Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಚಿಕ್ಕಳುವಾರದಲ್ಲಿ ಡಿ.13 ಮತ್ತು14ರಂದು ‘ಸ್ಟಾರ್ ಗೇಸಿಂಗ್ ಫೆಸ್ಟಿವಲ್’
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಚಿಕ್ಕಳುವಾರದಲ್ಲಿ ಡಿ.13 ಮತ್ತು14ರಂದು ‘ಸ್ಟಾರ್ ಗೇಸಿಂಗ್ ಫೆಸ್ಟಿವಲ್’

ನವೆಂಬರ್ 24, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
ಮಡಿಕೇರಿ ನ. 24 NEWS DESK  :  ವರ್ಷದ ಅತ್ಯಂತ ಆಕರ್ಷಕ ಖಗೋಳ ವಿದ್ಯಮಾನಗಳಲ್ಲಿ ಒಂದಾದ ಜೆಮಿನಿಡ್ಸ್ ಉಲ್ಕಾಪಾತವನ್ನು ವೈಜ್ಞಾನಿಕ ಹಿನ್ನೆಲೆಯೊಂದಿಗೆ ಪರಿಚಯಿಸುವ ವಿಶಿಷ್ಟ ‘ಸ್ಟಾರ್ ಗೇಸಿಂಗ್ ಫೆಸ್ಟಿವಲ್’ ಡಿ.13 ಮತ್ತು 14ರಂದು ಚಿಕ್ಕಳುವಾರದಲ್ಲಿರುವ ಕೊಡಗು ವಿಶ್ವವಿದ್ಯಾನಿಲಯದ ಆವರಣದಲ್ಲಿ ನಡೆಯಲಿದೆ. ಫ್ಲಿಪ್ ಸೈಟ್ ಸಂಸ್ಥೆಯು ವಿಶೇಷವಾಗಿ ವಿದ್ಯಾರ್ಥಿಗಳನ್ನು ಕೇಂದ್ರವಾಗಿಟ್ಟುಕೊಂಡು ಈ ಕಾರ್ಯಕ್ರಮವನ್ನು ಆಯೋಜಿಸಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಫ್ಲಿಪ್ ಸೈಟ್ ಸಂಸ್ಥೆಯ ಸಂಘಟಕರಾದ ಫಿಲಿಪ್ ಸಂತೋಷ, ಎ.ಸಿ.ಟಿ. ಪ್ರೆಸೆಂಟ್ಸ್ ಹಾಗೂ ‘ಬೀಟ್ ರೂಟ್-ದಿ ಮ್ಯೂಸಿಕ್ ನೋಮಡ್ಸ್’ ಸಹಯೋಗದಲ್ಲಿ ಎರಡು ದಿನಗಳ ಉತ್ಸವವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು. ಡಿ.13ರ ರಾತ್ರಿ ಹಾಗೂ 14ರ ಬೆಳಗಿನ ಜಾವ ಜೆಮಿನಿಡ್ಸ್ ಉಲ್ಕಾಪಾತದ ವೈಭವವನ್ನು ಕಣ್ತುಂಬಿಕೊಳ್ಳಲು ಉತ್ತಮ ಅವಕಾಶವಿದೆ.     ಕ್ಷುದ್ರಗ್ರಹದಿಂದ ಬಾಹ್ಯಾಕಾಶದಲ್ಲಿ ಹರಡಿರುವ ಧೂಳು ಮತ್ತು ಶಿಲಾಕಣಗಳು ಭೂಮಿಯ ವಾತಾವರಣವನ್ನು ಪ್ರವೇಶಿಸಿ ಉರಿಯುವಾಗ ಆಕಾಶದಲ್ಲಿ ಬೆಳಕಿನ ಗೆರೆಗಳಂತೆ ಗೋಚರಿಸುತ್ತವೆ. ಈ ಉಲ್ಕೆಗಳು ಸೆಕೆಂಡಿಗೆ ಸುಮಾರು 35 ಕಿ.