Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ರೂ.59.53 ಲಕ್ಷ ನಿವ್ವಳ ಲಾಭ*
  • *ಡಾ.ರೇಷ್ಮಾಗೆ ಪಿಎಚ್‌ ಡಿ ಪದವಿ*
  • *ಸೆ.20ರಿಂದ ದುಬಾರೆ ಸಾಕಾನೆ ಶಿಬಿರ ಪುನರಾರಂಭ : ನಿಯಮ ಪಾಲನೆ ಖಡ್ಡಾಯ*
  • *ಸುಂಟಿಕೊಪ್ಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಜನ್ಮದಿನ ಆಚರಣೆ*
  • *ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಅಭಿಯಾನ : ಸೆ.19 ಮತ್ತು 20 ರಂದು ವಿಶೇಷ ಕಾರ್ಯಕ್ರಮ*
  • *ತೊರೆನೂರಿನಲ್ಲಿ ವಿಶ್ವಕರ್ಮ ಜಯಂತೋತ್ಸವ : ಮೆರವಣಿಗೆ*
  • *ಕರಾವಳಿ ಅಭಿವೃದ್ಧಿಗೆ ರಾಜ್ಯ ಸರ್ಕಾರ 32,612 ಕೋಟಿ ರೂ ಅನುಮೋದನೆ : ತುಳು ಎರಡನೇ ಅಧಿಕೃತ ಭಾಷೆ : ಸಚಿವ ಸಂಪುಟ ನಿರ್ಣಯ*
  • *ಮಡಿಕೇರಿಯಲ್ಲಿ ಹಿರಿಯ ನಾಗರಿಕರಿಗೆ ಆಟೋಟ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ : ಹಿರಿಯ ನಾಗರಿಕರನ್ನು ಗೌರವ ಮತ್ತು ಪ್ರೀತಿಯಿಂದ ನೋಡಿಕೊಳ್ಳಿ: ಶುಭ*
  • *2131ನೇ ಮಧ್ಯವರ್ಜನ ಶಿಬಿರದ ಆಮಂತ್ರಣ ಪತ್ರಿಕೆ ಬಿಡುಗಡೆ*
  • *ಸೆ. 20ರಂದು ಸೋಮವಾರಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ವಿಕಸಿತ ಭಾರತ್ ರಸಪ್ರಶ್ನೆ: ಯುವ ಸಮೂಹ ತೊಡಗಿಸಿಕೊಳ್ಳಲು ಕರೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ವಿಕಸಿತ ಭಾರತ್ ರಸಪ್ರಶ್ನೆ: ಯುವ ಸಮೂಹ ತೊಡಗಿಸಿಕೊಳ್ಳಲು ಕರೆ*

ಸೆಪ್ಟೆಂಬರ್ 18, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ, NEWS DESK ಸೆ. 18: ಭಾರತ ಸರ್ಕಾರದ ರಾಷ್ಟ್ರೀಯ ಯುವ ಜನೋತ್ಸವವಾದ **“ವಿಕಸಿತ ಭಾರತ್ ಯಂಗ್ ಲೀಡರ್ಸ್ ಡೈಲಾಗ್” (VBYLD)**ನ ಆನ್‌ಲೈನ್ ಕಾರ್ಯಕ್ರಮದಡಿ “ವಿಕಸಿತ ಭಾರತ್ ರಸಪ್ರಶ್ನೆ” ಆರಂಭಗೊಂಡಿದ್ದು, ಯುವ ಸಮೂಹ ಇದರಲ್ಲಿ ತೊಡಗಿಸಿಕೊಳ್ಳುವಂತೆ ಕೊಡಗು ಜಿಲ್ಲಾ ಮೈ ಭಾರತ್‌ನ ಜಿಲ್ಲಾ ಯುವಜನ ಅಧಿಕಾರಿ ಪಿ. ಅಖಿಲ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರವ್ಯಾಪಿ 15ರಿಂದ 29 ವರ್ಷದೊಳಗಿನ ಯುವ ಸಮೂಹವನ್ನು ಒಗ್ಗೂಡಿಸಿ, ಅವರ ಚಿಂತನೆಗಳನ್ನು ಅರಿತು, ಪ್ರತಿಭೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿಕಸಿತ ಭಾರತ್ ಯಂಗ್ ಲೀಡರ್ಸ್ ಡೈಲಾಗ್ ಯುವ ಜನೋತ್ಸವವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ ಎಂದರು.

