Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»‘ಮುತ್ತುನಾಡ್’ ಚಿತ್ರದಲ್ಲಿ ಪ್ರಕೃತಿ ವಿಕೋಪದ ನೋವು, ಮೌನದ ಸಂಭಾಷಣೆಯ ಅನಾವರಣ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

‘ಮುತ್ತುನಾಡ್’ ಚಿತ್ರದಲ್ಲಿ ಪ್ರಕೃತಿ ವಿಕೋಪದ ನೋವು, ಮೌನದ ಸಂಭಾಷಣೆಯ ಅನಾವರಣ

ಅಕ್ಟೋಬರ್ 30, 20261 Min ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಮಡಿಕೇರಿ, NEWS DESK ಅ.30: ಪ್ರಕೃತಿ ವಿಕೋಪದ ಭೀಕರತೆ, ತಮ್ಮವರನ್ನು ಹಾಗೂ ಆಸ್ತಿ-ಪಾಸ್ತಿಯನ್ನು ಕಳೆದುಕೊಂಡ ಅನಾಥ ಭಾವ, ಕರುಳು ಕಿವುಚುವ ನೋವುಗಳ ನಡುವೆಯೂ ಬದುಕನ್ನು ಕಟ್ಟಿಕೊಳ್ಳುವ ಪ್ರಯತ್ನದ ಕಥೆಯನ್ನು ಮೌನ ಸಂಭಾಷಣೆಯ ಮೂಲಕ ಕಟ್ಟಿಕೊಡುವ ಪ್ರಯತ್ನ ‘ಮುತ್ತುನಾಡ್’ ಚಲನಚಿತ್ರದಲ್ಲಿ ಮನೋಜ್ಞವಾಗಿ ಮೂಡಿಬಂದಿದೆ.

ಚಲನಚಿತ್ರ ನಿರ್ದೇಶಕ ಉದಿಯನ್ ಅನಿಲ್ ಉಲ್ಲಾಸ್ ಅವರ ನಿರ್ದೇಶನದಲ್ಲಿ ರೂಪುಗೊಂಡಿರುವ ಈ ಚಿತ್ರದ ಪ್ರೀಮಿಯರ್ ಪ್ರದರ್ಶನವು ನಗರದ ಗಾಂಧಿ ಭವನದ ಸಭಾಂಗಣದಲ್ಲಿ ಆಯ್ದ ಪ್ರೇಕ್ಷಕರ ಸಮ್ಮುಖದಲ್ಲಿ ನಡೆಯಿತು.

ಕಲಾವಿದರಾದ ಅಲ್ಲಾರಂಡ ವಿಠಲ್ ಮತ್ತು ಕಾಡ್ಯಮಾಡ ಸುಮನ್ ಅವರು 2018ರ ಆಗಸ್ಟ್‌ನಲ್ಲಿ ಸಂಭವಿಸಿದ ಭೀಕರ ಪ್ರಕೃತಿ ವಿಕೋಪದಲ್ಲಿ ತಮ್ಮವರನ್ನು ಹಾಗೂ ಆಸ್ತಿ-ಪಾಸ್ತಿಯನ್ನು ಕಳೆದುಕೊಂಡ ವ್ಯಕ್ತಿಗಳ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅವರ ಆಂತರಿಕ ತಳಮಳ ಹಾಗೂ ಹಿಂದಿನ ಘಟನೆಗಳನ್ನು ಕಪ್ಪು-ಬಿಳುಪಿನ ದೃಶ್ಯಗಳ ಮೂಲಕ ಪ್ರೇಕ್ಷಕರಿಗೆ ಕಟ್ಟಿಕೊಡುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ. ಮಾತುಗಳಿಲ್ಲದಿದ್ದರೂ ಮೌನದ ಮೂಲಕವೇ ಭಾವನೆಗಳನ್ನು ವ್ಯಕ್ತಪಡಿಸುವ ಚಿತ್ರತಂಡದ ಪ್ರಯತ್ನ ಗಮನ ಸೆಳೆಯುತ್ತದೆ.

