Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಕೊಡಗು ದಂತ ವೈದ್ಯಕೀಯ ಮಹಾವಿದ್ಯಾಲಯದ 19ನೇ ಪದವಿ ಪ್ರದಾನ ಸಮಾರಂಭ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಕೊಡಗು ದಂತ ವೈದ್ಯಕೀಯ ಮಹಾವಿದ್ಯಾಲಯದ 19ನೇ ಪದವಿ ಪ್ರದಾನ ಸಮಾರಂಭ

ಜನವರಿ 15, 20232 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
ವೀರಾಜಪೇಟೆ ಜ.15 : ಸಮಾಜವು ವೈದ್ಯರ ಸೇವೆಯು ದೇವರ ಸೇವೆ ಎಂದು ನಂಬಿ ಕೊಂಡು ಸಾಗುತ್ತಿದೆ. ಸಮಾಜಕ್ಕೆ ಉತ್ತಮ ಸೇವೆ ಕಲ್ಪಿಸುವುದು ಸಾಮಾನ್ಯ ವೈದ್ಯನ ಬಹುಮುಖ್ಯ ಕರ್ತವ್ಯವಾಗಬೇಕು ಎಂದು ರಾಜೀವ್ ಗಾಂಧಿ ಆರೋಗ್ಯ ಮತ್ತು ವಿಜ್ಞಾನ ವಿಶ್ವವಿದ್ಯಾನಿಯಲಯದ ಉಪ ಕುಲಪತಿಗಳಾದ ಡಾ. ಎಂ.ಕೆ. ರಮೇಶ್ ಅವರು ಅಭಿಪ್ರಾಯಪಟ್ಟರು.
ಕೊಡಗು ದಂತ ವೈದ್ಯಕೀಯ ಮಹಾವಿದ್ಯಾಲಯ ಕಾಲೇಜು ವಿರಾಜಪೇಟೆ. ಅಂತಿಮ ವರ್ಷ ಪೂರೈಸಿದ  ವಿಧ್ಯಾರ್ಥಿಗಳ ಪದವಿ ಪ್ರದಾನ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಪತ್ರ ವಿತರಿಸಿ ಮಾತನಾಡಿದ ಡಾ. ರಮೇಶ್ ಅವರು ವಿದ್ಯಾರ್ಥಿ ಜೀವನದಲ್ಲಿ ಪದವಿ ಪಡೆದುಕೊಳ್ಳುವ ಸುದಿನವು  ಸಮಾಜಿಕ ಜೀವನದ ಮೈಲಿಗಲ್ಲು.
 ಈ ನಿಟ್ಟಿನಲ್ಲಿ ಕೊಡಗು ದಂತ ಮಹಾವಿದ್ಯಾಲಯ ಗುರುಕುಲದ ಮಾದರಿಯಲ್ಲಿ ಮೌಲ್ಯಯುತವಾದ ಶಿಕ್ಷಣವನ್ನು ಒದಗಿಸಿದೆ. ವೈದ್ಯನಾದವನು ರೋಗಿಗಳನ್ನು ಹಸನ್ಮುಖಿಯಾಗಿ ನಗುಮುಖದೊಂದಿಗೆ ಸ್ವಾಗತಿಸಬೇಕು ಹಾಗೂ ರೋಗಿಯ ಚಿಕಿತ್ಸಾವಿಧಿಗಳನ್ನು ಅನುಸರಿಸಬೇಕು.
