಿಸ್ತುಬದ್ಧ ಶಿಕ್ಷಣದಿಂದಲೇ ಸಮಾಜದ ಯಶಸ್ಸು, ದೇಶದ ಪ್ರಗತಿ : ಶಾಸಕ ಎ.ಎಸ್.ಪೊನ್ನಣ್ಣ*
  • *ಫೀ.ಮಾ. ಕಾರ್ಯಪ್ಪ ಕಾಲೇಜಿನಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ: ಶಿಸ್ತುಬದ್ಧ ಜೀವನವೇ ಸಾಧನೆಯ ದಾರಿದೀಪ: ಕರ್ನಲ್ ಸಂಜೀವ್ ಕುಮಾರ್*
  • *ಕೊಡಗು ವಿದ್ಯಾಲಯದಲ್ಲಿ ಬ್ರಹ್ಮಗಿರಿ ಸಹೋದಯ ಸಿಬಿಎಸ್ಇ ಶಾಲೆಗಳ ಸಾಂಸ್ಕೃತಿಕ ಸ್ಪರ್ಧೆ*
  • *ಮಡಿಕೇರಿ ನಗರಸಭೆ : ತ್ಯಾಜ್ಯ ನಿರ್ವಹಣೆಗೆ ವೈಜ್ಞಾನಿಕ ವಿಧಾನಕ್ಕೆ ಒತ್ತು : ಶಾಸಕ ಮಂತರ್ ಗೌಡ*
  • *ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕುಂದುಕೊರತೆ ಸಭೆ : ಪರಿಶಿಷ್ಟರ ಸಮಸ್ಯೆಗಳನ್ನು ಕಾಲಮಿತಿಯಲ್ಲಿ ಪರಿಹರಿಸುವುದು ಆದ್ಯ ಕೆಲಸವಾಗಿದೆ : ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಮಾನವ ವನ್ಯಜೀವಿ ಸಂಘರ್ಷ : ಸಾರ್ವಜನಿಕರ ಜತೆ ಸಮಾಲೋಚಿಸಿದ ಅರಣ್ಯ ಸಚಿವರು*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಮಾನವ ವನ್ಯಜೀವಿ ಸಂಘರ್ಷ : ಸಾರ್ವಜನಿಕರ ಜತೆ ಸಮಾಲೋಚಿಸಿದ ಅರಣ್ಯ ಸಚಿವರು*

