Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ನಗರದ ಮಕ್ಕಳಿಗೆ ರೈತರ ಜಮೀನಿನಲ್ಲಿ ಗ್ರಾಮಾನುಭವ: ಕೃಷಿ ಪಾಠ ಕಲಿತ ವಿದ್ಯಾರ್ಥಿಗಳು
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ನಗರದ ಮಕ್ಕಳಿಗೆ ರೈತರ ಜಮೀನಿನಲ್ಲಿ ಗ್ರಾಮಾನುಭವ: ಕೃಷಿ ಪಾಠ ಕಲಿತ ವಿದ್ಯಾರ್ಥಿಗಳು

ನವೆಂಬರ್ 2, 20263 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಕುಶಾಲನಗರ, NEWS DESK ನ.2: ನಗರ ಪ್ರದೇಶದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಗ್ರಾಮೀಣ ಬದುಕು ಹಾಗೂ ಕೃಷಿ ಚಟುವಟಿಕೆಗಳ ನೈಜ ಅನುಭವ ನೀಡುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಗ್ರಾಮಾನುಭವ’ ಕಾರ್ಯಕ್ರಮದ ಅಂಗವಾಗಿ ಮಡಿಕೇರಿಯ ಪಿ.ಎಂ.ಶ್ರೀ. ಶಾಲೆಯ ವಿದ್ಯಾರ್ಥಿಗಳು ರೈತರ ಕೃಷಿ ಜಮೀನುಗಳಿಗೆ ಭೇಟಿ ನೀಡಿ ಕೃಷಿ ಚಟುವಟಿಕೆಗಳ ಕುರಿತು ಮಾಹಿತಿ ಪಡೆದುಕೊಂಡರು.

ನ.1ರಂದು ಮಡಿಕೇರಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾಮಂತ್ರಿಯೂ ಆದ ಕೃಷಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಅವರು ‘ಗ್ರಾಮಾನುಭವ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಇದರ ಅಂಗವಾಗಿ ಮಡಿಕೇರಿ ನಗರದ ಸರ್ಕಾರಿ ಪದವಿಪೂರ್ವ ಕಾಲೇಜು, ಸರ್ಕಾರಿ ಪ್ರೌಢಶಾಲಾ ವಿಭಾಗ ಹಾಗೂ ಪಿ.ಎಂ.ಶ್ರೀ. ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ 8, 9 ಮತ್ತು 11ನೇ ತರಗತಿಯ ಒಟ್ಟು 50 ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಕುಶಾಲನಗರ ತಾಲ್ಲೂಕಿನ ಹಾರಂಗಿ ನೀರಾವರಿ ಪ್ರದೇಶದ ಹೆಬ್ಬಾಲೆ, ತೊರೆನೂರು ಹಾಗೂ ಶಿರಂಗಾಲ ಗ್ರಾಮದ ಚಿಕ್ಕನಾಯಕನಹೊಸಳ್ಳಿಗೆ ಭೇಟಿ ನೀಡಿದರು.

ವಿದ್ಯಾರ್ಥಿಗಳು ಚಿಕ್ಕನಾಯಕನಹೊಸಳ್ಳಿಯ ಪ್ರಗತಿಪರ ಕೃಷಿಕ ಟಿ.ಜೆ. ಶೇಷಪ್ಪ ಅವರ ಮನೆಯಂಗಳದಲ್ಲಿ ರೈತರೊಂದಿಗೆ ಸಂವಾದ ನಡೆಸಿ, ಕೃಷಿ ಅನುಭವಗಳು ಹಾಗೂ ಸವಾಲುಗಳ ಕುರಿತು ಮಾಹಿತಿ ಪಡೆದುಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ರೈತ ಟಿ.ಜೆ. ಶೇಷಪ್ಪ, ಕಠಿಣ ಪರಿಶ್ರಮ, ಶ್ರದ್ಧೆ ಹಾಗೂ ಸೂಕ್ತ ಸಮಯದಲ್ಲಿ ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು ಕೃಷಿ ಮಾಡಿದರೆ ಉತ್ತಮ ಆದಾಯ ಗಳಿಸಲು ಸಾಧ್ಯವಿದೆ. ಇದರಿಂದ ರೈತರ ಜೀವನಮಟ್ಟ ಸುಧಾರಿಸುವುದರೊಂದಿಗೆ ರಾಷ್ಟ್ರದ ಆಹಾರ ಉತ್ಪಾದನೆಗೂ ಕೊಡುಗೆ ನೀಡಬಹುದು ಎಂದರು. ನಗರ ಪ್ರದೇಶದ ಮಕ್ಕಳಿಗೆ ಗ್ರಾಮೀಣ ಬದುಕು, ರೈತರ ಕಷ್ಟ-ಸುಖ ಹಾಗೂ ಕೃಷಿ ಜೀವನದ ಪರಿಚಯ ಮಾಡಿಕೊಡುವ ಇಂತಹ ಕಾರ್ಯಕ್ರಮಗಳು ಉತ್ತಮ ಪ್ರಾಯೋಗಿಕ ಅನುಭವ ನೀಡುತ್ತವೆ ಎಂದು ಅಭಿಪ್ರಾಯಪಟ್ಟರು.