ಬೃಹತ್ ಸಮಾಜವು ನಮಗೆ ಹಲವು ಉತ್ತಮ ವ್ಯಾವಹಾರಿಕ,ಆರೋಗ್ಯಕರ, ಹಿತವಾದ ಸ್ವಸ್ಥ ಪ್ರಾಕೃತಿಕ ಜಗತನ್ನು ಕಲ್ಪಿಸಿದೆ. ಇಂತಹ ಸಮಾಜಕ್ಕೆ ದ್ರೋಹಬಗೆಯದೆ ಉತ್ತಮ ಸೇವೆಯನ್ನು ನೀಡುವುದರೊಂದಿಗೆ ತಮ್ಮ ಗೌರವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನವಾಗಬೇಕು. ಗಳಿಕೆ ಇಂದಿನ ಜೀವನಶೈಲಿಗೆ ಬಹುಮುಖ್ಯ ಅದರೇ ಹಣ ಮಾಡುವ ಉದ್ದೇಶ ಹೊರತುಪಡಿಸಿದೆ ಸೇವಾ ಮನೋಭಾವವನ್ನು ಬೆಳೆಸಿಕೊಂಡು ಸಮಾಜದೊಂದಿಗೆ ಬೆರೆಯಬೇಕು. ಐದು ವರ್ಷಗಳ ಕಾಲ ಕಲಿತ ವಿಧ್ಯೆಗೆ ಅಪಚ್ಯುತಿ ಬಾರದದ ರೀತಿಯಲ್ಲಿ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಎಂದು ಪದವಿ ಸ್ವೀಕರಿಸಿದ ವಿಧ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕೊಡಗು ದಂತ ವೈದ್ಯಕೀಯ ಮಾಹಾವಿದ್ಯಾಲಯದ ಡೀನ್ ಡಾ. ಸುನೀಲ್ ಮುದ್ದಯ್ಯ ಅವರು ಸಮಾರಂಭದ ಅದ್ಯಕ್ಷತೆ ವಹಿಸಿ ಮಾತನಾಡಿ ಹೊಂದಾಣಿಕೆ ಮತ್ತು ಅಳವಡಿಕೆ ಜೀವನದ ಪರಿಪಾಠವಾಗಬೇಕು. ಸಮಾಜದೊಂದಿಗೆ ಅಥಾವ ವೈಧ್ಯರ ಬಳಿ ಬರುವ ವ್ಯಕ್ತಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಮುಂದುವರೆಯುವುದು ಪ್ರಸ್ತುತ ಕಾಲಗಟ್ಟಕ್ಕೆ ಅಗತ್ಯವಾಗಿದೆ.  ಭವಿಷ್ಯದ ವೈಧ್ಯರುಗಳಾಗಿ ಸಮಾಜಕ್ಕೆ ಸೇವೆ ಸಲ್ಲಿಸಿ ಎಂದು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಹೇಳಿದರು.
ಸಮಾರಂಭದ ವೇದಿಕೆಯಲ್ಲಿ 50 ಮಂದಿ ವಿಧ್ಯಾರ್ಥಿಗಳಿಗೆ ಪದವಿ ಪ್ರಧಾನ ಪತ್ರ ಮತ್ತು 35 ವಿಧ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿಗಳನ್ನು ವಿತರಿಸಲಾಯಿತು. ಡಾ.