Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಮಡಿಕೇರಿ ದಸರಾ ವೇದಿಕೆಯಲ್ಲಿ ಗಮನ ಸೆಳೆದ ಸಂಸ್ಕೃತಿ ಸಿರಿ ಟ್ರಸ್ಟ್‌ನ ‘ಮಣಿಕಂಠೋದಯ’ ನೃತ್ಯರೂಪಕ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ದಸರಾ ವೇದಿಕೆಯಲ್ಲಿ ಗಮನ ಸೆಳೆದ ಸಂಸ್ಕೃತಿ ಸಿರಿ ಟ್ರಸ್ಟ್‌ನ ‘ಮಣಿಕಂಠೋದಯ’ ನೃತ್ಯರೂಪಕ

ಅಕ್ಟೋಬರ್ 24, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಮಡಿಕೇರಿ, NEWS DESK ಅ. 24: ಮಡಿಕೇರಿ ದಸರಾ ಜನೋತ್ಸವದ ವಿಜಯದಶಮಿ ದಿನದಂದು ಸಂಸ್ಕೃತಿ ಸಿರಿ ಟ್ರಸ್ಟ್ ವತಿಯಿಂದ ಸತತ ನಾಲ್ಕನೇ ವರ್ಷವೂ ವಿಭಿನ್ನ ಹಾಗೂ ವೈಶಿಷ್ಟ್ಯಪೂರ್ಣ ನೃತ್ಯ ಪ್ರದರ್ಶನ ನಡೆಯಿತು. ಈ ಬಾರಿ ಪ್ರದರ್ಶನಗೊಂಡ ‘ಮಣಿಕಂಠೋದಯ’ ನೃತ್ಯರೂಪಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ಟ್ರಸ್ಟ್‌ನ ಅಧ್ಯಕ್ಷೆ ಈರಮಂಡ ಹರಿಣಿ ವಿಜಯ್ ಅವರ ಅಧ್ಯಕ್ಷತೆ ಹಾಗೂ ಮಾರ್ಗದರ್ಶನದಲ್ಲಿ ಮೂಡಿಬಂದ ಈ ನೃತ್ಯರೂಪಕವು ಭಕ್ತಿ, ಅಭಿನಯ, ಲಯ ಹಾಗೂ ನೃತ್ಯ ಸಂಯೋಜನೆಯ ಸುಂದರ ಸಮ್ಮಿಲನವಾಗಿತ್ತು. ಕೊಡಗಿನ ಸಂಸ್ಕೃತಿ, ಪರಂಪರೆ ಮತ್ತು ಕಲಾ ವೈಭವವನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಟ್ರಸ್ಟ್ ಪ್ರತಿವರ್ಷವೂ ವಿಭಿನ್ನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಈ ಬಾರಿಯೂ ತನ್ನ ಕಲಾಪ್ರತಿಭೆಯನ್ನು ಅನಾವರಣಗೊಳಿಸಿತು.

ಈರಮಂಡ ಹರಿಣಿ ವಿಜಯ್ ಅವರ ನೇತೃತ್ವದಲ್ಲಿ, ಮೂರ್ನಾಡಿನ ಸ್ಟೆಪ್ ಅಪ್ ಶಾಡೋ ನೃತ್ಯ ತಂಡದ ಚರಣ್ ಮಾಸ್ಟರ್ ಅವರ ನೃತ್ಯ ಸಂಯೋಜನೆಯಲ್ಲಿ ‘ಮಣಿಕಂಠೋದಯ’ ನೃತ್ಯರೂಪಕ ಮೂಡಿಬಂತು.

