ಮಡಿಕೇರಿ ಅ.15 NEWS DESK : ಮಡಿಕೇರಿ ಜನೋತ್ಸವ ದಸರಾ ಪ್ರಯುಕ್ತ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಅಕ್ಟೋಬರ್ 16 ರಂದು ಬೆಳಗ್ಗೆ 10 ಗಂಟೆಗೆ ನಗರದ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ 13 ನೇ ವರ್ಷದ ಮಕ್ಕಳ ದಸರಾ ನಡೆಯಲಿದೆ. ಮಕ್ಕಳ ದಸರಾಗೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಚಾಲನೆ ನೀಡಲಿದ್ದಾರೆ. ಮಕ್ಕಳ ಸಂತೆ, ಅಂಗಡಿ ಸ್ಪರ್ಧೆಯನ್ನು ರೋಟರಿ ಜಿಲ್ಲೆ 3181 ನ ರಾಜ್ಯಪಾಲ ಸತೀಶ್ ಭೊಳಾರ್ ಉದ್ಘಾಟಿಸಲಿದ್ದಾರೆ. ರೋಟರಿ ವಲಯ 6 ರ ಸಹಾಯಕ ಗವರ್ನರ್ ಎಚ್.ಎಸ್.ವಸಂತ್ ಕುಮಾರ್, ವಲಯ ಸೇನಾನಿ ಮಧುಸೂದನ್, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪಿ.ಆರ್.ರಾಜೇಶ್, ಕಾರ್ಯದರ್ಶಿ ಡಾ.ಜಿ.ಡಿ.ಚೇತನ್, ಮಡಿಕೇರಿ ನಗರಸಭೆಯ ಅಧ್ಯಕ್ಷರಾದ ಪಿ.ಕಲಾವತಿ, ನಗರಸಭೆಯ ಉಪಾಧ್ಯಕ್ಷ ಮಹೇಶ್ ಜೈನಿ, ದಸರಾ ಸಮಿತಿ ಕಾರ್ಯಾಧ್ಯಕ್ಷ ಬಿ.ಕೆ.ಅರುಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ, ಖಜಾಂಚಿ ಸಬಿತಾ ಪಾಲ್ಗೊಳ್ಳಲಿದ್ದಾರೆ ಎಂದು ಮಕ್ಕಳ ದಸರಾ ಸಂಚಾಲಕ ಅನಿಲ್ ಎಚ್.ಟಿ. ಅವರು ತಿಳಿಸಿದ್ದಾರೆ. ಮಕ್ಕಳಿಂದ ಸಂತೆ, ಮಕ್ಕಳಿಂದ ಅಂಗಡಿ, ಮಕ್ಕಳಿಂದ ಛದ್ಮವೇಷ, ಮಕ್ಕಳಿಂದ ಕ್ಲೇಮಾಡೆಲಿಂಗ್, ಮಕ್ಕಳಿಂದ ಮಂಟಪ ರಚನೆಯ ಸ್ಪರ್ಧೆಗಳು ಮನಸೆಳೆಯಲಿವೆ. ನೂರಾರು ಮಕ್ಕಳು ಈ ಬಾರಿಯೂ ಮಕ್ಕಳ ದಸರಾದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅನಿಲ್ ಎಚ್.ಟಿ. ಅವರು ತಿಳಿಸಿದ್ದಾರೆ.
