ಸುನೀಲ್ ಮುದ್ದಯ್ಯ ಅವರು ಸ್ನಾತಕೋತ್ತರ ವಿಧ್ಯಾರ್ಥಿಗಳಿಗಾಗಿ ಮೀಸಲಿಟ್ಟ ಚಿನ್ನದ ಪದಕವನ್ನು ಡಾ. ಆಲೆಮೆಂಗಡ ಶಾನ್ವಿ ಪೊನ್ನಮ್ಮ ಅವರು ಪಡೆದುಕೊಂಡರು. ಕಂಜಿತಂಡಎಂ.ಕುಶಾಲಪ್ಪ ಚಿನ್ನದ ಪದಕವನ್ನು ಡಾ. ಜೆ. ಜಯಲಕ್ಷ್ಮೀ ತನ್ನದಾಗಿಸಿಕೊಂಡರು. ಎಲ್ಲಾ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆಗಾಗಿ ಮೀಸಲಿಟ್ಟ ಕೆ.ಪೊನ್ನಮ್ಮ ಕುಶಾಲಪ್ಪ ಚಿನ್ನದ ಪದಕವನ್ನು ಡಾ. ಕಂಜಿತಂಡಕುಶಾಲಪ್ಪ ಮುದ್ದಯ್ಯ ಅವರು ಪಡೆದುಕೊಂಡರು.
ರಾಜೀವ್ ಗಾಂಧಿ ಆರೋಗ್ಯ ಮತ್ತು ವಿಜ್ಞಾನ ವಿಶ್ವವಿದ್ಯಾನಿಲಯದ ಉಪ ಕುಲಪತಿಗಳಾದ ಡಾ. ಎಂ.ಕೆ. ರಮೇಶ್ ಅವರು ಸಾದನೆಗೈದ ವಿಧ್ಯಾರ್ಥಿಗಳಿಗೆ ಪದಕಗಳನ್ನು ವಿತರಿಸಿದರು.
ಕೊಡಗು ದಂತ ವೈಧ್ಯಕೀಯ ಮಾಹಾವಿದ್ಯಾಲಯದ ಉಪ ಪ್ರಾಂಶುಪಾಲರಾದ ಡಾ.ಜಿತೇಶ್ ಜೈನ್ ಅವರು  ಪದವಿ ಪಡೆದ ವಿಧ್ಯಾರ್ಥಿಗಳಿಗೆ ಪ್ರಮಾಣ ವಚನ ಭೋದಿಸಿದರು.  ಬಳಿಕ ವಿಧ್ಯಾರ್ಥಿಗಳಿಂದ ದೇಶೀಯ ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ವೇದಿಕೆಯಲ್ಲಿ ಕೊಡಗು ದಂತ ವೈಧ್ಯಕೀಯ ಮಾಹಾವಿದ್ಯಾಲಯದ ಉಪನ್ಯಾಸಕರಾದ ಡಾ.ಶಶಿಧರ್ ಮತ್ತು ಡಾ. ಶಾಂತಲ ಬಿ.ಎಂ ಅವರು ಸೇರಿದಂತೆ ವಿವಿಧ ವಿಭಾಗಗಳ ಉಪನ್ಯಾಸಕರು ಉಪಸ್ಥಿರಿದ್ದರು.
ಕಾರ್ಯಕ್ರಮದ ಸ್ವಾಗತವನ್ನು ಕೊಡಗು ದಂತ ವೈದ್ಯಕೀಯ ಮಾಹಾವಿದ್ಯಾಲಯದ ಉಪನ್ಯಾಸಕರಾದ ಡಾ.ಶಶಿಧರ್. ವಿದ್ಯಾರ್ಥಿಗಳಾದ ಪ್ರತೀಕ್ಷಾ ಮತ್ತು ಕುಂಕುಮ್ ನಾಣಯ್ಯ ನಿರೂಪಣೆ ಮಾಡಿದರು. ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಕುಂಕುಮ್ ನಾಣಯ್ಯ ಸರ್ವರನ್ನು ವಂದಿಸಿದರು.

