ಮಡಿಕೇರಿ, NEWS DESK ಅ. 28: ಕೊಡಗು ಗೌಡ ಮಾಜಿ ಯೋಧರ ಒಕ್ಕೂಟ, ಮಡಿಕೇರಿ ವತಿಯಿಂದ 16ನೇ ವರ್ಷದ ವಾರ್ಷಿಕ ಸಂತೋಷ ಕೂಟವನ್ನು ನವೆಂಬರ್ 8ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ಕೆಳಗಿನ ಗೌಡ ಸಮಾಜದಲ್ಲಿ ಆಯೋಜಿಸಲಾಗಿದೆ.
ತುಮುತಜ್ಜಿರ ಶ್ರೀ ದಯಾನಂದ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಒಕ್ಕೂಟದ ಸದಸ್ಯರು ಕುಟುಂಬ ಸಮೇತರಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಅಧ್ಯಕ್ಷರು ಹಾಗೂ ಕಾರ್ಯಕಾರಿ ಮಂಡಳಿ ಮನವಿ ಮಾಡಿದೆ.
ಬೆಳಿಗ್ಗೆ 10.30ಕ್ಕೆ ಸಭಾ ಕಾರ್ಯಕ್ರಮ ಆರಂಭವಾಗಲಿದ್ದು, ಪ್ರಾರ್ಥನೆ, ಸ್ವಾಗತ ಭಾಷಣ, ಉದ್ಘಾಟನೆ, ಸಂತಾಪ ಸೂಚನೆ, ಪ್ರಾಸ್ತಾವಿಕ ನುಡಿ, ವರದಿ ಮಂಡನೆ, ಹೊಸ ಸದಸ್ಯರ ಪರಿಚಯ, ಖರ್ಚು-ವೆಚ್ಚದ ವರದಿ ಮಂಡನೆ, ಪ್ರತಿಭಾ ಪುರಸ್ಕಾರ ವಿತರಣೆ, ಸನ್ಮಾನ, ಸನ್ಮಾನಿತರ ಹಿತನುಡಿ, ಅತಿಥಿಗಳ ಭಾಷಣ, ಅಧ್ಯಕ್ಷರ ಭಾಷಣ ಹಾಗೂ ವಂದನಾರ್ಪಣೆ ನಡೆಯಲಿದೆ. ಬಳಿಕ ರಾಷ್ಟ್ರಗೀತೆ ಮತ್ತು ಭೋಜನದ ವ್ಯವಸ್ಥೆ ಮಾಡಲಾಗಿದೆ.
2025-26ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅಧಿಕ ಅಂಕ ಗಳಿಸಿದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಅರ್ಹ ವಿದ್ಯಾರ್ಥಿಗಳ ವಿವರಗಳನ್ನು ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ 9448503524, 9880203423 ಮತ್ತು 9449920774 ದೂರವಾಣಿ ಸಂಖ್ಯೆಗಳ ಮೂಲಕ ಸಂಪರ್ಕಿಸುವಂತೆ ಕೋರಲಾಗಿದೆ.
ಒಕ್ಕೂಟದ ಸದಸ್ಯರು ತಮ್ಮ ಪರಿಚಯದ ಸದಸ್ಯರಲ್ಲದ ಮಾಜಿ ಯೋಧರನ್ನೂ ಕಾರ್ಯಕ್ರಮಕ್ಕೆ ಕರೆತರುವಂತೆ ವಿನಂತಿಸಲಾಗಿದೆ. ಬಾಕಿ ಇರುವ ಮರಣ ನಿಧಿಯನ್ನು ಪಾವತಿಸುವಂತೆ ಹಾಗೂ ವಿಳಾಸ ಅಥವಾ ದೂರವಾಣಿ ಸಂಖ್ಯೆಯಲ್ಲಿ ಬದಲಾವಣೆಗಳಿದ್ದಲ್ಲಿ ಅದರ ಮಾಹಿತಿಯನ್ನು ನೀಡುವಂತೆ ತಿಳಿಸಲಾಗಿದೆ. ಸದಸ್ಯರಿಂದ ಊಟದ ಬಾಬ್ತು, ಚಂದಾ ಹಣ ಹಾಗೂ ಪ್ರಾಯೋಜಕತ್ವದ ಮೊತ್ತವನ್ನು ಸ್ವೀಕರಿಸಲಾಗುವುದು.
ಕಾರ್ಯಕ್ರಮಕ್ಕೆ ಸರ್ವರಿಗೂ ಆದರದ ಸ್ವಾಗತ ಕೋರಿರುವ ಒಕ್ಕೂಟದ ಅಧ್ಯಕ್ಷರು ಮತ್ತು ಕಾರ್ಯಕಾರಿ ಮಂಡಳಿ, ಹೆಚ್ಚಿನ ಮಾಹಿತಿಗಾಗಿ ಅಧ್ಯಕ್ಷರನ್ನು 9482627426 ಸಂಖ್ಯೆಯಲ್ಲಿ ಸಂಪರ್ಕಿಸುವಂತೆ ತಿಳಿಸಿದ್ದಾರೆ.
