ಕೃಷಿ ಇಲಾಖೆಯ ನಿವೃತ್ತ ಕೃಷಿ ಅಧಿಕಾರಿ ಎಸ್.ವಿ. ಶಿವಾನಂದ ಅವರು ಜೇನು ಕೃಷಿ ಹಾಗೂ ಸಮಗ್ರ ಕೃಷಿ ಪದ್ಧತಿಯ ಕುರಿತು ಮಾಹಿತಿ ನೀಡಿದರು. ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಿರುವ ಶೇಷಪ್ಪ ಅವರು ವೈವಿಧ್ಯಮಯ ಬೆಳೆಗಳನ್ನು ಬೆಳೆದು ಕೃಷಿಯಿಂದ ಉತ್ತಮ ಆದಾಯ ಗಳಿಸಬಹುದು ಎಂಬುದಕ್ಕೆ ಮಾದರಿಯಾಗಿದ್ದಾರೆ ಎಂದರು.

ಯುವ ಕೃಷಿಕ ಹಾಗೂ ಕೃಷಿ ಮಾರ್ಗದರ್ಶಕ ಟಿ.ಯು. ಪುನೀತ್ ಅವರು ಪ್ರಕೃತಿಯೊಂದಿಗೆ ರೈತರ ಒಡನಾಟ, ಆಹಾರದ ಮೂಲ, ಕೃಷಿ ಪದ್ಧತಿಗಳು, ಮಾರುಕಟ್ಟೆ ವ್ಯವಸ್ಥೆ, ಬೆಲೆಗಳ ಏರಿಳಿತ, ಎರೆಹುಳು ಗೊಬ್ಬರ ತಯಾರಿಕೆ, ಮಣ್ಣಿನ ಆರೋಗ್ಯ ಸಂರಕ್ಷಣೆ, ಪೋಷಕಾಂಶಗಳ ನಿರ್ವಹಣೆ ಹಾಗೂ ಬೆಳೆಗಳಲ್ಲಿನ ರೋಗಗಳ ಪತ್ತೆ ಮತ್ತು ವೈಜ್ಞಾನಿಕ ನಿಯಂತ್ರಣ ಕ್ರಮಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ರೈತರು ಸಾಂಪ್ರದಾಯಿಕ ಕೃಷಿಯಿಂದ ವೈಜ್ಞಾನಿಕ ಕೃಷಿಯತ್ತ ಸಾಗಿದರೆ ಪ್ರತಿಯೊಬ್ಬ ರೈತನೂ ವಿಜ್ಞಾನಿ ಹಾಗೂ ವೈದ್ಯನಂತೆ ಕಾರ್ಯನಿರ್ವಹಿಸಬಹುದು. ಪ್ರತಿ ಗ್ರಾಮದಲ್ಲೂ ಕೃಷಿ ಜ್ಞಾನ ಹೊಂದಿರುವ ರೈತರು ರೂಪುಗೊಂಡರೆ ಕೃಷಿಯಲ್ಲಿ ಹೆಚ್ಚಿನ ಸಾಧನೆ ಮಾಡಲು ಸಾಧ್ಯ ಎಂದರು.