ಮೀ. ವೇಗದಲ್ಲಿ ವಾತಾವರಣವನ್ನು ಪ್ರವೇಶಿಸುತ್ತವೆ. ಡಿ.14ರ ಬೆಳಗಿನ ಜಾವ 3ರಿಂದ 5 ಗಂಟೆಯ ಅವಧಿಯಲ್ಲಿ ಉಲ್ಕಾಪಾತ ವೀಕ್ಷಣೆಗೆ ವಿಶೇಷ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು. ಮಕ್ಕಳಲ್ಲಿ ಖಗೋಳ  ಆಸಕ್ತಿ ಮೂಡಿಸುವ ಪ್ರಯತ್ನ-ಫ್ಲಿಪ್ ಸೈಟ್ ಸಂಸ್ಥೆಯು ಇಂತಹ ಕಾರ್ಯಕ್ರಮವನ್ನು ಮೂರನೇ ಬಾರಿಗೆ ಆಯೋಜಿಸುತ್ತಿದೆ. ಮಕ್ಕಳಿಗೆ ಆಕಾಶಕಾಯಗಳು, ಗ್ರಹಗಳು, ನಕ್ಷತ್ರಪುಂಜಗಳು ಹಾಗೂ ಬಾಹ್ಯಾಕಾಶದ ಕುರಿತು ವೈಜ್ಞಾನಿಕ ಮಾಹಿತಿ ಒದಗಿಸಿ, ಅವರಲ್ಲಿ ಖಗೋಳ ವಿಜ್ಞಾನದ ಬಗ್ಗೆ ಆಸಕ್ತಿ ಬೆಳೆಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಇದಕ್ಕಾಗಿ ಅತ್ಯಾಧುನಿಕ ನಾಲ್ಕು ಟೆಲಿಸ್ಕೋಪ್‍ಗಳನ್ನು ವ್ಯವಸ್ಥೆಗೊಳಿಸಲಾಗುತ್ತಿದೆ ಎಂದು ಫಿಲಿಪ್ ಸಂತೋಷ ವಿವರಿಸಿದರು.
ಕಾರ್ಯಕ್ರಮ-ಡಿ.13ರಂದು ಸಂಜೆ 6.30ರಿಂದ 7.30ರವರೆಗೆ ವೇದಿಕೆ ಕಾರ್ಯಕ್ರಮ, ಲೈವ್ ಸಂಗೀತ, ಖಗೋಳಶಾಸ್ತ್ರದ ಮೂಲ ಪರಿಚಯ ಹಾಗೂ ಟೆಲಿಸ್ಕೋಪ್‍ಗಳ ಪರಿಚಯ ನಡೆಯಲಿದೆ. ಸಂಜೆ 7.30ರಿಂದ ರಾತ್ರಿ 9ರವರೆಗೆ ನಕ್ಷತ್ರ ವೀಕ್ಷಣೆ, ಗ್ರಹಗಳ ವೀಕ್ಷಣೆ, ನಕ್ಷತ್ರಪುಂಜಗಳ ಗುರುತಿಸುವಿಕೆ ಹಾಗೂ ಆಕಾಶಕಾಯಗಳಿಗೆ ಸಂಬಂಧಿಸಿದ ಕಥನ ಕಾರ್ಯಕ್ರಮ ಇರಲಿದೆ.ಡಿ.14ರಂದು ಮಧ್ಯರಾತ್ರಿ 12ರಿಂದ ಬೆಳಗಿನ ಜಾವ 3.30ರವರೆಗೆ ಆಕಾಶದ ಆಳವಾದ ವಸ್ತುಗಳ ಛಾಯಾಗ್ರಹಣ (ಡೀಪ್ ಸ್ಕೈ ಫೋಟೋಗ್ರಫಿ ), ಉಲ್ಕಾಪಾತದ ಚಲನವಲನ ದಾಖಲಿಸುವಿಕೆ ಹಾಗೂ ಲಾಂಗ್ ಎಕ್ಸ್‌ಪೋಶರ್ ಛಾಯಾಗ್ರಹಣ ಕಾರ್ಯಾಗಾರ ನಡೆಯಲಿದೆ.ಬೆಳಗಿನ ಜಾವ 3.30ರಿಂದ 5.30ರವರೆಗೆ ಟೆಲಿಸ್ಕೋಪ್ ಮೂಲಕ ಆಕಾಶಕಾಯಗಳ ವೀಕ್ಷಣೆ ಮುಂದುವರಿಯಲಿದೆ. 5.30ರಿಂದ 6.30ರವರೆಗೆ ಧ್ಯಾನ ಮತ್ತು ಸೌಂಡ್ ಹೀಲಿಂಗ್, ಬೆಳಗ್ಗೆ 6.30ರಿಂದ 7.30ರವರೆಗೆ ಪಕ್ಷಿ ವೀಕ್ಷಣೆ ಹಾಗೂ ಯೋಗ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಸಕ್ತರು ಹೆಚ್ಚಿನ ಮಾಹಿತಿಗಾಗಿ 8277133634 ಅಥವಾ 6362236193 ಸಂಪರ್ಕಿಸಬಹುದೆಂದು ಅವರು ತಿಳಿಸಿದರು. ಗೋಷ್ಠಿಯಲ್ಲಿ ಸಂಸ್ತೆಯ ಸಂಯೋಜಕರಾದ ರಾಜಶೇಖರ್ ಯಳವತ್ತಿ ಉಪಸ್ಥಿತರಿದ್ದರು.

