ಮಡಿಕೇರಿ, NEWS DESK ಸೆ.14: ಪವಿತ್ರ ಈದ್ ಮಿಲಾದ್ ಅಂಗವಾಗಿ UmmathOne Kodagu Charitable Trust (R.) ವತಿಯಿಂದ “ಮಾನವ ಕುಲಕ್ಕೆ ಪ್ರವಾದಿ ಮುಹಮ್ಮದ್ (ಸ) ಅವರ ಕೊಡುಗೆಗಳು” ಎಂಬ ವಿಷಯದ ಕುರಿತು ಆಯೋಜಿಸಲಾಗಿದ್ದ ಪ್ರಬಂಧ ಸ್ಪರ್ಧೆಯ ಫಲಿತಾಂಶವನ್ನು ಪ್ರಕಟಿಸಲಾಗಿದೆ.
ಸ್ಪರ್ಧೆಯಲ್ಲಿ 250ಕ್ಕೂ ಹೆಚ್ಚು ಮಂದಿ ಉತ್ಸಾಹದಿಂದ ಭಾಗವಹಿಸಿದ್ದು, ಪ್ರವಾದಿ ಮುಹಮ್ಮದ್ (ಸ) ಅವರ ಜೀವನ ಮೌಲ್ಯಗಳು, ಕರುಣೆ ಹಾಗೂ ಮಾನವಕುಲಕ್ಕೆ ನೀಡಿದ ಶಾಶ್ವತ ಸಂದೇಶಗಳನ್ನು ಪ್ರತಿಬಿಂಬಿಸುವ ಪ್ರಬಂಧಗಳನ್ನು ಸಲ್ಲಿಸಿದ್ದರು. ತೀರ್ಪುಗಾರರ ಸಮಿತಿಯ ಮೌಲ್ಯಮಾಪನದ ಬಳಿಕ ವಿಜೇತರನ್ನು ಆಯ್ಕೆ ಮಾಡಲಾಗಿದೆ.
ವಿಜೇತರು:
ಪ್ರಥಮ ಬಹುಮಾನ:
ಮೈಮೂನಾ ಟಿ.ಎ., ಕಡಂಗ ಮರೂರು ಗ್ರಾಮ.
ದ್ವಿತೀಯ ಬಹುಮಾನ:
ಅಖೀಲಾ ಪರ್ವೀನ್, ಸಂಪಿಗೆಕಟ್ಟೆ ರಸ್ತೆ, ಮಡಿಕೇರಿ.
ತೃತೀಯ ಬಹುಮಾನ:
1. ಚಂದ್ರ ಶೆಟ್ಟಿ ಬಿ.ಟಿ., ಬಾಪೂಜಿ ಬಡಾವಣೆ, ಕುಶಾಲನಗರ
2. ಆಯಿಷಾ ಎಸ್.ಎಸ್., ಕರ್ಕಳ್ಳಿ, ಸೋಮವಾರಪೇಟೆ.
ಸಮಾಧಾನಕರ ಬಹುಮಾನ:
1. ಸಿಯಾಬುದ್ದೀನ್ ಕೆ.ಹೆಚ್., ಹಾಕತ್ತೂರು
2. ಶಶಿಕಲಾ ಕೆ., ಕಗ್ಗೋಡ್ಲು ಗ್ರಾಮ
3. ಫಾತಿಮತ್ ರಂಸೀನಾ, ನೆಲ್ಲಿಹುದ್ಕೇರಿ.
ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಸ್ಪರ್ಧಾಳುಗಳಿಗೆ ಟ್ರಸ್ಟ್ ಕೃತಜ್ಞತೆ ಸಲ್ಲಿಸಿದ್ದು, ವಿಜೇತರಿಗೆ ಅಭಿನಂದನೆಗಳನ್ನು ತಿಳಿಸಿದೆ. ಬಹುಮಾನ ವಿತರಣಾ ಸಮಾರಂಭದ ದಿನಾಂಕ ಮತ್ತು ಸ್ಥಳವನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಪಿ.ಕೆ. ಖಾಲಿದ್ ತಿಳಿಸಿದ್ದಾರೆ.