ಪರಿಸರ ಪ್ರೇಮಿ ಹಾಗೂ ಪ್ರೌಢಶಾಲಾ ಮುಖ್ಯಶಿಕ್ಷಕ ಟಿ.ಜಿ. ಪ್ರೇಮಕುಮಾರ್ ಮಾತನಾಡಿ, ತರಗತಿಯ ನಾಲ್ಕು ಗೋಡೆಗಳ ನಡುವೆ ಕಲಿಯಲಾಗದ ಜೀವನ ಪಾಠಗಳನ್ನು ಮಕ್ಕಳು ಇಂತಹ ಗ್ರಾಮೀಣ ಭೇಟಿಗಳ ಮೂಲಕ ಕಲಿಯುತ್ತಾರೆ. ಗ್ರಾಮೀಣ ಜನರ ಬದುಕು, ಪ್ರಕೃತಿ ಹಾಗೂ ಅನ್ನದಾತನ ಶ್ರಮದ ಅರಿವು ಮೂಡಿಸಲು ‘ಗ್ರಾಮಾನುಭವ’ ಅತ್ಯುತ್ತಮ ಪ್ರಾಯೋಗಿಕ ಕಲಿಕೆಯಾಗಿದೆ ಎಂದರು.

ಇದಕ್ಕೂ ಮೊದಲು ವಿದ್ಯಾರ್ಥಿಗಳು ಹೆಬ್ಬಾಲೆ ಗ್ರಾಮದ ಪ್ರಗತಿಪರ ಕೃಷಿಕ ಎಚ್.ಆರ್. ಶಿವಪ್ಪ (ಹುರಕ್ಕಿ ಕುಮಾರ್) ಅವರ ಕೃಷಿ ಜಮೀನಿಗೆ ಭೇಟಿ ನೀಡಿ ಅಡಿಕೆ ತೋಟವನ್ನು ವೀಕ್ಷಿಸಿದರು. ಹೆಬ್ಬಾಲೆಯ ಎಚ್.ಎನ್. ಬಸಪ್ಪ ಅವರ ತೋಟದಲ್ಲಿನ ಕೃಷಿಹೊಂಡ ಹಾಗೂ ಹೈನುಗಾರಿಕೆ ಕುರಿತು ಮಾಹಿತಿ ಪಡೆದರು. ಬಳಿಕ ತೊರೆನೂರು ವಿರಕ್ತ ಮಠದ ಕೃಷಿ ಜಮೀನಿನ ಬಾಳೆ ತೋಟಕ್ಕೆ ಭೇಟಿ ನೀಡಿ ಬಾಳೆ ಹಾಗೂ ಮೆಕ್ಕೆಜೋಳ ಕೃಷಿಯ ಬಗ್ಗೆ ತಿಳಿದುಕೊಂಡರು.

ಹಾರಂಗಿ ನೀರಾವರಿ ಪ್ರದೇಶದಲ್ಲಿ ಬೆಳೆಯುವ ಕಲ್ಲಂಗಡಿ, ತೆಂಗು, ಬಾಳೆ, ಭತ್ತ, ರಾಗಿ, ಜೋಳ, ದ್ವಿದಳ ಧಾನ್ಯಗಳು, ತರಕಾರಿ ಹಾಗೂ ಸೊಪ್ಪಿನ ಕೃಷಿಯನ್ನು ವೀಕ್ಷಿಸಿದರು. ರೈತರ ಮನೆಯಂಗಳದಲ್ಲಿ ಬೆಳೆದಿರುವ ಹೂವಿನ ಮತ್ತು ಔಷಧೀಯ ಸಸ್ಯಗಳ ಸಂರಕ್ಷಣೆ, ಪೋಷಣೆ ಹಾಗೂ ಅವುಗಳ ಪೌಷ್ಟಿಕಾಂಶದ ಮಹತ್ವದ ಕುರಿತು ಮಾಹಿತಿ ಪಡೆದುಕೊಂಡರು. ಪ್ರಗತಿಪರ ಕೃಷಿಕರಾದ ಎಚ್.ಎನ್. ಬಸವಣ್ಣ ಹಾಗೂ ಎಚ್.ಆರ್. ಶಿವಪ್ಪ ಅವರು ಅಡಿಕೆ ಕೃಷಿ, ಕೃಷಿಹೊಂಡದ ಉಪಯೋಗ ಮತ್ತು ಹೈನುಗಾರಿಕೆಯ ಕುರಿತು ವಿವರಿಸಿದರು.

