ವಿರಾಜಪೇಟೆ ಅ.19 NEWS DESK : ಇಲ್ಲಿನ ನಂ. 371ನೇ ಕೊಡಗು ಮಹಿಳಾ ಸಹಕಾರ ಸಂಘ ನಿಯಮಿತದ ವತಿಯಿಂದ ಮಹಿಳಾ ಸಮಾಜದ ಸಭಾಂಗಣದಲ್ಲಿ ಶಾರದಾ ಪೂಜೆಯನ್ನು ಶ್ರದ್ಧಾ ಭಕ್ತಿಯಿಂದ ನಡೆಯಿತು. ಪೂಜಾ ವಿಧಿವಿಧಾನಗಳ ಬಳಿಕ ಶಾರದಾ ದೇವಿಗೆ ನೈವೇದ್ಯ ಅರ್ಪಿಸಲಾಯಿತು. ಸಂಘದ ಸದಸ್ಯೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ನಾಮಸ್ಮರಣೆ ಹಾಗೂ ಭಜನೆಗಳನ್ನು ಹಾಡುವ ಮೂಲಕ ಭಕ್ತಿಭಾವ ಮೆರೆದರು. ಪೂಜೆಯ ಬಳಿಕ ನೆರೆದಿದ್ದ ಸದಸ್ಯೆಯರಿಗೆ ಪ್ರಸಾದ ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷೆ ಪಟ್ರಪಂಡ ಗೀತಾ ಬೆಳ್ಯಪ್ಪ, ಉಪಾಧ್ಯಕ್ಷೆ ಬಿ.ಆರ್. ಸಬಿತ, ನಿರ್ದೇಶಕರಾದ ಆಶಾ ಚಿಣ್ಣಪ್ಪ, ಯು.ಕೆ. ಪೊನ್ನಮ್ಮ, ಕುಸುಮ ಸೋಮಣ್ಣ, ಜಯಲೀಲಾ ಸತೀಶ್, ಪಿ.ಕೆ. ನೀಲಮ್ಮ, ಪ್ರೇಮ ಮಂಜುನಾಥ್, ಬಿ.ಎನ್. ಭಾರತಿ, ಬಿ. ಯಶೋಧ, ಹೆಚ್.ಆರ್. ಪುಷ್ಪವಾಸು, ಪುಷ್ಪ ಐತಪ್ಪ, ಮೆಟಿಲ್ಡಾ ಲೋಬೋ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಜಿ. ಪುಷ್ಪಲತಾ ಸೇರಿದಂತೆ ಮಹಿಳಾ ಸಮಾಜದ ಸದಸ್ಯೆಯರು ಉಪಸ್ಥಿತರಿದ್ದರು.

