Follow us Follow us
Share. WhatsApp Facebook Twitter Email Telegram Copy Link

Related Posts

ಕುಶಾಲನಗರದಲ್ಲಿ 192ನೇ ಕಾವೇರಿ ಮಹಾ ಆರತಿ : ಕಾವೇರಿ ನದಿ ಕಲುಷಿತವಾಗದಂತೆ ಜಾಗೃತಿ ವಹಿಸಿ : ಹನುಮಂತಪ್ಪ ಅಂಗಡಿ

ನವೆಂಬರ್ 25, 2026

ವೃದ್ಧಾಶ್ರಮದ ಫಲಾನುಭವಿಗಳಿಗೆ ಹಣ್ಣು ಹಂಪಲು ವಿತರಣೆ

ನವೆಂಬರ್ 25, 2026

ನಾಡಿನಾದ್ಯಂತ ಸಂಭ್ರಮದ ಪುತ್ತರಿ (ಹುತ್ತರಿ) ಆಚರಣೆ : ಧಾನ್ಯಲಕ್ಷ್ಮಿಗೆ ವಿಶೇಷ ಪೂಜೆ : ದೇವಾಲಯಗಳಲ್ಲಿ ಕದಿರು ವಿತರಣೆ

ನವೆಂಬರ್ 25, 2026

ವೃದ್ಧಾಶ್ರಮದ ಫಲಾನುಭವಿಗಳಿಗೆ ಹಣ್ಣು ಹಂಪಲು ವಿತರಣೆ

ನವೆಂಬರ್ 25, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, ನ.25 NEWS DESK : ಮಡಿಕೇರಿ ತಾಲೂಕಿನ ವಿಕಾಸ್ ಜನ ಸೇವಾ ಟ್ರಸ್ಟ್‌ನ ವೃದ್ಧಾಶ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ…

ನಾಡಿನಾದ್ಯಂತ ಸಂಭ್ರಮದ ಪುತ್ತರಿ (ಹುತ್ತರಿ) ಆಚರಣೆ : ಧಾನ್ಯಲಕ್ಷ್ಮಿಗೆ ವಿಶೇಷ ಪೂಜೆ : ದೇವಾಲಯಗಳಲ್ಲಿ ಕದಿರು ವಿತರಣೆ

ನವೆಂಬರ್ 25, 2026

ಕದನೂರು ಗ್ರಾಮದಲ್ಲಿ ಸಿಎನ್‌ಸಿ ವತಿಯಿಂದ 33ನೇ ವರ್ಷದ ಪುತ್ತರಿ ನಮ್ಮೆ ಆಚರಣೆ

ನವೆಂಬರ್ 25, 2026

ಜ್ಞಾನಗಂಗಾ ವಸತಿ ಶಾಲೆಯ ಪ್ರಾಂಶುಪಾಲೆ ಜೆ.ಎ.ಸಂಜನಾಗೆ ಅತ್ಯುತ್ತಮ ಪ್ರಾಂಶುಪಾಲೆ ಪ್ರಶಸ್ತಿ

ನವೆಂಬರ್ 24, 2026

ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರೇಡ್-1 ಪ್ರಾಂಶುಪಾಲರಾಗಿ ಡಾ.ಶೋಭಾ ಎಂ.ಎಸ್. ಅಧಿಕಾರ ಸ್ವೀಕಾರ

ನವೆಂಬರ್ 24, 2026

ನ.30 ರಂದು ಮೈಸೂರು ವಿಭಾಗೀಯ ಮಟ್ಟದ ಬೃಹತ್ ಉದ್ಯೋಗ ಮೇಳ

ನವೆಂಬರ್ 24, 2026

ವಿದ್ಯಾರ್ಥಿಗಳು ಓದಿನ ಕಡೆ ಗಮನಹರಿಸಿ: ನ್ಯಾಯಾಧೀಶೆ ಶುಭ

ನವೆಂಬರ್ 24, 2026

ಮಡಿಕೇರಿ ಮಹಿಳಾ ಕಾಲೇಜಿನ ಗ್ರೇಡ್-1 ಪ್ರಾಂಶುಪಾಲರಾಗಿ ಪ್ರೊ. ದಯಾನಂದ ಕೆ.ಸಿ. ಅಧಿಕಾರ ಸ್ವೀಕಾರ

ನವೆಂಬರ್ 24, 2026

ಮಡಿಕೇರಿ ನಗರದ ವಿವಿಧ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್

ನವೆಂಬರ್ 24, 2026

ಚಿಕ್ಕಳುವಾರದಲ್ಲಿ ಡಿ.13 ಮತ್ತು14ರಂದು ‘ಸ್ಟಾರ್ ಗೇಸಿಂಗ್ ಫೆಸ್ಟಿವಲ್’

ನವೆಂಬರ್ 24, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.