ಹಳ್ಳಿಯ ಊಟ ಸವಿದ ಮಕ್ಕಳು: ಮಧ್ಯಾಹ್ನ ರೈತ ಟಿ.ಜೆ. ಶೇಷಪ್ಪ ಅವರ ಮನೆಯಂಗಳದಲ್ಲಿ ವಿದ್ಯಾರ್ಥಿಗಳು ಗ್ರಾಮೀಣ ಶೈಲಿಯ ಊಟವನ್ನು ಸವಿದು ಸಂಭ್ರಮಿಸಿದರು.

ಮಡಿಕೇರಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಕೆ.ಎನ್. ಪಲ್ಲವಿ, ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲರಾದ ಕೆ.ವಿ. ಶಶಿಕಲಾ, ಶಿಕ್ಷಕಿ ಸುಮಾ, ಪ್ರಾಥಮಿಕ ಶಾಲಾ ವಿಭಾಗದ ಡಿ. ಶೃತಿಶ್ರೀ, ಎಂ.ಎಸ್. ಪ್ರಿಯ ಸೇರಿದಂತೆ ಇತರ ಶಿಕ್ಷಕಿಯರು ವಿದ್ಯಾರ್ಥಿಗಳೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪ್ರಗತಿಪರ ಕೃಷಿಕರಾದ ತೊರೆನೂರಿನ ಟಿ.ಎನ್. ಶಿವಾನಂದ, ಟಿ.ಸಿ. ತ್ರಿಣೇಶ್, ಟಿ.ಬಿ. ಬಸಪ್ಪ, ಮಣಜೂರಿನ ಎಂ.ಜಿ. ಕುಮಾರಸ್ವಾಮಿ, ಎಂ.ಎನ್. ಶಶಾಂಕ್, ಯಶೋಧ, ಟಿ.ಜೆ. ನಾಗೇಶ್ (ನಾಗಣ್ಣ), ಹೆಬ್ಬಾಲೆಯ ಎಚ್.ಎನ್. ಬಸವಣ್ಣ, ಎಚ್.ಆರ್. ಶಿವಪ್ಪ (ಹುರಕ್ಕಿ ಕುಮಾರ್), ನಿವೃತ್ತ ಶಿಕ್ಷಕ ಜಿ. ಮೂರ್ತಿ, ಶೇಷಪ್ಪ ಅವರ ಪತ್ನಿ ಎಂ.ಆರ್. ಜ್ಯೋತಿ, ಮಕ್ಕಳಾದ ಕವನ್ ಮತ್ತು ಕಾವ್ಯ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

 

Follow us Follow us
Share. WhatsApp Facebook Twitter Email Telegram Copy Link

Related Posts

ಕುಶಾಲನಗರದ ನೂತನ ತಹಶೀಲ್ದಾರ್ ಆಗಿ ರಮೇಶ್ ಬಾಬು ಅಧಿಕಾರ ಸ್ವೀಕಾರ; ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯಿಂದ ಆತ್ಮೀಯ ಸ್ವಾಗತ ಹಾಗೂ ಗೌರವ ಸನ್ಮಾನ

ನವೆಂಬರ್ 2, 2026

ಕುಲಾಲ ಕ್ರಿಕೆಟ್ ಚಾಂಪಿಯನ್ ಟ್ರೋಫಿ ಸೀಸನ್-2: ಗೆಳೆಯರ ಬಳಗ ಕುಶಾಲನಗರ ತಂಡ ಚಾಂಪಿಯನ್

ನವೆಂಬರ್ 2, 2026

ಹಾಲಿನ ದರ ಏರಿಕೆ ಖಂಡಿಸಿ ಕೊಡಗು ಜಿಲ್ಲಾ ಬಿಜೆಪಿಯಿಂದ ಪ್ರತಿಭಟನೆ; ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ; ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಆಗ್ರಹ

ನವೆಂಬರ್ 2, 2026

ಕುಲಾಲ ಕ್ರಿಕೆಟ್ ಚಾಂಪಿಯನ್ ಟ್ರೋಫಿ ಸೀಸನ್-2: ಗೆಳೆಯರ ಬಳಗ ಕುಶಾಲನಗರ ತಂಡ ಚಾಂಪಿಯನ್

ನವೆಂಬರ್ 2, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ನ.2: ಕೊಡಗು ಜಿಲ್ಲಾ ಕುಲಾಲ ಕುಂಬಾರರ ಸಂಘ, ಯುವ ಘಟಕ, ಮಹಿಳಾ ಘಟಕ ಹಾಗೂ ಮಡಿಕೆಬೀಡಿನ…