ಅಯ್ಯಪ್ಪ ಸ್ವಾಮಿಯ ಜನನ, ಬಾಲ್ಯ, ಜೀವನ ಪಯಣ, ಮಹಿಷಿಯ ಸಂಹಾರ, ಮಣಿಕಂಠನ ದೈವತ್ವದ ಅನಾವರಣ ಹಾಗೂ ಆರಾಧ್ಯ ದೈವವಾಗಿ ಪೂಜಿಸಲ್ಪಡುವ ಹಂತದವರೆಗಿನ ದಿವ್ಯ ಕಥನವನ್ನು ನೃತ್ಯದ ಮೂಲಕ ಮನೋಜ್ಞವಾಗಿ ಪ್ರಸ್ತುತಪಡಿಸಲಾಯಿತು. ಕಲಾವಿದರ ಭಾವಪೂರ್ಣ ಅಭಿನಯ, ಆಕರ್ಷಕ ನೃತ್ಯ ಸಂಯೋಜನೆ ಮತ್ತು ಕಥೆಯ ನಿರೂಪಣೆ ಪ್ರೇಕ್ಷಕರನ್ನು ಭಕ್ತಿಭಾವದ ಲೋಕಕ್ಕೆ ಕರೆದೊಯ್ಯಿತು. ಪ್ರೇಕ್ಷಕರು ತಂಡದ ಕಲಾಪ್ರತಿಭೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ಟ್ರಸ್ಟ್‌ನ ಗೌರವಾಧ್ಯಕ್ಷ ಡಾ. ಮೋಹನ್ ಅಪ್ಪಾಜಿ, ಟ್ರಸ್ಟಿಗಳಾದ ಈರಮಂಡ ವಿಜಯ್ ಹಾಗೂ ಕೆ.ಎಂ. ಗಣೇಶ್, ಉಪಾಧ್ಯಕ್ಷರಾದ ಕೋಲೆಯಂಡ ನಿಶಾ ಮೋಹನ್ ಮತ್ತು ಮಂಜುಳಾ ಶಿವಕುಮಾರ್, ಖಜಾಂಚಿ ದೀಪಾ ಕಾವೇರಪ್ಪ, ಸುಚಿತ, ಪ್ರಮಿತ, ಸರಿತಾ, ರಾಧಾ, ಚಂದ್ರಶೇಖರ್ ಆರ್.ಪಿ. ಸೇರಿದಂತೆ ಟ್ರಸ್ಟ್‌ನ ಪದಾಧಿಕಾರಿಗಳು ಹಾಗೂ ಸದಸ್ಯರು ನೃತ್ಯರೂಪಕಕ್ಕೆ ಸಾಕ್ಷಿಯಾದರು.

ಸಂಸ್ಕೃತಿ ಸಿರಿ ಟ್ರಸ್ಟ್ ಕಲೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಆದ್ಯತೆ ನೀಡುವುದರ ಜೊತೆಗೆ ಹಲವು ಸಾಮಾಜಿಕ ಕಾರ್ಯಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಉಚಿತ ವೈದ್ಯಕೀಯ ಶಿಬಿರ, ರಕ್ತದಾನ ಶಿಬಿರ, ನೃತ್ಯ ಸ್ಪರ್ಧೆ, ದೇಶಭಕ್ತಿ ಗಾಯನ ಸ್ಪರ್ಧೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ ಎಂದು ಈರಮಂಡ ಹರಿಣಿ ವಿಜಯ್ ತಿಳಿಸಿದರು.

ಕೊಡಗಿನ ಸಾಂಸ್ಕೃತಿಕ ಪರಂಪರೆಯನ್ನು ಕಲೆಯ ಮೂಲಕ ಮುಂದಿನ ಪೀಳಿಗೆಗೆ ಪರಿಚಯಿಸುವುದು, ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವುದು ಹಾಗೂ ಸಾಮಾಜಿಕ ಸೇವೆಯ ಮೂಲಕ ಜನರಿಗೆ ನೆರವಾಗುವುದು ಟ್ರಸ್ಟ್‌ನ ಪ್ರಮುಖ ಆಶಯವಾಗಿದೆ. ಮುಂದಿನ ದಿನಗಳಲ್ಲಿಯೂ ಇಂತಹ ವಿಭಿನ್ನ ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳ ಮೂಲಕ ತನ್ನ ಸೇವೆಯನ್ನು ಮುಂದುವರಿಸುವ ಸಂಕಲ್ಪವನ್ನು ಟ್ರಸ್ಟ್ ಹೊಂದಿದೆ ಎಂದರು.

Follow us Follow us
Share. WhatsApp Facebook Twitter Email Telegram Copy Link

Related Posts

ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಬಂಧ ಸ್ಪರ್ಧೆ: ಜಗದೀಶ್ ಟಿ.ಎ., ಜೆಸಿಂತಾ ಪಿ.ಜೆ. ಪ್ರಥಮ