ಆದರೆ, ಚಿತ್ರದ ನಿರೂಪಣೆಯ ಓಟಕ್ಕೆ ಅಡ್ಡಿಯಾಗದಂತೆ ಅಲ್ಲಲ್ಲಿ ಒಂದಷ್ಟು ಸಂಭಾಷಣೆಗಳನ್ನು ಅಳವಡಿಸಿದ್ದರೆ, ಪ್ರೇಕ್ಷಕರಲ್ಲಿ ಮೂಡುವ ಕೆಲವು ಸಂಶಯಗಳನ್ನು ನಿವಾರಿಸಿ ಕಥೆಯನ್ನು ಇನ್ನಷ್ಟು ಸರಳವಾಗಿ ಅರ್ಥೈಸಿಕೊಳ್ಳಲು ಸಹಕಾರಿಯಾಗುತ್ತಿತ್ತು. ಚಿತ್ರದ ಬಹುತೇಕ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವ ನಟ ಅಲ್ಲಾರಂಡ ವಿಠಲ್ ಅವರು ತಮ್ಮ ವಿಶಿಷ್ಟ ಮ್ಯಾನರಿಸಂ ಮೂಲಕ ಗಮನ ಸೆಳೆಯುತ್ತಾರೆ. ಕಪ್ಪು-ಬಿಳುಪಿನ ದೃಶ್ಯಗಳ ಛಾಯಾಗ್ರಹಣವೂ ಉತ್ತಮವಾಗಿ ಮೂಡಿಬಂದಿದೆ.

ಚಿತ್ರದ ಇಂದಿನ ಪ್ರೀಮಿಯರ್ ಪ್ರದರ್ಶನದಲ್ಲಿ ಮಾಜಿ ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ, ಟಿ.ಪಿ. ರಮೇಶ್, ಬಿ.ಜಿ. ಅನಂತಶಯನ, ಅಂಬೆಕಲ್ಲು ಕುಶಾಲಪ್ಪ, ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ ಕರಂದ್ಲಾಜೆ, ಕೊಟ್ಟಕತ್ತೀರ ಪ್ರಕಾಶ್, ಯಶೋಧ ಪ್ರಕಾಶ್, ಈರಮಂಡ ಹರಿಣಿ ವಿಜಯ್, ಸಂಪತ್ ಕುಮಾರ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.

Follow us Follow us
Share. WhatsApp Facebook Twitter Email Telegram Copy Link

Related Posts

ರಾಜ್ಯ ಮಟ್ಟದ ಮಿಕ್ಸ್ ಕಿಕ್ ಬಾಕ್ಸಿಂಗ್‌ನಲ್ಲಿ ಮಡಿಕೇರಿಯ ಕೊಡಗು ಕಿಕ್ ಬಾಕ್ಸಿಂಗ್ ವಿದ್ಯಾರ್ಥಿಗಳ ಸಾಧನೆ

ಅಕ್ಟೋಬರ್ 30, 2026

‘ಫ್ಯಾಪ್ ಕಪ್ ಹಾಕಿ’ ಪಂದ್ಯಾವಳಿಯ ಮೊದಲ ದಿನದ ಫಲಿತಾಂಶ ಪ್ರಕಟ

ಅಕ್ಟೋಬರ್ 30, 2026

ಕಂಡಂಗಾಲ ಹಿರಿಯ ಪ್ರಾಥಮಿಕ ಶಾಲೆಗೆ ಐದು ಕಂಪ್ಯೂಟರ್‌ಗಳ ಕೊಡುಗೆ; ಜನರಲ್ ವಿಕ್ರಮ್ ತನೇಜ ಹಾಗೂ ಡಾ. ಪೊನ್ನಕಚ್ಚಿರ ವಿದ್ಯಾ ಪೂಣಚ್ಚ ದಂಪತಿಗಳಿಂದ ನೆರವು

