
ಮಡಿಕೇರಿ NEWS DESK ಸೆ.19 : ಬೆಂಗಳೂರಿನ ಎಚ್.ಎಸ್.ಆರ್. ಲೇಔಟ್ ನ ಸರಕಾರಿ ಪ್ರಥಮ ದರ್ಜೆ ಕಾಲೇಜ್ ನ ಇಂಗ್ಲೀಷ್ ವಿಭಾಗದ ಮುಖ್ಯಸ್ಥರು ಹಾಗೂ ಸಹ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ರೇಷ್ಮಾ ಎನ್.ಎ. ಅವರು “Sudha Murty’s Writings: A Mirror to Indian Consciousness” ಎಂಬ ವಿಷಯದ ಕುರಿತು ಸಂಶೋಧನೆ ನಡೆಸಿ ಯಶಸ್ವಿಯಾಗಿ ಪಿ.ಎಚ್.ಡಿ. ಪದವಿ ಪಡೆದಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ ಇಂಗ್ಲೀಷ್ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಡಾ.ಗೀತಾ ಭಾಸ್ಕರ್ ಅವರ ಮಾರ್ಗದರ್ಶನದಲ್ಲಿ ಈ ಸಾಧನೆ ಮಾಡಿದ್ದಾರೆ. ಡಾ.ರೇಷ್ಮಾ ಎನ್.ಎ. ಅವರು ಭೂ ದಾಖಲೆಗಳ ಇಲಾಖೆಯ ನಿವೃತ್ತ ಅಧಿಕಾರಿ ನಿಡ್ಯಮಲೆ ಅನುರಾಜ್ ಹಾಗೂ ಚೇರಂಬಾಣೆ ಅರುಣ ಜೂನಿಯರ್ ಕಾಲೇಜು ನಿವೃತ್ತ ಪ್ರಾಂಶುಪಾಲರಾದ ದೇವಕಿ ಅನುರಾಜ್ ಅವರ ಪುತ್ರಿಯಾಗಿದ್ದಾರೆ. ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ‘ಸಂವಿಧಾನ ಓದು’ ಕೃತಿಯನ್ನು ‘Reading the Constitution’ ಎಂಬ ಹೆಸರಿನಲ್ಲಿ ಡಾ.ರೇಷ್ಮಾ ಎನ್.ಎ. ಅವರು ಇಂಗ್ಲಿಷ್ ಭಾಷೆಗೆ ಇತ್ತೀಚೆಗೆ ಅನುವಾದಿಸಿದ್ದಾರೆ.









