ಮೂರ್ನಾಡು, NEWS DESK ಅ.05: ಇಲ್ಲಿನ ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ಇತ್ತೀಚೆಗೆ ನಡೆದ ಮಹಾಸಭೆಯಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಆಡಳಿತ ಮಂಡಳಿಯನ್ನು ರಚಿಸಲಾಯಿತು.
ಸಂಘದ ನೂತನ ಅಧ್ಯಕ್ಷರಾಗಿ ಬಿ.ಬಿ. ಅಶ್ವಥ್ ರೈ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಲಿಂಗಪ್ಪ ಬಿ.ಎಸ್., ಗೌರವಾಧ್ಯಕ್ಷರಾಗಿ ಎನ್.ಕೆ. ಕುಂಞರಾಮ, ಕಾರ್ಯದರ್ಶಿಯಾಗಿ ಎನ್.ಎನ್. ಶರಣು, ಸಹ-ಕಾರ್ಯದರ್ಶಿಯಾಗಿ ಟಿ.ವಿ. ಹರೇಂದ್ರ, ಖಜಾಂಚಿಯಾಗಿ ಹೆಚ್.ಹೆಚ್. ಜಯಂತ್ ಕುಮಾರ್ ಹಾಗೂ 16 ನಿರ್ದೇಶಕರು ನೂತನ ಆಡಳಿತ ಮಂಡಳಿಗೆ ಆಯ್ಕೆಯಾಗಿದ್ದಾರೆ.
ನೂತನ ಆಡಳಿತ ಮಂಡಳಿಯ ನೇತೃತ್ವದಲ್ಲಿ ಮೂರ್ನಾಡು ಪಟ್ಟಣದಲ್ಲಿ 20ರಂದು ನಡೆಯಲಿರುವ ಅದ್ಧೂರಿ ಆಯುಧ ಪೂಜಾ ಸಮಾರಂಭಕ್ಕೆ ವಿಶೇಷ ತಯಾರಿ ನಡೆಸಲಾಗುತ್ತಿದೆ.