Follow us Follow us
Share. WhatsApp Facebook Twitter Email Telegram Copy Link

Related Posts

ಮಡಿಕೇರಿ ನಗರದ ವಿವಿಧ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್

ನವೆಂಬರ್ 24, 2026

ಹುದಿಕೇರಿಯಲ್ಲಿ ಸಿಎನ್‌ಸಿ 11ನೇ ಮಾನವ ಸರಪಳಿ : ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಕೊಡವರ ಜನ್ಮಸಿದ್ಧ ಹಕ್ಕು: ಎನ್.ಯು.ನಾಚಪ್ಪ

ನವೆಂಬರ್ 24, 2026

ದೇವರಕೊಲ್ಲಿ : ಕಾರು ಕಂದಕಕ್ಕೆ ಉರುಳಿ ಯುವಕ ಸಾವು : ಇಬ್ಬರಿಗೆ ಗಾಯ

ನವೆಂಬರ್ 24, 2026

ಚಿಕ್ಕಳುವಾರದಲ್ಲಿ ಡಿ.13 ಮತ್ತು14ರಂದು ‘ಸ್ಟಾರ್ ಗೇಸಿಂಗ್ ಫೆಸ್ಟಿವಲ್’

ನವೆಂಬರ್ 24, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ನ. 24 NEWS DESK  :  ವರ್ಷದ ಅತ್ಯಂತ ಆಕರ್ಷಕ ಖಗೋಳ ವಿದ್ಯಮಾನಗಳಲ್ಲಿ ಒಂದಾದ ಜೆಮಿನಿಡ್ಸ್ ಉಲ್ಕಾಪಾತವನ್ನು ವೈಜ್ಞಾನಿಕ…

ಹುದಿಕೇರಿಯಲ್ಲಿ ಸಿಎನ್‌ಸಿ 11ನೇ ಮಾನವ ಸರಪಳಿ : ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಕೊಡವರ ಜನ್ಮಸಿದ್ಧ ಹಕ್ಕು: ಎನ್.ಯು.ನಾಚಪ್ಪ

