ಹುದಿಕೇರಿ, NEWS DESK ಅ.5: ಹುದಿಕೇರಿ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ನೂತನ ಆಡಳಿತ ಮಂಡಳಿಯನ್ನು ರಚಿಸಲಾಗಿದ್ದು, ಹುದಿಕೇರಿ ಕೊಡವ ಸಮಾಜದ ಅಧ್ಯಕ್ಷರಾದ ಮೀದೆರಿರ ಸವಿನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಕೊಡವರ ಆಚಾರ-ವಿಚಾರ, ಅಯಿಮೆ-ಕೊಯಿಮೆ, ಪದ್ದತಿ-ಪರಂಪರೆ, ನಮ್ಮೆ ನಾಳ್ ಕೊಡವಾಮೆನ ಹಾಗೂ ಕೊಡವ ಪಾಜೆನ ಉಳಿಸಿ ಬೆಳೆಸುವ ಉದ್ದೇಶದಿಂದ ಪೊಮ್ಮಕ್ಕಡ ಕೂಟವನ್ನು ರಚಿಸಲಾಗಿದೆ.
ಪೊಮ್ಮಕ್ಕಡ ಕೂಟದ ಅಧ್ಯಕ್ಷರಾಗಿ ಕುಪ್ಪಣಮಾಡ ನಿವ್ಯಾ ಕಾವೇರಮ್ಮ, ಉಪಾಧ್ಯಕ್ಷರಾಗಿ ಮುಕ್ಕಾಟೀರ ಭಾರತಿ, ಕಾರ್ಯದರ್ಶಿಯಾಗಿ ಬೊಜ್ಜಂಗಡ ಭವ್ಯ ದೇವಯ್ಯ, ಜಂಟಿ ಕಾರ್ಯದರ್ಶಿಯಾಗಿ ಚೇಂದಿರ ವಿನ್ಸಿ ಅಪ್ಪಣ್ಣ, ಖಜಾಂಚಿಯಾಗಿ ಬೊಜ್ಜಂಗಡ ತೀಷ್ಮ (ತುಳಸಿ), ಸಾಂಸ್ಕೃತಿಕ ನಾಯಕಿಯಾಗಿ ಬಾನಂಗಡ ಭಾಗ್ಯ ಪ್ರದೀಪ್ ಹಾಗೂ ಕ್ರೀಡಾ ನಾಯಕಿಯಾಗಿ ಕಳ್ಳೇಂಗಡ ಅರ್ಚನಾ ಆಯ್ಕೆಯಾಗಿದ್ದಾರೆ.
ನಿರ್ದೇಶಕರಾಗಿ ಬಾನಂಗಡ ಪ್ರತಿಮಾ, ಕೊಡಂಗಡ ಡೈನ ದಮಯಂತಿ, ತೀತೀರಾ ಉರ್ಮಿಳಾ, ಬೊಳ್ಳಜ್ಜಿರ ರಾಧಾ ಕರುಂಬಯ್ಯ, ದಡ್ಡೆರ ದಮಯಂತಿ, ಚಂಗುಲಂಡ ಸುಮಾ ದಿಲೀಪ್ ಹಾಗೂ ಕುಪ್ಪಣಮಾಡ ಮೋನಿಕಾ ಚಂಗಪ್ಪ ಅವರು ಅಧಿಕಾರ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಕೊಡವ ಸಮಾಜದ ಅಧ್ಯಕ್ಷರು, ಕಾರ್ಯದರ್ಶಿ, ಖಜಾಂಚಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.








