ವಿರಾಜಪೇಟೆ ಅ.22 NEWS DESK : ಶ್ರೀ ಕಾವೇರಿ ದಸರಾ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ 48ನೇ ವರ್ಷದ ಗೋಣಿಕೊಪ್ಪಲು ದಸರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹೆಗ್ಗಳದ ನಾಟ್ಯ ನಂದಿನಿ ಭರತನಾಟ್ಯ ಶಾಲೆ ಹಾಗೂ ವಿರಾಜಪೇಟೆಯ ಸ್ವರ ಕ್ಲಾಸಿಕಲ್ ಮ್ಯೂಸಿಕ್ ಶಾಲೆಯ ವಿದ್ಯಾರ್ಥಿಗಳು ಭರತನಾಟ್ಯ ಮತ್ತು ಮಹಿಷಾಸುರ ಮರ್ದಿನಿ ಸ್ತೋತ್ರವನ್ನು ಪ್ರಸ್ತುತಪಡಿಸಿ ಗಮನ ಸೆಳೆದರು. ನೃತ್ಯ ಶಿಕ್ಷಕಿ ಚೈತ್ರಾ ಅವರ ಮಾರ್ಗದರ್ಶನದಲ್ಲಿ ಮಮತಾ, ಮಾನ್ಯಾ, ರಿಷಿಕಾ, ಧನ್ವಿ, ಹೀರ್ಹರಿನ್, ಶ್ರೀಧಿಕಾ ಹಾಗೂ ಬೃಂದಾ ಅವರು ಆಕರ್ಷಕವಾಗಿ ಭರತನಾಟ್ಯ ಪ್ರದರ್ಶಿಸಿದರು. ವಿದ್ಯಾರ್ಥಿಗಳ ನೃತ್ಯ ಪ್ರದರ್ಶನವು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಕಾರ್ಯಕ್ರಮದಲ್ಲಿ ಮಾಸ್ಟರ್ ಹೀರ್ಹರಿನ್, ಮಾಸ್ಟರ್ ಲಕ್ಷಿತ್ ಶೆಟ್ಟಿ ಬಿ.ಎನ್., ಮಾಸ್ಟರ್ ದ್ರುಪದ್ ದೇವ್ ಎಸ್. ನಾಯರ್, ಶ್ರೀಮತಿ ಸ್ವಪ್ನಾ ಸುರೇಶ್, ರೆಜಿ ಸುಮೇಶ್ ಹಾಗೂ ಸುಜಾತಾ ಬಿ.ಆರ್. ಉಪಸ್ಥಿತರಿದ್ದರು.


















