ಮಡಿಕೇರಿ, NEWS DESK ಅ.02: ಶ್ರೀ ಸಾಯಿ ಈವೆಂಟ್ಸ್ ವತಿಯಿಂದ ಮಡಿಕೇರಿಯಲ್ಲಿ ಮೂರು ದಿನಗಳ “ನಮ್ಮ ಮಡಿಕೇರಿ ಫುಡ್ ಫೆಸ್ಟಿವಲ್ ಹಾಗೂ ಬೃಹತ್ ಲೈಫ್‌ಸ್ಟೈಲ್ ಎಕ್ಸಿಬಿಷನ್” ಆಯೋಜಿಸಲಾಗಿದೆ.
ಅಕ್ಟೋಬರ್ 2, 3 ಮತ್ತು 4ರಂದು ಶುಕ್ರವಾರ, ಶನಿವಾರ ಹಾಗೂ ಭಾನುವಾರ ಮೂರು ದಿನಗಳ ಕಾಲ ಬೆಳಿಗ್ಗೆ 10ರಿಂದ ರಾತ್ರಿ 10ರವರೆಗೆ ಮೇಳ ನಡೆಯಲಿದೆ.
ಮೇಳದಲ್ಲಿ ಮಹಿಳಾ ಉದ್ಯಮಿಗಳಿಂದ ವಿವಿಧ ರೀತಿಯ ಮಾರಾಟ ಮಳಿಗೆಗಳನ್ನು ತೆರೆಯಲಾಗಿದ್ದು, ಸೀರೆಗಳು, ಕುರ್ತಾಗಳು, ಜ್ಯುವೆಲ್ಸ್, ಬೆಡ್‌ಶೀಟ್‌ಗಳು, ಹ್ಯಾಂಡ್‌ಬ್ಯಾಗ್‌ಗಳು, ರೆಡಿಮೇಡ್ ಬ್ಲೌಸ್‌ಗಳು, ಗೃಹೋಪಯೋಗಿ ವಸ್ತುಗಳು, ಅಲಂಕಾರಿಕ ಸಸ್ಯಗಳು, ಮೆಹಂದಿ, ವಿಶೇಷ ತಿಂಡಿ-ತಿನಿಸುಗಳು ಸೇರಿದಂತೆ ವಿವಿಧ ವಸ್ತುಗಳ ಮಾರಾಟ ಮತ್ತು ಪ್ರದರ್ಶನ ನಡೆಯಲಿದೆ.
ಮಡಿಕೇರಿಯ ರೇಸ್‌ಕೋರ್ಸ್ ರಸ್ತೆಯ ಟಾಟಾ ಕಾರ್ ಶೋರೂಮ್ ಎದುರಿನ ಕಾವೇರಿ ಮ್ಯಾರೇಜ್ ಹಾಲ್ನಲ್ಲಿ ಮೇಳ ನಡೆಯುತ್ತಿದ್ದು, ಸಾರ್ವಜನಿಕರಿಗೆ ಪ್ರವೇಶ ಉಚಿತವಾಗಿದೆ.
ಮೂರು ದಿನಗಳ ಕಾಲ ನಡೆಯಲಿರುವ ಈ ಬೃಹತ್ ಮಾರಾಟ ಮತ್ತು ಪ್ರದರ್ಶನ ಮೇಳದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವಿವಿಧ ಉತ್ಪನ್ನಗಳು ಹಾಗೂ ವಿಶೇಷ ತಿಂಡಿ-ತಿನಿಸುಗಳ ಸವಿಯನ್ನು ಸವಿಯಬಹುದಾಗಿದೆ.
ವಿಶೇಷ ಸೂಚನೆ: ನಿಮ್ಮ ಹಳೆಯ ಜರಿ ಸೀರೆಗಳನ್ನು ಖರೀದಿಸಲಾಗುತ್ತದೆ.
ಸಂಪರ್ಕ ಸಂಖ್ಯೆ: 8310580281







