ಮೂರ್ನಾಡು, NEWS DESK ಅ.31: ಮೂರ್ನಾಡು ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸುದೀರ್ಘ ಸೇವೆ ಸಲ್ಲಿಸಿ ಇಂದು ವಯೋನಿವೃತ್ತಿ ಹೊಂದಿದ ಪೆರುಬಾಯಿ ರವಿಶಂಕರ್ ಅವರನ್ನು ನಿವೃತ್ತ ಶಿಕ್ಷಕರ ಬಳಗದ ವತಿಯಿಂದ ಅವರ ಮೂರ್ನಾಡಿನ ನಿವಾಸದಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ರಾಮಚಂದ್ರ, ಗುರುರಾಜ್, ದಿವಾಕರ್, ರಂಜಿತ್, ಜಗನ್ನಾಥ್, ಪದ್ಮಾವತಿ ಹಾಗೂ ಶಿಕ್ಷಕಿ ಮಮತ ಉಪಸ್ಥಿತರಿದ್ದು, ನಿವೃತ್ತ ಉಪನ್ಯಾಸಕರಿಗೆ ಶುಭಹಾರೈಸಿದರು.

