ಆಗಷ್ಟ್ 28, 20263 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಆ.28 NEWS DESK : ಮಾನವ- ವನ್ಯಜೀವಿ ಸಂಘರ್ಷ ಹಾಗೂ ಅರಣ್ಯ ವಿಷಯಗಳ ಕುರಿತು ಸಾರ್ವಜನಿಕರ ಜತೆ ಸಮಾಲೋಚನಾ ಸಭೆಯು ಅರಣ್ಯ ಸಚಿವರಾದ ರಾಮಲಿಂಗ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಗರದ ಜಿಲ್ಲಾಧಿಕಾರಿ ಅವರ ಕಚೇರಿಯ ವಿಡಿಯೋ ಸಂವಾದ ಕೊಠಡಿಯಲ್ಲಿ ನಡೆಯಿತು. ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ, ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುಜಾ ಕುಶಾಲಪ್ಪ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯರಾದ ವೀಣಾ ಅಚ್ಚಯ್ಯ, ಪ್ರಮುಖರಾದ ಎಂ.ಲಕ್ಷ್ಮಣ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣ ಅಧಿಕಾರಿ ಮೀನಾಕ್ಷಿ‌ ನೇಗಿ, ಪಿಸಿಸಿಎಫ್ (ವನ್ಯಜೀವಿ ವಿಭಾಗ) ಪುಷ್ಕರ್, ಕೊಡಗು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್, ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್ ಇತರರು ಇದ್ದರು. ಅರಣ್ಯ ಸಚಿವರಾದ ರಾಮಲಿಂಗ ರೆಡ್ಡಿ ಅವರು ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಮಾನವ ಮತ್ತು ವನ್ಯ ಪ್ರಾಣಿಗಳ ಸಂಘರ್ಷ ಬಗ್ಗೆ ಇತ್ತೀಚೆಗೆ ನಡೆದ ಅಧಿವೇಶನದಲ್ಲಿ ಶಾಸಕದ್ವಯರು ಸುದೀರ್ಘವಾಗಿ ವಿಚಾರ ಮಂಡಿಸಿದ್ದು, ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು. ಆನೆ ಕಾರಿಡಾರ್ ಹಾಗೂ ರೈಲ್ವೆ ಬ್ಯಾರಿಕೇಡ್ ಜತೆಗೆ ಟ್ರಂಚ್ ನಿರ್ಮಾಣ ಮಾಡಿ ಕಾಡಾನೆಗಳು ನಾಡಿಗೆ ಬಾರದಂತೆ ಎಚ್ಚರ ವಹಿಸುವಲ್ಲಿ ಮುಂದಾಗಲಾಗಿದೆ ಎಂದು ಸಚಿವರು ತಿಳಿಸಿದರು. ಅರಣ್ಯ ಪ್ರದೇಶದಲ್ಲಿ ಹೆಚ್ಚಿನ ಆಹಾರ ಗಿಡ-ಮರಗಳನ್ನು ಬೆಳೆಸುವುದು, ಕೆರೆ-ಕಟ್ಟೆ ನಿರ್ಮಿಸಿ ಕುಡಿಯಲು ನೀರು ಒದಗಿಸುವುದು ಸೇರಿದಂತೆ ಹಲವು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಸಚಿವರು ಭರವಸೆ ನೀಡಿದರು. ಕಾಡಿನಿಂದ ಆನೆಗಳು ಬಾರದಂತೆ ನೋಡಿಕೊಳ್ಳುವುದು ಅತ್ಯಗತ್ಯ, ಆ ದಿಸೆಯಲ್ಲಿ 28 ಆರ್ ಆರ್ ಟಿ ಕಾರ್ಯಪಡೆಗಳನ್ನು ನಿಯೋಜಿಸಲಾಗಿದೆ ಎಂದರು. ಕಾಡಾನೆ ಸೇರಿದಂತೆ ವನ್ಯ ಪ್ರಾಣಿಗಳ ನಿಯಂತ್ರಣಕ್ಕೆ ಇನ್ನೂ ಹೆಚ್ಚಿನ‌ ಕಾಳಜಿ ವಹಿಸಲಾಗುವುದು. ಆ ನಿಟ್ಟಿನಲ್ಲಿ ಪಶ್ಚಿಮ ಘಟ್ಟ ಪ್ರದೇಶದ ಸಚಿವರು, ಶಾಸಕರು ಸೇರಿದಂತೆ ಎಲ್ಲರ ಜತೆ ಇದೇ ಆಗಸ್ಟ್ 31 ರಂದು ಸಭೆ ನಡೆಸಿ ಚರ್ಚಿಸಲಾಗುವುದು ಎಂದರು. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿನ ಹುಲಿಗಳು ನಾಡಿಗೆ ಬಾರದಂತೆ ಇನ್ನಷ್ಟು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ನುಡಿದರು. ಕಸ್ತೂರಿ ರಂಗನ್ ವರದಿ ಸಂಬಂಧಿಸಿದಂತೆ ಈಗಾಗಲೇ ಅಧಿವೇಶನದಲ್ಲಿ ಶಾಸಕದ್ವರು ಸುಧೀರ್ಘವಾಗಿ ವಿಷಯ ಮಂಡಿಸಿದ್ದು, ಈ ವರದಿಯನ್ನು ತಿರಸ್ಕರಿಸಲು ಸರ್ಕಾರ ನಿರ್ಧರಿಸಿದೆ ಎಂದು ಸಚಿವರು ಹೇಳಿದರು.
ಸಿ ಮತ್ತು ಡಿ ಭೂಮಿ ಸಮಸ್ಯೆ ಬಗೆಹರಿಸಲು ಮುಂದಾಗಲಾಗಿದೆ. ಹಾರಂಗಿ ಜಲಾನಯನ ಪ್ರದೇಶದ ಯಡವನಾಡು, ಅತ್ತೂರು ಗ್ರಾಮಗಳನ್ನು ಈಗಾಗಲೇ ಕಂದಾಯ ಗ್ರಾಮವೆಂದು ಪ್ರಕಟಿಸಲಾಗಿದ್ದು, ಆರ್ ಟಿಸಿ ನೀಡಬೇಕಿದೆ. ಈ ಬಗ್ಗೆ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಚರ್ಚಿಸಿದ್ದು, ಕಂದಾಯ ಸಚಿವರ ಜತೆ ಸಮಾಲೋಚನೆ ನಡೆಸಿ, ಸಮಸ್ಯೆ ಪರಿಹರಿಸಲಾಗುವುದು ಎಂದು ಸಚಿವರು ನುಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಕಸ್ತೂರಿ ರಂಗನ್ ವರದಿಯನ್ನು ಸಂಪೂರ್ಣವಾಗಿ ತೀರಸ್ಕರಿಸಲು ಸರ್ಕಾರ ನಿರ್ಧರಿಸಿದೆ ಎಂದರು. ಕಸ್ತೂರಿ ರಂಗನ್ ವರದಿಯನ್ನು ಯಥಾವತ್ತಾಗಿ ಒಪ್ಪಲು ಸಾಧ್ಯವಿಲ್ಲ, ಈ ಬಗ್ಗೆ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ ಎಂದು ಎ.ಎಸ್.ಪೊನ್ನಣ್ಣ ಅವರು ತಿಳಿಸಿದರು. ರಾಜ್ಯಗಳ ವಿಶ್ವಾಸ ಪಡೆದು ವರದಿಯನ್ನು ಅನುಷ್ಠಾನ ಮಾಡಬೇಕು. ಅದನ್ನು ಬಿಟ್ಟು ಏಕಾಏಕಿ ಜಾರಿಗೊಳಿಸಲು ಬಿಡುವುದಿಲ್ಲ ಎಂದು ಎ.ಎಸ್.ಪೊನ್ನಣ್ಣ ಅವರು ಪ್ರತಿಪಾದಿಸಿದರು. ಕಸ್ತೂರಿ ರಂಗನ್ ವರದಿ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಅವರು ವಿಶೇಷ ಅಧಿವೇಶನ ಕರೆಯಲು ನಿರ್ಧರಿಸಿದ್ದು, ಈ ಸಂಬಂಧ ಸುದೀರ್ಘವಾಗಿ ಚರ್ಚಿಸಿ ವರದಿಯನ್ನು ಕೇಂದ್ರಕ್ಕೆ ಕಳುಹಿಸಲಾಗುವುದು, ಈಗಿನ ವರದಿ ಒಪ್ಪಲು ಬರುವುದಿಲ್ಲ ಎಂದು ಎ.ಎಸ್.ಪೊನ್ನಣ್ಣ ಅವರು ಕಡ್ಡಿ ಮುರಿದಂತೆ ಹೇಳಿದರು. ಶಾಸಕರಾದ ಡಾ.