ನವೆಂಬರ್ 24, 2026

ದೇವರಕೊಲ್ಲಿ : ಕಾರು ಕಂದಕಕ್ಕೆ ಉರುಳಿ ಯುವಕ ಸಾವು : ಇಬ್ಬರಿಗೆ ಗಾಯ

ನವೆಂಬರ್ 24, 2026

ನ.26 ರಂದು ಸಿಎನ್‍ಸಿಯಿಂದ 36ನೇ ವಾರ್ಷಿಕ ಕೊಡವ ನ್ಯಾಷನಲ್ ಡೇ ಆಚರಣೆ : ಡಾ.ಎಂ.ಎ.ಕಲಾಂ, ನ್ಯಾಯವಾದಿ ಕಿರಣ್ ನಾರಾಯಣ್, ಡಾ.ಮಾತಂಡ ಅಯ್ಯಪ್ಪ, ಪ್ರೊ.ಪಿ.ಎಚ್.ಮೊಹಮ್ಮದ್ ಭಾಗಿ

ನವೆಂಬರ್ 24, 2026

ಎಸ್ ಎಸ್ ಆಸ್ಪತ್ರೆ ವತಿಯಿಂದ 4ನೇ ವರ್ಷದ ಚಿತ್ರಕಲಾ ಸ್ಪರ್ಧೆ : ವಿದ್ಯಾರ್ಥಿಗಳ ಪ್ರತಿಭೆ ಅನಾವರಣ

ನವೆಂಬರ್ 24, 2026

ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಸಭೆ : ಕ್ರಿಸ್‌ಮಸ್ ಗೀತ ಗಾಯನ ಸ್ಪರ್ಧೆಯ ಕುರಿತು ಚರ್ಚೆ : ಮಡಿಕೇರಿ ಅಧ್ಯಕ್ಷರಾಗಿ ಪಿಯೂಷ್ ಪೆರೆರಾ ಆಯ್ಕೆ

ನವೆಂಬರ್ 24, 2026

ಕೊಡಗಿನ ಚಿತ್ರಶಿಲ್ಪ ಕಲಾವಿದ ಬಿ.ಕೆ.ಗಣೇಶ್ ರೈಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯ ಗೌರವ : ಕರ್ನಾಟಕ ರಾಜ್ಯ ಎಕ್ಸಲೆನ್ಸ್ ಅವಾರ್ಡ್ ಪ್ರದಾನ

ನವೆಂಬರ್ 24, 2026

ನ.29ರಂದು ಕಾರ್ಯಪ್ಪ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆ ಹಾಗೂ ಸಂತೋಷ ಕೂಟ : ಕಾಲೇಜ್ ನ ಅಭಿವೃದ್ಧಿಗೆ ಕೈಜೋಡಿಸಲು ಮನವಿ

ನವೆಂಬರ್ 24, 2026

ಹಿಮವನ ಪ್ರತಿಭಾ ಸಂಗಮ ಕನ್ನಡ ಹಬ್ಬಕ್ಕೆ ಉತ್ಸಾಹದ ಸ್ಪಂದನೆ : ಮಕ್ಕಳಿಗೆ ಉತ್ತಮ ಮೌಲ್ಯ ಕಲಿಸಬೇಕು : ಕೊಟ್ಟುಕತ್ತಿರ ಯಶೋದಾ ಪ್ರಕಾಶ್

ನವೆಂಬರ್ 23, 2026

ಯಾಕುಬ್ ಅವರಿಗೆ ಆದ ಅನ್ಯಾಯ ಕಾಂಗ್ರೆಸ್‌ನಲ್ಲಿ ಮುಸ್ಲಿಂ ಸಮುದಾಯದ ರಾಜಕೀಯ ಅಸ್ತಿತ್ವ ಮತ್ತು ಸ್ವಾಭಿಮಾನದ ಪ್ರಶ್ನೆ : ನಿಷ್ಠಾವಂತ ಮುಸ್ಲಿಂ ನಾಯಕರನ್ನು ಕಡೆಗಣಿಸುವ ರಾಜಕೀಯ ಸಂಸ್ಕೃತಿಗೆ ಅಂತ್ಯ ಯಾವಾಗ? : ಎಂ.ವೈ. ಅಬ್ದುಲ್ ಹಫೀಲ್ ಸಾದಿ ಕೊಳಕೇರಿ ಅಸಮಾಧಾನ

ನವೆಂಬರ್ 23, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.