ಮಡಿಕೇರಿ, NEWS DESK ಅ.30: ಸೋಮವಾರಪೇಟೆಯಲ್ಲಿ ದಿನಾಂಕ 25ರಂದು ನಡೆದ ರಾಜ್ಯ ಮಟ್ಟದ ಮಿಕ್ಸ್ ಕಿಕ್ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಮಡಿಕೇರಿಯ ಕೊಡಗು ಕಿಕ್ ಬಾಕ್ಸಿಂಗ್ ಅಸೋಸಿಯೇಷನ್ನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಪಂದ್ಯಾವಳಿಯ ಜೂನಿಯರ್ ವಿಭಾಗದಲ್ಲಿ ಆದಿತ್ಯ, ವಸಿಷ್ಠ ಹಾಗೂ ಹಶೀಮ್ ಅವರು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಸಬ್ ಜೂನಿಯರ್ ವಿಭಾಗದಲ್ಲಿ ಗ್ಯಾನ್ ಅವರು ಬೆಳ್ಳಿ ಪದಕ ಪಡೆದುಕೊಂಡರೆ, ಸೀನಿಯರ್ ವಿಭಾಗದಲ್ಲಿ ಫಾರೂಕ್ ಅವರು ಬೆಳ್ಳಿ ಪದಕ ಗೆದ್ದು ಸಾಧನೆ ಮೆರೆದಿದ್ದಾರೆ.
ಈ ಎಲ್ಲಾ ವಿದ್ಯಾರ್ಥಿಗಳು ಮಡಿಕೇರಿಯ ಕೊಡಗು ಕಿಕ್ ಬಾಕ್ಸಿಂಗ್ನ ತರಬೇತುದಾರರಾದ ಕವನ್ ಕೊತ್ತೋಳಿ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಕ್ರೀಡಾಭಿಮಾನಿಗಳು ಹಾಗೂ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.

















