Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಯುವ ಸಂಸತ್ತು ಕಾರ್ಯಕ್ರಮ : ಯುವ ಸಂಸತ್ತು ವಿದ್ಯಾರ್ಥಿಗಳಲ್ಲಿ ನಾಯತ್ವ ಗುಣ ಬೆಳೆಸಿಕೊಳ್ಳಲು ಸಹಕಾರಿ : ಮಂದ್ರೀರ ಮೋಹನ್ ದಾಸ್
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಯುವ ಸಂಸತ್ತು ಕಾರ್ಯಕ್ರಮ : ಯುವ ಸಂಸತ್ತು ವಿದ್ಯಾರ್ಥಿಗಳಲ್ಲಿ ನಾಯತ್ವ ಗುಣ ಬೆಳೆಸಿಕೊಳ್ಳಲು ಸಹಕಾರಿ : ಮಂದ್ರೀರ ಮೋಹನ್ ದಾಸ್

ಅಕ್ಟೋಬರ್ 30, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಮಡಿಕೇರಿ, ಅ.30 NEWS DESK : ಕೊಡಗು ಜಿಲ್ಲೆಯಲ್ಲಿ ಈ ಬಾರಿ ಮಳೆ ಕೊರತೆಯಿಂದ ಕೃಷಿ ಕ್ಷೇತ್ರದಲ್ಲಿ ಹಿನ್ನೆಡೆ, ಮಾನವ ಮತ್ತು ವನ್ಯ ಪ್ರಾಣಿ ಸಂಘರ್ಷ ತಡೆಯುವುದು, ಪ್ರವಾಸೋದ್ಯಮದಿಂದ ಉದ್ಯೋಗ ಸೃಷ್ಟಿ, ಸರ್ಕಾರಿ ಶಾಲೆಗಳ ಅಭಿವೃದ್ಧಿ, ಪ್ರತಿಯೊಬ್ಬರಿಗೂ ಆರೋಗ್ಯ ಸೇವೆ ಕಲ್ಪಿಸುವುದು, ರಸ್ತೆ, ಕುಡಿಯುವ ನೀರು, ವಿದ್ಯುತ್ ಸಂಪರ್ಕ ಮತ್ತಿತರ ಮೂಲ ಸೌಲಭ್ಯ ಒದಗಿಸುವುದು.. ಹೀಗೆ ಹಲವು ವಿಚಾರಗಳ ಕುರಿತು ಆಡಳಿತ ಮತ್ತು ವಿರೋಧಪಕ್ಷಗಳು ಸಮರ್ಥನಿಯ ಪ್ರತಿಪಾದನೆ, ಏಟು- ಏದುರೇಟು, ಯಾರು ಯಾರಿಗೂ ಕಡಿಮೆ ಇಲ್ಲದಂತೆ ಪ್ರತಿಪಾದನೆ ಮಾಡುತ್ತಿದ್ದ ದೃಶ್ಯ ಶುಕ್ರವಾರ ಜಿ.ಪಂ.ಸಭಾಂಗಣದಲ್ಲಿ ನಡೆದ ತಾಲ್ಲೂಕು ಮಟ್ಟದ ‘ಯುವ ಸಂಸತ್’ ಕಾರ್ಯಕ್ರಮದಲ್ಲಿ ಕಂಡು ಬಂದಿತು. ಪ್ರೌಢಶಾಲೆ, ಪದವಿ ಪೂರ್ವ, ಪದವಿ ಮತ್ತು ಸ್ನಾತಕೋತ್ತರ ಪದವಿಯ ಸುಮಾರು 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಡಳಿತ ಮತ್ತು ಪ್ರತಿಪಕ್ಷದಲ್ಲಿ ಪಾಲ್ಗೊಂಡು ಕೊಡಗು ಜಿಲ್ಲೆಯಲ್ಲಿ ಆಗಬೇಕಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಬೆಳಕು ಚೆಲ್ಲಿದ್ದು, ಮನೋಜ್ಞವಾಗಿತ್ತು. ಸಭೆಯ ಆರಂಭದಲ್ಲಿ ಸಭಾಧ್ಯಕ್ಷರನ್ನು ಮುಖ್ಯಮಂತ್ರಿಯವರು ಮತ್ತು ಪ್ರತಿಪಕ್ಷದ ನಾಯಕರು ಸಭಾಧ್ಯಕ್ಷ ಸ್ಥಾನದ ಪೀಠಕ್ಕೆ ಕರೆದುಕೊಂಡು ಬರುವುದರಿಂದ ಆರಂಭವಾಯಿತು. ಸಭಾಧ್ಯಕ್ಷರು ತಮ್ಮ ಆಸನದಲ್ಲಿ ಕುಳಿತು ಯುವ ಸಂಸತ್ ನಡೆಸಲು ಅನುವು ಮಾಡಿದರು. ನಾಡಗೀತೆ, ವಂದೇಮಾತಂ ಗೀತೆ ಹಾಡುವ ಮೂಲಕ ಯುವ ಸಂಸತ್ ಆರಂಭವಾಯಿತು. ನಂತರ ಭಾರತ ಸಂವಿಧಾನ ಪ್ರಸ್ತಾವನೆಯನ್ನು ಓದಲಾಯಿತು. ಸಭೆಯ ಆರಂಭದಲ್ಲಿ ಮಾತನಾಡಿದ ಸಭಾಧ್ಯಕ್ಷರ ಪಾತ್ರ ನಿರ್ವಹಿಸಿದ ಮುತ್ತಪ್ಪ ಪ್ರಜಾಪ್ರಭುತ್ವದ ಶಕ್ತಿ ಜನರ ಧ್ವನಿಯಾಗಿದ್ದು, ಜನರ ಸಮಸ್ಯೆಯನ್ನು ಪರಿಹರಿಸುವುದು ಎಲ್ಲರ ಆಶಾಯವಾಗಿದೆ. ಅದರಂತೆ ಸಮಾಜಮುಖಿಯಾಗಿ ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳಬೇಕು ಎಂದು ಕೋರಿದರು. ಯುವ ಸಂಸತ್‍ನಲ್ಲಿ ಮುಖ್ಯಮಂತ್ರಿ ಪಾತ್ರ ನಿರ್ವಹಿಸಿದ ಪ್ರಭಾಕರ್ ಅವರು ಸಚಿವರನ್ನು ಪರಿಚಯಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಸಂತಾಪ ಸೂಚನೆ ನಡೆಯಿತು. ಹಾಗೆಯೇ ಇತ್ತೀಚಿಗೆ ನಿಧನರಾದ ಗಣ್ಯರ ಕುರಿತು ಸ್ಮರಣೆ ನಡೆಯಿತು. ಯುವ ಸಂಸತ್‍ನ ವಿದ್ಯಾರ್ಥಿಗಳು ಮಾತನಾಡಿದರು. ಕನ್ನಡ ಶಾಲೆಗಳನ್ನು ಅಭಿವೃದ್ಧಿ ಪಡಿಸಬೇಕು, ಗ್ರಾಮೀಣ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು, ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ಒತ್ತು ನೀಡಬೇಕು, ಜಿಲ್ಲೆಯ ಹಲವು ರಸ್ತೆಗಳಲ್ಲಿ ಸಂಕೇತ(ಸಿಗ್ನಲ್) ಹಾಗೂ ವಾಹನ ನಿಲುಗಡೆಗೆ ಇಲ್ಲದೆ ತೊಂದರೆಯಾಗಿದೆ. ಇದರಿಂದ ಅಪಘಾತ ಸಹ ಹೆಚ್ಚಾಗುತ್ತಿದೆ. ಇದನ್ನು ತಡೆಯಬೇಕೆಂದು ವಿರೋಧ ಪಕ್ಷದವರು ಬೆಳಕು ಚೆಲ್ಲಿದರು. ಈ ಸಂದರ್ಭದಲ್ಲಿ ಮಾತನಾಡಿದ ಆಡಳಿತ ಪಕ್ಷದ ಮುಖ್ಯಸ್ಥರು ಸರ್ಕಾರ ರಚನೆಗೆ ನಾಗರಿಕರು ಅವಕಾಶ ಮಾಡಿದ್ದು, ಈ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ಅಭಿವೃದ್ಧಿ ಕೆಲಸವನ್ನು ಕೈಗೊಳ್ಳಲಾಗುವುದು, ತಮ್ಮ ಸಲಹೆ ಮಾರ್ಗದರ್ಶನ ಸದಾ ಇರಲಿ ಎಂದು ಪ್ರತಿ ಪಕ್ಷಗಳ ಕುರಿತು ಮಾತನಾಡಿದ್ದು, ವಿಶೇಷವಾಗಿತ್ತು. ಪ್ರವಾಸೋದ್ಯಮ ಅಭಿವೃದ್ಧಿ ಜೊತೆಗೆ ಸಣ್ಣ ಉದ್ಯಮಗಳ ಬೆಳವಣಿಗೆಗೆ ಪ್ರೋತ್ಸಾಹಿಸುವ ಮೂಲಕ ಯುವ ಜನರಿಗೆ ಉದ್ಯೋಗ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಪಾತ್ರ ನಿರ್ವಹಿಸಿದವರು ಹೇಳಿದರು. ಸಾಂಕ್ರಮಿಕ ರೋಗಳ ನಿಯಂತ್ರಣಕ್ಕೆ ಗಮನ ಹರಿಸಬೇಕು. ತಜ್ಞ ವೈದ್ಯರ ನಿಯೋಜನೆ ಮಾಡಬೇಕು ಎಂದು ವಿರೋಧ ಪಕ್ಷದ ವಿದ್ಯಾರ್ಥಿಗಳು ಒತ್ತಾಯಿಸಿದರು. ಇದಕ್ಕೆ ಆಡಳಿತ ಪಕ್ಷದ ಪ್ರತಿನಿಧಿಗಳು ಆರೋಗ್ಯ, ಶಿಕ್ಷಣ, ಮೂಲ ಸೌಲಭ್ಯಕ್ಕೆ ಸರ್ಕಾರ ಹೆಚ್ಚಿನ ಒತ್ತು ನೀಡಿದೆ ಎಂದು ಹೇಳಿದರು. ವಿರೋಧ ಪಕ್ಷದ ನಾಯಕಿ ಪಾತ್ರವನ್ನು ಅಸ್ಮಿತ ನಿರ್ವಹಿಸಿ, ಗಮನ ಸೆಳೆದರು. ಪ್ರಶ್ನೋತ್ತರ ವೇಳೆ ಗಮನ ಸೆಳೆಯುವ ಸೂಚನೆ, ತುರ್ತು ವಿಷಯದ ಮೇಲಿನ ಚರ್ಚೆ, ವಿಧೇಯಕಗಳ ಮಂಡಣೆ, ವಿಧೇಯಕ ಮೇಲಿನ ಚರ್ಚೆ, ವಿಧೇಯಕಗಳ ಅಂಗೀಕಾರ ಹೀಗೆ ಯುವ ಸಂಸತ್ ನಲ್ಲಿ ಕಾರ್ಯವಿಧಾನಗಳು ನಡೆದವು. ಯುವ ಸಂಸತ್‍ನಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಎನ್‍ಸಿಸಿ ಕೆಡೆಟ್‍ಗಳು ನಿರ್ವಹಿಸಿದರು.
ಸಭೆಯ ಆರಂಭದಲ್ಲಿ ಯುವ ಸಂಸತ್‍ಗೆ ಚಾಲನೆ ನೀಡಿ ಮಾತನಾಡಿದ ತಾಲ್ಲೂಕು ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಮಂದ್ರೀರ ಮೋಹನ್ ದಾಸ್ ಅವರು ಯುವ ಸಂಸತ್ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಸಹಕಾರಿ ಎಂದರು. ತಹಶೀಲ್ದಾರ್‍ರಾದ ಶ್ರೀಧರ, ತಾ.ಪಂ.ಇಒ ಶೇಖರ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಗಣಪತಿ, ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರಾದ ಮೇಜರ್ ಡಾ.ಬಿ.ರಾಘವ, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಬಾಲಕೃಷ್ಣ ರೈ, ಮೀನುಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಮಿಲನ ಭರತ್, ನಿವೃತ್ತ ಪ್ರಾಂಶುಪಾಲರಾದ ಕೆ.ಜೆ.ದಿವಾಕರ, ವಿವಿಧ ಕಾಲೇಜಿನ ಪ್ರಾಂಶುಪಾಲರು, ಮುಖ್ಯೋಪಾಧ್ಯಯರು, ಅಧಿಕಾರಿಗಳು, ಶಿಕ್ಷಕರು ಇದ್ದರು.