ಅಕ್ಟೋಬರ್ 30, 2026

‘ಫ್ಯಾಪ್ ಕಪ್ ಹಾಕಿ’ ಪಂದ್ಯಾವಳಿಯ ಮೊದಲ ದಿನದ ಫಲಿತಾಂಶ ಪ್ರಕಟ

ಅಕ್ಟೋಬರ್ 30, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ಅ. 30: ಕೂರ್ಗ್ ಹಾಕ್ಸ್ ಕ್ಲಬ್ ಹಾಗೂ ಕೇರಳದ ಯುನೈಟೆಡ್ ತಲಚೇರಿ ಸ್ಪೋರ್ಟ್ಸ್ ಕ್ಲಬ್ ಸಹಭಾಗಿತ್ವದಲ್ಲಿ…

ಕಂಡಂಗಾಲ ಹಿರಿಯ ಪ್ರಾಥಮಿಕ ಶಾಲೆಗೆ ಐದು ಕಂಪ್ಯೂಟರ್‌ಗಳ ಕೊಡುಗೆ; ಜನರಲ್ ವಿಕ್ರಮ್ ತನೇಜ ಹಾಗೂ ಡಾ. ಪೊನ್ನಕಚ್ಚಿರ ವಿದ್ಯಾ ಪೂಣಚ್ಚ ದಂಪತಿಗಳಿಂದ ನೆರವು

ಅಕ್ಟೋಬರ್ 30, 2026

ಮಿಕ್ಸ್ ಬಾಕ್ಸಿಂಗ್‌ನಲ್ಲಿ ಕೃತನ್ ಹಾಗೂ ಸಂದೀಪ್‌ಗೆ ಬೆಳ್ಳಿ ಪದಕ

ಅಕ್ಟೋಬರ್ 30, 2026

ತೋಳೂರು ಶೆಟ್ಟಳ್ಳಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಕಾರ್ಯಕ್ರಮ

ಅಕ್ಟೋಬರ್ 30, 2026

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ನವೆಂಬರ್‌ನಲ್ಲಿ ಸರಣಿ ದತ್ತಿ ಕಾರ್ಯಕ್ರಮ

ಅಕ್ಟೋಬರ್ 30, 2026

ಮುಂದಿನ ಕಸಾಪ ಅಧ್ಯಕ್ಷರನ್ನಾಗಿ ಟಿ.ಪಿ.ರಮೇಶ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡುವ ವಿಶ್ವಾಸ

ಅಕ್ಟೋಬರ್ 30, 2026

ರಾಪಿಡೋ, ರೆಂಟಲ್ ಬೈಕ್ ಸೇವೆಗೆ ಕಡಿವಾಣಕ್ಕೆ ಆಗ್ರಹಿಸಿ ಮಡಿಕೇರಿಯಲ್ಲಿ ಆಟೋ ಚಾಲಕರ ಬೃಹತ್ ಪ್ರತಿಭಟನೆ

ಅಕ್ಟೋಬರ್ 30, 2026

ಹಾಕಿ ಕ್ಷೇತ್ರದ ಸಾಧನೆಗೆ ಡಾ. ಎ.ಬಿ. ಸುಬ್ಬಯ್ಯ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

ಅಕ್ಟೋಬರ್ 30, 2026

‘ಫ್ಯಾಪ್ ಕಪ್ ಹಾಕಿ’ ಪಂದ್ಯಾವಳಿಗೆ ಚಾಲನೆ; ಕೊಡಗು ಕ್ರೀಡೆಗಳ ತಪೋಭೂಮಿ: ಜಿ. ಚಿದ್ವಿಲಾಸ್ ಬಣ್ಣನೆ

ಅಕ್ಟೋಬರ್ 30, 2026

ಫ್ಯಾಷನ್ ಕ್ಷೇತ್ರದ ಸಾಧನೆಗೆ ಪ್ರಸಾದ್ ಬಿದ್ದಪ್ಪ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

ಅಕ್ಟೋಬರ್ 30, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.