ವಿಕಸಿತ ಭಾರತ್ ಯಂಗ್ ಲೀಡರ್ಸ್ ಡೈಲಾಗ್‌ನಲ್ಲಿ ಪ್ರಮುಖವಾಗಿ ವಿಕಸಿತ ಭಾರತ್ ಚಾಲೆಂಜ್ ಟ್ರ್ಯಾಕ್, ಸಾಂಸ್ಕೃತಿಕ ಟ್ರ್ಯಾಕ್, ಡಿಸೈನ್ ಫಾರ್ ಭಾರತ್, ಹ್ಯಾಕ್ ಫಾರ್ ಸೋಶಿಯಲ್ ಕಾಸ್, ಯುವ ಉದ್ಯಮಿಗಳ ಸವಾಲು ಹಾಗೂ ಯುವ ಸಂಸತ್ ಎಂಬ ಆರು ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಈ ಮೂಲಕ ಪ್ರತಿಭಾವಂತ ಯುವ ಸಮೂಹವನ್ನು ಗುರುತಿಸಿ, ಪ್ರಧಾನಮಂತ್ರಿಗಳೊಂದಿಗೆ ನೇರ ಸಂವಹನಕ್ಕೆ ಅವಕಾಶ ಒದಗಿಸಲಾಗುತ್ತದೆ ಎಂದು ತಿಳಿಸಿದರು.

ವಿಕಸಿತ ಭಾರತ್ ಚಾಲೆಂಜ್ ಟ್ರ್ಯಾಕ್ನಡಿ ಪ್ರಾದೇಶಿಕ ಅಭಿವೃದ್ಧಿ ವಿಷಯಗಳನ್ನು ಆಧರಿಸಿದ ಆನ್‌ಲೈನ್ ರಸಪ್ರಶ್ನೆ ಕಾರ್ಯಕ್ರಮ ಕಳೆದ ಆಗಸ್ಟ್ 17ರಿಂದ ಆರಂಭವಾಗಿದ್ದು, ಸೆಪ್ಟೆಂಬರ್ 30ರವರೆಗೆ ನಡೆಯಲಿದೆ. ಇದರಲ್ಲಿ ಆಸಕ್ತ, ನಿಗದಿತ ವಯೋಮಿತಿಯ ಯುವಕರು mybharat.gov.in ಮೂಲಕ ನೋಂದಣಿ ಮಾಡಿಕೊಂಡು ರಸಪ್ರಶ್ನೆಯಲ್ಲಿ ಭಾಗವಹಿಸಬಹುದು. 10 ನಿಮಿಷಗಳ ಅವಧಿಯಲ್ಲಿ 20 ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ ಈ ಕಾರ್ಯಕ್ರಮದಡಿ 11 ಸಾವಿರ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.

ಈ ಸ್ಪರ್ಧೆಯಲ್ಲಿ ಭಾಗವಹಿಸುವ ಒಟ್ಟು ಸ್ಪರ್ಧಿಗಳ ಪೈಕಿ ಶೇ. 10 ಮಂದಿಯನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಸ್ಪರ್ಧಿಗಳಿಗೆ ಮುಂದಿನ ಅಕ್ಟೋಬರ್ 5ರಿಂದ 19ರವರೆಗೆ ಆನ್‌ಲೈನ್ ಪ್ರಬಂಧ ಸ್ಪರ್ಧೆ ನಡೆಯಲಿದೆ. ಇದರ ಮೂಲಕ ಪ್ರತಿ ಜಿಲ್ಲೆಯಿಂದ ಆಯ್ಕೆಯಾಗುವ 50 ಸ್ಪರ್ಧಿಗಳಿಗೆ ನವೆಂಬರ್ 10ರಿಂದ 16ರವರೆಗೆ ನಿಗದಿತ ವಿಷಯದಡಿ ರಚಿಸುವ ಪ್ರಬಂಧಗಳ ಪಿಪಿಟಿ ಪ್ರಸ್ತುತಪಡಿಸುವ ಸ್ಪರ್ಧೆಯನ್ನು ಜಿಲ್ಲಾ ಮಟ್ಟದಲ್ಲಿ ಆಯೋಜಿಸಲಾಗುತ್ತದೆ.

