ಅರಪಟ್ಟು ಕಡಂಗ ಗ್ರಾಮದಲ್ಲಿ ಅಕ್ರಮ ಜೂಜಾಟ : 6 ಮಂದಿ ಪೊಲೀಸ್ ವಶ

24/01/2023

ವಿರಾಜಪೇಟೆ ಜ.24 : ವಿರಾಜಪೇಟೆ ತಾಲ್ಲೂಕಿನ ಅರಪಟ್ಟು ಕಡಂಗ ಗ್ರಾಮದ ನಿರ್ಜನ ಪ್ರದೇಶದಲ್ಲಿ ಅಕ್ರಮವಾಗಿ ತಡ ರಾತ್ರಿ ವೇಳೆಯಲ್ಲಿ ಜೂಜಾಡುತ್ತಿದ್ದ ಆರು ಮಂದಿಯನ್ನು ವಿರಾಜಪೇಟೆ ಗ್ರಾಮಾಂತರ ಠಾಣಾ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.
ಜೂಜಾಟಕ್ಕೆ ಬಳಸಲಾಗಿದೆ ಎನ್ನಲಾದ ರೂ.42,050 ನ್ನು ವಶಕ್ಕೆ ಪಡೆದಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಬಾರ ಠಾಣಾಧಿಕಾರಿ ಸಿ.ವಿ.ಶ್ರೀಧರ್, ಸಿಬ್ಬಂದಿಗಳಾದ ಖಾದರ್, ಗಿರೀಶ್, ಧರ್ಮ, ಲೋಕೇಶ್ ಮತ್ತು ಮಲ್ಲಿಕಾರ್ಜುನ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
(ವರದಿ : ಕಿಶೋರ್ ಕುಮಾರ್ ಶೆಟ್ಟಿ)