Follow us Follow us
Share. WhatsApp Facebook Twitter Email Telegram Copy Link

Related Posts

ನ.2 ರಂದು ವಿರಾಜಪೇಟೆಯಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ತಾಲೂಕು ಮಟ್ಟದ ಸ್ಪರ್ಧೆ

ಅಕ್ಟೋಬರ್ 30, 2026

ಉತ್ತರಾಖಂಡ ಹೆಲಿಕಾಪ್ಟರ್ ದುರಂತ: ಐವರು ಕನ್ನಡಿಗರು ಸೇರಿ ಆರು ಮಂದಿ ಸಾವು

ಅಕ್ಟೋಬರ್ 30, 2026

ಚಿತ್ರಕಲಾ ಸ್ಪರ್ಧೆ : ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ

ಅಕ್ಟೋಬರ್ 30, 2026

ಉತ್ತರಾಖಂಡ ಹೆಲಿಕಾಪ್ಟರ್ ದುರಂತ: ಐವರು ಕನ್ನಡಿಗರು ಸೇರಿ ಆರು ಮಂದಿ ಸಾವು

ಅಕ್ಟೋಬರ್ 30, 2026 ಇತ್ತೀಚಿನ ಸುದ್ದಿಗಳು ಕರ್ನಾಟಕ ಕೊಡಗು ಜಿಲ್ಲೆ

ಮಡಿಕೇರಿ, NEWS DESK ಅ.30: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಶುಕ್ರವಾರ ಸಂಭವಿಸಿದ ಭೀಕರ ಹೆಲಿಕಾಪ್ಟರ್ ದುರಂತದಲ್ಲಿ ಕರ್ನಾಟಕದ ಐವರು ಸೇರಿದಂತೆ…

ಚಿತ್ರಕಲಾ ಸ್ಪರ್ಧೆ : ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ

ಅಕ್ಟೋಬರ್ 30, 2026

ನಿವೃತ್ತ ಅಂಗನವಾಡಿ ಶಿಕ್ಷಕಿಯರಿಗೆ ಆತ್ಮೀಯ ಬೀಳ್ಕೊಡುಗೆ

ಅಕ್ಟೋಬರ್ 30, 2026

ಸ್ಥಳೀಯ ಉತ್ಪನ್ನಗಳ ಗುಣಮಟ್ಟ ಹೆಚ್ಚಿಸಿ ರಫ್ತು ವಹಿವಾಟು ವಿಸ್ತರಿಸಿ : ಬಿ.ಆರ್.ಯೋಗೇಶ್

ಅಕ್ಟೋಬರ್ 30, 2026

ಯುವ ಸಂಸತ್ತು ಕಾರ್ಯಕ್ರಮ : ಯುವ ಸಂಸತ್ತು ವಿದ್ಯಾರ್ಥಿಗಳಲ್ಲಿ ನಾಯತ್ವ ಗುಣ ಬೆಳೆಸಿಕೊಳ್ಳಲು ಸಹಕಾರಿ : ಮಂದ್ರೀರ ಮೋಹನ್ ದಾಸ್

ಅಕ್ಟೋಬರ್ 30, 2026

ರಾಜ್ಯ ಮಟ್ಟದ ಮಿಕ್ಸ್ ಕಿಕ್ ಬಾಕ್ಸಿಂಗ್‌ನಲ್ಲಿ ಮಡಿಕೇರಿಯ ಕೊಡಗು ಕಿಕ್ ಬಾಕ್ಸಿಂಗ್ ವಿದ್ಯಾರ್ಥಿಗಳ ಸಾಧನೆ

ಅಕ್ಟೋಬರ್ 30, 2026

‘ಫ್ಯಾಪ್ ಕಪ್ ಹಾಕಿ’ ಪಂದ್ಯಾವಳಿಯ ಮೊದಲ ದಿನದ ಫಲಿತಾಂಶ ಪ್ರಕಟ

ಅಕ್ಟೋಬರ್ 30, 2026

ಕಂಡಂಗಾಲ ಹಿರಿಯ ಪ್ರಾಥಮಿಕ ಶಾಲೆಗೆ ಐದು ಕಂಪ್ಯೂಟರ್‌ಗಳ ಕೊಡುಗೆ; ಜನರಲ್ ವಿಕ್ರಮ್ ತನೇಜ ಹಾಗೂ ಡಾ. ಪೊನ್ನಕಚ್ಚಿರ ವಿದ್ಯಾ ಪೂಣಚ್ಚ ದಂಪತಿಗಳಿಂದ ನೆರವು

ಅಕ್ಟೋಬರ್ 30, 2026

ಮಿಕ್ಸ್ ಬಾಕ್ಸಿಂಗ್‌ನಲ್ಲಿ ಕೃತನ್ ಹಾಗೂ ಸಂದೀಪ್‌ಗೆ ಬೆಳ್ಳಿ ಪದಕ

ಅಕ್ಟೋಬರ್ 30, 2026

ತೋಳೂರು ಶೆಟ್ಟಳ್ಳಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಕಾರ್ಯಕ್ರಮ

ಅಕ್ಟೋಬರ್ 30, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.