ಇದರಲ್ಲಿ ಆಯ್ಕೆಯಾಗುವ ಇಬ್ಬರು ಸ್ಪರ್ಧಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಲಿದ್ದಾರೆ. ಹೀಗೆ ಪ್ರತಿ ಜಿಲ್ಲೆಯಿಂದ ಆಯ್ಕೆಯಾದ ಸ್ಪರ್ಧಿಗಳಿಗೆ ನವೆಂಬರ್ 17ರಿಂದ ಡಿಸೆಂಬರ್ 7ರವರೆಗೆ ಪ್ರಬಂಧಗಳ ಪಿಪಿಟಿ ಪ್ರಸ್ತುತಪಡಿಸುವ ಸ್ಪರ್ಧೆ ನಡೆಯಲಿದ್ದು, ಅಲ್ಲಿಂದ ರಾಷ್ಟ್ರಮಟ್ಟಕ್ಕೆ ಆಯ್ಕೆ ನಡೆಯಲಿದೆ.

ಅಂತಿಮವಾಗಿ 2027ರ ಜನವರಿ 10 ಮತ್ತು 12ರಂದು ನವದೆಹಲಿಯಲ್ಲಿ ಪ್ರಾದೇಶಿಕ ಮಟ್ಟದ ಅಂತಿಮ ಸ್ಪರ್ಧಿಗಳು ಪ್ರಧಾನಮಂತ್ರಿಗಳ ಸಮ್ಮುಖದಲ್ಲಿ ಪ್ರಬಂಧಗಳನ್ನು ಪ್ರಸ್ತುತಪಡಿಸುವ ಕಾರ್ಯಕ್ರಮ ನಡೆಯಲಿದೆ ಎಂದು ಪಿ. ಅಖಿಲ್ ಹೇಳಿದರು.

ಚಾಮರಾಜನಗರದಲ್ಲಿ ವಿಕಸಿತ ಭಾರತ್ ಯಂಗ್ ಲೀಡರ್ಸ್ ಡೈಲಾಗ್‌ನ ಸಾಂಸ್ಕೃತಿಕ ಟ್ರ್ಯಾಕ್‌ನ ಜಿಲ್ಲಾ ಸ್ಪರ್ಧೆಗಳನ್ನು ಪ್ರಸಕ್ತ ಸಾಲಿನ ಅಕ್ಟೋಬರ್ 31ರೊಳಗಾಗಿ ಎರಡು-ಮೂರು ದಿನಗಳ ಕಾಲ ಆಯೋಜಿಸಲಾಗುತ್ತದೆ. ಇದರಲ್ಲಿ ಪ್ರಮುಖವಾಗಿ ಜಾನಪದ ನೃತ್ಯ-ಗೀತೆ, ಚಿತ್ರಕಲೆ, ಭಾಷಣ ಸ್ಪರ್ಧೆ ಹಾಗೂ ಕವನ ರಚನಾ ಸ್ಪರ್ಧೆಗಳು ನಡೆಯಲಿವೆ. ಪ್ರತಿ ವಿಭಾಗದ ವಿಜೇತರು ರಾಜ್ಯ ಸುತ್ತಿಗೆ ಆಯ್ಕೆಯಾಗಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಯುವ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಪಿ.ಪಿ. ಸುಕುಮಾರ್, ಮಡಿಕೇರಿ ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ಬಾಳಾಡಿ ದಿಲೀಪ್, ಮೈ ಭಾರತ್‌ನ ಸ್ವಯಂಸೇವಕಿ ದೀಪ್ತಿ ಡಯಾನ ಹಾಗೂ ಜಿ.ಪಿ. ರಂಜಿತ್ ಉಪಸ್ಥಿತರಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ರೂ.59.53 ಲಕ್ಷ ನಿವ್ವಳ ಲಾಭ*