ಹಾಲಿನ ದರ ಏರಿಕೆ ಖಂಡಿಸಿ ಕೊಡಗು ಜಿಲ್ಲಾ ಬಿಜೆಪಿಯಿಂದ ಪ್ರತಿಭಟನೆ; ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ; ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಆಗ್ರಹ

ನವೆಂಬರ್ 2, 2026

ರಾಜ್ಯ ಮಟ್ಟದ ಪತ್ರಕರ್ತರ ಕ್ರಿಕೆಟ್ ಕಲರವಕ್ಕೆ ಸಚಿವ ಪಿ.ಎಂ. ನರೇಂದ್ರಸ್ವಾಮಿ ಚಾಲನೆ

ನವೆಂಬರ್ 2, 2026

ಚೆಯ್ಯಂಡಾಣೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಥಿಲ ಕಟ್ಟಡ: ತಕ್ಷಣ ದುರಸ್ತಿಗೆ ಆಗ್ರಹ

ನವೆಂಬರ್ 2, 2026

ಸೋಲಿನ ಭೀತಿಯಿಂದ ಹುದಿಕೇರಿ ಜಿ.ಪಂ. ಕ್ಷೇತ್ರದ ಮೀಸಲಾತಿ ಬದಲಾವಣೆಗೆ ಕಾಂಗ್ರೆಸ್ ಪ್ರಯತ್ನ: ಚೆಪ್ಪುಡಿರ ರಾಕೇಶ್ ದೇವಯ್ಯ ಆರೋಪ

ನವೆಂಬರ್ 2, 2026

ನಾಪೋಕ್ಲುವಿನಲ್ಲಿ ‘ಸೇವ್ ಬರ್ಡ್ಸ್, ಸೇವ್ ಟ್ರೀ’ ಅಭಿಯಾನದಡಿ ಗಿಡ ನೆಡುವ ಕಾರ್ಯಕ್ರಮ

ನವೆಂಬರ್ 2, 2026

ಭರತನಾಟ್ಯ ಜೂನಿಯರ್ ರಾಜ್ಯಮಟ್ಟದ ಪರೀಕ್ಷೆಯಲ್ಲಿ ಕು. ಖುಷಿಗೆ ಉನ್ನತ ಶ್ರೇಣಿ

ನವೆಂಬರ್ 2, 2026

ಹೆಬ್ಬಾಲೆ ವ್ಯಾಪ್ತಿಯ ವೀರಶೈವ ಲಿಂಗಾಯತ ಸಮಾಜದ ಸಭೆ: ನೂತನ ಬಸವ ಸಮಿತಿ ರಚನೆ, ಮೋಹನ್ ಹಕ್ಕೆ ನಂಜಪ್ಪ ಅಧ್ಯಕ್ಷರಾಗಿ ಆಯ್ಕೆ

ನವೆಂಬರ್ 2, 2026

ವಿಶ್ವದಾದ್ಯಂತ ಕನ್ನಡ ಭಾಷೆ ಪ್ರಸಾರದಲ್ಲಿ ಯುವಜನತೆಯ ಪಾತ್ರ ಅಪಾರ: ಸಿದ್ದಪ್ಪ ಹೆಳವರಹುಂಡಿ

ನವೆಂಬರ್ 2, 2026

ಕೊಡವಲ್ಯಾಂಡ್ ಸ್ವಾಯತ್ತತೆಗೆ ವಂಶಪಾರಂಪರ್ಯ ಭೂಮಿ ಮತ್ತು ಮಾತೃಭಾಷೆಯ ಸಂರಕ್ಷಣೆ ಅತ್ಯಂತ ಅಗತ್ಯವಾಗಿದೆ : ಎನ್.ಯು. ನಾಚಪ್ಪ : ಪೊನ್ನಂಪೇಟೆಯಲ್ಲಿ CNCಯ 8ನೇ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮ

ನವೆಂಬರ್ 2, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.