ಅಕ್ಟೋಬರ್ 24, 2026

ಬೆಳಕುಮಾನಿ ಶಾಲೆಯಲ್ಲಿ ‘ಯೋಗಸಿಂಚನಾ’ ಯೋಜನೆಗೆ ಚಾಲನೆ

ಅಕ್ಟೋಬರ್ 24, 2026

ಬಾಳೆಯಡ ಕಿಶನ್ ಪೂವಯ್ಯ ಅವರಿಗೆ ದಿ. ಬಿ.ಎಸ್. ಗೋಪಾಲಕೃಷ್ಣ ದತ್ತಿ ಪ್ರಶಸ್ತಿ ಪ್ರದಾನ

ಅಕ್ಟೋಬರ್ 24, 2026

ಬೆಳಕುಮಾನಿ ಶಾಲೆಯಲ್ಲಿ ‘ಯೋಗಸಿಂಚನಾ’ ಯೋಜನೆಗೆ ಚಾಲನೆ

ಅಕ್ಟೋಬರ್ 24, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ಅ. 24: ಯೋಗ ಪ್ರದರ್ಶನದಲ್ಲಿ 18 ದಾಖಲೆಗಳನ್ನು ಮಾಡಿರುವ ಮದೆನಾಡಿನ ಯುವ ಯೋಗಸಾಧಕಿ ಸಿಂಚನಾ ಅವರು,…

ಬಾಳೆಯಡ ಕಿಶನ್ ಪೂವಯ್ಯ ಅವರಿಗೆ ದಿ. ಬಿ.ಎಸ್. ಗೋಪಾಲಕೃಷ್ಣ ದತ್ತಿ ಪ್ರಶಸ್ತಿ ಪ್ರದಾನ

ಅಕ್ಟೋಬರ್ 24, 2026

ಎಸ್‍ಜಿಎಫ್‍ಐ ರಾಜ್ಯಮಟ್ಟದ ಕ್ರಿಕೆಟ್ ಚಾಂಪಿಯನ್‍ಶಿಪ್‍ಗೆ ಪ್ರಗತಿ ಶಾಲೆಯ ಮೂವರು ವಿದ್ಯಾರ್ಥಿನಿರು ಆಯ್ಕೆ

ಅಕ್ಟೋಬರ್ 24, 2026

ಮಡಿಕೇರಿಯಲ್ಲಿ ಅ.24 ರಂದು ಆರ್‌ಎಸ್‌ಎಸ್ ಪಥಸಂಚಲನ

ಅಕ್ಟೋಬರ್ 24, 2026

ನವೆಂಬರ್‌ನಲ್ಲಿ ಕಾರ್ಯಪ್ಪ ಕಾಲೇಜು ಹಳೆ ವಿದ್ಯಾರ್ಥಿಗಳ ಮಹಾಸಭೆ, ಸಂತೋಷ ಕೂಟ

ಅಕ್ಟೋಬರ್ 24, 2026

ಮಡಿಕೇರಿ ದಸರಾ ವೇದಿಕೆಯಲ್ಲಿ ಗಮನ ಸೆಳೆದ ಸಂಸ್ಕೃತಿ ಸಿರಿ ಟ್ರಸ್ಟ್‌ನ ‘ಮಣಿಕಂಠೋದಯ’ ನೃತ್ಯರೂಪಕ

ಅಕ್ಟೋಬರ್ 24, 2026

ಮಾದಾಪುರದಲ್ಲಿ ಅದ್ದೂರಿಯಾಗಿ 6ನೇ ವರ್ಷದ ಸಾರ್ವಜನಿಕ ಆಯುಧ ಪೂಜೆ ಆಚರಣೆ

ಅಕ್ಟೋಬರ್ 24, 2026

ಅನುದಾನ ಹೆಚ್ಚಿದ್ದರೂ ಮಡಿಕೇರಿ ದಸರಾ ಜನಾಕರ್ಷಣೆ ಕಳೆದುಕೊಂಡಿದೆ: ಕೆ.ಎಂ. ಗಣೇಶ್ ಟೀಕೆ

ಅಕ್ಟೋಬರ್ 24, 2026

ಮಡಿಕೇರಿಯಲ್ಲಿ ಹಸಿ ಮತ್ತು ಘನ ತ್ಯಾಜ್ಯ ವಿಲೇವಾರಿಗೆ ಮಹತ್ವದ ಚರ್ಚೆ; ಖಾಸಗಿ ಬಸ್ ನಿಲ್ದಾಣದ ಬಳಿ ಹಸಿ ಕಸ ಸಂಸ್ಕರಣಾ ಘಟಕ, ಐಟಿಐ ಜಂಕ್ಷನ್‌ನಲ್ಲಿ ಘನ ತ್ಯಾಜ್ಯ ಘಟಕ ಸ್ಥಾಪನೆಗೆ ಪರಿಶೀಲನೆ

ಅಕ್ಟೋಬರ್ 24, 2026

ಭಾಗಮಂಡಲ : ಅ.26 ರಂದು ಸಾಮೂಹಿಕ ಸತ್ಯನಾರಾಯಣ ಪೂಜೆ

ಅಕ್ಟೋಬರ್ 23, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.