
ವಿರಾಜಪೇಟೆ ಸೆ.12 NEWS DESK : ತಾಲೂಕಿನ ವಿರಾಜಪೇಟೆ ವಲಯದ ಕಡಂಗ ಕಾರ್ಯಕ್ಷೇತ್ರ ವ್ಯಾಪ್ತಿಯ ಬೆಳ್ಳುಮಾಡು ಗ್ರಾಮದ ಶ್ರೀ ಮಾದೇರಪ್ಪ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ರೂ.3 ಲಕ್ಷ ಅನುದಾನ ಮಂಜೂರು ಮಾಡಿದ್ದಾರೆ. ಅನುದಾನದ ಮಂಜೂರಾತಿ ಪತ್ರದೊಂದಿಗೆ ಡಿ.ಡಿ.ಯನ್ನು ತಾಲೂಕು ಯೋಜನಾಧಿಕಾರಿ ಹರೀಶ್ ಪಿ. ಅವರು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಸದಸ್ಯರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ವಿರಾಜಪೇಟೆ ವಲಯದ ಮೇಲ್ವಿಚಾರಕ ಶಿವಕುಮಾರ್ ಬಿ., ಸೇವಾಪ್ರತಿನಿಧಿ ತೇಜಸ್ವಿನಿ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.