ಸೆಪ್ಟೆಂಬರ್ 19, 2026

*ಡಾ.ರೇಷ್ಮಾಗೆ ಪಿಎಚ್‌ ಡಿ ಪದವಿ*

ಸೆಪ್ಟೆಂಬರ್ 19, 2026

*ಸೆ.20ರಿಂದ ದುಬಾರೆ ಸಾಕಾನೆ ಶಿಬಿರ ಪುನರಾರಂಭ : ನಿಯಮ ಪಾಲನೆ ಖಡ್ಡಾಯ*

ಸೆಪ್ಟೆಂಬರ್ 19, 2026

*ಡಾ.ರೇಷ್ಮಾಗೆ ಪಿಎಚ್‌ ಡಿ ಪದವಿ*

ಸೆಪ್ಟೆಂಬರ್ 19, 2026 ಇತ್ತೀಚಿನ ಸುದ್ದಿಗಳು ಕರ್ನಾಟಕ ಕೊಡಗು ಜಿಲ್ಲೆ

ಮಡಿಕೇರಿ NEWS DESK ಸೆ.19 : ಬೆಂಗಳೂರಿನ ಎಚ್.ಎಸ್.ಆರ್. ಲೇಔಟ್ ನ ಸರಕಾರಿ ಪ್ರಥಮ ದರ್ಜೆ ಕಾಲೇಜ್ ನ ಇಂಗ್ಲೀಷ್…

*ಸೆ.20ರಿಂದ ದುಬಾರೆ ಸಾಕಾನೆ ಶಿಬಿರ ಪುನರಾರಂಭ : ನಿಯಮ ಪಾಲನೆ ಖಡ್ಡಾಯ*

ಸೆಪ್ಟೆಂಬರ್ 19, 2026

*ಸುಂಟಿಕೊಪ್ಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಜನ್ಮದಿನ ಆಚರಣೆ*

ಸೆಪ್ಟೆಂಬರ್ 18, 2026

*ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಅಭಿಯಾನ : ಸೆ.19 ಮತ್ತು 20 ರಂದು ವಿಶೇಷ ಕಾರ್ಯಕ್ರಮ*

ಸೆಪ್ಟೆಂಬರ್ 18, 2026

*ತೊರೆನೂರಿನಲ್ಲಿ ವಿಶ್ವಕರ್ಮ ಜಯಂತೋತ್ಸವ : ಮೆರವಣಿಗೆ*

ಸೆಪ್ಟೆಂಬರ್ 18, 2026

*ಕರಾವಳಿ ಅಭಿವೃದ್ಧಿಗೆ ರಾಜ್ಯ ಸರ್ಕಾರ 32,612 ಕೋಟಿ ರೂ ಅನುಮೋದನೆ : ತುಳು ಎರಡನೇ ಅಧಿಕೃತ ಭಾಷೆ : ಸಚಿವ ಸಂಪುಟ ನಿರ್ಣಯ*

ಸೆಪ್ಟೆಂಬರ್ 18, 2026

*ಮಡಿಕೇರಿಯಲ್ಲಿ ಹಿರಿಯ ನಾಗರಿಕರಿಗೆ ಆಟೋಟ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ : ಹಿರಿಯ ನಾಗರಿಕರನ್ನು ಗೌರವ ಮತ್ತು ಪ್ರೀತಿಯಿಂದ ನೋಡಿಕೊಳ್ಳಿ: ಶುಭ*

ಸೆಪ್ಟೆಂಬರ್ 18, 2026

*2131ನೇ ಮಧ್ಯವರ್ಜನ ಶಿಬಿರದ ಆಮಂತ್ರಣ ಪತ್ರಿಕೆ ಬಿಡುಗಡೆ*

ಸೆಪ್ಟೆಂಬರ್ 18, 2026

*ಸೆ. 20ರಂದು ಸೋಮವಾರಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ*

ಸೆಪ್ಟೆಂಬರ್ 18, 2026

*ವಿದ್ಯಾರ್ಥಿ ಜೀವನ ನಾಯಕತ್ವ ಗುಣ ಬೆಳೆಸಿಕೊಳ್ಳಲು ಮಹತ್ತರ ಸಮಯ: ಎಸ್.ಐ. ಮುನೀರ್ ಅಹಮದ್; ಮಡಿಕೇರಿಯಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ*

ಸೆಪ್ಟೆಂಬರ್ 18, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.