ಮಂತರ್ ಗೌಡ ಅವರು ಮಾತನಾಡಿ ಕಸ್ತೂರಿ ರಂಗನ್ ವರದಿ ಬಗ್ಗೆ ಜಿಲ್ಲೆಯಲ್ಲಿ ಪಕ್ಷಾತೀತವಾಗಿ ಚರ್ಚಿಸಲು ಸಿದ್ದ, ಪಕ್ಷ ಹೊರತುಪಡಿಸಿ, ರೈತರ ಹಿತಾಸಕ್ತಿ ಕಾಪಾಡುವುದು ಅತಿ ಮುಖ್ಯವಾಗಿದೆ ಎಂದರು. ಸಾರ್ವಜನಿಕರ ಅಹವಾಲು ಸಂದರ್ಭದಲ್ಲಿ ಹಾರಂಗಿ ಜಲಾಶಯ ಪ್ರದೇಶದ ಯಡವನಾಡು ಮತ್ತು ಅತ್ತೂರು ಗ್ರಾಮಗಳ ಬಗ್ಗೆ ಡಾ.ಮಂತರ್ ಗೌಡ ಅವರು ಸಚಿವರ ಗಮನ ಸೆಳೆದರು. ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ ಅವರು ಮಾತನಾಡಿ ಜಿಲ್ಲೆಯ ಎಲ್ಲಾ ರೈತರು, ಕೃಷಿಕರಿಗೆ ಒಳಿತು ಮಾಡುವುದು ಅತಿ ಮುಖ್ಯವಾಗಿದೆ ಎಂದರು. ಕೊಡಗು ಜಿಲ್ಲೆಯಲ್ಲಿ ಪ್ರತಿನಿತ್ಯ ವನ್ಯ ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಇವುಗಳನ್ನು ತಡೆಯಬೇಕಿದೆ. ಆ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದು ಸುಜಾ ಕುಶಾಲಪ್ಪ ಅವರು ತಿಳಿಸಿದರು. ವಿಧಾನಸಭೆಯ ಮಾಜಿ ಸಭಾಧ್ಯಕ್ಷರಾದ ಕೆ.ಜಿ.ಬೋಪಯ್ಯ ಅವರು ಮಾತನಾಡಿ ವನ್ಯ ಪ್ರಾಣಿಗಳ ಸಂಘರ್ಷ ಇಂದು-ನಿನ್ನೆಯದಲ್ಲ, ಕಾಡಾನೆಗಳ ಸಂಖ್ಯೆ ಹೆಚ್ಚಾಗಿದ್ದು, ಆಹಾರ ಸಿಗುತ್ತಿಲ್ಲ, ಕುಡಿಯಲು ನೀರು ಇಲ್ಲ, ಆದ್ದರಿಂದ ಈ ಬಗ್ಗೆ ಗಮನ ಹರಿಸಬೇಕಿದೆ ಎಂದು ಸಲಹೆ ನೀಡಿದರು. ಅರಣ್ಯ ಪ್ರದೇಶದಲ್ಲಿ ತೇಗ, ಅಕೇಶಿಯ ಹಾಗೂ ನೀಲಗಿರಿ ಮರಗಳನ್ನು ಬೆಳೆಸಬಾರದು, ಕಾಡಾನೆಗೆ ಬೇಕಿರುವ ಆಹಾರ ಗಿಡ ಮರ ಬೆಳೆಸಬೇಕು ಎಂದರು. ಕಾಡಾನೆ ಓಡಿಸುವುದರಿಂದ ಒಂದು ತೋಟದಿಂದ ಮತ್ತೊಂದು ತೋಟಕ್ಕೆ ತೆರಳುತ್ತವೆ, ಆದ್ದರಿಂದ ಕಾಡಾನೆಗಳನ್ನು ಹಿಡಿದು, ಸ್ಥಳಾಂತರ ಮಾಡಬೇಕು, ರೈಲ್ವೆ ಬ್ಯಾರಿಕೇಡ್ ಅಳವಡಿಸಬೇಕು ಹಾಗೂ ಆನೆ ಕಂದಕ ನಿರ್ಮಾಣ ಮಾಡಬೇಕು ಎಂದು ಕೆ.ಜಿ.ಬೋಪಯ್ಯ ಅವರು ಸಲಹೆ ನೀಡಿದರು. ಜಿ.ಪಂ.ಮಾಜಿ ಅಧ್ಯಕ್ಷರಾದ ಶಾಂತೆಯಂಡ ರವಿ ಕುಶಾಲಪ್ಪ ಅವರು ಹೆಚ್ಚಿನ ಪರಿಹಾರ ನೀಡುವಂತಾಗಬೇಕು ಎಂದು ಮನವಿ ಮಾಡಿದರು. ಪ್ರಮುಖರಾದ ಸುವಿನ್ ಗಣಪತಿ, ಮನು ಸೋಮಯ್ಯ, ಸಿ.ಜಿ.ಕುಶಾಲಪ್ಪ, ಸಿ.ಪಿ.ಮುತ್ತಣ್ಣ, ಭರತ್, ಕುಡಿಯರ ಮುತ್ತಪ್ಪ. ನಂದಾ ಬೆಳ್ಯಯಪ್ಪ, ಕೆ.ಪಿ.ಚಂದ್ರಕಲಾ, ಸುರೇಶ್ ಚಕ್ರವರ್ತಿ, ವಿಶ್ವ, ರವಿ ತಮ್ಮಯ್ಯ, ಜಮ್ಮಮಲೆ ತಂಡದವರು ಇತರರು ಅರಣ್ಯ ಸಚಿವರಿಗೆ ಹಲವು ಮಾಹಿತಿ ನೀಡಿದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಅರೆಭಾಷೆಗೆ ಸಾಂಸ್ಕೃತಿಕ ನೆಲೆಗಟ್ಟು, ವ್ಯಾಕರಣದ ಶಿಸ್ತು ರೂಢಿಸಿದವರು ಕೋಡಿ ಕುಶಾಲಪ್ಪ ಗೌಡರು : ಸದಾನಂದ ಮಾವಜಿ*

