
ಬೆಂಗಳೂರು, ಸೆ.24 NEWS DESK : ಬೆಂಗಳೂರು ಕೊಡಗು ಗೌಡ ಸಮಾಜ ವತಿಯಿಂದ ಅ.4ರಂದು ಬೆಂಗಳೂರಿನ ಉಳ್ಳಾಲಿನಲ್ಲಿರುವ ಕೊಡಗು ಗೌಡ ಸಮಾಜ ಸಭಾಂಗಣದಲ್ಲಿ ಆಯೋಜಿಸಿರುವ ‘ಕೈಲ್ ಮುಹೂರ್ತ ಜಂಬರ–2026’ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರನ್ನು ಆಹ್ವಾನಿಸಲಾಯಿತು. ಕೊಡಗು ಗೌಡ ಸಮಾಜದ ಪದಾಧಿಕಾರಿಗಳು ವಿಧಾನಸೌಧದಲ್ಲಿ ಶಾಸಕ ಪೊನ್ನಣ್ಣ ಅವರನ್ನು ಭೇಟಿ ಮಾಡಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ನೀಡಿ, ಸಮಾರಂಭಕ್ಕೆ ಆಗಮಿಸುವಂತೆ ಆಹ್ವಾನಿಸಿದರು. ಈ ಸಂದರ್ಭದಲ್ಲಿ ಬೆಂಗಳೂರು ಕೊಡಗು ಗೌಡ ಸಮಾಜ ಅಧ್ಯಕ್ಷ ವಿಂಗ್ ಕಮಾಂಡರ್ ಅಯ್ಯಟೀರ ಮನೋಜ್ ಕುಮಾರ್, ಉಪಾಧ್ಯಕ್ಷ ಕುದುಪಜೆ ಮೋಹನ್, ಗೌರವ ಕಾರ್ಯದರ್ಶಿ ಬೇಕಲ್ ಬಿಪಿನ್, ಜಂಟಿ ಕಾರ್ಯದರ್ಶಿ ಗೋವಿಂದಮ್ಮನ ಪ್ರವೀಣ್ ಕುಮಾರ್, ಸದಸ್ಯ ಕೆ.ಆರ್. ದಿನೇಶ್ ಹಾಗೂ ಕಾನೂನು ಸಲಹೆಗಾರ ನಿಡ್ಡೆಮಲೆ ಪ್ರಕಾಶ್ ಉಪಸ್ಥಿತರಿದ್ದರು.