ಆಗಷ್ಟ್ 29, 2026

*ಅಂತರ ಶಾಲಾ ಶಟಲ್ ಬ್ಯಾಡ್ಮಿಂಟನ್: ಶ್ರೀ ರಾಜರಾಜೇಶ್ವರಿ ಶಾಲೆ ವಿದ್ಯಾರ್ಥಿಗಳ ಸಾಧನೆ*

ಆಗಷ್ಟ್ 29, 2026

ಕೊಡಗಿನಲ್ಲಿ ಕರವೇ ಸ್ವಾಭಿಮಾನಿ ಸೇನೆಗೆ ನೂತನ ಸದಸ್ಯರ ಸೇರ್ಪಡೆ

ಆಗಷ್ಟ್ 29, 2026

*ಅಂತರ ಶಾಲಾ ಶಟಲ್ ಬ್ಯಾಡ್ಮಿಂಟನ್: ಶ್ರೀ ರಾಜರಾಜೇಶ್ವರಿ ಶಾಲೆ ವಿದ್ಯಾರ್ಥಿಗಳ ಸಾಧನೆ*

ಆಗಷ್ಟ್ 29, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ಆ.29: ಮಡಿಕೇರಿ ತಾಲೂಕು ಮಟ್ಟದ ಅಂತರ ಶಾಲಾ ಅಂಡರ್–14 ಬಾಲಕರ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಚೇರಂಬಾಣೆಯ…

ಕೊಡಗಿನಲ್ಲಿ ಕರವೇ ಸ್ವಾಭಿಮಾನಿ ಸೇನೆಗೆ ನೂತನ ಸದಸ್ಯರ ಸೇರ್ಪಡೆ

ಆಗಷ್ಟ್ 29, 2026

*ತೀವ್ರಗೊಳಿಸಿದ ಐಇಸಿ ಅಭಿಯಾನ : ಮ್ಯಾರಥಾನ್ ಮೂಲಕ ಎಚ್‌ಐವಿ/ಏಡ್ಸ್ ಜಾಗೃತಿ*

ಆಗಷ್ಟ್ 29, 2026

*ಮಡಿಕೇರಿಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆ : ಸ್ವಾವಲಂಬಿ ಮಹಿಳಾ ಫಲಾನುಭವಿಗಳ ಗುರುತಿಸಿ ಸನ್ಮಾನಕ್ಕೆ ಕ್ರಮ*

ಆಗಷ್ಟ್ 29, 2026

*ಶಿಸ್ತುಬದ್ಧ ಶಿಕ್ಷಣದಿಂದಲೇ ಸಮಾಜದ ಯಶಸ್ಸು, ದೇಶದ ಪ್ರಗತಿ : ಶಾಸಕ ಎ.ಎಸ್.ಪೊನ್ನಣ್ಣ*

ಆಗಷ್ಟ್ 29, 2026

*ಫೀ.ಮಾ. ಕಾರ್ಯಪ್ಪ ಕಾಲೇಜಿನಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ: ಶಿಸ್ತುಬದ್ಧ ಜೀವನವೇ ಸಾಧನೆಯ ದಾರಿದೀಪ: ಕರ್ನಲ್ ಸಂಜೀವ್ ಕುಮಾರ್*

ಆಗಷ್ಟ್ 29, 2026

*ಕೊಡಗು ವಿದ್ಯಾಲಯದಲ್ಲಿ ಬ್ರಹ್ಮಗಿರಿ ಸಹೋದಯ ಸಿಬಿಎಸ್ಇ ಶಾಲೆಗಳ ಸಾಂಸ್ಕೃತಿಕ ಸ್ಪರ್ಧೆ*

ಆಗಷ್ಟ್ 29, 2026

*ಮಡಿಕೇರಿ ನಗರಸಭೆ : ತ್ಯಾಜ್ಯ ನಿರ್ವಹಣೆಗೆ ವೈಜ್ಞಾನಿಕ ವಿಧಾನಕ್ಕೆ ಒತ್ತು : ಶಾಸಕ ಮಂತರ್ ಗೌಡ*

ಆಗಷ್ಟ್ 29, 2026

*ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕುಂದುಕೊರತೆ ಸಭೆ : ಪರಿಶಿಷ್ಟರ ಸಮಸ್ಯೆಗಳನ್ನು ಕಾಲಮಿತಿಯಲ್ಲಿ ಪರಿಹರಿಸುವುದು ಆದ್ಯ ಕೆಲಸವಾಗಿದೆ : ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ*

ಆಗಷ್ಟ್ 29, 2026

*ಕೊಡಗು ವಿದ್ಯಾಲಯದಲ್ಲಿ  ರಕ್ಷಾ ಬಂಧನ*

ಆಗಷ್ಟ್ 29, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.